Drone Prathap: ನೆರವೇರಿತು ಡ್ರೋನ್‌ ಪ್ರತಾಪ್‌ಗೆ ಮದುವೆ, ಹುಡುಗಿ ಯಾರು?

ಕನ್ನಡ ಬಿಗ್‌ಬಾಸ್‌ ಸ್ಪರ್ಧಿ ಡ್ರೋನ್‌ ಪ್ರತಾಪ್‌ ಅವರು ಅಭಿಮಾನಿಗಳಿಗೆ ಶಾಕ್‌ ನೀಡಿದ್ದಾರೆ. ಬಿಗ್‌ಬಾಸ್‌ ಬಳಿಕ ಸಖತ್‌ ಫೇಮಸ್‌ ಆಗಿದ್ದ ಪ್ರತಾಪ್‌ ಕೃಷಿ ಹೊಂಡದಲ್ಲಿ ಸ್ಫೋಟದ ಅನ್ವೇಷಣೆ ಮಾಡಿ ಜೈಲು ಸೇರಿದ್ದರು. ಬಳಿಕ ಜಾಮೀನು ಪಡೆದು ಹೊರಬಂದಿರುವ ಅವರು "ಭರ್ಜರಿ ಬ್ಯಾಚುಲರ್ಸ್‌" ಶೋನಲ್ಲಿ ಸ್ಪರ್ಧಿಯಾಗಿ ಮತ್ತೆ ಮಿಂಚುತ್ತಿದ್ದಾರೆ. ಈಗ ಹೊಸ ವಿಚಾರ ಏನಂದ್ರೆ ಡ್ರೋನ್‌ ಪ್ರತಾಪ್‌ ಅವರ ಮದುವೆ ನೆರವೇರಿದೆ. ಹೌದು, ಸ್ಯಾಂಡಲ್‌ವುಡ್‌ನ ಹಿರಿಯ ನಟ ಹಾಗೂ ನಟಿಯ ಸಮ್ಮುಖದಲ್ಲಿ ಡ್ರೋನ್‌ ಪ್ರತಾಪ್‌ ಮದುವೆ ನಡೆದಿದೆ.

ಬಿಗ್‌ಬಾಸ್‌ ಬಳಿಕ ಮದುವೆಯಾಗುವ ಮೂಲಕ ಡ್ರೋನ್‌ ಪ್ರತಾಪ್‌ ಶಾಕ್‌ ಕೊಟ್ಟಿದ್ದಾರೆ. ಸ್ಯಾಂಡಲ್‌ವುಡ್‌ನ ಕ್ರೇಜಿ ಸ್ಟಾರ್‌ ರವಿಚಂದ್ರನ್‌ ಹಾಗೂ ನಟಿ ರಚಿತಾ ರಾಮ್‌ ಅವರ ಸಮ್ಮುಖದಲ್ಲಿ ಡ್ರೋನ್‌ ಪ್ರತಾಪ್‌ ಅವರ ಮದುವೆ ನೆರವೇರಿದೆ. ವೇದಿಕೆ ಮೇಲೆಯೇ ಯುವತಿ ಕೊರಳಿಗೆ ತಾಳಿ ಕಟ್ಟಿ ಎಲ್ಲರಿಗೂ ಶಾಕ್‌ ಕೊಟ್ಟಿದ್ದಾರೆ. ಮಧುಮಗನ ಗೆಟಪ್‌ನಲ್ಲೇ ಬಂದು ಮದುವೆ ಮಾಡಿಕೊಂಡಿದ್ದು, ಇದನ್ನು ಕಂಡು ರವಿಚಂದ್ರನ್‌ ಹಾಗೂ ರಚಿತಾ ರಾಮ್‌ ಕೂಡ ಅಚ್ಚರಿಗೆ ಒಳಗಾಗಿದ್ದಾರೆ. ಭರ್ಜರಿ ಬ್ಯಾಚುಲರ್ಸ್‌ ಶೋ ವೇದಿಕೆ ಮೇಲೆ ಈ ಪ್ರಸಂಗ ನಡೆದಿದ್ದು, ಡ್ರೋನ್‌ ಪ್ರತಾಪ್‌ ಅವರು ಸಹಸ್ಪರ್ಧಿಯಾದ ಗಗನಾ ಕೊರಳಿಗೆ ತಾಳಿ ಕಟ್ಟಿದ್ದಾರೆ.

Bigg Boss Kannada Fame Drone Prathap Marries Gagana On Bhajari Bachelors Show Task

ಆದರೆ ಡ್ರೋನ್‌ ಮದುವೆಯಾಗಿರುವುದು ನಿಜವಾಗಿ ಅಲ್ಲ, ಇದು ಭರ್ಜರಿ ಬ್ಯಾಚುಲರ್ಸ್‌ ಶೋನ ಟಾಸ್ಕ್‌ ಎಂದು ತಿಳಿದುಬಂದಿದೆ. ರವಿಚಂದ್ರನ್‌ ಅವರ ರಾಮಾಚಾರಿ ಸಿನಿಮಾದ ಮದುವೆ ಸೀನ್‌ ಅನ್ನು ಈ ವೇದಿಕೆಯಲ್ಲಿ ರೀ ಕ್ರಿಯೇಟ್‌ ಮಾಡಲಾಗಿದೆ. ಇದರಲ್ಲಿ ಪ್ರತಾಪ್‌ ಅವರ ರವಿಚಂದ್ರನ್‌ ಅವರ ಗೆಟಪ್‌ನಲ್ಲಿ ಬಂದರೆ, ಮಾಲಾಶ್ರೀ ಅವರ ಗೆಟಪ್‌ನಲ್ಲಿ ಗಗನಾ ವಧುವಿನಂತೆ ಅಭಿನಯಿಸಿದ್ದಾರೆ. ಸಿನಿಮಾದಲ್ಲಿ ಥೇಟ್‌ ರವಿಚಂದ್ರನ್‌ ಅವರು ಪೆದ್ದನಂತೆ ಬಂದು ಮಾಲಾಶ್ರೀ ಕೊರಳಿಗೆ ತಾಳಿ ಕಟ್ಟಿದಂತೆಯೇ, ಪ್ರತಾಪ್‌ ಕೂಡ ಗಗನಾ ಕೊರಳಿಗೆ ತಾಳಿ ಕಟ್ಟಿದ್ದಾರೆ.

ಈ ಪ್ರೋಮೋ ಅನ್ನು ಜೀ ವಾಹಿನಿ ಹಂಚಿಕೊಂಡಿದೆ. ಇದರಲ್ಲಿ ಮೊದಲಿಗೆ ಪೆದ್ದನಂತೆ ವೇದಿಕೆಗೆ ಆಗಮಿಸಿದ ಡ್ರೋನ್‌ ಪ್ರತಾಪ್‌ಗೆ ಗಗನಾ ತಾಳಿ ಕಟ್ಟುವಂತೆ ಕೇಳಿದ್ದಾರೆ. ನಮ್ಮಣ್ಣ ನಿಂಗೆ ಹೊಡೀಬಾರ್ದು ಅಂದ್ರೆ, ನನ್ನ ಕುತ್ತಿಗೆಗೆ ತಾಳಿ ಕಟ್ಟು ಎಂದಿದ್ದಾರೆ. ಇದಕ್ಕೆ ಕೈಯಲ್ಲಿ ತಾಳಿ ಹಿಡಿದ ಪ್ರತಾಪ್‌ ಇದನ್ನ ಕಟ್ಟಿದ್ರೆ ಮದುವೆ ಆಗೋಗುತ್ತಾ? ಎಂದು ಕೇಳಿದ್ದಾರೆ. ಕೊನೆಗೆ ಎಲ್ಲರೆದುರೇ ತಾಳಿ ಕಟ್ಟೇಬಿಟ್ಟಿದ್ದಾರೆ. ಬಳಿಕ ಗಗನಾ, ನೀನು ಕಟ್ಟಿದ್ದು ತಾಳಿ ರಾಮಾಚಾರಿ..ಎಂದು ಹೇಳಿದ್ದು, ಬಳಿಕ ನೀನು ನನ್‌ ಹೆಂಡ್ತಿನೂ ಅಲ್ಲ, ನಾನು ನಿನ್‌ ಗಂಡಾನೂ ಅಲ್ಲ, ಇದು ಮದುವೇನೂ ಅಲ್ಲ ಎಂದು ಪೆದ್ದನಂತೆ ಡೈಲಾಗ್‌ ಹೊಡೆದು ಎಲ್ಲರ ಚಪ್ಪಾಳೆ ಗಿಟ್ಟಿಸಿಕೊಂಡಿದ್ದಾರೆ ಡ್ರೋನ್‌ ಪ್ರತಾಪ್.

Bigg Boss Kannada Fame Drone Prathap Marries Gagana On Bhajari Bachelors Show Task

ಪ್ರತಾಪ್‌ ಅವರ ಅಭಿನಯಕ್ಕೆ ತೀರ್ಪುಗಾರರಾದ ನಟ ರವಿಚಂದ್ರನ್‌ ಅವರೇ ಫಿದಾ ಆಗಿದ್ದಾರೆ. ಪೆದ್ದನಂತೆ ನಟಿಸುವುದು ಅಷ್ಟು ಸುಲಭವಲ್ಲ, ಪ್ರತಾಪ್‌ ಈ ಪಾತ್ರವನ್ನು ಚೆನ್ನಾಗಿ ಮಾಡಿದ್ದಾರೆ ಎಂದು ಶಹಬ್ಬಾಸ್‌ಗಿರಿಯೂ ಕೊಟ್ಟಿದ್ದಾರೆ. ಇತ್ತೀಚೆಗೆ ಗಗನಾ ಅವರಿಗೆ ಸರ್‌ಪ್ರೈಸ್‌ ಕೊಟೋ ಟಾಸ್ಕ್‌ನಲ್ಲಿ ಪ್ರತಾಪ್‌ ಎಲ್ಲರ ಗಮನ ಸೆಳೆದಿದ್ರು, ಹೆಲಿಕಾಪ್ಟರ್‌ನಲ್ಲಿ ಕರೆದೊಯ್ದು, ಕಾಲಿಗೆ ಗೆಜ್ಜೆ ಕಟ್ಟುವ ಮೂಲಕ ಮಿಂಚಿದ್ದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+