Bigg Boss: ಹನುಮಂತ ಗೆಲ್ಲೋದಕ್ಕಿಂತ ಈ ಸ್ಪರ್ಧಿ ಗೆದ್ರೆ ಒಳ್ಳೆಯದು- ಶಾಕಿಂಗ್ ಹೇಳಿಕೆ ಕೊಟ್ಟ ಹಳೆಯ ಸ್ಪರ್ಧಿಗಳು
ಉತ್ತರ ಕರ್ನಾಟಕದ ಹುಲಿ ಗಾಯಕ ಹನುಮಂತ ಈ ಬಾರಿ ವಿಜೇತರಾಗಬೇಕು ಅಂತ ಅವರ ಅಭಿಮಾನಿಗಳು ದೇವಸ್ಥಾನಗಳಲ್ಲಿ ಪೂಜೆ ಸಲ್ಲಿಸಲು ಶುರು ಮಾಡಿದ್ದಾರೆ. ಇಂತಹ ಹಲವಾರು ವೀಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿವೆ. ಬಿಗ್‌ಬಾಸ್ ಹಳೆಯ ಸ್ಪರ್ಧಿಗಳು ಕೂಡ ತಮ್ಮ ನೆಚ್ಚಿನ ಸ್ಪರ್ಧಿ ಈ ಬಾರಿ ಗೆಲ್ಲಬೇಕು ಎಂದು ಹೇಳಿದ್ದಾರೆ. ಹಾಗಾದರೆ ಹಳೆಯ ಸ್ಪರ್ಧಿ ನೀತು, ಸಿರಿ, ಸಂಗೀತಾ, ಐಶ್ವರ್ಯ ಹೇಳಿದ್ದೇನು?
ಬಿಗ್ ಬಾಸ್ ಹಳೆಯ ಸ್ಪರ್ಧಿಗಳಾದ ನೀತು, ಸಿರಿ, ಸಂಗೀತಾ, ಐಶ್ವರ್ಯ ಮಾತನಾಡಿದ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್ ಆಗಿದೆ. ಈ ವೀಡಿಯೋದಲ್ಲಿ ನೀತು, ಸಿರಿ ಹನುಮಂತ ಗೆಲ್ಲೋದಕ್ಕಿಂತ ಭವ್ಯಾ ಗೌಡ ಗೆಲ್ಲಬೇಕು ಎಂದು ಹೇಳಿದ್ದಾರೆ. ಇದಕ್ಕೆ ಅವರು ಕಾರಣವನ್ನೂ ಕೊಟ್ಟಿದ್ದಾರೆ. ಪ್ರತೀ ಬಾರಿ ಬಿಗ್‌ಬಾಸ್ ಮನೆಯಲ್ಲಿ ಹುಡುಗರೇ ಗೆಲ್ಲುತ್ತಾರೆ. ಈ ಬಾರಿ ಭವ್ಯಾ ಗೌಡ ತುಂಬಾ ಚೆನ್ನಾಗಿ ಆಟ ಆಡಿದ್ದಾರೆ. ಹೀಗಾಗಿ ಅವರು ಗೆಲ್ಲಲು ಅರ್ಹರಾಗಿದ್ದಾರೆ. ಅವರು ಗೆದ್ದರೆ ಒಳ್ಳೆಯದು ಎಂದು ಅವರು ತಮ್ಮ ಅಭಿಪ್ರಾಯವನ್ನು ಹಂಚಿಕೊಂಡಿದ್ದಾರೆ.

'ಮೋಕ್ಷಿತಾ ಗೆಲ್ಲಬೇಕು'
ಇದರೊಂದಿಗೆ ಐಶ್ವರ್ಯ ಮಾತನಾಡಿ, ಮೋಕ್ಷಿತಾ ಅಥವಾ ಹನುಮಂತ ಗೆಲ್ಲಬೇಕು. ಇಬ್ಬರೂ ಕೂಡ ಗೆಲ್ಲಲು ಅರ್ಹರಾಗಿದ್ದಾರೆ ಎಂದು ಹೇಳಿದ್ದಾರೆ. ಇನ್ನೂ ಸಂಗೀತಾ ಎಲ್ಲರು ಗೆಲ್ಲಬೇಕು ಅನ್ನೋದು ನನ್ನ ಆಸೆ ಎಂದಿದ್ದಾರೆ. ಇನ್ನೂ ಶಿಶಿರ್ ಶಾಸ್ತ್ರ ಮೋಕ್ಷಿತಾ ಅಥವಾ ಹನುಮಂತ ಇಬ್ಬರಲ್ಲಿ ಒಬ್ಬರು ಗೆದ್ದರೆ ನನಗೆ ಖುಷಿ ಎಂದಿದ್ದಾರೆ.
ಬಿಗ್‌ಬಾಸ್ ಇತಿಹಾಸದಲ್ಲಿ ಶೃತಿ ಅವರನ್ನು ಬಿಟ್ಟರೆ ಈವರೆಗೂ ಯಾವ ಮಹಿಳೆಯರು ವಿನ್ ಆಗಿಲ್ಲ. ಕಳೆದ ಬಾರಿ ಸಂಗೀತಾ ವಿನ್ ಆಗ್ತಾರೆ ಎಂದು ಅಂದುಕೊಳ್ಳಲಾಗಿತ್ತು. ಆದರೆ ಸಂಗೀತಾ ವಿನ್ ಆಗಲೇ ಇಲ್ಲ. ಈ ಬಾರಿ ಭವ್ಯಾ ವಿನ್ ಆಗಬೇಕು ಎನ್ನುವ ಮಾತುಗಳು ಇವೆ ಆದರೆ ಈ ಬಾರಿ ಭವ್ಯಾ ವಿನ್ ಆಗುವುದು ಡೌಟ್ ಇದೆ.
ಭವ್ಯಾ ಮೋಕ್ಷಿ ವಿನ್ ಆಗೋದು ಡೌಟ್
ಹಾಗೇ ಮೋಕ್ಷಿತಾ ವಿನ್ ಆಗ್ಬೇಕು ಎನ್ನುವ ಮಾತುಗಳು ಕೇಳಿ ಬಂದಿವೆ. ಆದರೆ ಮೋಕ್ಷಿತಾ ಕೂಡ ವಿನ್ ಆಗುವುದು ಅನುಮಾನವಿದೆ. ಹೀಗಾಗಿ ಈ ಬಾರಿ ಬಿಗ್‌ಬಾಸ್ ಮನೆಯಲ್ಲಿ ಮೋಕ್ಷಿತಾ ಅಥವಾ ಭವ್ಯಾ ಇಬ್ಬರಲ್ಲಿ ಒಬ್ಬರು ವಿಜೇತರಾಗದೇ ಇದ್ದಲ್ಲಿ ಬೇರೆ ಯಾವ ಮಹಿಳೆ ವಿನ್ ಆಗ್ತಾರೆ ಅನ್ನೋದನ್ನು ನೋಡಲು ಮುಂದಿನ ಸೀಸನ್ ವರೆಗೂ ಕಾಯಬೇಕು.
ಮೋಕ್ಷಿತಾ ಗೆಲ್ಲಬೇಕು ಎಂದು ಶಿಶಿರ್‌ಶಾಸ್ತ್ರಿ ಹಾಗೂ ಐಶ್ವರ್ಯ ಹೇಳಿರುವುದಕ್ಕೆ ಕಾರಣ ಇದೆ. ಬಿಗ್‌ಬಾಸ್ ಮನೆಯಲ್ಲಿ ಐಶ್ವರ್ಯ, ಶಿಶಿರ್ ಹಾಗೂ ಮೋಕ್ಷಿತಾ ಗುಡ್ ಫ್ರೆಂಡ್ಸ್ ಆಗಿದ್ದರು. ಕೊನೆಯಲ್ಲಿ ಶಿಶಿರ್, ಐಶ್ವರ್ಯ ಇಬ್ಬರು ಸೇರಿ ಭವ್ಯಾ ಹಾಗೂ ತ್ರಿವಿಕ್ರಮ್ ಅವರ ವಿರುದ್ಧ ಸಂಚು ರೂಪಿಸಲು ಆರಂಭಿಸಿದ್ದರು. ಆದರೆ ಇದು ವರ್ಕೌಟ್ ಆಗಿಲ್ಲ.
ಬಳಿಕ ಇಬ್ಬರೂ ಕೂಡ ಹೊರ ಬಂದರು. ಮೋಕ್ಷಿತಾ ಮಾತ್ರ ಇನ್ನೂ ಮನೆಯಲ್ಲಿ ಉಳಿದುಕೊಂಡಿದ್ದಾರೆ. ಹೀಗಾಗಿ ಇವರಿಬ್ಬರೂ ಕೂಡ ಮೋಕ್ಷಿತಾಗೇ ಓಟ್ ಮಾಡಿದ್ದಾರೆ. ಇನ್ನೂ ಸಿರಿ ಹಾಗೂ ನೀತು ನೀಡಿದ ಕಾರಣದಲ್ಲಿ ಒಂದು ಅರ್ಥ ಇದೆ. ಬಿಗ್‌ಬಾಸ್ ಮನೆಯಲ್ಲಿ ಈವರೆಗೂ ಹಿರಿಯ ನಟಿ ಶೃತಿ ಅವರನ್ನು ಬಿಟ್ಟರೆ ಯಾರೂ ಕೂಡ ಮಹಿಳೆಯರು ವಿಜೇತರಾಗಿಲ್ಲ. ಹೀಗಾಗಿ ಈ ಬಾರಿ ಆಗಲಿ ಎನ್ನುವುದು ಅವರ ಆಸೆ. ಅಲ್ಲದೇ ಭವ್ಯಾ ಗೌಡ ಕೂಡ ಉತ್ತಮವಾಗಿ ಆಡಿಕೊಂಡು ಬಂದಿರುವುದರಿಂದ ಗೆಲ್ಲಬಹುದಿತ್ತು. ಆದರೆ ಗೆಲ್ಲುವುದು ಅನುಮಾನವಿದೆ.












Click it and Unblock the Notifications