ಹುಡುಗಿಯರ ಪ್ರೈವೇಟ್‌ ಪಾರ್ಟ್‌ ಬಗ್ಗೆ ಗೋಲ್ಡ್‌ ಸುರೇಶ್‌ಗೆ ಗೌತಮಿ ಪಾಠ- ವಿಡಿಯೋ ಭಾರೀ ವೈರಲ್‌

Bigg Boss Kannada: ಬಿಗ್‌ ಬಾಸ್‌ ಕನ್ನಡ 11 ಸೀಸನ್‌ನಲ್ಲಿ ಇದೀಗ ಗೇಮ್‌ಗಳ ದರ್ಬಾರ್‌ ಹೆಚ್ಚಾಗಿದೆ. ಇನ್ನು ನಿನ್ನೆ (ನವೆಂಬರ್ 13) ಸ್ಟ್ಯಾಚ್ಯೂ ಗೇಮ್‌ ಅನ್ನು ಆಡಿಸಲಾಗಿತ್ತು. ಈ ಆಟದಲ್ಲಿ ಸ್ಟ್ಯಾಚು ರೀತಿಯಲ್ಲಿ ನಿಂತಂತಹ ಸ್ಪರ್ಧಿಗಳಿಗೆ ಉಳಿದವರು ಸಗಣಿ ನೀರು ಎರಚಿ ತೊಂದರೆ ನೀಡಲು ಅವಕಾಶ ನೀಡಲಾಗಿತ್ತು. ಈ ವೇಳೆ ಗೋಲ್ಡ್‌ ಸುರೇಶ್‌ಗೆ ಪ್ರೈವೇಟ್‌ ಪಾರ್ಟ್‌ ಬಗ್ಗೆ ಗೌತಮಿ ಪಾಠ ಮಾಡಿದ್ದಾರೆ.

ಬಿಗ್‌ ಬಾಸ್‌ ಮನೆಯಲ್ಲಿ ಸ್ಟ್ಯಾಚ್ಯೂ ಗೇಮ್‌ ಅನ್ನು ಆಡಿಸಲಾಗಿತ್ತು. ಈ ವೇಳೆ ಮೇಜಿನ ಮೇಲೆ ಪ್ರತಿಮೆಯಂತೆ ನಿಂತಂತಹ ಸ್ಪರ್ಧಿಗಳನ್ನು ಇನ್ನುಳಿದವರು ಡಿಸ್ಟಾರ್ಬ್‌ ಮಾಡಿ ಅವರ ಪಾಯಿಂಟ್ಸ್‌ಗಳನ್ನು ತಪ್ಪಿಸುವ ಅಬಕಾಶವನ್ನು ನೀಡಲಾಗಿತ್ತು. ಈ ವೇಳೆ ಮೇಜಿನ ಮೇಲೆ ನಿಂತ ಹನುಮಂತ ಹಾಗೂ ಗೌತಮಿ ಅವರ ಮುಖ, ಕಣ್ಣನ್ನೂ ನೋಡದೇ ಗೋಲ್ಡ್‌ ಸುರೇಶ್‌ ಅವರು ಸಗಣಿ ನೀರು ಎಸೆಯುವ ಕೆಲಸವನ್ನು ಮಾಡಿದರು. ಇದೇ ರೀತಿ ಭವ್ಯಾ ಗೌಡ ಅವರ ಮೇಲೂ ದಾಳಿ ಮಾಡುತ್ತಾರೆ.

Bigg Boss Gauthami Jadav lessen to Gold Suresh on Women s Private Parts viral

ಟಾಸ್ಕ್‌ ಮುಗಿಸ ತಕ್ಷಣ ಗೌತಮಿ ಗೋಲ್ಡ್‌ ಸುರೇಶ್‌ ಅವರಿಗೆ ಹಿಗ್ಗಾಮುಗ್ಗಾ ಕ್ಲಾಸ್ ತೆಗೆದುಕೊಂಡರು. ಅಲ್ಲದೆ, ಪ್ರೈವೇಟ್‌ ಪಾರ್ಟ್‌ ಬಗ್ಗೆ ಪಾಠ ಮಾಡುವ ಮೂಲಕ ಆಕ್ರೋಶ ಹೊರಹಾಕಿದರು. ಪ್ರೈವೇಟ್‌ ಪಾರ್ಟ್‌ ಅಂತಾ ನಿಮಗೆ ಗೊತ್ತಾಗುವುದಿಲ್ಲವೇ. ಅಷ್ಟು ಕಾಮನ್‌ ಸೆನ್ಸ್‌ ಇಲ್ಲದ ರೀತಿಯಲ್ಲಿ ಪ್ರೈವೇಟ್‌ ಪಾರ್ಟ್‌ ಮೇಲೆ ದಾಳಿ ಮಾಡುವುದು ಎಷ್ಟರ ಮಟ್ಟಿಗೆ ಅರಿ ಎಂದು ಪ್ರಶ್ನಿಸುವ ಮೂಲಕ ಗೋಲ್ಡ್‌ ಸುರೇಶ್‌ ಅವರನ್ನು ತರಾಟೆಗೆ ತೆಗೆದುಕೊಂಡರು.

ಜಗಳಕ್ಕೆ ಕಾರಣ ಏನು?: ಭವ್ಯಾ ಗೌಡ ಹಾಗೂ ಮಂಜು ಅವರು ಪ್ರತಿಮೆಯಂತೆ ನಿಂತಿದ್ದರು. ಈ ವೇಳೆ ಸುರೇಶ್ ಹಾಗೂ ಅನುಷಾ ಅವರು ಬಕೆಟ್‌ನಲ್ಲಿ ನೀರು ಹಾಕುವ ಪ್ರಯತ್ನ ಮಾಡಿದ್ದಾರೆ. ಇದು ಭವ್ಯಾ ಅವರ ಕಾಲಿಗೆ ಹೊಡೆದಿದ್ದು, ಆಗ ಭವ್ಯಾ ಅಳು ಬಂದರೂ ತಡೆದುಕೊಂಡಿದ್ದಾರೆ. ಇದನ್ನು ಗೌತಮಿ ಅವರು ಖಂಡಿಸುವ ಮೂಲಕ ಆಕ್ರೋಶ ಹೊರಹಾಕುವ ಕೆಲಸ ಮಾಡಿದರು.

ಇನ್ನು ಇದೀಗ ಬಿಗ್ ಬಾಸ್ ಕನ್ನಡ ಸೀಸನ್ 11 ಏಳನೇ ವಾರ ಚಾಲ್ತಿಯಲ್ಲಿದೆ. ಸ್ಪರ್ಧಿಗಳ ಮಧ್ಯೆ ಇದೀಗ ಭಾರೀ ಸ್ಪರ್ಧೆಯೂ ಏರ್ಪಟ್ಟಿದೆ. ಈ ಮಧ್ಯೆ ಗಲಾಟೆಗಳು ಸಹ ಆಗುತ್ತಿವೆ. ಇನ್ನು ಗೋಲ್ಡ್‌ ಸುರೇಶ್ ಹಾಗೂ ಗೌತಮಿ ಮಧ್ಯೆ ಮಾತಿನ ಸಮರ ನಡೆದಿದೆ. "ಹುಡುಗಿಯರಿಗೂ ಪ್ರೈವೇಟ್ ಪಾರ್ಟ್ ಇರುತ್ತೆದೆ," ಎಂದು ಎಚ್ಚರಿಕೆ ನೀಡಿದ್ದಾರೆ.

ಸುರೇಶ್ ನೀವು ಮಾಡಿದ್ದು ತಪ್ಪು. ಗಂಡು ಮಕ್ಕಳಿಗೆ ಮಾತ್ರ ಪ್ರೈವೇಟ್ ಪಾರ್ಟ್ ಇದೆಯಾ? ಹೆಣ್ಣುಮಕ್ಕಳಿಗೂ ಇರುತ್ತದೆ. ನೀರನ್ನು ಹಾಕುವಾಗ ಸ್ವಲ್ಪ ಎಚ್ಚರಿಕೆಯಿಂದ ಹಾಕಬೇಕು ಎಂದು ಎಂದು ಎಚ್ಚರಿಕೆ ನೀಡಿದರು. ಹೀಗೆ ಗೌತಮಿ ಜಾಧವ್ ಅವರು ಹೆಣ್ಣುಮಕ್ಕಳ ವಿಚಾರದಲ್ಲಿ ಜೋರು ಧ್ವನಿಯಲ್ಲಿ ಮಾತನಾಡುತ್ತಾರೆ. ಎಲ್ಲರಿಗೂ ಖಡಕ್ ಉತ್ತರ ಕೊಡುವ ಮೂಲಕ ಅವರು ಗಮನ ಸೆಳೆಯುವ ಕೆಲಸವನ್ನು ಮಾಡುತ್ತಿದ್ದಾರೆ. ಆರಂಭದಲ್ಲಿ ಸೈಲೆಂಟ್ ಆಗಿದ್ದ ಅವರು, ರಗಡ್‌ ಲೇಡಿ ಆಗಿದ್ದಾರೆ.

ಟಾಸ್ಕ್‌ ಏನು?: ಬಿಗ್ ಬಾಸ್ ಮನೆಯಲ್ಲಿ ಟಾಸ್ಕ್ ಒಂದನ್ನು ನೀಡಲಾಗಿತ್ತು. ಈ ಟಾಸ್ಕ್​ ಪ್ರಕಾರ ಪ್ರತಿ ಜೋಡಿಗಳು ಸ್ಟ್ಯಾಚ್ಯೂ ರೀತಿಯಲ್ಲಿ ನಿಲ್ಲಬೇಕಿತ್ತು. ಅವರಿಗೆ ಎದುರಾಳಿಗಳು ನೀರನ್ನು ಎರಚಬೇಕು. ಪ್ರತಿ ಸುತ್ತಿನಲ್ಲಿ ಮೂರು ಜೋಡಿಗಳು ನಿಲ್ಲುತ್ತವೆ. ಈ ಮೂರು ಜೋಡಿಗಳ ಪೈಕಿ ಅತಿ ಕಡಿಮೆ ಫೌಲ್ ಮಾಡಿದವರಿಗೆ 100 ಅಂಕ, ಎರಡನೇ ಸ್ಥಾನದಲ್ಲಿ ಇರುವವರಿಗೆ 50 ಅಂಕ ಹಾಗೂ ಅತೀ ಹೆಚ್ಚು ಫೌಲ್ ಮಾಡಿದವರಿಗೆ ಶೂನ್ಯ ಅಂಕ ಸಿಗುತ್ತದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+