Bigg Boss: ಐಶ್ವರ್ಯ ಹಾಗೂ ಮೋಕ್ಷಿತಾಗೆ ಕಿಚ್ಚಾ ಸುದೀಪ್ ಕ್ಲಾಸ್- ಬಿಗ್‌ಬಾಸ್‌ ಮನೆಯಲ್ಲಿ ಬಿಗ್‌ಡೀಲ್

ಐಶ್ವರ್ಯ ಹಾಗೂ ಮೋಕ್ಷಿತಾ ನಡುವೆ ಆದ ಆ ಒಂದು ಮಾತಿಗೆ ಕಿಚ್ಚಾ ಸುದೀಪ್ ನಿನ್ನೆ ಸರಿಯಾಗೇ ಕ್ಲಾಸ್ ತೆಗೆದುಕೊಂಡಿದ್ದಾರೆ. ಗುಂಪಾಗಿ ಕೆಲವರನ್ನು ನಾಮಿನೇಟ್ ಮಾಡಿದರೆ ಇಲ್ಲಿ ವರ್ಕೌಟ್ ಆಗುತ್ತೆ ಅನ್ನೋ ಐಶ್ವರ್ಯ ಅವರ ಮಾತು ಕಿಚ್ಚಾ ಸುದೀಪ್ ಅವರ ಕೋಪದ ಕಟ್ಟೆಯನ್ನು ಒಡೆದು ಹಾಕಿದೆ.

ಹೌದು... ನಾಮಿನೇಟ್ ಮಾಡುವ ಮುನ್ನ ಐಶ್ವರ್ಯ ಅವರು ಮೋಕ್ಷಿತಾ ಹಾಗೂ ಶಿಶಿರ್ ಬಳಿ ಹೋಗಿ ನಾವು ಗುಂಪಾಗಿ ನಾಮಿನೇಟ್ ಮಾಡಿದರೆ ಮಾತ್ರ ನಾವು ಮುಂದೆ ಹೋಗಲು ಸಾಧ್ಯ ಎಂದು ಕಿವಿ ಚುಚ್ಚಿದ್ದರು. ಇದಕ್ಕೆ ಮೋಕ್ಷಿತಾ ಕೂಡ ತಲೆ ಅಲ್ಲಾಡಿಸುತ್ತಾರೆ. ಜೊತೆಗೆ ಶಿಶಿರ್ ಕೂಡ ಮೌನವಾಗಿ ಇದಕ್ಕೆ ಸಮ್ಮತಿ ಸೂಚಿಸಿದಂತೆ ಇತ್ತು.

Bigg boss aishwarya shindogi and mokshitha pai get a kichcha sudeep class

ಹೀಗೆ ಡೀಲ್ ಮಾಡಿಕೊಂಡ ಬಳಿಕ ಐಶ್ವರ್ಯ ಅವರು ಭವ್ಯಾ ಹಾಗೂ ತ್ರಿವಿಕ್ರಮ್ ಅವರನ್ನು ನಾಮಿನೇಟ್ ಮಾಡುತ್ತಾರೆ. ಮೋಕ್ಷಿತಾ ಕೂಡ ಭವ್ಯ ಹಾಗೂ ತ್ರಿವಿಕ್ರಮ್ ಅವರನ್ನೇ ನಾಮಿನೇಟ್ ಮಾಡುತ್ತಾರೆ. ಆದರೆ ಇಲ್ಲಿ ಶಿಶಿರ್‌ಗೆ ನಾಮಿನೇಟ್ ಮಾಡುವ ಅವಕಾಶವೇ ಸಿಗಲಿಲ್ಲ. ಹೀಗಾಗಿ ಅವರು ಬಚಾವ್ ಆದರು ಅಷ್ಟೇ. ಇವರ ಡೀಲ್‌ನಿಂದಾಗಿ ತ್ರಿವಿಕ್ರಮ್ ಹಾಗೂ ಭವ್ಯಾ ನಾಮಿನೇಟ್ ಆದರು.

ಆರಂಭದಲ್ಲಿ ಗುಂಪುಗಾರಿಕೆ ನಡೆಯುತ್ತಿದೆ ಎಂದು ತ್ರಿವಿಕ್ರಮ್ ವಿರುದ್ಧ ಕೂಗಾಡಿದ್ದ ಮೋಕ್ಷಿತಾ ಈ ಡೀಲ್‌ಗೆ ಯಾಕೆ ಒಪ್ಪಿಕೊಂಡರು ಎಂದು ಬಿಗ್‌ಬಾಸ್‌ ವೀಕ್ಷಕರು ಪ್ರಶ್ನೆ ಮಾಡುತ್ತಿದ್ದಾರೆ. ಮೋಕ್ಷಿತಾ ಹೇಳುವುದು ಶಾಸ್ತ್ರ ತಿನ್ನೋದು ಬದನೆಕಾಯಿ ಅಂತ ಜನ ಮಾತನಾಡಿಕೊಳ್ಳುತ್ತಿದ್ದಾರೆ.

ಐಶ್ವರ್ಯ, ಮೋಕ್ಷಿತಾ ನಾಮಿನೇಟ್ ಡೀಲ್ ವೀಡಿಯೋ

ಶನಿವಾರದ ಎಪಿಸೋಡ್‌ನಲ್ಲಿ ಸುದೀಪ್ ಅವರು ಐಶ್ವರ್ಯ, ಮೋಕ್ಷಿತಾ ಮಾತನಾಡಿಕೊಂಡ ವಿಡಿಯೋವನ್ನು ಪ್ರಸಾರ ಮಾಡಿ ಸರಿಯಾಗೇ ತರಾಟೆ ತೆಗೆದುಕೊಂಡಿದ್ದಾರೆ. ಇದಕ್ಕೆ ಮೋಕ್ಷಿತಾ ಹಾಗೂ ಐಶ್ವರ್ಯ ಸಮಜಾಯಿಷಿ ಕೊಡಲು ಎಷ್ಟೇ ಪ್ರಯತ್ನಪಟ್ಟರೂ ಕೂಡ ಕಿಚ್ಚಾ ಸುದೀಪ್ ಸರಿಯಾಗೇ ಕೌಂಟರ್‌ ಕೊಟ್ಟು ಬಾಯಿ ಮುಚ್ಚಿಸಿದ್ದಾರೆ.

ಇನ್ನೂ ಐಶ್ವರ್ಯ ಹಾಗೂ ಮೋಕ್ಷಿತಾ ಮಾತನಾಡಿಕೊಂಡು ನಾಮಿನೇಟ್ ಮಾಡಿದ್ದಕ್ಕೆ ತ್ರಿವಿಕ್ರಮ್ ಹಾಗೂ ಭವ್ಯ ಸಿಕ್ಕಾಪಟ್ಟೆ ಕೋಪ ಮಾಡಿಕೊಂಡಿದ್ದಾರೆ. ಇದೇ ವೇಳೆ ಭವ್ಯಾ ಗೌಡ ಅವರು ಐಶ್ವರ್ಯ ಅವರಿಗೆ ಕೌಂಟರ್ ಕೊಟ್ಟಿದ್ದು ಕೂಡ ಕಂಡು ಬಂದಿದೆ. ಬಿಗ್‌ಬಾಸ್‌ ಮನೆಯಲ್ಲಿ ನಾವಿನೇಟ್ ಮಾಡುವುದು ಪ್ರತಿಯೊಬ್ಬರ ಹಕ್ಕು, ನಾವಿನೇಟ್ ಮಾಡುವುದು ಅವರವರ ಇಚ್ಚೆ. ಆದರೆ ಒಬ್ಬರನ್ನೇ ಟಾರ್ಗೇಟ್ ಮಾಡಿ ಡೀಲ್ ಮಾಡಿಕೊಂಡು ನಾಮಿನೇಟ್ ಮಾಡುವುದಕ್ಕೆ ಅವಕಾಶವೇ ಇಲ್ಲ. ಇದು ಬಿಗ್‌ಬಾಸ್‌ ನಿಯಮದ ವಿರುದ್ಧವಾಗಿದೆ. ಈ ನಿಯಮವನ್ನು ಐಶ್ವರ್ಯ ಹಾಗೂ ಮೋಕ್ಷಿತಾ ಮುರಿದಿದ್ದಕ್ಕೆ ಕಿಚ್ಚಾ ಸರಿಯಾಗೇ ಕ್ಲಾಸ್ ತೆಗೆದುಕೊಂಡಿದ್ದಾರೆ.

ಬಿಗ್‌ಬಾಸ್‌ ಮೇಲೆ ತಪ್ಪು ಹೋರಿಸಿದ ಚೈತ್ರಾ

ಈ ವಿಚಾರ ಚರ್ಚೆಯಾದ ಬಳಿಕ ಒಂದು ಬ್ರೇಕ್ ಕೊಡಲಾಗುತ್ತದೆ. ಇದೇ ಗ್ಯಾಪ್‌ನಲ್ಲಿ ಐಶ್ವರ್ಯಗೆ ಸಮಾಧಾನ ಮಾಡಲು ಬಂದ ಚೈತ್ರಾ, 'ಬಿಗ್‌ಬಾಸ್‌ನಲ್ಲಿ ಹಿಂದೆ ಏನಾಗಿರುತ್ತೆ, ನಾವು ಯಾವ ವಿಚಾರಕ್ಕೆ ಮಾತನಾಡುತ್ತೇವೆ ಎಂದು ತೋರಿಸಲ್ಲ. ಕೆಲವೊಂದನ್ನ ಮಾತ್ರ ತೋರಿಸಿಬಿಡುತ್ತಾರೆ. ಇದರ ಹಿಂದಿನ ಸಂಭಾಷಣೆ ಏನಾಗಿತ್ತು' ಎಂದು ಯಾರಿಗೂ ಕೂಡ ಗೊತ್ತಾಗಲ್ಲ ಎಂದು ಹೇಳುತ್ತಾರೆ. ಅಂದರೆ ಇಲ್ಲಿ ಚೈತ್ರಾ ಬಿಗ್‌ಬಾಸ್‌ ಅನ್ನು ತಪ್ಪುಗಾರರನ್ನಾಗಿ ಮಾಡುತ್ತಾರೆ. ಬ್ರೇಕ್ ಬಳಿಕ ವಾಪಸ್‌ ಬಂದ ಕಿಚ್ಚಾ ಸುದೀಪ್ ಅವರು ಚೈತ್ರಾ ಕುಂದಾಪುರ್ ಅವರಿಗೆ ತರಾಟೆ ತೆಗೆದುಕೊಳ್ಳುತ್ತಾರೆ.

ಒಟ್ಟಿನಲ್ಲಿ ಐಶ್ವರ್ಯ ಹಾಗೂ ಮೋಕ್ಷಿತಾ ಡೀಲ್ ಬಿಗ್‌ಬಾಸ್‌fನ ಪ್ರತಿಯೊಬ್ಬ ಸ್ಪರ್ಧಿಗಳಿಗೂ ಗೊತ್ತಾಗಿದೆ. ವಿಶೇಷವಾಗಿ ತ್ರಿವಿಕ್ರಮ್ ಹಾಗೂ ಭವ್ಯಾ ಅವರಿಗೆ. ಈ ವಿಚಾರ ಗೊತ್ತಾದ ಬಳಿಕ ಇವರಿಬ್ಬರು ಹೇಗೆ ಐಶ್ವರ್ಯ ಹಾಗೂ ಮೋಕ್ಷಿತಾ ಅವರೊಂದಿಗೆ ಇರ್ತಾರೆ ಅನ್ನೋದನ್ನು ಕಾದು ನೋಡಬೇಕಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+