Bigg Boss Kannada: ವ್ಯಕ್ತಿ ನಿಮ್ಮುಂದೆ ಬಟ್ಟೆ ಕಳಚಿದರೆ ಅದು ನಂಬಿಕೆ...: ಚೈತ್ರಾ ಕುಂದಾಪುರ

Chaitrakundapur: ಬಿಗ್‌ಬಾಸ್‌ ಕನ್ನಡ ಸೀಸನ್ 11 ಇದೀಗ ಇನ್ನೊಂದು ಹಂತ ಹಾಗೂ ರೋಚಕ ಘಟ್ಟವನ್ನು ತಲುಪಿದೆ. ಈ ಬಾರಿ ಬಿಗ್‌ಬಾಸ್‌ ಸೀಸನ್‌ನ ಪ್ರಾರಂಭದಲ್ಲಿ ಸೈಲೆಂಟ್ ಆಗಿ ಇದ್ದವರೆಲ್ಲರೂ ಈಗ ವೈಲೆಂಟ್ ಆಗುತ್ತಿದ್ದಾರೆ. ಅದರಲ್ಲಿ ಚೈತ್ರಾ ಕುಂದಾಪುರ ಅವರು ಸಹ ಒಬ್ಬರು. ಪ್ರಾರಂಭದಲ್ಲಿ ಚೈತ್ರಾಕುಂದಾಪುರ ಅವರು ಆಕ್ರಮಣವಾಗಿ ಆಟದಲ್ಲಿ ತೊಡಗಿಸಿಕೊಂಡಿರಲಿಲ್ಲ. ಆದರೆ, ಕಳೆದ ವಾರ ನಟ ಕಿಚ್ಚ ಸುದೀಪ್‌ ಅವರ ಕ್ಲಾಸ್‌ ನಂತರ ಚೈತ್ರಾಕುಂದಾಪುರ ಅವರು ಫುಲ್‌ ಆ್ಯಕ್ಟೀವ್ ಆಗಿದ್ದಾರೆ. ಇದು ಬೇರೆ ಆಟಗಾರರಲ್ಲಿ ನಡುಕ ಶುರು ಮಾಡಿಸಿದೆ. ಅಲ್ಲದೇ ವ್ಯಕ್ತಿ ಬಟ್ಟೆ ಬಿಚ್ಚಿ ನಿಲ್ಲುತ್ತಾನೆ ಅಂದ್ರೆ...

ಯಾವಾಗ ವ್ಯಕ್ತಿ ಬಟ್ಟೆ ಕಳಚುವಷ್ಟು ನಂಬಿಕೆ ಇರಿಸುತ್ತಾನೆ ಎನ್ನುವ ವಿಚಾರವನ್ನು ಚೈತ್ರಾ ಅವರು ಪ್ರಸ್ತಾಪಿಸಿದ್ದು, ಈ ವಿಷಯ ಇದೀಗ ಸೋಷಿಯಲ್‌ ಮೀಡಿಯಾದಲ್ಲಿ ಭಾರೀ ಸಂಚಲವನ್ನೇ ಸೃಷ್ಟಿ ಮಾಡಿದೆ. ಬಿಗ್‌ಬಾಸ್‌ನಲ್ಲಿ ಇದೀಗ ದುಡ್ಡು ತುಂಬಾ ಇಂಪಾರ್ಟೆಂಟ್‌ ಆಗಿದೆ. ಸ್ಪರ್ಧಿಗಳ ನಡುವೆ ದುಡ್ಡಿನ ಟಾಸ್ಕ್‌ ನಡೆಯುತ್ತಿದ್ದು, ಈ ಟಾಸ್ಕ್‌ ಭಾರೀ ಹೈಪ್ ಪಡೆದುಕೊಂಡಿದೆ. ಇದರಲ್ಲಿ ಚೈತ್ರಾ ಕುಂದಾಪುರ ಅವರೂ ಪ್ರಮುಖ ಸ್ಪರ್ಧಿ. ಚೈತ್ರಾ ಕುಂದಾಪುರ ಅವರು ಆಸ್ಪತ್ರೆಗೆ ಹೋಗಿ ಬಂದ ಮೇಲೆ ಹಾಗೂ ಅಲ್ಲಿ ನಡೆದಿದೆ ಎನ್ನಲಾದ ಸಂಭಾಷಣೆಯನ್ನು ಬಿಗ್‌ಬಾಸ್‌ನ ಒಳಗೆ ಸ್ಪರ್ಧಿಗಳ ಬಳಿ ಹೇಳಿಕೊಂಡಾಗ ದೊಡ್ಡ ಸಂಚಲನವೇ ಸೃಷ್ಟಿಯಾಗಿತ್ತು. ಬಿಗ್‌ಬಾಸ್‌ ಸ್ಪರ್ಧಿಗಳು ತಲೆಗೆ ಹುಳು ಬಿಟ್ಟುಕೊಂಡಿದ್ದರು.

Bigg Boss Kannada If a person takes off his clothes infront of you it is trust Chaitra Kundapura

ಸುದೀಪ್‌ ಅವರು ವಾರಾಂತ್ಯದಲ್ಲಿ ಚೈತ್ರಾ ಕುಂದಾಪುರ ಅವರಿಗೆ ಭರ್ಜರಿ ಕ್ಲಾಸ್‌ ತೆಗೆದುಕೊಂಡಿದ್ದರು. ಎಷ್ಟು ತರಾಟೆಗೆ ತೆಗೆದುಕೊಂಡಿದ್ದರು ಎಂದರೆ, ಬ್ರೇಕ್‌ನಲ್ಲಿ ಕ್ಯಾಮರಾದ ಮುಂದೆ ಬಂದಿದ್ದ ಚೈತ್ರಾಕುಂದಾಪುರ ಅವರು, ಬಿಗ್‌ಬಾಸ್‌ ನಾನು ಈ ಮನೆಯಿಂದ ಹೋಗುವುದಕ್ಕೆ ಇಷ್ಟ ಪಡುತ್ತೇನೆ. ನನಗೆ ಇಲ್ಲಿ ಉಸಿರು ಕಟ್ಟುವ ವಾತಾವರಣ ಇದೆ ಎಂದಿದ್ದರು. ಸೋಮವಾರ ಹಾಗೂ ಮಂಗಳವಾರದ ವರೆಗೂ ಅವರು ಸ್ವಲ್ಪ ಡಲ್ ಆಗಿದ್ದರು. ಆದರೆ, ಮಂಗಳವಾರದಿಂದಾಚೆಗೆ ಅವರ ಆಟ ಹಾಗೂ ಖದರ್ ಎರಡೂ ಬದಲಾಗಿ ಹೋಗಿದೆ.

ಇದೀಗ ಬಿಗ್‌ಬಾಸ್‌ನಲ್ಲಿ ಹಣದ ಟಾಸ್ಕ್‌ ಜೋರಾಗಿದ್ದು, ಸ್ಪರ್ಧಿಗಳ ನಡುವೆ ಬಿಗ್‌ಫೈಟ್‌ ನಡೆದಿದೆ. ಚೈತ್ರಾ ಅವರ ಹತ್ತಿರವಿದ್ದ ದುಡ್ಡನ್ನು ಭವ್ಯಾ ಅವರ ತಂಡದ ಸದಸ್ಯೆ ಗೌತಮಿ ಅವರು ಯಾಮಾರಿಸಿ, ತೆಗೆದುಕೊಂಡಿದ್ದಾರೆ. ಇದು ಚೈತ್ರಾ ಅವರನ್ನು ಕೆರಳಿಸಿದೆ. ಇಲ್ಲಿ ಎಲ್ಲರೂ ಕೀಳುಮಟ್ಟಕ್ಕೆ ಇಳಿದಿದ್ದಾರೆ. ನಾನು ಗುಂಪುಗಾರಿಕೆ ಮಾಡಿಕೊಂಡು ಕುತಂತ್ರ ಮಾಡಲ್ಲ. ಇಲ್ಲಿ ಡ್ರಾಮಾ ಕ್ವೀನ್​ಗಳು ಯಾರು ಅಂತ ಗೊತ್ತಾಯ್ತು. ಇನ್ಮುಂದೆ ನನ್ನ ಆಟ ಶುರು ಮಾಡಿಕೊಳ್ತೀನಿ ಎಂದಿದ್ದಾರೆ. ಅಷ್ಟೇ ಅಲ್ಲ, ಗುಂಪು ಕಟ್ಟಿಕೊಂಡು ಪ್ಲ್ಯಾನ್ ಮಾಡಲ್ಲ. ಸಿಂಗಲ್‌ ಸಿಂಹ ಸಿಂಹದ ತರ ಹೊಡಿತೀನಿ ಅಂತ ಅವಾಜ್ ಹಾಕಿದ್ದಾರೆ.

ಈ ಹಿಂದೆಯ ಸಂಚಿಕೆಯಲ್ಲಿ ಎದುರಾಳಿ ತಂಡದ ಐಶ್ವರ್ಯಾ ಅವರ ಹತ್ತಿರವಿದ್ದ ದುಡ್ಡನ್ನು ಚೈತ್ರಾ ಅವರು ಎಗರಿಸಿದ್ದರು. ಇದೀಗ ಚೈತ್ರಾ ಅವರ ದುಡ್ಡನ್ನು ಭವ್ಯಾ ಅವರು ಯಾಮಾರಿಸಿ ತೆಗೆದುಕೊಂಡು ತಿರುಗೇಟು ನೀಡಿದ್ದಾರೆ. ಆದರೆ, ಇದಕ್ಕೆ ಚೈತ್ರಾ ಅವರು ಕೆಂಡಾ ಮಂಡಲರಾಗಿದ್ದಾರೆ.

ಬಟ್ಟೆ ಬಿಚ್ಚಿ ನಿಂತರೆ ಅದು ನಂಬಿಕೆ..

ಒಬ್ಬ ವ್ಯಕ್ತಿ ನಿಮ್ಮ ಮುಂದೆ ಬಂದು ಬಟ್ಟೆ ಬಿಚ್ಚಿ ನಿಲ್ಲುತ್ತಾನೆ ಎಂದಾದರೆ ಅದು ನಂಬಿಕೆ. ಆ ನಂಬಿಕೆಯನ್ನೇ ನೀವು ಉಳಿಸಿಕೊಂಡಿಲ್ಲ ಎಂದು ಚೈತ್ರಾ ಕುಂದಾಪುರ ಅವರು ಅವರನ್ನು ಯಾಮಾರಿಸಿದವರಿಗೆ ಟಾಂಗ್ ಕೊಟ್ಟಿದ್ದಾರೆ. ನಿಮ್ಮ ಮೇಲೆ ನಾನು ಅಷ್ಟೊಂದು ದೊಡ್ಡ ನಂಬಿಕೆ ಇಟ್ಟುಕೊಂಡಿದ್ದೆ. ಅದನ್ನು ನೀವು ಉಳಿಸಿಕೊಂಡಿಲ್ಲ ಎಂಬರ್ಥದಲ್ಲಿ ಅವರು ಮಾತನಾಡಿದ್ದಾರೆ.

ಚೈತ್ರಾ ಕುಂದಾಪುರ - ಶಿಶಿರ್ ಶಾಸ್ತ್ರಿ ಫೈಟ್: ಇನ್ನು ಬಿಗ್‌ಬಾಸ್‌ನಲ್ಲಿ ಪ್ರಾರಂಭದಲ್ಲಿ ತುಂಬಾ ಆತ್ಮೀಯರಾಗಿ ಗುರುತಿಸಿಕೊಂಡಿದ್ದ ಚೈತ್ರಾ ಕುಂದಾಪುರ - ಶಿಶಿರ್ ಶಾಸ್ತ್ರಿ ಅವರ ನಡುವೆ ಭಾರೀ ಫೈಟ್ ನಡೆಯುತ್ತಿದೆ. ಇಬ್ಬರ ನಡುವೆ ವಾಗ್ವಾದ - ಕೂಗಾಟ ಜೋರಾಗಿದೆ. ಜೋಡಿ ಆಯ್ಕೆಯಲ್ಲಿ ಶಿಶಿರ್ ಅವರನ್ನು ಚೈತ್ರಾ ಅವರು ಹೊರಗಿಟ್ಟ ಮೇಲೆ ಶಿಶಿರ್‌ ಅವರು ಚೈತ್ರಾ ಮೇಲೆ ಕೆಂಡಾ ಕಾರುತ್ತಿದ್ದಾರೆ. ನಾವು ಕಲಾವಿದರಲ್ಲ ಇಲ್ಲಿರುವವರು ಕಲಾವಿದರು ಅಂತ ಅವರು ಗುಡುಗಿದ್ದರು. ಇದೀಗ ಮತ್ತೆ ಅವರಿಬ್ಬರ ನಡುವೆ ಫೈಟ್‌ ಶುರುವಾಗಿದೆ.

ಚೈತ್ರಾ ಅವರ ಮಾತು ಇದೀಗ ಸೋಷಿಯಲ್‌ ಮೀಡಿಯಾದಲ್ಲಿ ಭಾರೀ ವೈರಲ್‌ ಆಗಿದೆ. ಚೈತ್ರಾ ಅವರ ಆಟದ ಶೈಲಿಯೂ ಬದಲಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+