Anusha Rai: ನಾನು ಸ್ಟ್ರೇಟ್ ಫಾರ್ವರ್ಡ್- ಹಿಂದೆ ಮಾತಾಡುವ ಹುಡುಗಿ ಅಲ್ವೇ ಅಲ್ಲ- ಹೀಗಂದಿದ್ದು ಯಾಕೆ ಅನುಷಾ ರೈ?
ಬಿಗ್‌ಬಾಸ್ ಮನೆಯಿಂದ ನಟಿ ಅನುಷಾ ರೈ ಹೊರ ಬಂದು ಆಗಿದೆ. ದೊಡ್ಮನೆಯಲ್ಲಿ ಇರುವಷ್ಟು ದಿನ ತಮ್ಮದೇ ಆದ ಅಭಿಮಾನಿಗಳನ್ನು ಹೆಚ್ಚಿಸಿಕೊಂಡ ಅನುಷಾ ರೈ ಅವರ ಮುಂದಿನ ಸಿನಿ ಜರ್ನಿ ಹೇಗಿರಲಿದೆ ಎನ್ನುವ ಕುತೂಹಲ ಮೂಡಿದೆ. ಅಲ್ಲದೆ ಬಿಗ್‌ಬಾಸ್ ಮನೆಯಿಂದ ಹೊರ ಬಂದ ಬಳಿಕ ಅನುಷಾ ರೈಗೆ ಸಾಲು ಸಾಲು ಸಿನಿಮಾಗಳ ಆಫರ್ ಬಂದಿವೆಯಂತೆ. ಅವುಗಳಲ್ಲಿ ನಟಿಸುವ ಮೂಲಕ ನಾನು ನನ್ನ ಅಭಿಮಾನಿಗಳನ್ನು ರಂಜಿಸಲಿದ್ದೇನೆ ಎಂದು ಅನುಷಾ ಹೇಳಿಕೊಂಡಿದ್ದಾರೆ. ಹಾಗಾದರೆ ಅನುಷಾಗೆ ಯಾವೆಲ್ಲಾ ಸಿನಿಮಾ ಆಫರ್‌ಗಳಿವೆ? ನಾನು ಸ್ಟ್ರೇಟ್ ಫಾರ್ವರ್ಡ್ ಹಿಂದೆ ಮಾತಾಡುವ ಹುಡುಗಿ ಅಲ್ವೇ ಅಲ್ಲ ಅಂದಿದ್ದು ಯಾಕೆ? ಎಲ್ಲದರ ಬಗ್ಗೆ ತಿಳಿಯೋಣ.
ಕನ್ನಡದ ಬಿಗ್ ರಿಯಾಲಿಟಿ ಶೋನಲ್ಲಿ ಕಾಣಿಸಿಕೊಂಡ ನಟಿ ಅನುಷಾ ರೈ ಖಾಸಗಿ ವಾಹಿನಿಯಲ್ಲಿ ನೀಡಿದ ಸಂದರ್ಶನವೊಂದರಲ್ಲಿ ತಮ್ಮ ಬಿಗ್‌ಬಾಸ್ ಜರ್ನಿ ಬಗ್ಗೆ ಹಂಚಿಕೊಂಡಿದ್ದಾರೆ. ಅಲ್ಲದೆ ಮುಂದಿನ ದಿನಗಳಲ್ಲಿ ಅವರ ಯಾವೆಲ್ಲಾ ಸಿನಿಮಾಗಳು ತೆರೆ ಕಾಣಲಿದೆ ಎನ್ನುವ ಬಗ್ಗೆ ಮಾಹಿತಿ ನೀಡಿದ್ದಾರೆ. ಅಲ್ಲದೆ ಮುಂದಿನ ಹೊಸ ವರ್ಷಕ್ಕೆ ಅವರ ಗುರಿ ಏನು ಎನ್ನುವುದನ್ನೂ ಕೂಡ ರಿವೀಲ್ ಮಾಡಿದ್ದಾರೆ.

ಅನುಷಾ ರೈ ಅವರ ಮುಂಬರುವ ಸಿನಿಮಾಗಳು ಇವು..
ಖಾಸಗಿ ವಾಹನಿಯಲ್ಲಿ ಮಾತನಾಡಿದ ನಟಿ ಅನುಷಾ ರೈ ಸದ್ಯಕ್ಕೆ ಮೂರು ಸಿನಿಮಾಗಳು ಬಿಡುಗಡೆಗೆ ಸಿದ್ದವಾಗಿವೆ. 'ತೂಫಾನ್' ಅಂತ ಒಂದು ಸಿನಿಮಾ ಮಾಡ್ತಾಯಿದಿವಿ. ಈ ಮೂವಿಗೆ ತುಂಬಾ ಒಳ್ಳೆಯ ರಿವೀವ್ ಬಂದಿದೆ. ರಾಜೀವ್ ಚಂದ್ರಕಾಂತ್ ನಿರ್ದೇಶನದ 'ತೂಫಾನ್' ಚಿತ್ರ ಈಗಾಗಲೇ ತನ್ನ ಟೈಟಲ್ ಮೂಲಕವೇ ಸಾಕಷ್ಟು ನಿರೀಕ್ಷೆ ಮೂಡಿಸಿದೆ. ಚಿತ್ರ ತಂಡ ಅನುಷಾ ರೈ ಪಾತ್ರವನ್ನು ರಿವೀಲ್ ಮಾಡಿತ್ತು. ಇದಕ್ಕೆ ಸಾಕಷ್ಟು ಉತ್ತಮ ಪ್ರತಿಕ್ರಿಯೆ ಬಂದಿದೆ ಎಂದು ಅನುಷಾ ಖುಷಿಯಾಗಿ ಹೇಳಿಕೊಂಡರು.
ಇನ್ನೂ ಧರ್ಮಾ ಅವರೊಂದಿಗೆ 'ಬೆಂಗಳೂರಿನಿಂದ' ಎನ್ನುವ ಒಂದು ಸಿನಿಮಾ ಮಾಡಿದಿನಿ. ಈ ಸಿನಿಮಾ ರಿಲೀಸ್ ಆಗಬೇಕು. ಶೂಟಿಂಗ್ ಆಗಿದೆ. ಎಡಿಂಟ್ ಆರಂಭವಾಗಿದೆ. ಈ ಸಿನಿಮಾ ಬಿಡುಗಡೆಗೆ ಸಿದ್ಧವಾಗುತ್ತದೆ. ಅಲ್ಲದೆ ಇನ್ನೊಂದು 'ಲವ್ ಯೂ ಸಹಾರ' ಅಂತ ಇನ್ನೊ ಸಿನಿಮಾ ಮಾಡ್ತಿದ್ದಾರಂತೆ ಅನುಷಾ. ಇದರಲ್ಲಿ ಸಹಾರ ಪಾತ್ರದಲ್ಲಿ ಅವರು ನಟಿಸುತ್ತಿದ್ದಾರಂತೆ. ಮನಾಲಿ ಹುಡುಗಿಯಾಗಿ ಈ ಸಿನಿಮಾದಲ್ಲಿ ನಟಿಸಿದ್ದಾರಂತೆ ಅನುಷಾ. ಈ ಸಿನಿಮಾ ಶೂಟ್ ಹಿಮಾಚಲದಲ್ಲೇ ಮಾಡಲಾಗಿದ್ದು ಆ ಸಿನಿಮಾ ಕಾನ್ಸಪ್ಟ್ ಕೂಡ ಚೆನ್ನಾಗಿ ಇದೆಯಂತೆ. ಸಿನಿಮಾ ಕೂಡ ಚೆನ್ನಾಗಿ ಮೂಡಿ ಬಂದಿದೆ. ಇದಾದ ಬಳಿಕ ಇನ್ನೊಂದಿಷ್ಟು ಪ್ರಾಜೆಕ್ಟುಗಳು ಇವೆ.

ಬಿಗ್‌ಬಾಸ್ ಮನೆಯಿಂದ ಅನುಷಾ ರೈ ಕಲಿತಿದ್ದು ಇದು...
ತಮ್ಮ ವೈಯಕ್ತಿಕ ಜೀವನ ಬಗ್ಗೆ ಮಾತನಾಡಿದ ಅನುಷಾ, ನಾನು ಸ್ಟ್ರೇಟ್ ಫಾರ್ವರ್ಡ್ ಹಿಂದೆ ಮಾತಾಡುವ ಹುಡುಗಿ ಅಲ್ವೇ ಅಲ್ಲ. ಇದೇ ರೀತಿ ಬಿಗ್‌ಬಾಸ್ ಮನೆಯಲ್ಲಿ ನಾನು ಇದ್ದೆ. ಇದನ್ನು ಜನ ಇಷ್ಟಪಟ್ಟಿದ್ದಾರೆ. ಅದೇ ರೀತಿ ಇರುತ್ತೇನೆ ಅಂತ ಪ್ರಾಮಿಸ್ ಕೂಡ ಮಾಡ್ತೀನಿ. ಯಾವುದೇ ಕಾರಣಕ್ಕೂ ಯಾವುದೇ ಸಂದರ್ಭದಲ್ಲೂ ನಾನು ಚೇಂಜ್ ಆಗಲ್ಲ ಎಂದಿದ್ದಾರೆ. ನನ್ನ ವೈಯಕ್ತಿಕ ಹಾಗೂ ಪ್ರವೇಷನ್ ಲೈಫ್‌ಗೂ ನಿಮ್ಮ ಪ್ರೀತಿ ತುಂಬಾನೇ ಮುಖ್ಯ. ಅದು ನನ್ನ ಮೇಲೆ ಯಾವಾಗಲೂ ಇರಲಿ ಎಂದು ಅನುಷಾ ಕೇಳಿಕೊಂಡರು.
ಅನುಷಾ ರೈ ಹೊಸ ವರ್ಷದ ಗುರಿ ಏನು?
ಬಿಗ್ ಬಾಸ್ ಸೇರಿ ಈ ವರ್ಷ ನಾನು ಸಿಕ್ಕಾಪಟ್ಟೆ ವರ್ಕ್ ಮಾಡಿದ್ದೇನೆ. ಮುಂದಿನ ವರ್ಷ ಕೂಡ ಸಿಕ್ಕಾಪಟ್ಟೆ ವರ್ಕ್ ಮಾಡಬೇಕು. ನನಗೆ, ತನ್ನ ಪೋಷಕರಿಗೆ ಹಾಗೂ ಜನಕ್ಕೆ ನನ್ನ ಬಗ್ಗೆ ಪ್ರೌಡ್ ಫೀಲ್ ಆಗ್ಬೇಕು. ಈ ವರ್ಷದಲ್ಲಿ ನಾನು ಏನು ಮಾಡಲ್ಲಿಕ್ಕೆ ಆಗಿಲ್ಲ ಅದನ್ನೆಲ್ಲಾ ನಾನು ಈ ವರ್ಷ ಮಾಡಬೇಕು ಎಂದು ಹೇಳಿದ್ದಾರೆ.
ಗೋಲ್ಡ್‌ನ್ ಸ್ಟಾರ್ ಗಣೇಶ್ ರೊಂದಿಗೆ ಸಿನಿಮಾ..
ನನಗೆ ಗೋಲ್ಡ್‌ನ್ ಸ್ಟಾರ್ ಗಣೇಶ್ ಅವರೊಂದಿಗೆ ಸಿನಿಮಾ ಮಾಡಬೇಕು ಅನ್ನೋ ಆಸೆ ಇದೆ. ಆ ಅವಕಾಶಕ್ಕಾಗಿ ನಾನು ಕಾಯುತ್ತಿದ್ದೇನೆ. ಅವಕಾಶ ಸಿಕ್ಕರೆ ಖಂಡಿತಾ ಮಿಸ್ ಮಾಡಲ್ಲ. ನಾನು ಗೋಲ್ಡನ್ ಸ್ಟಾರ್ ಗಣೇಶ್ ಅವರ ಅಭಿಮಾನಿ ಎಂದು ಅನುಷಾ ರೈ ಹೇಳಿದ್ದಾರೆ.
ದರ್ಶನ್ ಭೇಟಿ ಮಾಡುವುದಾಗಿ ಹೇಳಿದ ಅನುಷಾ
ದರ್ಶನ್ ಅವರನ್ನು ನಾನು ಹಾಗೂ ಧರ್ಮ ಅವರು ಸೇರಿ ಭೇಟಿ ಮಾಡುತ್ತೇವೆ. ನಮಗೆ ದರ್ಶನ್ ಸರ್ ಪರಿಚಯ ಇದೆ. ಆಪ್ತೀಯರು ಕೂಡ ಹೌದು. ಹೀಗಾಗಿ ನಾವಿಬ್ಬರೂ ಸೇರಿ ಅವರನ್ನು ಭೇಟಿ ಮಾಡುತ್ತೇವೆ. ಆದಷ್ಟು ಬೇಗ ಅದಕ್ಕಾಗಿ ಪ್ಲ್ಯಾನ್ ಮಾಡುತ್ತೇವೆ ಎಂದರು.












Click it and Unblock the Notifications