Bigg Boss Kannada 13: ಸೆ.6ರ ಆರಂಭಕ್ಕೂ ಮುನ್ನ ಬಿಗ್‌ಬಾಸ್‌ಗೆ ಸಂಕಷ್ಟ: ಶೋ ಬಗ್ಗೆ ಕಿಚ್ಚ ಸುದೀಪ್ ಹೇಳಿದ್ದೇನು
Bigg Boss Kannada 13: ಬಿಗ್‌ಬಾಸ್ ಕನ್ನಡ ರಿಯಾಲಿಟಿ ಶೋದ 13ನೇ ಆವೃತ್ತಿ ಪ್ರಾರಂಭಕ್ಕೆ ದಿನಗಣನೆ ಪ್ರಾರಂಭವಾಗಿದೆ. ಹಲವು ಕಾರಣಗಳಿಗೆ ಈ ಬಾರಿಯ ಬಿಗ್‌ಬಾಸ್ ಶೋ ಕುತೂಹಲ ಮೂಡಿಸಿದೆ. ಈ ಬಾರಿಯ ಬಿಗ್‌ಬಾಸ್ ಶೋನಲ್ಲಿ ಜನ ಸಾಮಾನ್ಯರು ಭಾಗವಹಿಸುತ್ತಿರುವುದು ಹಾಗೂ ಅಗ್ನಿ ಪರೀಕ್ಷೆ ಎನ್ನುವ ಕಾನ್ಸೆಪ್ಟ್ ಸೇರಿದಂತೆ ಹಲವು ವಿಷಯಗಳು ವೀಕ್ಷಕರಲ್ಲಿ ಕುತೂಹಲ ಮೂಡಿಸಿದೆ. ಬಿಗ್‌ಬಾಸ್ ಕನ್ನಡ ರಿಯಾಲಿಟಿ ಶೋ ಸೆಪ್ಟೆಂಬರ್ 6ರಂದು ಅದ್ಧೂರಿಯಾಗಿ ಪ್ರಾರಂಭವಾಗಲಿದೆ. ಆದರೆ, ಶೋ ಪ್ರಾರಂಭಕ್ಕೂ ಮುಂಚೆಯೇ ಈ ಬಾರಿ ಸಂಕಷ್ಟ ಎದುರಾಗಿದೆ. ಇದರ ಸಂಪೂರ್ಣ ವಿವರ ಇಲ್ಲಿದೆ.
ಬಿಗ್ ಬಾಸ್ ಕನ್ನಡದ 13ನೇ ಸೀಸನ್ ಸೆಪ್ಟೆಂಬರ್ 6ರಂದು ಅದ್ಧೂರಿಯಾಗಿ ಆರಂಭವಾಗಲಿದೆ ಎಂದು ಈಗಾಗಲೇ ಹೇಳಲಾಗಿದೆ. ಈ ಬಾರಿಯೂ ಸಹ ನಟ ಕಿಚ್ಚ ಸುದೀಪ್ ಅವರು ಬಿಗ್‌ಬಾಸ್ ರಿಯಾಲಿಟಿ ಶೋ ನಡೆಸಿಕೊಡಲಿದ್ದು, ಹಲವು ಕಾರಣಗಳಿಗೆ ಈ ಶೋ ಖ್ಯಾತಿ ಗಳಿಸಿದೆ. ಆದರೆ, ಕಾರ್ಯಕ್ರಮ ನಡೆಯುವ ಸ್ಥಳಕ್ಕೆ ಸಂಬಂಧಿಸಿದಂತೆ ಗೊಂದಲ ಶುರುವಾಗಿದೆ.
ಕಳೆದ ಬಾರಿಯೂ ಸಹ ಬಿಗ್‌ಬಾಸ್ ರಿಯಾಲಿಟಿ ಶೋ ನಡೆಯುವ ಜಾಗಕ್ಕೆ ಸಂಬಂಧಿಸಿದಂತೆ ಸಮಸ್ಯೆ ಎದುರಾಗಿತ್ತು. ಅಲ್ಲದೆ, ಶೋ ತಾತ್ಕಾಲಿಕವಾಗಿ ಸ್ಥಗಿತವಾಗಿತ್ತು ಸಹ. ಆದರೆ, ಈ ಬಾರಿ ಆರಂಭಕ್ಕೂ ಮುಂಚೆಯೇ ವಿಘ್ನ ಎದುರಾಗಿದೆ. ರಿಯಾಲಿಟಿ ಶೋ ನಡೆಯುವ ಪ್ರದೇಶದ ಪರಿಸರ ಅನುಮತಿ ವಿಚಾರ ಇದೀಗ ಮತ್ತೆ ಚರ್ಚೆಯ ಮುನ್ನೆಲೆಗೆ ಬಂದಿದೆ.

ಬಿಗ್ ಬಾಸ್ ಸೆಟ್ ನಿರ್ಮಾಣವಾಗಿರುವ ಜಾಲಿವುಡ್ ಸ್ಟುಡಿಯೋಸ್‌ಗೆ ಸಂಬಂಧಿಸಿದ ಪರಿಸರ ನಿಯಮಗಳ ಪಾಲನೆ ಮತ್ತು ಅನುಮತಿ ವಿಚಾರದಲ್ಲಿ ಕೆಲವು ನಿರ್ದಿಷ್ಟ ಪ್ರಕ್ರಿಯೆಗಳು ಬಾಕಿ ಉಳಿದಿವೆ ಎಂದು ಹೇಳಲಾಗಿದೆ. ಈ ವಿಚಾರವಾಗಿ ಸಚಿವ ರಾಮಲಿಂಗಾರೆಡ್ಡಿ ಅವರು ಸಹ ಮಾತನಾಡಿದ್ದಾರೆ. ಅದರ ವಿವರ ಮುಂದೆ ನೋಡೋಣ.
Bigg Boss Kannada 13: ಸಚಿವ ರಾಮಲಿಂಗಾರೆಡ್ಡಿ ಹೇಳಿದ್ದೇನು ?
ಇನ್ನು ಬಿಗ್‌ಬಾಸ್ ಕನ್ನಡ ರಿಯಾಲಿಟಿ ಶೋಗೆ ಕಳೆದ ವರ್ಷ ಸಹ ಎಸ್‌ಟಿಪಿ ವಿಚಾರವಾಗಿ ಸಮಸ್ಯೆ ಎದುರಾಗಿತ್ತು. ಕಳೆದ ವರ್ಷವೇ ಪರಿಸರ ಸಂರಕ್ಷಣೆ ಅಥವಾ ನಿಯಮ ಪಾಲನೆಗೆ ಸಂಬಂಧಿಸಿದಂತೆ ಕೆಲವೊಂದು ನಿರ್ದಿಷ್ಟ ಸೂಚನೆಗಳನ್ನು ನೀಡಲಾಗಿತ್ತು. ಇದಾದ ನಂತರವೂ ಅಗತ್ಯ ಅನುಮತಿ ಪಡೆಯುವ ಪ್ರಕ್ರಿಯೆ ಪೂರ್ಣಗೊಂಡಿರಲಿಲ್ಲ ಎಂದು ಸಚಿವರು ಹೇಳಿದ್ದಾರೆ. ರಾಮಲಿಂಗಾರೆಡ್ಡಿ ಅವರು ಈ ವಿಚಾರವಾಗಿ ಮಾತನಾಡಿದ್ದು, ಬಿಗ್ ಬಾಸ್ ಕನ್ನಡ ರಿಯಾಲಿಟಿ ಶೋ ಆಯೋಜಿಸುವ ಸಂಸ್ಥೆಯಿಂದ ಇನ್ನೂ ಯಾವುದೇ ಮನವಿ ಪತ್ರ ಬಂದಿಲ್ಲ. ಅಲ್ಲದೆ ಕಾರ್ಯಕ್ರಮ ನಡೆಸಲು ಸಂಸ್ಥೆ ಅರ್ಜಿ ಸಲ್ಲಿಕೆ ಮಾಡಿಲ್ಲ. ಹೀಗಾಗಿ ಅನುಮತಿ ನೀಡುವ ಪ್ರಶ್ನೆಯೇ ಇಲ್ಲ ಎಂದಿದ್ದಾರೆ.
ಪರಿಸರ ನಿಯಮಗಳನ್ನು ಉಲ್ಲಂಘಿಸಿದ್ದರೆ, ಕಾನೂನಿನ ಪ್ರಕಾರ ದಂಡ ವಿಧಿಸಿ ಕ್ರಮ ಕೈಗೊಳ್ಳಲು ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ. ನಿಯಮ ಪಾಲಿಸಿದರೆ ಹಾಗೂ ಅಗತ್ಯ ಪ್ರಕ್ರಿಯೆ ಪೂರ್ಣಗೊಳಿಸಿದ ನಂತರ ಅನುಮತಿ ಕೊಡಲಾಗುವುದು ಎಂದು ಹೇಳಿದ್ದಾರೆ.


Click it and Unblock the Notifications
