BBK 12: ಬಿಗ್ ಬಾಸ್ ಮನೆಯ 4ನೇ ಸ್ಪರ್ಧಿಯಾಗಿ ಸೋಷಿಯಲ್ ಮೀಡಿಯಾ ಸ್ಟಾರ್ ಎಂಟ್ರಿ
ಈ ಬಾರಿ ಬಿಗ್‌ಬಾಸ್ ಸೀಸನ್ ರಿಯಾಲಿಟಿ ಶೋ ಶಾಕ್ ಮೇಲೆ ಶಾಕ್ ನೀಡುತ್ತಿದೆ. ಕೊನೆಯ ಕ್ಷಣದವರೆಗೆ ಬಿಗ್‌ಬಾಸ್ ಸ್ಪರ್ಧಿಗಳ ಹೆಸರನ್ನು ರಿವೀಲ್ ಮಾಡದ ಹಳೆಯ ಪದ್ಧತಿಗೆ ಬ್ರೇಕ್ ಹಾಕಿದ್ದು, ಶೋ ಆರಂಭಕ್ಕೂ ಮುನ್ನವೇ ಈ ಬಾರಿ ಸ್ಪರ್ಧಿಗಳ ಹೆಸರನ್ನು ಒಬ್ಬೊಬ್ಬರಾಗಿ ರಿವೀಲ್ ಮಾಡುತ್ತಿದೆ. ನಿನ್ನೆಯೇ ಮೂವರು ಸ್ಪರ್ಧಿಗಳ ಹೆಸರನ್ನು ಬಿಗ್‌ಬಾಸ್ ರಿವೀಲ್ ಮಾಡಿದ್ದು, ಇದೀಗ ಸೋಷಿಯಲ್ ಮೀಡಿಯಾ ಸ್ಟಾರ್‌ವೊಬ್ಬರು ನಾಲ್ಕನೇ ಸ್ಪರ್ಧಿಯಾಗಿ ಬಿಗ್‌ಬಾಸ್‌ಗೆ ಎಂಟ್ರಿ ನೀಡಿದ್ದಾರೆ.
ಹೌದು ಪ್ರತಿ ಬಾರಿಯೂ ಸೋಷಿಯಲ್ ಮೀಡಿಯಾ ಸ್ಟಾರ್‌ಗಳಿಗೆ ಬಿಗ್‌ಬಾಸ್‌ನಲ್ಲಿ ಅವಕಾಶ ನೀಡಲಾಗುತ್ತಿದೆ. ಈ ಬಾರಿ ಕರಾವಳಿ ಮೂಲದ ಸೋಷಿಯಲ್ ಮೀಡಿಯಾ ಇನ್‌ಫ್ಲುಯೆನ್ಸರ್ ರಕ್ಷಿತಾ ಶೆಟ್ಟಿ ನಾಲ್ಕನೇ ಸ್ಪರ್ಧಿ ಎಂದು ಬಿಗ್‌ಬಾಸ್ ಅಧಿಕೃತವಾಗಿ ಘೋಷಣೆ ಮಾಡಿದೆ. ಈ ಬಗ್ಗೆ ಕಲರ್ಸ್ ವಾಹಿನಿ ಪ್ರೋಮೋ ಹಂಚಿಕೊಂಡಿದ್ದು, ಸೋಶಿಯಲ್ ಮೀಡಿಯಾದಲ್ಲಿ ಅಲ್ಲೆಯನ್ನೇ ಎಬ್ಬಿಸಿದ ಕರಾವಳಿ ಪ್ರತಿಭೆ ರಕ್ಷಿತಾ ಶೆಟ್ಟಿ ಬಿಗ್ ಬಾಸ್ ಮನೆಯ ಕಂಟೆಸ್ಟೆಂಟ್ ಎಂದು ಪರಿಚಯ ಮಾಡಿಕೊಟ್ಟಿದೆ.

ರಕ್ಷಿತಾ ಶೆಟ್ಟಿ ಹಿನ್ನೆಲೆ ಏನು?
ಕರಾವಳಿ ಕನ್ನಡತಿ ರಕ್ಷಿತಾ ಶೆಟ್ಟಿ ಎಂದು ಕಿಚ್ಚ ಸುದೀಪ್ ಸ್ವಾಗತ ಕೋರಿದ್ದಾರೆ. ತುಳು, ಕನ್ನಡ, ಹಿಂದಿ ಭಾಷೆಯನ್ನು ಮಿಕ್ಸ್ ಮಾಡಿ ಮಾತನಾಡಿಯೇ ರಕ್ಷಿತಾ ಶೆಟ್ಟಿ ಸೋಷಿಯಲ್ ಮೀಡಿಯಾದಲ್ಲಿ ಫೇಮಸ್ ಆಗಿದ್ದಾರೆ. ಈ ಹಿಂದೆ ರಕ್ಷಿತಾ ಶೆಟ್ಟಿ ಯೂಟ್ಯೂಬ್ ವ್ಲಾಗ್‌ನಲ್ಲಿ ಆಟೋ ಚಾಲಕರೊಂದಿಗೆ ಮಾತನಾಡುವಾಗ ನಿಮಗೆ ತುಳು ಹಾಗೂ ಕನ್ನಡದ ಬಗ್ಗೆ ಮಾತನಾಡಿ ವಿವಾದಕ್ಕೆ ಸಿಲುಕಿದ್ದರು.
ರಕ್ಷಿತಾ ಶೆಟ್ಟಿ ಮೂಲತಃ ಮಂಗಳೂರಿನವರು. ಮಂಗಳೂರಿನಲ್ಲಿ ಹುಟ್ಟಿ ಮುಂಬೈನಲ್ಲಿ ಬೆಳೆದರು. ನನ್ನ ತಾಯಿಯ ತವರು ಮನೆ ಇಲ್ಲಿದೆ. ಹೀಗಾಗಿ ಅಪ್ಪ-ಅಮ್ಮನನ್ನು ಭೇಟಿ ಮಾಡೋಕೆ ನಾನು ಆಗಾಗ ಮುಂಬೈಗೆ ಹೋಗ್ತೀನಿ. ನನಗೆ ತಂಗಿ ಕೂಡ ಇದ್ದಾಳೆ ಎಂದು ರಕ್ಷಿತಾ ಸಂದರ್ಶನವೊಂದರಲ್ಲಿ ಹೇಳಿಕೊಂಡಿದ್ದರು. ಯುಟ್ಯೂಬ್ ಹಾಗೂ ಇನ್‌ಸ್ಟಾಗ್ರಾಂನಲ್ಲಿ ರಕ್ಷಿತಾ ಸಿಕ್ಕಾಪಟ್ಟೆ ಫಾಲೋವರ್ಸ್ ಹೊಂದಿದ್ದು, ತಮ್ಮ ಭಾಷೆ ಹಾಗೂ ವಿಶೇಷ ರೆಸಿಪಿಗಳಿಂದ ಫೇಮಸ್ ಆಗಿದ್ದಾರೆ.
ಮೀನು ಸಾರಿಗೆ ಸಕ್ಕರೆ ಹಾಕ್ತೀರಂತೆ ಎಂದು ಬಿಗ್‌ಬಾಸ್ ವೇದಿಕೆಯಲ್ಲಿ ಸುದೀಪ್ ಕೇಳಿದ್ದು, ಇದಕ್ಕೆ ರಕ್ಷಿತಾ ಕೊಟ್ಟ ಉತ್ತರ ಕೇಳಿ ನಕ್ಕಿದ್ದಾರೆ. ನಿಮ್ಮ ಅಡುಗೆ ಟೇಸ್ಟ್ ಮಾಡಿ ಚೆನ್ನಾಗಿದೆ ಅಂದಿದ್ಯಾರು? ಎಂದು ಕಿಚ್ಚ ಕೇಳಿದ್ದಾರೆ. ನಿಜ ಹೇಳಬೇಕು ಅಂದ್ರೆ ಯಾರೂ ಇಲ್ಲ ಎಂದು ರಕ್ಷಿತಾ ಫನ್ ಆಗಿ ಉತ್ತರ ಕೊಟ್ಟಿದ್ದಾರೆ.
ತಮ್ಮ ಅಪರೂಪದ ಕನ್ನಡದಿಂದಲೂ ರಕ್ಷಿತಾ ಫೇಮಸ್ ಆಗಿದ್ದು, ಯಾವಾಗ ಬೇಕಿದ್ರೂ ಮದುವೆ ಆಗಬಹುದು ಎಂದಿದ್ದಾರೆ. ನಾನು ಯಾರನ್ನೂ ಕರೆಯದೆ ಮದುವೆ ಆಗುವೆ. ಬಂದು ಊಟ ಮಾಡಿ ಹೋಗುವವರ ಮನಸ್ಸು ಪವಿತ್ರವಾಗಿರೋದಿಲ್ಲ ಎಂದೆಲ್ಲ ರಕ್ಷಿತಾ ಹೇಳಿದ್ದರು. ಬಿಗ್‌ಬಾಸ್ ಮನೆಯಲ್ಲಿ ತಮ್ಮ ವಿಶೇಷ ಕನ್ನಡದಿಂದಲೇ ರಕ್ಷಿತಾ ಹೇಗೆ ಉಳಿದವರೊಂದಿಗೆ ಆಟ ಆಡಲಿದ್ದಾರೆ ಎಂಬ ಕುತೂಹಲ ಎಲ್ಲರಲ್ಲಿದೆ.












Click it and Unblock the Notifications