Bigg Boss Kannada 13: “ಗಗನ್ ಇಲ್ಲದಿದ್ರೆ ಬಿಗ್‌ಬಾಸೇ ನಡೆಯಲ್ಲ ಅನ್ನೋ ಹಂಗೆ ಬಿಲ್ಡಪ್!” ಚೈಲ್ಡ್ ಚಪಾತಿ, ಪುಡಾಂಗು...
Bigg Boss Kannada Season 13: ಬಿಗ್‌ಬಾಸ್ ಕನ್ನಡ ಸೀಸನ್ 13ರ ವಾರದ ಕಥೆ ಕಿಚ್ಚನ ಜೊತೆ ಭಾನುವಾರದ ಸಂಚಿಕೆಯಲ್ಲಿ ನಟ ಕಿಚ್ಚ ಸುದೀಪ್ (Kiccha Sudeep) ಅವರು ಗಾಸಿಪ್ ಹಾಗೂ ಕಾಮೆಂಟ್‌ಗಳ ವಿಚಾರವಾಗಿ ಮಾತನಾಡಿದ್ದಾರೆ. ಬಿಗ್‌ಬಾಸ್ ಕನ್ನಡ ಸೀಸನ್ 13 ಪ್ರಾರಂಭವಾಗಿ ಒಂದು ವಾರವಾಗಿದೆ. ಮೊದಲ ವಾರದ ಕಿಚ್ಚನ ಜೊತೆ ವಾರದ ಕಥೆಯಲ್ಲಿ ನಟ ಕಿಚ್ಚ ಸುದೀಪ್ ಅವರು ಶನಿವಾರ ನಟ ಗಗನ್ ಚಿನ್ನಪ್ಪ (Gagan Chinnappa) ಮತ್ತು ತಾಂಡವ್ ರಾಮ್ (Tandav Ram)ಗೆ ಕಿಚ್ಚ ಸುದೀಪ್ ಅವರು ಕ್ಲಾಸ್ ತೆಗೆದುಕೊಂಡಿದ್ದರು. ಭಾನುವಾರವೂ ಸಹ ಬಹುತೇಕ ಸ್ಪರ್ಧಿಗಳು ಗಗನ್ ಚಿನ್ನಪ್ಪ ಅವರು ತಾವು ಇಲ್ಲದೆ ಇದ್ದರೆ ಈ ಬಾರಿಯ ಬಿಗ್‌ಬಾಸ್ ಸೀಸನ್ ನಡೆಯುವುದೇ ಇಲ್ಲ ಎನ್ನುವಂತೆ ವರ್ತಿಸುತ್ತಿದ್ದಾರೆ ಅಂತ ಹೇಳಿದ್ದಾರೆ.
ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಬಿಗ್‌ಬಾಸ್ ಕನ್ನಡ ಸೀಸನ್ 13ರ ಮೊದಲ ವಾರಾಂತ್ಯದಲ್ಲಿ "ನೀವುಗಳೇ ಮತ್ತೊಬ್ಬ ಸ್ಪರ್ಧಿಗಳ ಬಗ್ಗೆ ಮಾಡಿದ ಕಾಮೆಂಟ್ ಯಾವುದು, ಯಾರಿಗೆ ಅಂತ ಹೇಳಿ' ಅಂತ ಕಿಚ್ಚ ಸುದೀಪ್ ಅವರು ವಾರಾಂತ್ಯದ ಶೋನಲ್ಲಿ ಟಾಸ್ಕ್ ಕೊಟ್ಟಿದ್ದಾರೆ. ಈ ವಾರದಲ್ಲಿ ವಿವಿಧ ಸ್ಪರ್ಧಿಗಳು ತಮ್ಮ ಪ್ರತಿಸ್ಪರ್ಧಿಗಳಿಗೆ ಹೇಳಿದ ಕಾಮೆಂಟ್ ಇದಾಗಿದೆ. ವಿಮಾನದ ಒಳಗೆ ಹಾಗೂ ಮನೆಯ ಒಳಗೆ ಇರುವ ಸ್ಪರ್ಧಿಗಳು ಈ ವಾರ ಗಾಸಿಪ್ ಮಾಡಿಕೊಂಡಿದ್ದರು ಒಬ್ಬೊರಿಗೆ ಒಂದೊಂದು ಕಾಮೆಂಟ್ ಕೊಟ್ಟಿದ್ದರು. ಈ ಕಾಮೆಂಟ್‌ಗಳನ್ನು ಕಿಚ್ಚ ಸುದೀಪ್ ಅವರು ಯಾರಿಗೆ ಹೇಳಿದ್ರಿ ಅಂತ ಕೇಳಿದ್ದಾರೆ.

Bigg Boss Kannada Season 13: ನೀವುಗಳೇ ಇನ್ನೊಬ್ಬರ ಬಗ್ಗೆ ಹೇಳಿರುವ ಕಾಮೆಂಟ್‌ಗಳು!
ಇನ್ನು ನೀವುಗಳೇ ಇನ್ನೊಬ್ಬರ ಬಗ್ಗೆ ಹೇಳಿರುವ ಕಾಮೆಂಟ್‌ಗಳು ಇಲ್ಲಿವೆ. ಯಾರಿಗೆ ಇದು ಸೂಕ್ತವಾಗುತ್ತದೆ ಅವರ ಬೋರ್ಡ್‌ಗೆ ಹೋಗಿ ಅಂಟಿಸಿ ಅಂತ ನಟ ಕಿಚ್ಚ ಸುದೀಪ್ ಅವರು ಸ್ಪರ್ಧಿಗಳನ್ನು ಕೇಳಿದ್ದು ವಿಭಿನ್ನವಾದ ಟಾಸ್ಕ್ ಕೊಟ್ಟಿದ್ದಾರೆ. ನಟಿ ಪ್ರಥಮ ಪ್ರಸಾದ್ ಅವರು ಕಿರಣ್ ಶಾಸ್ತ್ರಿಗೆ ಅಧಿಕ ಪ್ರಸಂಗಿ ಎನ್ನುವ ಕಾಮೆಂಟ್ ಅಂಟಿಸಿದ್ದಾರೆ.
ಕುಸ್ತಿಪಟು ಮತ್ತು ಕಿರುತೆರೆ ನಟ ತಾಂಡವ್ ರಾಮ್‌ಗೆ ಮಾಡ್ರನ್ ಮಹಾಕವಿ ಮಂಜ ಅವರು ಪುಡಾಂಗ್ ಅಂತ ಕಾಮೆಂಟ್ ಮಾಡಿದ್ದಾರೆ. ಅಲ್ಲದೆ ತಾಂಡವ್ ಅವರಿಗೆ ಗೊತ್ತಿಲ್ಲ ಅವರ ಕೈಯಲ್ಲಿ ಏನು ಆಗಲ್ಲ ಅಂತಲೂ ಮಂಜಾ ಹೇಳಿದ್ದಾರೆ. ಆದರೆ ಓಡಾಡೋದು ಮಾತ್ರ ಏನು ಗಜಗಾಂಭೀರ್ಯದಲ್ಲಿ ಅವರೇ ದೊಡ್ಡ ಪುಡಾಂಗು ಬಿಗ್‌ಬಾಸ್ ಮನೆಯಲ್ಲಿ ಅಂತ ಹೇಳಿದ್ದಾರೆ.
Bigg Boss Kannada Season 13: ಗಗನ್ ಚಿನ್ನಪ್ಪಗೆ ಕಡಲೆ ಬೀಜ ಇಲ್ಲದ ಚಿತ್ರಾನ್ನ ಎಂದ ಕಿರಣ್ ಶಾಸ್ತ್ರಿ!
ಇನ್ನು ಗಗನ್ ಚಿನ್ನಪ್ಪ ಅವರಿಗೆ ಅಗ್ನಿ ಪರೀಕ್ಷೆ ಸ್ಪರ್ಧೆಯ ಮೂಲಕ ಬಿಗ್ ಬಾಸ್ ಪ್ರವೇಶಿಸಿರುವ ಕಿರಣ್ ಶಾಸ್ತ್ರಿ ಅವರು ಕಡಲೆ ಬೀಜ ಇಲ್ಲದ ಚಿತ್ರಾನ್ನ ಅಂತ ಹೇಳಿದ್ದಾರೆ. ಇನ್ನು ಮತ್ತೊಬ್ಬ ಅಗ್ನಿ ಪರೀಕ್ಷೆ ಸ್ಪರ್ಧಿ, ಗಿನ್ನಿಸ್ ರೆಕಾರ್ಡ್ ವಿಜೇತ ಧನುಷ್ ಮಂಜುನಾಥ್ ಅವರು ಸಹ ಗಗನ್ ಚಿನ್ನಪ್ಪ ಹೆಸರು ತೆಗೆದುಕೊಂಡಿದ್ದಾರೆ. ನಾನು ಇಲ್ಲ ಅಂದ್ರೆ ಬಿಗ್‌ಬಾಸ್ ನಡೆಯಲ್ಲ ಎನ್ನುವಂಗೆ ಬೇಸ್‌ವಾಯ್ಸ್‌ನಲ್ಲೆಲ್ಲ ಎಲ್ಲರಿಗೂ ಒಂದೊಂದೇ... ಕಾಮೆಂಟ್ ಮಾಡಿದ್ದಾರೆ. ಇದಕ್ಕೆ ಕಿರಣ್ ಶಾಸ್ತ್ರಿ ಅವರು ಸಹ ಸಾಥ್ ಕೊಟ್ಟಿದ್ದಾರೆ. ಅಲ್ಲದೆ ಒಳಗೆಲ್ಲ ಏನೇನೂ ಜ್ಞಾನನೇ ಇಲ್ಲ ಅಂತಲೂ ಕಿರಣ್ ಶಾಸ್ತ್ರಿ ಹೇಳಿದ್ದಾರೆ. ಈ ಕಾಮೆಂಟ್‌ಗಳಿಗೆ ತಿರುಗೇಟು ಕೊಟ್ಟಿರುವ ಗಗನ್ ಚಿನ್ನಪ್ಪ ಅವರು, ಮಾತನಾಡಬೇಕಾದರೆ ಒಂದು ತೂಕವಿರಬೇಕು. ತೂಕ ಇಲ್ಲದಿದ್ದರೆ ಆ ಮನುಷ್ಯನಿಗೆ ಮೌಲ್ಯವೇ ಇರಲ್ಲ ಅಂತ ಹೇಳಿದ್ದಾರೆ.
ಇನ್ನು ಮಂಜಾ ಅವರಿಗೆ ಖಾಲಿ ಡಬ್ಬ ಅಂತ ಕಾಮೆಂಟ್ ಮಾಡಲಾಗಿದೆ. ನಿರ್ದೇಶಕ, ನಟ ಓಂ ಪ್ರಕಾಶ್ ಅವರು ಖಾಲಿ ಪಲಾವ್ - ಕಿತ್ತೋದೋರು ಅಂತ ಹೇಳಿದ್ದಾರೆ. ಆದರೆ ಯಾರಿಗೆ ಹೇಳಿದ್ದಾರೆ ಅನ್ನೋದು ತೋರಿಸಿಲ್ಲ. ಇದರಲ್ಲಿ ಇನ್ನೂ ಚೈಲ್ಡ್ ಚಪಾತಿ ಎನ್ನುವುದು ಸೇರಿದಂತೆ ಹಲವು ಕಾಮೆಂಟ್‌ಗಳನ್ನು ಸ್ಪರ್ಧಿಗಳು ಪರಸ್ಪರ ಕೊಟ್ಟಿದ್ದಾರೆ. ಭಾನುವಾರದ ಬಿಗ್‌ಬಾಸ್ ಕನ್ನಡದ ಸಂಚಿಕೆಯು ಅತ್ಯಂತ ಕುತೂಹಲದಿಂದ ಕೂಡಿದೆ.


Click it and Unblock the Notifications
