Bigg Boss: ಒಬ್ಬರಲ್ಲ ಈ ಬಾರಿ ಇಬ್ಬರಿಗೆ ಬಿಗ್ ಬಾಸ್ ಗೆಲುವಿನ ಪಟ್ಟ
ಕಿರುತೆರೆ ಪ್ರೇಕ್ಷಕರು ಬಹಳ ಕಾತುರದಿಂದ ಕಾಯುತ್ತಿದ್ದ ಬಿಗ್ ಬಾಸ್ ಕನ್ನಡ ಸೀಸನ್ 11ರ ಗ್ರ್ಯಾಂಡ್ ಫಿನಾಲೆ ಕಾರ್ಯಕ್ರಮ ಆರಂಭವಾಗಿದೆ. ಮೂರು ತಿಂಗಳ ಪಯಣವನ್ನು ಯಶಸ್ವಿಯಾಗಿ ಮುಗಿಸಿರುವ ಬಿಗ್ ಬಾಸ್ ಸ್ಪರ್ಧಿಗಳು ಈಗ ಫಿನಾಲೆಗೆ ಕಾಲಿಟ್ಟಿರುವ ಖುಷಿಯಲ್ಲಿದ್ದಾರೆ. ರಜತ್, ತ್ರಿವಿಕ್ರಮ್, ಉಗ್ರಂ ಮಂಜು, ಹನುಮಂತ, ಮೋಕ್ಷಿತಾ ಪೈ ಹಾಗೂ ಭವ್ಯ ಗೌಡ ಬಿಗ್ ಬಾಸ್ ಕನ್ನಡ ಸೀಜನ್ 11ರ ಫಿನಾಲೆ ವಾರದಲ್ಲಿದ್ದು, ಸೋಲು-ಗೆಲುವಿನ ಲೆಕ್ಕಚಾರ ಸ್ಪರ್ಧಿಗಳ ನಿದ್ದೆಗೆಡಿಸಿದೆ.
ಗ್ರ್ಯಾಂಡ್ ಫಿನಾಲೆ ಕಾರ್ಯಕ್ರಮ ಆರಂಭವಾಗಿದ್ದು, ಯಾರ ಪಾಲಿಗೆ ಅದೃಷ್ಟ ಒಲಿಯಲಿದೆ ಎನ್ನುವುದು ನಾಳೆ ಬಹಿರಂಗವಾಗಲಿದೆ. ಇಂದು ಹಾಗೂ ನಾಳೆ ಗ್ರ್ಯಾಂಡ್ ಫಿನಾಲೆ ಕಾರ್ಯಕ್ರಮ ಪ್ರಸಾರ ಆಗಲಿದ್ದು, ಇಂದಿನ ಸಂಚಿಕೆಯಲ್ಲಿ ಮೂರು ಸ್ಪರ್ಧಿಗಳು ಮನೆಯಿಂದ ಹೊರ ಹೋಗಲಿದ್ದಾರೆ. ಈ ಬಾರಿ ವಿನ್ನರ್ ಯಾರಾಗಬಹುದು ಎನ್ನುವ ಕುತೂಹಲ ಪ್ರೇಕ್ಷಕರಲ್ಲಿ ಹೆಚ್ಚಾಗಿದೆ. ಈ ಪ್ರಶ್ನೆಗೆ ಕೆಲವೇ ಗಂಟೆಗಳಲ್ಲಿ ಉತ್ತರ ಸಿಗಲಿದೆ.

ರಜತ್, ತ್ರಿವಿಕ್ರಮ್, ಉಗ್ರಂ ಮಂಜು, ಹನುಮಂತ, ಮೋಕ್ಷಿತಾ ಪೈ ಹಾಗೂ ಭವ್ಯ ಗೌಡ ಪೈಕಿ ಬಿಗ್ ಬಾಸ್ ಟ್ರೋಫಿ ಗೆಲ್ಲುವುದು ಯಾರು ಎನ್ನುವ ಪ್ರಶ್ನೆಗೆ ಉತ್ತರಕ್ಕೂ ಮೊದಲು ಮತ್ತೊಂದು ಹೊಸ ವಿಚಾರ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ. ಅಂತಿಮ ವಾರದಲ್ಲಿ ಉಳಿದ ಆರು ಸ್ಪರ್ಧಿಗಳು ಟ್ರೋಫಿಗಾಗಿ ಹೋರಾಡುತ್ತಿದ್ದರೆ, ಆರು ಜನರ ಪೈಕಿ ಈ ಬಾರಿ ಬಿಗ್ ಬಾಸ್ ಟ್ರೋಫಿ ಇಬ್ಬರ ಕೈ ಸೇರುವ ಸಾಧ್ಯತೆ ಇದೆ.
ಹೌದು ಈ ಹತ್ತು ಸೀಜನ್‌ಗಳಲ್ಲಿ ಬಿಗ್ ಬಾಸ್ ಕನ್ನಡದ ಟ್ರೋಫಿಯನ್ನು ಒಬ್ಬರಿಗೆ ಮಾತ್ರ ನೀಡಲಾಗುತ್ತಿತ್ತು. ಆದರೆ ಈ ಬಾರಿ ಇಬ್ಬರು ಸ್ಪರ್ಧಿಗಳಿಗೆ ಬಿಗ್ ಬಾಸ್ ಟ್ರೋಫಿಯನ್ನು ಹಂಚುವ ಸಾಧ್ಯತೆ ಇದೆ. ಈವರೆಗೆ ಬಿಗ್ ಬಾಸ್ ಕನ್ನಡದ ಇತಿಹಾಸದಲ್ಲಿ ಒಂದೇ ಟ್ರೋಫಿಯನ್ನು ಇಬ್ಬರಿಗೆ ಹಂಚಿದ ಉದಾಹರಣೆಗಳು ಇಲ್ಲ. ಆದರೆ ಈ ಸೀಜನ್‌ನಲ್ಲಿ ಹೊಸ ಇತಿಹಾಸ ಸೃಷ್ಟಿಯಾಗಲಿದ್ದು, ಎರಡು ಸ್ಪರ್ಧಿಗಳು ವಿಜೇತರಾಗಲಿದ್ದಾರೆ. ಇಬ್ಬರು ವಿನ್ನರ್‌ಗಳಲ್ಲಿ ಒಬ್ಬರು ಮಹಿಳಾ ಸ್ಪರ್ಧಿ ಕೂಡ ಇರುವ ಸಾಧ್ಯತೆ ಇದೆ ಎನ್ನುವ ಸುದ್ದಿ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ.












Click it and Unblock the Notifications