Chaitra Vasudevan: 2ನೇ ಮದುವೆಯಾದ ಬಿಗ್‌ಬಾಸ್ ಖ್ಯಾತಿಯ ಚೈತ್ರಾ ವಾಸುದೇವನ್
ಖ್ಯಾತ ನಿರೂಪಕಿ ಹಾಗೂ ಬಿಗ್‌ಬಾಸ್ ಖ್ಯಾತಿಯ ಚೈತ್ರಾ ವಾಸುದೇವನ್ ಅವರ ಎರಡನೇ ವಿವಾಹವು ಇಂದು ಅದ್ಧೂರಿಯಾಗಿ ನೆರವೇರಿದೆ. ಉದ್ಯಮಿ ಜಗದೀಪ್ ಎಂಬುವವರ ಜೊತೆಗೆ ಚೈತ್ರಾ ಅವರು ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ಬೆಂಗಳೂರಿನ ಅರಮನೆ ಮೈದಾನದಲ್ಲಿ ಚೈತ್ರಾ ವಾಸುದೇವನ್ ಅವರ ಅದ್ಧೂರಿ ಮದುವೆ ನೆರವೇರಿತು. ಸ್ಯಾಂಡಲ್‌ವುಡ್ ನಟ ನಟಿಯರು ಹಾಗೂ ಕಿರುತೆರೆ ಕಲಾವಿದರು ಈ ಸಮಾರಂಭಕ್ಕೆ ಆಗಮಿಸಿ ವಧು-ವರರನ್ನು ಆಶೀರ್ವದಿಸಿದರು.
ಚೈತ್ರಾ ವಾಸುದೇವನ್ ಅವರಿಗೆ ಇದು ಎರಡನೇ ಮದುವೆ. ಉದ್ಯಮಿ ಜಗದೀಪ್ ಅವರನ್ನು ಪ್ರೀತಿಸಿ ಮದುವೆಯಾಗಿದ್ದು, ಒಬ್ಬರ ಪೋಷಕರ ಒಪ್ಪಿಗೆ ಮೇರೆಗೆ ಇಂದು ದಾಂಪತ್ಯ ಜೀವನಕ್ಕೆ ಕಾಲಿಟ್ಟರು. ಈ ಹಿಂದೆ ತಾವು ಎರಡನೇ ಮದುವೆಯಾಗುತ್ತಿರುವ ಬಗ್ಗೆ ಚೈತ್ರಾ ವಾಸುದೇವನ್ ಅವರು ಮಾಹಿತಿ ಹಂಚಿಕೊಂಡಿದ್ರು. ಅಲ್ಲದೆ ಮದುವೆಗೂ ಮುನ್ನ ಈ ಜೋಡಿ ಪ್ಯಾರಿಸ್‌ಗೆ ಹೋಗಿ ಅದ್ಧೂರಿ ಪ್ರೀ ವೆಡ್ಡಿಂಗ್ ಫೋಟೋಶೂಟ್ ಕೂಡ ಮಾಡಿಸಿಕೊಂಡಿದ್ದರು.

ವೃತ್ತಿಯಲ್ಲಿ ನಿರೂಪಕಿ ಮತ್ತು ಈವೆಂಟ್ ಆರ್ಗನೈಸರ್ ಆಗಿರುವ ಚೈತ್ರಾ ವಾಸುದೇವನ್ ಅವರು ಈ ಕ್ಷೇತ್ರದಲ್ಲಿ ಒಳ್ಳೆಯ ಹೆಸರು ಮಾಡಿದ್ದಾರೆ. ಇನ್ನು ತಮ್ಮ ಮದುವೆಗೂ ಕೂಡ ತಾವೇ ಅದ್ಧೂರಿಯಾಗಿ ಪ್ಲ್ಯಾನ್ ಮಾಡಿಕೊಂಡಿದ್ದರು. ಅರಮನೆ ಮೈದಾನದಲ್ಲಿ ತಮ್ಮಿಷ್ಟದಂತೆ ಅದ್ಧೂರಿಯಾಗಿ ಮದುವೆಯಾಗಿದ್ದಾರೆ. ಅಲ್ಲದೆ ತಾವು ಇಂದು ಮದುವೆಗೆ ಧರಿಸಿದ್ದ ಸೀರೆ ಬೆಲೆ ಬರೋಬ್ಬರಿ ಎರಡು ಲಕ್ಷ ರೂಪಾಯಿ ಎನ್ನಲಾಗಿದೆ. ಇತ್ತೀಚೆಗೆ ಈ ಜೋಡಿಯ ಮೆಹಂದಿ ಕಾರ್ಯಕ್ರಮ ಕೂಡ ಬಹಳ ಸಂಭ್ರಮದಿಂದ ಜರುಗಿತ್ತು. ಈ ಫೋಟೋಗಳನ್ನು ಅವರು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡು ವೈರಲ್ ಆಗಿತ್ತು.
ಈ ಹಿಂದೆ ಫೋನ್ ಕಾಲ್ ಮೂಲಕ ಚೈತ್ರಾ ಹಾಗು ಜಗದೀಪ್ ಅವರ ಪರಿಚಯವಾಗಿತ್ತು. ಆದರೆ ಇಬ್ಬರೂ ಒಂದೇ ಜಿಮ್‌ನಲ್ಲಿ ವರ್ಕೌಟ್ ಮಾಡುತ್ತಿದ್ದರು ಎಂಬ ವಿಚಾರ ಇಬ್ಬರಿಗೂ ತಿಳಿದಿರಲಿಲ್ಲ. ಇನ್ನು ಮೊದಲ ಭೇಟಿಯಲ್ಲೇ ಜಗದೀಪ್ ಅವರು ಚೈತ್ರಾಗೆ ಪ್ರಪೋಸ್ ಮಾಡಿದ್ದರು. ಆದರೆ ಚೈತ್ರಾ ಅವರ ಏಕಾಏಕಿ ಗ್ರೀನ್ ಸಿಗ್ನಲ್ ಕೊಟ್ಟಿರಲಿಲ್ಲ. ಆದರೂ ಜಗದೀಪ್ ಅವರು ಚೈತ್ರಾ ಅವರ ಪೋಷಕರ ಬಳಿ ಈ ವಿಚಾರ ಪ್ರಸ್ತಾಪಿಸಿ ಒಪ್ಪಿಸಿದ್ದರು. ಈಗ ಕೊನೆಗೂ ಎಲ್ಲರ ಒಪ್ಪಿಗೆ ಮೇರೆಗೆ ಮದುವೆ ನೆರವೇರಿದೆ.

ಈ ಹಿಂದೆ ಚೈತ್ರಾ ವಾಸುದೇವನ್ ಅವರು ಸತ್ಯ ನಾಯ್ಡು ಎಂಬುವವರನ್ನ ಮೊದಲ ಮದುವೆಯಾಗಿದ್ದರು. ಇದು ಕೂಡ ಪೋಷಕರ ಆಸೆಯಂತೆ ಅರೇಂಜ್ ಮ್ಯಾರೇಜ್ ಆಗಿತ್ತು. ಆದರೆ, ಕಾರಣಾಂತರಗಳಿಂದ ಇಬ್ಬರೂ ಪರಸ್ಪರ ದೂರಾಗಿದ್ದರು. ಡಿವೋರ್ಸ್ ಬಳಿಕ ಚೈತ್ರಾ ಅವರು ತಮ್ಮ ಬಿಸಿನೆಸ್ ಕಡೆಗೆ ಗಮನಹರಿಸಿದ್ದರು. ಈಗ ಎರಡನೇ ಬಾರಿ ತಮ್ಮ ಪ್ರೀತಿಯನ್ನು ಎಲ್ಲರಿಗೂ ತಿಳಿಸಿ ಒಪ್ಪಿಸುವ ಮೂಲಕ ಮದುವೆಯಾಗಿದ್ದಾರೆ.












Click it and Unblock the Notifications