ಗಿಲ್ಲಿ.. ಗಿಲ್ಲಿ.. ಮಂಡ್ಯದ ಗಂಡು ಗಿಲ್ಲಿ ನಟನಿಗೆ ದಿಢೀರ್... Bigg Boss Gilli
ಬಿಗ್‌ಬಾಸ್ ಕನ್ನಡ ಇನ್ನೇನು ಕೊನೇ ಹಂತಕ್ಕೆ ಬಂದಿದೆ, ಈ ಬಾರಿಯ ಬಿಗ್‌ಬಾಸ್ ಕನ್ನಡ ಸೀಸನ್ ಒನ್‌ಮ್ಯಾನ್ ಶೋ ಆಗುತ್ತಿದೆ ಅನ್ನೋ ಮಾತುಗಳ ನಡುವೆ ಗಿಲ್ಲಿ ಹವಾ ಕೂಡ ಬಲು ಜೋರಾಗಿದೆ. ಮಂಡ್ಯದ ಗಂಡು ಗಿಲ್ಲಿ ಈ ಬಾರಿಯ ಬಿಗ್‌ಬಾಸ್ ಕಪ್ ಗೆದ್ದು ಹೋಗುವುದು ಗ್ಯಾರಂಟಿ ಅಂತಾ ಅಭಿಮಾನಿಗಳು ಮಾತನಾಡುತ್ತಿದ್ದಾರೆ. ಅಲ್ಲದೆ ಗಿಲ್ಲಿ ಹವಾ ನೋಡಿದರೆ ಎಂತಹವರು ಕೂಡ ಒಂದು ಕ್ಷಣ ಬೆರಗಾಗುವುದು ಗ್ಯಾರಂಟಿ. ಅಷ್ಟು ಹವಾ ಇಟ್ಟಿರುವ ಗಿಲ್ಲಿಗೆ ಈಗ ದಿಢೀರ್ ಒಂದು ಸುದ್ದಿ ಸಿಕ್ಕಿದ್ದು, ಗಿಲ್ಲಿ.. ಗಿಲ್ಲಿ.. ಮಂಡ್ಯದ ಗಂಡು ಗಿಲ್ಲಿ ನಟನಿಗೆ ದಿಢೀರ್...
ಕನ್ನಡ, ತಮಿಳು, ತೆಲುಗು, ಹಿಂದಿ, ಮಲಯಾಳಂ... ಹೀಗೆ ಬಿಗ್‌ಬಾಸ್ ಕಾರ್ಯಕ್ರಮ ಹಲವು ಭಾಷೆ & ರಾಜ್ಯದಲ್ಲಿ ಮೂಡಿ ಬರುತ್ತಿದ್ದರೂ ಕನ್ನಡ ಬಿಗ್‌ಬಾಸ್‌ಗೆ ಭಾರಿ ದೊಡ್ಡ ಬೆಂಬಲವು ಸಿಗುತ್ತಾ ಬರುತ್ತಿದೆ. ಅಂದಹಾಗೆ ಕನ್ನಡ ಬಿಗ್‌ಬಾಸ್ ಕಾರ್ಯಕ್ರಮ ಕನ್ನಡ ಭಾಷಿಗರು ಮಾತ್ರವಲ್ಲ, ಬೇರೆ ಬೇರೆ ಭಾಷೆಗಳನ್ನ ಮಾತನಾಡುವವರು ಕೂಡ ನೋಡುತ್ತಾರೆ. ಹೀಗಿದ್ದಾಗ ಈ ಬಾರಿ ಬಿಗ್‌ಬಾಸ್ ಮನೆಯಲ್ಲಿ ಮಂಡ್ಯ ಮೂಲದ ಗಿಲ್ಲಿ ನಟ ಹವಾ ಜೋರಾಗಿದ್ದು, ಇದೇ ಗಿಲ್ಲಿ ಈ ಬಾರಿಯ ವಿನ್ನರ್ ಅನ್ನೋದನ್ನ ಕೂಡ ಜನರು ಮನಸ್ಸಿನಲ್ಲಿ ಫಿಕ್ಸ್ ಮಾಡಿಕೊಂಡಿದ್ದರು. ಇಂತಹ ಸಮಯದಲ್ಲೇ ದಿಢೀರ್...

ಬಿಗ್‌ಬಾಸ್ ಕನ್ನಡದಲ್ಲಿ ಮಂಡ್ಯದ ಗಿಲ್ಲಿ...
ಕನ್ನಡ ಬಿಗ್‌ಬಾಸ್ ಶುರುವಾಗಿ ಇನ್ನೇನು ಫೈನಲ್ ಹಂತಕ್ಕೆ ಬಂದಿದ್ದು, ಗೆಲುವಿಗೆ ಗುದ್ದಾಟ ಕೂಡ ಶುರುವಾಗಿದೆ. ಅದ್ರಲ್ಲೂ ಬಿಗ್‌ಬಾಸ್ ಮನೆಯ ಸ್ಪರ್ಧಿಗಳ ನಡುವೆ ಇದೀಗ ಭರ್ಜರಿಯಾಗಿ ಫೈಟಿಂಗ್ ನಡೆಯುತ್ತಾ ಇದ್ದು, ಪ್ರತಿಯೊಬ್ಬ ಸ್ಪರ್ಧಿಯೂ ತಮ್ಮ ಸಾಮರ್ಥ್ಯ ತೋರಿಸುತ್ತಾ ಇದ್ದಾರೆ. ಹೀಗೆ ಸೀಸನ್ 12 ಸಿಕ್ಕಾಪಟ್ಟೆ ಕುತೂಹಲ ಕೆರಳಿಸಿದ್ದು, ನೋಡ ನೋಡುತ್ತಲೇ ಅಂತಿಮ ಹಂತಕ್ಕೆ ಕೂಡ ಎಂಟ್ರಿ ಕೊಟ್ಟಿದೆ ಕನ್ನಡ ಬಿಗ್‌ಬಾಸ್. ಒಂದು ಕಡೆ ಗಿಲ್ಲಿ ಈ ಬಾರಿ ಬಿಗ್‌ಬಾಸ್ ವಿನ್ನರ್ ಅಂತಾನೇ ಜನ ಹೇಳುತ್ತಿದ್ದರೆ, ಇನ್ನೊಂದು ಕಡೆ ರಕ್ಷಿತಾ ಶೆಟ್ಟಿ ಪರವಾಗಿಯೂ ಕ್ಯಾಂಪೇನ್ ನಡೆಯುತ್ತಾ ಇದೆ. ಇಂತಹ ಭಾರಿ ಕುತೂಹಲದ ಮೂಡಿಸಿರುವ ಸಮಯದಲ್ಲೇ...
ಮಂಡ್ಯದ ಗಿಲ್ಲಿ ನಟಗೆ ಸಿಕ್ಕಿದೆ ದೇವರ ಬೆಂಬಲ!
ಹೌದು, ಬಿಗ್‌ಬಾಸ್ ಕನ್ನಡ ಸೀಸನ್ 12 ಕಾರ್ಯಕ್ರಮ ಗೆಲ್ಲುವುದು ಯಾರು? ಅನ್ನೋ ಪ್ರಶ್ನೆಗೆ ಈಗ ಕೊನೆಗೂ ಉತ್ತರ ಕನ್ಫರ್ಮ್ ಆಗುತ್ತಿದೆ. ಅಂದಹಾಗೆ ಕೋಟಿ ಕೋಟಿ ಅಭಿಮಾನಿಗಳ ಆಸೆ ಈಗ ಈಡೇರುವ ಲಕ್ಷಣ ಗೋಚರಿಸಿದೆ. ಅಷ್ಟಕ್ಕೂ ಮಂಡ್ಯ ಮೂಲದ ಗಿಲ್ಲಿ ನಟ ಬಿಗ್‌ಬಾಸ್ ಕನ್ನಡ ಸೀಸನ್ 12 ಗೆಲ್ತಾರಾ? ಇಲ್ವಾ? ಎಂಬ ಪ್ರಶ್ನೆಗೆ ಇದೀಗ ದೇವರ ಬೆಂಬಲ ಕೂಡ ಸಿಕ್ಕಿದೆ. ಇದೀಗ ಪುಟಾಣಿ ಮಕ್ಕಳು ಗಿಲ್ಲಿ, ಬಿಗ್‌ಬಾಸ್ ಕನ್ನಡ ಸೀಸನ್ 12 ಗೆಲ್ತಾರಾ? ಇಲ್ವಾ? ಎಂಬ ಪ್ರಶ್ನೆ ಕೇಳಿ ದೇವರ ಬಳಿ ಹೂ ಕೇಳಿದಾಗ ದೇವರು ಕೂಡ ಗಿಲ್ಲಿ ಗೆಲ್ಲುವುದು ಗ್ಯಾರಂಟಿ ಎಂಬ ರೀತಿಯಲ್ಲಿಯೇ ಆಶೀರ್ವಾದ ಮಾಡಿದ್ದಾರೆ. ಇದೇ ವೀಡಿಯೋ ಈಗ ಫುಲ್ ವೈರಲ್ ಆಗುತ್ತಿದೆ!












Click it and Unblock the Notifications