ಮಡೆನೂರು ಮನುಗೆ ಓಪನ್ ಚಾಲೆಂಜ್ ಹಾಕಿದ ವರ್ತೂರು ಸಂತೋಷ್, ಏನಿದು ಕಿರಿಕ್?
ಕಾಮಿಡಿ ಕಿಲಾಡಿಗಳು ಖ್ಯಾತಿಯ ನಟ ಮಡೆನೂರು ಮನು ಸಾಲು ಸಾಲು ಸಂಕಷ್ಟದಲ್ಲಿ ಸಿಲುಕಿದ್ದಾರೆ. ನಟಿಗೆ ಕಿರುಕುಳ, ವಂಚನೆ ಹಾಗೂ ಅತ್ಯಾ*ಚಾರ ಕೇಸ್‌ನಲ್ಲಿ ಮನು ಜೈಲು ಸೇರಿ ಜಾಮೀನಿನ ಮೇಲೆ ಹೊರಬಂದಿದ್ದಾರೆ. ಮತ್ತೊಂದೆಡೆ ಸ್ಯಾಂಡಲ್‌ವುಡ್ ನಟರ ಸಾವಿನ ಬಗ್ಗೆ ಅವಹೇಳಕಾರಿ ಹೇಳಿಕೆ ನೀಡಿರುವ ಆಡಿಯೋ ವೈರಲ್ ಆರೋಪ ಎದುರಿಸಿ, ನಟ ಬಳಿ ಕ್ಷಮೆ ಕೇಳಲು ಒದ್ದಾಡುತ್ತಿದ್ದಾರೆ. ಇನ್ನು ಚಿತ್ರರಂಗದಿಂದ ಮನು ಅವರನ್ನ ಬಹುತೇಕ ಬ್ಯಾನ್ ಮಾಡಿರುವ ಸ್ಥಿತಿ ಇದೆ. ಇದೀಗ ಮಡೆನೂರು ಮನುಗೆ ಮತ್ತೊಂದು ಸಂಕಷ್ಟ ಎದುರಾಗಿದೆ. ಬಿಗ್‌ಬಾಸ್ ಖ್ಯಾತಿಯ ವರ್ತೂರು ಸಂತೋಷ್ ಅವರು ಮನು ವಿರುದ್ಧ ತೊಡೆತಟ್ಟಿದ್ದಾರೆ. ಇಷ್ಟಕ್ಕೂ ಮನು ಹಾಗೂ ವರ್ತೂರು ಸಂತೋಷ್ ನಡುವಿನ ಕಿರಿಕ್ ಏನು ಗೊತ್ತಾ?
ಮಡೆನೂರು ಮನು ಕಾಮಿಡಿ ಕಿಲಾಡಿಗಳು ರಿಯಾಲಿಟಿ ಶೋನ ವಿನ್ನರ್. ತಮ್ಮ ಹಾಸ್ಯದಿಂದ ಎಲ್ಲರನ್ನೂ ನಕ್ಕು ನಲಿಸಿದ್ದರು. ಇದೇ ಹುರುಪಿನಲ್ಲಿ ಅವರು ಸ್ಯಾಂಡಲ್‌ವುಡ್‌ನಲ್ಲಿ ಹೀರೋ ಆಗಿ ಮಿಂಚಬೇಕು ಎಂಬ ಕನಸು ಕಂಡಿದ್ದರು. ಆ ಕನಸು ಕೂಡ ಈಡೇರಿದೆ. ಆದರೆ ಇದೇ ಹೊತ್ತಲ್ಲಿ ಅವರ ಮೇಲೆ ಸಾಲು ಸಾಲು ಆರೋಪಗಳು ಕೇಳಿಬಂದಿದ್ದಲ್ಲದೆ, ತನ್ನ ಸಿನಿಮಾ ರಿಲೀಸ್‌ಗೂ ಮುನ್ನವೇ ಜೈಲು ಸೇರಿದ್ದರು. ಕಿರುತೆರೆ ನಟಿಯೊಬ್ಬರು ಮನು ವಿರುದ್ಧ ಗಂಭೀರ ಆರೋಪ ಮಾಡಿದ್ದರು. ಬಳಿಕ ಜೈಲು ಸೇರಿದ ಮೇಲೆ ಮನು ಮಾತನಾಡಿದ್ದಾರೆ ಎನ್ನಲಾದ ಆಡಿಯೋ ಸಂಚಲನ ಸೃಷ್ಟಿಸಿತ್ತು. ಇದರಲ್ಲಿ ಶಿವಣ್ಣ ಹಾಗೂ ದರ್ಶನ್ ಸಾಯ್ತಾರೆ ಎಂದೆಲ್ಲ ಹೇಳಲಾಗಿತ್ತು. ಈ ಹಿನ್ನೆಲೆ ಮನು ಅವರನ್ನ ಬ್ಯಾನ್ ಮಾಡುವುದಾಗಿ ಫಿಲ್ಮ್ ಚೇಂಬರ್ ಹೇಳಿತ್ತು.

ಸದ್ಯ ಕೇಸ್‌ನಿಂದ ಜಾಮೀನು ಸಿಕ್ಕಿ ರಿಲೀಫ್ ಆಗುವ ಹೊತ್ತಿಗೆ ಮಡೆನೂರು ಮನುಗೆ ದೊಡ್ಡ ಆಘಾತವೇ ಎದುರಾಗಿದೆ. ಆ ಆಡಿಯೋ ವೈರಲ್ ಆಗಿರುವುದಕ್ಕೆ ಸ್ಪಷ್ಟನೆ ನೀಡುತ್ತಾ ನಟರ ಬಳಿ ಕ್ಷಮೆ ಕೇಳಲು ಮನು ತನ್ನ ಕುಟುಂಬದೊಂದಿಗೆ ಅಲೆದಾಡುತ್ತಿದ್ದಾರೆ. ಇದೀಗ ಬಿಗ್‌ಬಾಸ್ ಮಾಜಿ ಸ್ಪರ್ಧಿ ಹಾಗೂ ಹಳ್ಳಿಕಾರ್ ಒಡೆಯ ಖ್ಯಾತಿಯ ವರ್ತೂರು ಸಂತೋಷ್ ಕೂಡ ಮನು ವಿರುದ್ಧ ಗುಡುಗಿದ್ದಾರೆ. ವರ್ತೂರು ಸಂತೋಷ್ ಅವರು ನೋವಿನಿಂದ ಹೇಳಿದ್ದ ಮಾತುಗಳನ್ನು ಮನು ಈ ಹಿಂದೆ ಮಿಮಿಕ್ರಿ ಮಾಡಿದ್ದರು. ಇದರಿಂದ ಸಂತೋಷ್ ಅವರು ಬೇಸರ ವ್ಯಕ್ತಪಡಿಸಿದ್ದಾರೆ. ಒಬ್ಬರ ನೋವನ್ನು ಆ ರೀತಿ ಅನುಕರಣೆ ಮಾಡುವುದು ಸರಿಯೇ ಎಂದು ಮನುಗೆ ಪ್ರಶ್ನೆ ಮಾಡಿದ್ದಾರೆ.
'ಕಲೆಗೆ ಬೆಲೆ ಕೊಟ್ಟವನು ಕಲಾವಿದ. ನಾನು ಎಷ್ಟೋ ಒಳ್ಳೆಯ ಮಾತುಗಳನ್ನ ಹೇಳಿದ್ದೀನಿ, ಅದನ್ನ ಮನು ಇಮಿಟೇಟ್ ಮಾಡಿಲ್ಲ. ಆದರೆ ಒಬ್ಬ ವ್ಯಕ್ತಿ ದುಃಖದಲ್ಲಿ ಹೇಳಿದ ಮಾತುಗಳು ನಿನಗೆ ಅಷ್ಟೊಂದು ಜೋಕ್ ಅನಿಸಿತಾ? ಎಂದು ಕೇಳಿದ್ದಾರೆ. ಯಾರೇ ಆಗಲಿ ನೈತಿಕತೆ ಅನ್ನೋದು ಇರಬೇಕು. ಇಂತಹ ಅವಿವೇಕಿ ಹೀಗೆ ಮಾಡುವಾಗ ದೂರವಾದ್ರೂ ಸರಿಯಬೇಕಿತ್ತು. ನನ್ನ ಮಿಮಿಕ್ರಿ ಮಾಡಿರುವ ವಿಡಿಯೋ ನೋಡಿ ಮನಸ್ಸಿಗೆ ಬೇಜಾರಾಯ್ತು, ಅದು ಒಬ್ಬರನ್ನ ಕೆಳಗೆ ಹಾಕುವಂತಿತ್ತು' ಎಂದು ವರ್ತೂರು ಹರಿಹಾಯ್ದಿದ್ದಾರೆ.
'ನಾನು ನನ್ನ ಮನಸ್ಸಿನಿಂದ ಹೇಳಿದ ದುಃಖದ ವಿಚಾರವನ್ನು ಜನ ಈ ರೀತಿ ಹಾಸ್ಯ ಮಾಡ್ತಾರಲ್ಲ ಅಂತ ಬೇಸರವಾಯ್ತು. ಆದರೆ ಇವತ್ತು ಮನು ಗತಿ ಏನಾಯ್ತು? ಈಗ ಇದೇ ಮಾಧ್ಯಮಗಳ ಮುಂದೆ ಆವತ್ತು ಮಾತನಾಡಿದಂತೆ ಬಂದು ಮಾತನಾಡು, ನಿನಗೆ ನಾನೇ ಹಾರ ಹಾಕ್ತೀನಿ ಎಂದು ಮಡೆನೂರು ಮನುಗೆ ವರ್ತೂರು ಸಂತೋಷ್ ಚಾಲೆಂಜ್ ಹಾಕಿದ್ದಾರೆ. ಹಾಗೆಯೇ ಈ ಮೀಡಿಯಾದವರೂ ನಿನಗೆ ಮೊದಲಿನಂತೆಯೇ ಮರ್ಯಾದೆ ಕೊಟ್ರೆ ಇವರಿಗೂ ಮರ್ಯಾದೆ ಇಲ್ಲ ಎಂದರ್ಥ. ಯಾವತ್ತೇ ಆಗಲಿ ಆಡೋ ಮಾತು ಹಾಗೂ ನಡವಳಿಕೆ ಒಂದೇ ಆಗಿರಬೇಕು' ಎಂದಿದ್ದಾರೆ.
-
Gold Rate: ಆಭರಣ ಪ್ರಿಯರ ಗಮನಕ್ಕೆ; ಮಾರುಕಟ್ಟೆಯಲ್ಲಿ ಇಂದು ಚಿನ್ನ-ಬೆಳ್ಳಿ ಬೆಲೆ ಎಷ್ಟಿದೆ ಗೊತ್ತಾ? ಇಲ್ಲಿದೆ ಮಾಹಿತಿ -
ಮಕ್ಕಳನ್ನ ಫ್ಯಾಕ್ಟರಿಯಂತೆ ಹೆರುತ್ತಾರೆ, ಪೋಷಿಸುವ ತಾಕತ್ತಿದ್ರೆ ಮಾತ್ರ ಮಕ್ಕಳು ಮಾಡ್ಕೊಳ್ಳಿ: ನಟಿ ವರಲಕ್ಷ್ಮಿ ಶರತ್ಕುಮಾರ್ -
Viral Video: ಶಾಲಾ ಕಾರ್ಯಕ್ರಮದಲ್ಲಿ ವಿದ್ಯಾರ್ಥಿನಿಯರ ಟವಲ್ ಡ್ಯಾನ್ಸ್: ಚರ್ಚೆ ಹುಟ್ಟುಹಾಕಿದ ವೈರಲ್ ವಿಡಿಯೋ -
Viral Video: ಪೋಷಕರಿಗೆ ಹೊಸ ಕಾರು ಗಿಫ್ಟ್ ಮಾಡಿದ ಹೆಣ್ಣುಮಕ್ಕಳು, ನೆಟ್ಟಿಗರ ಹೃದಯ ಗೆದ್ದ ಈ ವಿಡಿಯೋ -
Anushka Shetty Marriage: ಬೆಂಗಳೂರಿನ ಖ್ಯಾತ ಉದ್ಯಮಿ ಜೊತೆ ನಟಿ ಅನುಷ್ಕಾ ಶೆಟ್ಟಿ ಮದುವೆ, ಈ ವರ್ಷದಲ್ಲೇ ಮುಹೂರ್ತ: ವರದಿ -
1 ರೂಪಾಯಿಗೆ 1 ಲೀಟರ್ ಹಾಲು: ಫ್ಲಿಪ್ಕಾರ್ಟ್ ವಿರುದ್ಧ ಸಿಡಿದೆದ್ದ ಡಿ.ಕೆ. ಸುರೇಶ್; ಪ್ರಧಾನಿ ಮೋದಿಗೆ ದೂರು -
ಬಿಜೆಪಿಯಿಂದ ನಟ ವಿಜಯ್ಗೆ ಡಿಸಿಎಂ ಹುದ್ದೆ, 80 ಸೀಟುಗಳ ಆಫರ್; ತಮಿಳುನಾಡು ಚುನಾವಣೆಗೆ ಹೊಸ ಮೈತ್ರಿ ಲೆಕ್ಕಾಚಾರ -
Karnataka Weather: ಸಿಲಿಕಾನ್ ಸಿಟಿಯಲ್ಲಿ ಹೆಚ್ಚಿದ ತಾಪಮಾನ; ಕರಾವಳಿ, ಮಲೆನಾಡಿನಲ್ಲಿ ಇಂದು ಮಳೆಯಾಗುವ ಸಾಧ್ಯತೆ -
LPG New Rule: ಎಲ್ಪಿಜಿ ಹೊಸ ನಿಯಮ: ಪಿಎನ್ಜಿ ಸಂಪರ್ಕ ಇದ್ದರೆ ಇನ್ನು ಮುಂದೆ ಸಿಲಿಂಡರ್ ಸಿಗಲ್ಲ -
Government Employees: ಪಶ್ಚಿಮ ಬಂಗಾಳ ಸರ್ಕಾರಿ ನೌಕರರಿಗೆ ಸಿಎಂ ಮಮತಾ ಬ್ಯಾನರ್ಜಿ ಬಂಪರ್ ಕೊಡುಗೆ -
ರಾಜ್ಯದಲ್ಲಿ ಕಮರ್ಷಿಯಲ್ ಉದ್ದೇಶಕ್ಕೆ ಗೃಹಬಳಕೆ LPG ಸಿಲಿಂಡರ್ ಬಳಸಿದವರ ಮೇಲೆ ಅಧಿಕಾರಿಗಳ ಖಡಕ್ ದಾಳಿ -
ಬೆಂಗಳೂರು 2ನೇ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ vs ಹೊಸೂರು ಏರ್ಪೋರ್ಟ್: ಯೋಜನೆ ಯಾವ ಹಂತದಲ್ಲಿದೆ












Click it and Unblock the Notifications