Bigg Boss 12: ಪ್ರಕಾಶ್ ಯಲಗಚ್ಚನಿಗೆ BBK 12 ಅವಕಾಶ ನೀಡಿ: ಸಾಮಾಜಿಕ ಜಾಲತಾಣದಲ್ಲಿ ಅಭಿಯಾನ! ಫ್ಯಾನ್ಸ್ ಮನವಿ
Bigg Boss Kannada season 12: ಈ ಬಾರಿಯ 'ಬಿಗ್ ಬಾಸ್ ಕನ್ನಡ ಆವೃತ್ತಿ 12'ನ್ನು ಯಾರು ನಿರೂಪಿಸುತ್ತಾರೆ ಎಂಬ ಚಿಂತೆ ದೂರಾಗಿದ್ದು, ಕಿಚ್ಚ ಸುದೀಪ್ ಅವರೇ ನಡೆಸಿಕೊಡಲಿದ್ದಾರೆ ಎಂಬುದು ಖಚಿತವಾಗಿದೆ. ಸದ್ಯ ಯಾರೆಲ್ಲ ಸ್ಪರ್ಧಿಗಳು ಭಾಗವಹಿಸಿದ್ದಾರೆ ಎಂಬುದರ ಮೇಲೆ ಸಾರ್ವಜನಿಕರ ಕಣ್ಣು ನೆಟ್ಟಿದೆ. ಕಂಟೆಸ್ಟೆಂಟ್‌ಗಳ ಬಗ್ಗೆ ಚರ್ಚೆ ಜೋರಾಗಿದೆ. ಅವರಂತೆ, ಇವರಂತೆ ಎಂಬ ಊಹಾಪೋಹ ಸಹ ಶುರುವಾಗಿದೆ. ಈ ಮಧ್ಯೆ ಪವರ್ ಸ್ಟಾರ್ ಡಾ.ಪುನೀತ್ ರಾಜ್ ಕುಮಾರ್ ಅವರ ಅಪ್ಪಟ ಅಭಿಮಾನಿ, ಪ್ರಕಾಶ ಯಲಗಚ್ಚ (Prakash Yalagach) ಅವರಿಗೆ ಅವಕಾಶ ನೀಡುವಂತೆ ಸಾಮಾಜಿಕ ಜಾಲತಾಣದಲ್ಲಿ ಒತ್ತಾಯ ಜೋರಾಗಿದೆ.
ಹೌದು, ಬಹುಮಖ ಪ್ರತಿಭೆ, ಸಾಮಾಜಿಕ ಕಳಕಳಿ ಹೊಂದಿರುವ ವ್ಯಕ್ತಿ. ನೃತ್ಯದಲ್ಲಿ (ಡಾನ್ಸ್) ಹೆಸರು ಮಾಡಬೇಕು ಎಂಬ ಆಶಯ ಹೊಂದಿರುವ ಅಪ್ಪು ಅಭಿಮಾನಿ ಪ್ರಕಾಶ ಯಲಗಚ್ಚ ಇವರು ಮೂಲತಃ ಹಾವೇರಿ ಜಿಲ್ಲೆಯ ಯಲಗಚ್ಚ ಗ್ರಾಮದವರು. ಬಡ ಕುಟುಂಬದಲ್ಲಿ ಹುಟ್ಟಿ ವಿದ್ಯಾಭ್ಯಾಸದ ಜೊತೆಗೆ ಊರೂರು ಸುತ್ತಿ ಸಂತೆಯಲ್ಲಿ ತರಕಾರಿ ವ್ಯಾಪಾರ ಮಾಡುವ ಈ ಯುವಕ ಅಪ್ಪು ಅಗಲಿಕೆ ಬಳಿಕ ತನ್ನ ಸ್ವಂತ ಜಾಗದಲ್ಲಿ ಪುನೀತ್ ರಾಜ್ ಕುಮಾರ್ ಪ್ರತಿಮೆ ನಿರ್ಮಿಸಿದ್ದಾರೆ. ಅದನ್ನು ಈ ಹಿಂದೆ ಅಶ್ವಿನಿ ಪುನೀತ್ ರಾಜ್ ಕುಮಾರ್ ಅವರೇ ಗ್ರಾಮಕ್ಕೆ ಬಂದು ಉದ್ಘಾಟಿಸಿದ್ದರು.

ಪ್ರಕಾಶ ಅವರು, ಬಿಡುವಿದ್ದಾಗ ಸರ್ಕಾರಿ ಶಾಲೆ ಮಕ್ಕಳಿಗೆ ಉಚಿತ ನೃತ್ಯ ತರಬೇತಿ ಹೇಳಿಕೊಡುತ್ತಾರೆ. ಸಮಾಜಮುಖಿ ಕೆಲಸಗಳಲ್ಲಿ ತೊಡಗಿಕೊಳ್ಳುವ ಪ್ರಕಾಶಗೆ ಈ ಬಾರಿ ಕನ್ನಡ ಬಿಗ್ ಬಾಸ್ ಸೀಸನ್‌ನಲ್ಲಿ ಅವಕಾಶ ನೀಡುವಂತೆ ಅವರ ಆಪ್ತರು, ದೊಡ್ಮನೆ ಅಭಿಮಾನಿಗಳ ಬಳಗ, ಕಿಚ್ಚ ಸುದೀಪ್ ಫ್ಯಾನ್ಸ್, ಮಾಜಿ ಸೈನಿಕ, ಜಿಲ್ಲಾ ರಕ್ಷಣಾ ವೇದಿಕೆ ಸೇರಿದಂತೆ ಅನೇಕ ಒತ್ತಾಯಿಸಿದ್ದಾರೆ.
ಜಿಲ್ಲೆಗಿದೆ ಬಿಗ್ ಬಾಸ್ ಗೆಲುವಿನ ಹಿಸ್ಟರಿ..!
ಹಾವೇರಿ, ಹುಬ್ಬಳ್ಳಿ ಮಾತ್ರವಲ್ಲದೇ ಕಲಬುರಗಿ ಸೇರಿದಂತೆ ವಿವಿಧ ಭಾಗದ ಅಪ್ಪು ಅಭಿಮಾನಿಗಳು ಹಾಗೂ ಬಡ ಕುಟುಂಬದ ಪ್ರತಿಭೆ ಬೆಳೆಯಬೇಕೆನ್ನುವ ಹಂಬಲವುಳ್ಳವರು ಪ್ರಕಾಶ ಅವರು ಈ ಬಾರಿ ಬಿಗ್ ಬಾಸ್‌ಗೆ ಆಯ್ಕೆ ಮಾಡಿಕೊಳ್ಳಬೇಕೆಂದು ಕಿಚ್ಚ ಸುದೀಪ್ ಹಾಗೂ ಕಲರ್ಸ್ ಕನ್ನಡ ವಾಹಿನಿಯವರಿಗೂ ಮನವಿ ಮಾಡುತ್ತಿದ್ದಾರೆ. ಈ ಕುರಿತು ವಿಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿವೆ. ಕಳೆದ ಸೀಸನ್‌ನಲ್ಲಿ ಬಿಗ್ ಬಾಸ್ ನಲ್ಲಿ ಗೆಲುವು ಪಡೆದ ಕೀರ್ತಿ ಹಾವೇರಿ ಜಿಲ್ಲೆಗಿದೆ. ಕಳೆದ ವರ್ಷ ಕುರಗಾಹಿ ಹನುಮಂತ ಲಮಾಣಿ ಗೆದ್ದು ಬೀಗಿದ್ದರು.

ಯಾಲಕ್ಕಿ ಕಂಪಿನ ನಾಡಿನ ಬಡ ಕಲಾವಿದ, ಬಹುಮುಖ ಪ್ರತಿಭೆ ಪ್ರಕಾಶ ಯಲಗಚ್ಚ ಅವರಿಗೆ ಬಿಗ್‌ಬಾಸ್ ನಲ್ಲಿ ಅವಕಾಶ ನೀಡುವಂತೆ ಹಾವೇರಿ ಜಿಲ್ಲಾ ರಕ್ಷಣಾ ವೇದಿಕೆಯ ಮಹಿಳಾ ಘಟಕದ ಜಿಲ್ಲಾ ಅಧ್ಯಕ್ಷರಾದ ಗೀತಾ ಲಮಾಣಿ ಅವರು ಕೋರಿದ್ದಾರೆ. ಯಲಗಚ್ಚ ಯುವಕ 'ಪ್ರಕಾಶ ಮರಬದ' ಅವರು ಬಿಗ್ ಬಾಸ್ 12ಕ್ಕೆ ಆಯ್ಕೆ ಆಗಲಿದ್ದಾರೆ ಎಂಬ ನಂಬಿಕೆ ಇದೆ. ಇಂತಹ ಪ್ರತಿಭೆಯನ್ನು ಬೆಂಬಲಿಸಬೇಕು. ಸರ್ಕಾರಿ ಮಕ್ಕಳಿಗೆ ಉಚಿತ ನೃತ್ಯ ತರಬೇತಿ ಹೇಳಿಕೊಡುತ್ತಾರೆ. ಸಮಾಜಮುಖಿ ಕೆಲಸಗಳಿಂದಲೇ ಪ್ರಶಸ್ತಿ ಪಡೆದಿದ್ದಾರೆ. ಜಿಲ್ಲೆ ವ್ಯಾಪಿ ಪ್ರಕಾಶ ಯಲಗಚ್ಚ ಎಂದು ಹೆಸರು ಮಾಡಿದ ಇಂತಹ ಪ್ರತಿಭಾನ್ವಿತ ಯುಕವರನ್ನು ಗುರಿತಿಸಬೇಕು. ಅವರನ್ನು ನಾವೆಲ್ಲರು ಬಿಗ್ ಬಾಸ್ ಮನೆಯಲ್ಲಿ ನೋಡಲು ಕಾಯುತ್ತಿದ್ದೇವೆ ಎಂದು ಈಡಿಗ ಸಮಾಜದ ಅಧ್ಯಕ್ಷ ತಿಪ್ಪೇಶ್ ಅವರು ಸೇರಿದಂತೆ ಅನೇಕರು ಒತ್ತಾಯಿಸಿದ್ದಾರೆ.
ಬಿಗ್ ಬಾಸ್ ಸೀಸನ್ 12ರ ಕುರಿತು
ಸತತ 11 ಆವೃತ್ತಿಗಳನ್ನು ಯಶಸ್ವಿಯಾಗಿ ಪೂರೈಸಿರುವ 'ಬಿಗ್ ಬಾಸ್ ಕನ್ನಡ'ಇದೀಗ 12ನೇ ಆವೃತ್ತಿಗೆ ಕಾಲಿಟ್ಟಿದೆ. ಈ ಬಾರಿಯು ಕಿಚ್ಚ ಸುದೀಪ್ ಅವರು ಕಾರ್ಯಕ್ರಮ ಹೋಸ್ಟ್ ಮಾಡಲಿದ್ದಾರೆ. ಈ ಬಾರಿ ಒಟ್ಟು 18 ಜನರು ಬಿಗ್ ಬಾಸ್‌ಗೆ ಮನೆ ಸೇರಲಿದ್ದಾರೆ ಎನ್ನಲಾಗಿದೆ. ಈ ಪೈಕಿ ಪ್ರಕಾಶ ಯಲಗಚ್ಚ ಅವರ ಹೆಸರು ಸಹ ಕೇಳಿ ಬಂದಿದೆ. ಕಳೆದ ಬಾರಿ 11ನೇ ಸೀಸನ್‌ನಲ್ಲಿ ಇದೇ ಹಾವೇರಿ ಜಿಲ್ಲೆಯ ಹನುಮಂತ ಲಮಾಣಿ (Hanumanth Lamani) ಅವರು ಬಿಗ್ ಬಾಸ್ ಗೆದ್ದಿದ್ದರು. ಮತ್ತದೇ ಜಿಲ್ಲೆಯ ಮತ್ತೊಬ್ಬ ಪ್ರತಿಭಾನ್ವಿತ ಯುವಕನಿಗೆ ಅವಕಾಶ ನೀಡುವಂತೆ ಜಿಲ್ಲೆಯ ಜನರು ಕೋರಿದ್ದಾರೆ. ಸಾಮಾಜಿಕ ಜಾಲತಾಣಗಳಲ್ಲು ಆಗ್ರಹ ಜೋರಾಗಿದೆ.












Click it and Unblock the Notifications