Bigg Boss Kannada 12: ನಾಳೆಯಿಂದ ಬಿಗ್‌ಬಾಸ್ ಆರಂಭ, ಲೀಕ್ ಆಯ್ತು ಟಾಪ್‌ ಸ್ಪರ್ಧಿಗಳ ಹೆಸರು

ಬಿಗ್‌ಬಾಸ್‌ ಕನ್ನಡ ಸೀಸನ್‌ 12 ಆರಂಭಕ್ಕೆ ಒಂದೇ ದಿನ ಬಾಕಿ ಇದೆ. ಸೆಪ್ಟೆಂಬರ್‌ 28ರಂದು ಭಾನುವಾರ ಸಂಜೆ ಬಿಗ್‌ಬಾಸ್‌ನ ಗ್ರ್ಯಾಂಡ್‌ ಓಪನಿಂಗ್‌ಗೆ ವೇದಿಕೆ ಸಜ್ಜಾಗಿದೆ. ಯಾರು ಈ ಸೀಸನ್‌ನ ಸ್ಪರ್ಧಿಗಳು ಎಂಬ ಕುತೂಹಲಕ್ಕೆ ಭಾನುವಾರವೇ ತೆರೆ ಬೀಳಲಿದೆ. ಬಿಗ್‌ಬಾಸ್‌ ಮನೆಯಲ್ಲಿ ಯಾರೆಲ್ಲ ಕಾಣಿಸಿಕೊಳ್ಳಲಿದ್ದಾರೆ ಎಂಬ ಕಾತುರ ಪ್ರೇಕ್ಷಕರಲ್ಲಿ ಮನೆ ಮಾಡಿದೆ. ಸೋಷಿಯಲ್‌ ಮೀಡಿಯಾದಲ್ಲಿ ಈ ಸೀಸನ್‌ ಬಿಗ್‌ಬಾಸ್‌ ಸ್ಪರ್ಧಿಗಳ ಹೊಸ ಲಿಸ್ಟ್‌ ಲೀಕ್‌ ಆಗಿದ್ದು, ಇವರೇ ಕನ್ಫರ್ಮ್‌ ಸ್ಪರ್ಧಿಗಳು ಎಂದು ಹೇಳಲಾಗುತ್ತಿದೆ. ಟಾಪ್‌ ಹತ್ತು ಮಂದಿಯ ಹೆಸರು ಈ ಲಿಸ್ಟ್‌ನಲ್ಲಿದೆ.

ಮೌನ ಗುಡ್ಡೇಮನೆ: ಮೂಲತಃ ಮಂಗಳೂರಿನವರಾದ ಕನ್ನಡ ಕಿರುತೆರೆ ನಟಿ ಮೌನ ಗುಡ್ಡೇಮನೆ ಈ ಸೀಸನ್‌ನಲ್ಲಿ ಕಾಣಿಸಿಕೊಳ್ಳಲಿದ್ದಾರಂತೆ. ಕುಲದಲ್ಲಿ ಕೀಳ್ಯಾವುದೋ ಸಿನಿಮಾ ಮೂಲಕ ನಟಿಯಾಗಿ ಎಂಟ್ರಿ ಕೊಟ್ಟಿದ್ದಾರೆ. ರಾಮಾಚಾರಿ ಸೀರಿಯಲ್‌ ಈಗಷ್ಟೇ ಮುಗಿದಿದ್ದು, ಬಿಗ್‌ಬಾಸ್‌ಗೆ ಹೋಗ್ತಾರೆ ಎನ್ನಲಾಗಿದೆ.

Bigg Boss Kannada Season 12 Contestants List Leaked Show Starts Tomorrow

ಕಾಕ್ರೋಚ್‌ ಸುಧಿ: ಸಲಗ, ಟಗರು, ಭೀಮ ಸಿನಿಮಾ ಖ್ಯಾತಿಯ ಕಾಕ್ರೋಚ್‌ ಸುಧಿ ಕೂಡ ಈ ಸೀಸನ್‌ನಲ್ಲಿ ಕಾಣಿಸಿಕೊಳ್ತಾರಂತೆ. ಈಗಾಗಲೇ ಒಂದೆರಡು ಬಾರಿ ಆಫರ್‌ ಬಂದಿದ್ದು, ಕಾರಣಾಂತರಗಳಿಂದ ಹೋಗಿರಲಿಲ್ಲ. ಈ ಬಾರಿ ಕರೆದರೆ ಪಕ್ಕಾ ಹೋಗ್ತೀನಿ ಎಂದಿದ್ದರು ಸುಧಿ.

ನಟಿ ರಾಶಿಕಾ ಶೆಟ್ಟಿ: ಯೋಗರಾಜ್ ಭಟ್ ನಿರ್ದೇಶನದ ಮನದ ಕಡಲು ಸಿನಿಮಾ ಮೂಲಕ ನಾಯಕಿಯಾಗಿ ಸ್ಯಾಂಡಲ್‌ವುಡ್ ಪ್ರವೇಶಿಸಿರುವ ರಾಶಿಕಾ ಶೆಟ್ಟಿ ಹೆಸರು ಕೂಡ ಈ ಪಟ್ಟಿಯಲ್ಲಿದೆ. ಬಿಗ್‌ಬಾಸ್‌ ಮೂಲಕ ರಾಶಿಕಾ ಹೊಸ ಹೆಜ್ಜೆ ಇಡುತ್ತಿದ್ದಾರೆ ಎನ್ನಲಾಗಿದೆ.

ಸೂರಜ್:‌ ಕಾಮಿಡಿ ಕಿಲಾಡಿಗಳು ಖ್ಯಾತಿಯ ಸೂರಜ್‌ ಬಿಗ್‌ಬಾಸ್‌ ಮನೆಗೆ ಹೋಗುವುದು ಪಕ್ಕಾ ಎಂದು ಹೇಳಲಾಗುತ್ತಿದೆ. ಪ್ರತಿ ಬಾರಿಯೂ ಒಬ್ಬ ಹಾಸ್ಯ ನಟರು ಬಿಗ್‌ಬಾಸ್‌ನಲ್ಲಿರುತ್ತಾರೆ. ಈ ಬಾರಿ ಸೂರಜ್‌ಗೆ ಆ ಅದೃಷ್ಟ ಒಲಿದಿದೆಯಂತೆ.

ಸ್ಪಂದನಾ ಸೋಮಣ್ಣ: "ಕರಿಮಣಿ" ಸೀರಿಯಲ್‌ ನಟಿ ಸ್ಪಂದನಾ ಸೋಮಣ್ಣ ಈ ಬಾರಿಯ ಬಿಗ್‌ಬಾಸ್‌ ಸ್ಪರ್ಧಿಗಳ ಲಿಸ್ಟ್‌ನಲ್ಲಿದ್ದಾರೆ. ಸೀರಿಯಲ್‌ ಮೂಲಕ ಕರ್ನಾಟಕದ ಮನೆಮಾತಾಗಿರುವ ಸ್ಪಂದನಾ ದೊಡ್ಮನೆಯಲ್ಲಿ ಕಾಣಿಸಿಕೊಳ್ಳಲಿದ್ದಾರಂತೆ.

Bigg Boss Kannada Season 12 Contestants List Leaked Show Starts Tomorrow

ಅಭಿಷೇಕ್‌ ಶ್ರೀಕಾಂತ್:‌ "ವಧು" ಸೀರಿಯಲ್‌ ನಟ ಅಭಿಷೇಕ್‌ ಶ್ರೀಕಾಂತ್‌ ಹೆಸರು ಕಳೆದ ಸೀಸನ್‌ ವೇಳೆಯೇ ಹರಿದಾಡಿತ್ತು. ಈ ಬಾರಿ ಅಭಿಷೇಕ್‌ ಬಿಗ್‌ಬಾಸ್‌ ಸ್ಪರ್ಧಿಯಾಗಿರುವುದು ಪಕ್ಕಾ ಎಂದು ಹೇಳಲಾಗುತ್ತಿದೆ.

ಧನುಷ್‌ ಗೌಡ: "ಗೀತಾ" ಸೀರಿಯಲ್‌ ನಟ ಧನುಷ್‌ ಗೌಡ ಕೂಡ ಸಖತ್‌ ಫೇಮಸ್.‌ ಚಾಕೊಲೇಟ್‌ ಬಾಯ್‌ ಆಗಿ ಗುರುತಿಸಿಕೊಂಡಿರುವ ಧನುಷ್‌ ಬಿಗ್‌ಬಾಸ್‌ ಕಾರ್ಯಕ್ರಮಕ್ಕೆ ಹೋಗ್ತಾರಂತೆ. ಹಲವು ತಿಂಗಳಿಂದ ಧನುಷ್‌ ಹೆಸರು ಕೇಳಿಬರುತ್ತಲೇ ಇದೆ.

ನಟಿ ಮೇಘಾ ಶೆಟ್ಟಿ: ಜೊತೆ ಜೊತೆಯಲಿ ಸೀರಿಯಲ್‌ ನಟಿ ಮೇಘಾ ಶೆಟ್ಟಿ, ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ಬಿಗ್‌ಬಾಸ್‌ಗೆ ನಾನು ಹೋಗ್ತಿಲ್ಲ ಎಂದು ಕೆಲ ದಿನಗಳ ಹಿಂದೆ ಸ್ಟೇಟಸ್‌ ಕೂಡ ಹಾಕಿದ್ರು. ಆದರೆ ಕೊನೆ ಹಂತದಲ್ಲಿ ಮೇಘಾ ಬಿಗ್‌ಬಾಸ್‌ ಮನೆ ಪ್ರವೇಶಿಸಲಿದ್ದಾರೆ ಎಂದು ಹೇಳಲಾಗುತ್ತಿದೆ.

ಆಂಕರ್‌ ಜಾಹ್ನವಿ: ಕನ್ನಡ ನ್ಯೂಸ್‌ ಆಂಕರ್‌ ಆಗಿ ಗಮನ ಸೆಳೆದಿದ್ದ ಜಾಹ್ನವಿ ಗಿಚ್ಚಿಗಿಲಿಗಿಲಿ ಶೋ ಮೂಲಕ ಮಿಂಚಿದ್ದರು. ಸೋಷಿಯಲ್‌ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ಆಕ್ಟಿವ್‌ ಆಗಿರುವ ಜಾಹ್ನವಿ ಬಿಗ್‌ಬಾಸ್‌ ಮನೆಗೆ ಕಾಲಿಡುತ್ತಿದ್ದಾರಂತೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+