ಬಿಗ್‌ಬಾಸ್‌ಗೆ ಈವರೆಗೂ ನನ್ನ ಬಿಟ್ಟರೆ ಯಾವೊಬ್ಬ ಟಫ್ ಕಂಟೆಂಡರ್ ಬಂದಿಲ್ಲ ಎಂದ ಅಶ್ವಿನಿ ಗೌಡ
BBK 12 Ashwini Gowda: ಈಗಾಗಲೇ ಕನ್ನಡ ಬಿಗ್ ಬಾಸ್ 12 ಮುಗಿದಿದ್ದು, ಗಿಲ್ಲಿ ನಟ ಅವರು ಟ್ರೋಫಿ ಗೆದ್ದ ಸಂಭ್ರಮದಲ್ಲಿದ್ದಾರೆ. ಆದರೆ, ಎರಡನೇ ರನ್ನರ್ ಅಪ್ ಆಗಿರುವ ಅಶ್ವಿನಿ ಗೌಡ ಅವರು ಮಾತ್ರ ಅಸಮಧಾನ ಮಾತ್ರ ಕಡಿಮೆಯಾಗಿಲ್ಲ. ಅದರಲ್ಲೂ, ಇದುವರೆಗೂ ನನ್ನಂತಹ ಸ್ಟ್ರಾಂಗ್ ಕಂಟೆಂಡರ್ ಬಿಗ್‌ಬಾಸ್‌ಗೆ ಬಂದಿಲ್ಲ ಎನ್ನುವ ಅವರ ಹೇಳಿಕೆ ಸಾಮಾಜಿಕ ಜಾಲತಾಣದಲ್ಲಿ ಭಾರೀ ಚರ್ಚೆಗೆ ಕಾರಣವಾಗಿದೆ.
ಜನರು ನುಡಿದ ಭವಿಷ್ಯದಂತೆ ಗಿಲ್ಲಿ ನಟ ಅವರೇ ಬಿಗ್‌ಬಾಸ್ ಕನ್ನಡ ಸೀಸನ್ 12 ವಿನ್ನರ್ ಆಗಿದ್ದಾರೆ. ಇದೀಗ ಅವರಿಗೆ ಸಿನಿಮಾ ನಟ, ನಟಿಯರು, ರಾಜಕೀಯ ನಾಯಕರು ಸೇರಿದಂತೆ ಹಲವು ಗಣ್ಯರು ಶುಭಹಾರೈಸಿದ್ದಾರೆ. ಅಲ್ಲದೆ, ಅವರನ್ನು ಭೇಟಿ ಮಾಡಲು ಅಭಿಮಾನಿಗಳ ದಂಡೇ ಹರಿದುಬರುತ್ತಿದೆ. ಅಷ್ಟರ ಮಟ್ಟಿಗೆ ಅವರು ಬಿಗ್‌ಬಾಸ್ ಮನೆಯಲ್ಲಿ ತಮ್ಮ ಕಾಮಿಡಿ ಮೂಲಕ ರಾಜ್ಯದ ಜನರ ಮನಸು ಗೆದ್ದಿದ್ದಾರೆ.

ನನ್ನಂತಹ ಸ್ಟ್ರಾಂಗ್ ಸ್ಪರ್ಧಿ ಬಂದಿಲ್ಲ: ಈ ನಡುವೆ ಎರಡನೇ ರನ್ನರ್ ಅಪ್ ಆಗಿರುವ ಅಶ್ವಿನಿ ಗೌಡ ಅವರು ಸಂದರ್ಶನಗಳಲ್ಲಿ ಕೊಡುವ ಹೇಳಿಕೆಗಳು ಸಾಮಾಜಿಕ ಜಾಲತಣದಲ್ಲಿ ಭಾರೀ ಚರ್ಚೆಗೆ ಕಾರಣವಾಗಿವೆ. ಸಂದರ್ಶನಗಳಲ್ಲಿ ತಾನೇ ಗೆಲ್ಲಬೇಕಾಗಿತ್ತು ಎನ್ನುವಂತಹ ಹೇಳಿಕೆಗಳನ್ನು ನೀಡುತ್ತಾ ಬಂದಿದ್ದಾರೆ. ಅಲ್ಲದೆ, "ಬಿಗ್‌ಬಾಸ್‌ಗೆ ಈವರೆಗೂ ನನ್ನಂತಹ ಸ್ಟ್ರಾಂಗ್ ಸ್ಪರ್ಧಿ ಬಂದಿಲ್ಲ. ಇನ್ಮುಂದೆ ಬರುತ್ತಾರೆ ಅಂದ್ರೆ ನನ್ನನ್ನು ಮೀರಿಯೇ ಹೋಗಬೇಕು. ಆ ಹೆಮ್ಮೆ ನನಗಿದೆ," ಎಂದು ಹೇಳಿದ್ದಾರೆ. ಈ ಹೇಳಿಕೆಯೇ ಇದೀಗ ಭಾರೀ ಚರ್ಚೆಗೆ ಕಾರಣವಾಗಿದೆ.
ನಾನು ನನ್ನನ್ನು ಸಮರ್ಪಿಸಿಕೊಂಡಿದ್ದೆ: ಬಿಗ್‌ಬಾಸ್ ಕಾಮಿಡಿ ಶೋ ಅಲ್ಲ, ವ್ಯಕ್ತಿತ್ವದ ಆಟ. ಆದರೆ, ಇಲ್ಲಿ ಯಾವ ಮಾನದಂಡದ ಮೇಲೆ ಒಬ್ಬ ವ್ಯಕ್ತಿಯನ್ನು ಆಯ್ಕೆ ಮಾಡಿದ್ದಾರೆ ಎನ್ನುವುದು ಗೊತ್ತಿಲ್ಲ. ಇಡೀ ಮನೆಗೆ ನಾನು ನನ್ನನ್ನು ಸಮರ್ಪಿಸಿಕೊಂಡಿದ್ದೆ. ನನ್ನ ಮನಸ್ಸಿಗೂ ಗಾಯವಾಗಿದೆ, ದೈಹಿಕವಾಗಿಯೂ ಗಾಯವಾಗಿದೆ. ತುಂಬಾ ಹೆಮ್ಮೆಯಿಂದ ನಾನು ಹೇಳುತ್ತೇನೆ. ಇಲ್ಲಿಯವರೆಗೂ ನನ್ನ ರೀತಿಯ ಸ್ಟ್ರಾಂಗ್ ಸ್ಪರ್ಧಿ ಬಿಗ್‌ಬಾಸ್‌ಗೆ ಬಂದಿಲ್ಲ. ಇನ್ಮುಂದೆ ಬಂದರೆ, ಅದು ನನ್ನನ್ನು ಮೀರಿಯೇ ಹೋಗಬೇಕು ಎನ್ನುವ ಹೇಳಿಕೆ ನೀಡಿದ್ದಾರೆ.
ಬಿಗ್‌ಬಾಸ್ ಮನೆಗೆ ಎಂಟ್ರಿ ಕೊಟ್ಟ ಆರಂಭದಲ್ಲಿ ಅಶ್ವಿನಿ ಗೌಡ ಅವರು ಗತ್ತಿನ ಮಾತಿನ ಮೂಲಕ ರಾಜ್ಯದ ಜನರ ಗಮನ ಸೆಳೆದಿದ್ದರು. ಬಳಿಕ "ರಾಜಮಾತೆ" ಎಂಬ ಪಾತ್ರವನ್ನು ಕೂಡ ಅಚ್ಚುಕಟ್ಟಾಗಿ ನಿಭಾಯಿಸಿ ಜನರ ಮನ ಗೆದ್ದಿದ್ದರು. ಆದರೆ, ಸೀಸನ್ ಮಧ್ಯದಲ್ಲಿ ಎಲ್ಲೋ ಒಂದು ಕಡೆ ಮರೆಯಾಗಿಬಿಟ್ಟರು. ಕೊನೆಗೆ ಮತ್ತೆ ಆಕ್ಟೀವ್ ಆಗಿ ಗೇಮ್‌ಗಳನ್ನು ಸಹ ಉತ್ತಮವಾಗಿ ಆಡಿದರು. ಅಲ್ಲದೆ, ಶಾಂತತೆ ಕೂಡ ಪಾಲನೆ ಮಾಡಿದರು.
ಈ ಮೂಲಕ ಅವರು ಟಾಪ್ 6 ಸ್ಪರ್ಧಿಗಳಲ್ಲಿ ಒಬ್ಬರಾದರು. ಕೊನೆಗೆ ಟಾಪ್ 3ವರೆಗೂ ಬಂದು ಎರಡನೇ ರನ್ನರ್ ಅಪ್ ಆದರು. ಮೊದಲನೇ ರನ್ನರ್ ಅಪ್ ರಕ್ಷಿತಾ ಶೆಟ್ಟಿ ಆದ್ರೆ, ಟ್ರೋಫಿಯನ್ನು ಗಿಲ್ಲಿ ನಟ ಎತ್ತಿಹಿಡಿದರು. ಈ ವೇಳೆ ಅಶ್ವಿನಿ ಗೌಡ ಗಿಲ್ಲಿ ನಟನಿಗೆ ಶುಭಹಾರೈಸಿದರು. ಆದರೆ, ಫಿನಾಲೆ ಮುಗಿಯುತ್ತಿದ್ದಂತೆ ಸಂದರ್ಶನಗಳಲ್ಲಿ ನಾನೇ ಗೆಲ್ಲಬೇಕಿತ್ತು ಎನ್ನುವ ಹೇಳಿಕೆಗಳನ್ನು ನೀಡಿದ್ದು, ಇದು ಸಾಮಾಜಿಕ ಜಾಲತಾಣದಲ್ಲಿ ಭಾರೀ ಚರ್ಚೆಗೆ ಕಾರಣವಾಗಿದೆ.
ಇನ್ನೂ "ಗಿಲ್ಲಿ ಗೆಲುವಿಗೆ ಅರ್ಹನಲ್ಲ. ಬಡವ ಕಾರ್ಡ್ ಬಳಸಿದ್ದಾನೆ" ಎಂದು ಅಶ್ವಿನಿ ಹೇಳಿಕೆ ನೀಡಿದ್ದರು. ಅಶ್ವಿನಿ ಗೌಡ ಅವರ ಹೇಳಿಕೆ ಬಗ್ಗೆ ಗಿಲ್ಲಿ ನಟ ಪ್ರತಿಕ್ರಿಯಿಸಿದ್ದು, "ಬಿಗ್ ಬಾಸ್ ಫಿನಾಲೆ ವೇಳೆ ನಾನು, ರಕ್ಷಿತಾ ಹಾಗೂ ಅಶ್ವಿನಿ ಮೇಡಂ ಇದ್ದೆವು. ಯಾರೇ ಗೆದ್ದರೂ ಸಂತೋಷ ಅಂತಾ ಅಶ್ವಿನಿ ಮೇಡಂ ಹೇಳಿದ್ದರು. ಈಗ ಅವರು ಯಾಕೆ ಹೀಗೆ ಮಾತನಾಡುತ್ತಿದ್ದಾರೆ ಗೊತ್ತಿಲ್ಲ," ಎಂದು ಹೇಳಿದ್ದಾರೆ. ಸಹ ಸ್ಪರ್ಧಿಗಳು ಹಾಗೂ ಮಾಜಿ ಬಿಗ್‌ಬಾಸ್ ಸ್ಪರ್ಧಿಗಳು ಸಹ ಅಶ್ವಿನಿ ಗೌಡ ಅವರಿಗೆ ಟಕ್ಕರ್ ಕೊಡುವ ರೀತಿಯಲ್ಲೇ ಪ್ರತಿಕ್ರಿಯಿಸಿದ್ದಾರೆ.












Click it and Unblock the Notifications