Rakshak Bullet: ರಕ್ಷಕ್ ಬುಲೆಟ್ ಮದುವೆಯಾಗುವ ಹುಡುಗಿ ಯಾರೆಂದು ಹೇಳಿದ ತಾಯಿ
ಹಾಸ್ಯನಟ ಬುಲೆಟ್ ಪ್ರಕಾಶ್ ಪುತ್ರ, ಬಿಗ್‌ಬಾಸ್ ಖ್ಯಾತಿಯ ರಕ್ಷಕ್ ಬುಲೆಟ್ ಅಭಿಮಾನಿಗಳಿಗೆ ಗುಡ್‌ನ್ಯೂಸ್‌ವೊಂದು ಹೊರಬಿದ್ದಿದೆ. ಸೋಶಿಯಲ್ ಮೀಡಿಯಾದಲ್ಲಿ ಆರ್-ಬಾಸ್ ಎಂದೇ ಹವಾ ಕ್ರಿಯೇಟ್ ಮಾಡಿರುವ ರಕ್ಷಕ್ ಇದೀಗ ಭರ್ಜರಿ ಬ್ಯಾಚುಲರ್ಸ್ ರಿಯಾಲಿಟಿ ಶೋನಲ್ಲಿ ಮಿಂಚುತ್ತಿದ್ದಾರೆ. ಇನ್ನು ದಿಢೀರನೆ ರಕ್ಷಕ್ ಮದುವೆ ವಿಚಾರ ಮುನ್ನೆಲೆಗೆ ಬಂದಿದೆ. ಹೌದು, ರಕ್ಷಕ್ ಮದುವೆ ಬಗ್ಗೆ ಅವರ ತಾಯಿಯೇ ಬಿಗ್ ಅಪ್ಡೇಟ್ ಕೊಟ್ಟಿದ್ದಾರೆ. ಬುಲೆಟ್ ಕೈಹಿಡಿಯಲಿರುವ ಆ ಬೆಡಗಿ ಯಾರು ಗೊತ್ತಾ?
ಸೋಶಿಯಲ್ ಮೀಡಿಯಾದಲ್ಲಿ ತಮ್ಮ ಡೈಲಾಗ್ ಮೂಲಕವೇ ಆರ್‌ಬಾಸ್ ಎಂದು ಕರೆಸಿಕೊಂಡಿರುವ ರಕ್ಷಕ್ ಬುಲೆಟ್, ಬಿಗ್‌ಬಾಸ್ ಸೀಸನ್-10 ಮೂಲಕ ಮತ್ತಷ್ಟು ಫೇಮಸ್ ಆಗಿದ್ದರು. ಇದೀಗ ಭರ್ಜರಿ ಬ್ಯಾಚುಲರ್ಸ್ ವೇದಿಕೆ ಮೇಲೆಯೇ ರಕ್ಷಕ್ ಮದುವೆ ವಿಚಾರ ಪ್ರಸ್ತಾಪವಾಗಿದೆ. ರಕ್ಷಕ್ ತಾಯಿ ಮದುವೆ ವಿಚಾರದ ಬಗ್ಗೆ ಅಚ್ಚರಿ ಹೇಳಿಕೆ ನೀಡಿದ್ದಾರೆ. ಈ ವಿಷಯ ಕೇಳಿ ರಕ್ಷಕ್ ಫುಲ್ ಖುಷಿಯಾಗಿದ್ದಾರೆ.
ಭರ್ಜರಿ ಬ್ಯಾಚುಲರ್ಸ್ ವೇದಿಕೆಗೆ ಬಂದಿದ್ದ ರಕ್ಷಕ್ ಬುಲೆಟ್ ತಾಯಿಗೆ ನಿಮ್ಮ ಸೊಸೆ ಹೇಗಿರಬೇಕು? ಎಂದು ಪ್ರಶ್ನೆ ಕೇಳಲಾಯಿತು. ಆಗ ಅವರು ರಕ್ಷಕ್ ಮದುವೆ ವಿಚಾರವನ್ನು ಬಹಿರಂಗಪಡಿಸಿದ್ದಾರೆ. ಕೆಲವರು ಅವನ ನೋವು ಅವನಿಗೆ ಮಾತ್ರ ಗೊತ್ತು. ಅವರ ತಂದೆ ಚಿಕ್ಕವಯಸ್ಸಲ್ಲೇ ಎಲ್ಲ ಕಲಿಸಿ ಹೋದರು. ಟ್ರೋಲ್‌ಗಳಿಗೆ ರಕ್ಷಕ್ ತಲೆಕೆಡಿಸಿಕೊಳ್ಳಲ್ಲ. ನನಗೂ ಅದೇ ಮಾತು ಹೇಳ್ತಾನೆ. ನಾನು ರಕ್ಷಕ್‌ಗೆ ಹುಡುಗಿಯನ್ನ ಹುಡುಕಬೇಕು ಎಂದುಕೊಂಡಿದ್ದೆ ಎಂದು ಅವರ ತಾಯಿ ಹೇಳಿದ್ದಾರೆ.

ಇನ್ಮುಂದೆ ಹುಡುಗಿ ಹುಡುಕುವ ಕೆಲಸ ಮಾಡಲ್ಲ. ಯಾಕಂದ್ರೆ ರಮೋಲಾ ಒಪ್ಪಿಕೊಂಡ್ರೆ ನನಗೆ ಓಕೆ ಎಂದು ರಕ್ಷಕ್ ತಾಯಿ ವೇದಿಕೆಯಲ್ಲೇ ಹೇಳಿದ್ದಾರೆ. ಈ ಮಾತು ಕೇಳಿದ ಕೂಡಲೇ ರಕ್ಷಕ್ ಖುಷಿಯಿಂದ ತನ್ನ ತಾಯಿ ಕಾಲಿಗೆ ಬಿದ್ದು ಆಶೀರ್ವಾದ ಪಡೆದಿದ್ದಾರೆ. ರಮೋಲಾ ಅಭಿಪ್ರಾಯವೇನು ಎಂದು ಕೇಳಿದ್ದಕ್ಕೆ ಪಕ್ಕದಲ್ಲೇ ಇದ್ದ ರಕ್ಷಕ್ ಓಕೆ ಅಂತಾ ಹೇಳು ಎಂದು ರಮೋಲಾಗೆ ಹೇಳಿದ್ದಾರೆ. ಹಾಗಾಗಿ ಸದ್ಯದಲ್ಲೇ ಇವರಿಬ್ಬರ ಮದುವೆ ಮಾತುಕತೆ ನಡೆಯುವ ಸಾಧ್ಯತೆ ಎಂಬ ಮಾತುಗಳು ಕೇಳಿಬರುತ್ತಿವೆ.
ರಮೋಲಾಗೆ ಮನೆ ತೋರಿಸಿದ ರಕ್ಷಕ್
ಭರ್ಜರಿ ಬ್ಯಾಚುಲರ್ಸ್‌ನಲ್ಲಿ ರಕ್ಷಕ್ ಜೋಡಿಯಾಗಿರುವ ರಮೋಲಾ ಅವರನ್ನು ಮನೆಗೆ ಕರೆದೊಯ್ಯಲಾಗಿತ್ತು. ತಮ್ಮ ಮನೆಯನ್ನೆಲ್ಲ ಸುತ್ತಾಡಿಸಿ ರಮೋಲಾಗೆ ತೋರಿಸಿದ್ದಾರೆ. ಅವರ ಅಡುಗೆ ಮನೆಗೆ ಹೋದ ರಮೋಲಾ, ರಕ್ಷಕ್‌ಗೆ ಹೆಂಡತಿಯಾಗಿ ಬರುವವರು ಇಲ್ಲಿ ಕುಕ್ ಮಾಡ್ತಾರೆ ಎಂದು ನಾಚುತ್ತಾ ಹೇಳಿದ್ದಾರೆ. ಆದಷ್ಟು ಬೇಗ ಅಂತಹ ಹುಡುಗಿ ರಕ್ಷಕ್‌ಗೆ ಸಿಗಲಿ ಎಂದಿದ್ದಾರೆ ರಮೋಲಾ, ಆಗ ತಕ್ಷಣವೇ ರಕ್ಷಕ್ ತಾಯಿ ನಿನ್ನಂತಹ ಹುಡುಗಿಯೇ ಬರಲಿ ಎಂದಿದ್ದಾರೆ.
ಇನ್ನು ರಕ್ಷಕ್ ಮನೆಯಲ್ಲಿ ಸ್ಪೆಷಲ್ ಕುರ್ಚಿ ಮೇಲೆ ಬೇರೆ ಯಾರನ್ನೂ ಕೂರಿಸಿರಲಿಲ್ಲ, ಆದರೆ ರಮೋಲಾ ಮನೆಗೆ ಹೋದಾಗ ಅವರನ್ನು ಆ ಕುರ್ಚಿ ಮೇಲೆ ಕೂರಿಸಿದ್ದಾರೆ. ಏನಪ್ಪಾ ವಿಚಾರ ಎಂದು ಆಂಕರ್ ನಿರಂಜನ್ ಕೇಳಿದ್ದಕ್ಕೆ, ಅದು ಮನಸಾರೆ ಪ್ರೀತಿಯಿಂದ ಮಾಡಿದ್ದು ಎಂದು ರಕ್ಷಕ್ ಹೇಳಿದ್ದಾರೆ. ನಾನು ರಕ್ಷಕ್ ಮನೆಗೆ ಹೋದಾಗ ಅವರ ತಂದೆ ಫೋಟೋದಿಂದ ಹೂ ಬಿತ್ತು ಎಂದು ರಮೋಲಾ ಹೇಳಿದ್ದಾರೆ.












Click it and Unblock the Notifications