ರಕ್ಷಿತ್ ಶೆಟ್ಟಿ ಸಿನಿಮಾಗೆ ಎದುರಾಯ್ತಾ ಸಮಸ್ಯೆ? ಹೊಂಬಾಳೆ ಗುಡ್ ಬೈ?

ರಕ್ಷಿತ್ ಶೆಟ್ಟಿ ಕನ್ನಡ ಸಿನಿಮಾ ರಂಗದಲ್ಲಿ ತಮ್ಮದೇ ಆದ ಛಾಪು ಮೂಡಿಸಿದ್ದಾರೆ. ಈ ನಟ ಕನ್ನಡ ಸಿನಿ ಪ್ರಿಯರಿಗೆ ಹಲವು ಸರ್ಪ್ರೈಸಿಂಗ್ ಸಿನಿಮಾಗಳನ್ನ ಕೊಟ್ಟು ಮನಸ್ಸು ಗೆದ್ದಿದ್ದಾರೆ. ಕೆಲವು ಸಿನಿಮಾಗಳು ಸೋತರೆ, ಹಲವು ಸಿನಿಮಾಗಳಲ್ಲಿ ರಕ್ಷಿತ್ ಶೆಟ್ಟಿ ಮಿಂಚಿದ್ದಾರೆ. ಹೀಗೆ ರಕ್ಷಿತ್ ಶೆಟ್ಟಿ ಸಿಂಪಲ್ ಸ್ಟಾರ್ ಆಗಿ 'ಉಳಿದವರು ಕಂಡಂತೆ' ಸಿನಿಮಾ ಮಾಡಿದ್ದರು. ಆದ್ರೆ ಈ ಸಿನಿಮಾ ಬಾಕ್ಸ್ ಆಫಿಸ್‌ನಲ್ಲಿ ಅಷ್ಟಾಗಿ ಗಳಿಸದೇ ಇದ್ದರೂ, ಇದರ ಸೀಕ್ವೆಲ್‌ಗೆ ಅವರೀಗ ರೆಡಿ ಆಗಿದ್ದರು.

ಹೀಗೆ ಬಾಕ್ಸ್ ಆಫಿಸ್‌ನಲ್ಲಿ ಹಿನ್ನಡೆ ಕಂಡಿದೆ ಎಂಬ ಮಾತುಗಳ ನಡುವೆಯೂ 'ಉಳಿದವರು ಕಂಡಂತೆ' ಸಿನಿಮಾ ಕನ್ನಡಿಗರ ಮನಸ್ಸು ಗೆದ್ದಿತ್ತು. ಆ ಸಿನಿಮಾದ ಹಾಡುಗಳು, ಕಥೆ ಸೇರಿ ಪ್ರತಿಯೊಂದು ವಿಭಾಗದಲ್ಲಿ ಸಾಕಷ್ಟು ಗಮನ ಸೆಳೆದಿತ್ತು 'ಉಳಿದವರು ಕಂಡಂತೆ' ಸಿನಿಮಾ. ಹೀಗಾಗಿಯೇ ಉಳಿದವರು ಕಂಡಂತೆ ಮುಂದುವರಿದ ಭಾಗ 'ರಿಚರ್ಡ್‌ ಆಂಟನಿ' ಮಾಡೋಕೆ ಸರ್ವ ಸಿದ್ಧತೆ ನಡೆಸಿದ್ದರು ರಕ್ಷಿತ್ ಶೆಟ್ಟಿ. ಈ ಸಿನಿಮಾಗೆ ಕನ್ನಡದ ಪ್ರತಿಷ್ಠಿತ ಹೊಂಬಾಳೆಯೇ ಹಣ ಹೂಡುವುದು ಪಕ್ಕಾ ಆಗಿತ್ತು. ಆದರೆ ಈಗ ಬೇರೆಯದ್ದೇ ಸುದ್ದಿ ಹೊರಬಿದ್ದಿದೆ. ಹೀಗೆ ಈ ಸುದ್ದಿ ರಕ್ಷಿತ್ ಶೆಟ್ಟಿ ಅಭಿಮಾನಿಗಳಿಗೆ ಶಾಕ್ ಕೊಟ್ಟಿದೆ.

Big Update Revealed About Rakshit Shetty Starrer Richard Anthony Movie

ರಕ್ಷಿತ್‌ ಶೆಟ್ಟಿ ಡೈರೆಕ್ಷನ್‌ಗೆ ರಿಟರ್ನ್ಸ್!

ಅಷ್ಟಕ್ಕೂ ಸಿಂಪಲ್‌ ಸ್ಟಾರ್‌ ರಕ್ಷಿತ್‌ ಶೆಟ್ಟಿ ಸಪ್ತ ಸಾಗರದಾಚೆ ಎಲ್ಲೋ ಯಶಸ್ಸಿನ ಅಲೆಯಲ್ಲಿದ್ದು, ಸಿನಿಮಾ ಭವಿಷ್ಯದ ಬಗ್ಗೆ ಯೋಜನೆ ರೂಪಿಸುತ್ತಿದ್ದಾರೆ. ಇತ್ತೀಚೆಗೆ ಅವರ ನಿರ್ಮಾಣದ ಚಿತ್ರ ʼಬ್ಯಾಚುಲರ್‌ ಪಾರ್ಟಿʼಗೆ ಭರ್ಜರಿ ರೆಸ್ಪಾನ್ಸ್ ಸಿಕ್ಕಿದೆ. ಹೀಗಿದ್ದಾಗ, ರಕ್ಷಿತ್‌ ಶೆಟ್ಟಿ ವೃತ್ತಿ ಬದುಕಿನ ಡ್ರೀಮ್‌ ಪ್ರಾಜೆಕ್ಟ್‌ ʼರಿಚರ್ಡ್‌ ಆಂಟನಿʼ ಸುದ್ದಿಯಲ್ಲಿದೆ. ಯಾಕಂದ್ರೆ ಹೊಂಬಾಳೆ ಸಂಸ್ಥೆ ಇದೀಗ ʼರಿಚರ್ಡ್‌ ಆಂಟನಿʼ ನಿರ್ಮಾಣ ಮಾಡಲ್ಲ ಎನ್ನಲಾಗಿದೆ. ಈ ಮೂಲಕ 10 ವರ್ಷದ ನಂತರ ರಕ್ಷಿತ್‌ ಶೆಟ್ಟಿ ಡೈರೆಕ್ಷನ್ ನೋಡುವ ಖುಷಿಯಲ್ಲಿದ್ದ ಫ್ಯಾನ್ಸ್‌ಗೆ ಶಾಕ್ ಸಿಕ್ಕಿದೆ.

ರಕ್ಷಿತ್ ಸಿನಿಮಾಗೆ ಹಣ ಹಾಕೋದ್ಯಾರು?

ಈ ಹಿಂದಿನ ಮಾಹಿತಿಗಳ ಪ್ರಕಾರ, ʼರಿಚರ್ಡ್‌ ಆಂಟನಿʼ ಸಿನಿಮಾವನ್ನು ʼಹೊಂಬಾಳೆ ಫಿಲ್ಮ್ಸ್‌ʼ ನಿರ್ಮಾಣ ಮಾಡಬೇಕಿತ್ತು. ಇದು ಹೊಂಬಾಳೆ ಬ್ಯಾನರ್‌ 10ನೇ ಸಿನಿಮಾ ಎಂದು ಘೋಷಣೆಯು ಮೊಳಗಿತ್ತು. ಅದೇ ಸಮಯದಲ್ಲಿ ಹೊಂಬಾಳೆ, ಪೃಥ್ವಿರಾಜ್ ಸುಕುಮಾರನ್ ಅವರ ಸಿನಿಮಾಗೆ ಕೂಡ ಗ್ರೀನ್ ಸಿಗ್ನಲ್ ಕೊಟ್ಟಿತ್ತು. ಇಷ್ಟೆಲ್ಲಾ ಬೆಳವಣಿಗೆ ನಡುವೆ ಇದೀಗ ಬೇರೆಯದ್ದೇ ಸುದ್ದಿ ಹೊರಬಿದ್ದಿದೆ. ಅದು ಏನೆಂದರೆ ರಕ್ಷಿತ್‌ ಶೆಟ್ಟಿ ಅವರ ʼರಿಚರ್ಡ್‌ ಆಂಟನಿʼ ಸಿನಿಮಾದಿಂದ ಈಗ ಹೊಂಬಾಳೆ ಫಿಲ್ಮ್ಸ್‌ ಹಿಂದೆ ಸರಿದಿದೆ ಎನ್ನಲಾಗಿದೆ.

3000 ಕೋಟಿ ರೂಪಾಯಿ ಹೂಡಿಕೆ

ಇನ್ನು ಮುಂದಿನ ಐದು ವರ್ಷದಲ್ಲಿ ಮನರಂಜನೆ ಕ್ಷೇತ್ರದಲ್ಲಿ 3 ಸಾವಿರ ಕೋಟಿ ರೂಪಾಯಿಯ ಹೂಡಿಕೆ ಮಾಡ್ತೀವಿ ಎಂದಿತ್ತು ಹೊಂಬಾಳೆ ಫಿಲ್ಮ್ಸ್‌. ಈ ಕಾರಣದಿಂದ ಸಿನಿಮಾ ನಿರ್ಮಾಣಕ್ಕೆ ಬಜೆಟ್‌ ಸಮಸ್ಯೆ ಎದುರಾಗಲ್ಲ ಎಂಬ ಮಾತು ಕೂಡ ಓಡಾಡಿತ್ತು. ಆದರೆ ಈಗ ಬೇರೆಯದ್ದೆ ಸುದ್ದಿ ಹೊರಬಿದ್ದಿದೆ. ಅದರಲ್ಲೂ ಹೊಂಬಾಳೆ ಫಿಲ್ಮ್ಸ್‌ ನಿರ್ಮಾಣ ಮಾಡಿರುವ ʼಧೂಮಂʼ & ʼರಾಘವೇಂದ್ರ ಸ್ಟೋರ್ಸ್ʼ ಬಾಕ್ಸ್ ಆಫೀಸ್‌ನಲ್ಲಿ ಅಷ್ಟಾಗಿ ಸದ್ದು ಮಾಡುವಲ್ಲಿ ಸಕ್ಸಸ್ ಕಾಣಲೆ ಇಲ್ಲ. ಹೀಗಾಗಿ ಇದೀಗ ಬೇರೆಯದ್ದೇ ಸುದ್ದಿ ಓಡಾಡುತ್ತಿದೆ. ಆದರೆ ಈ ಬಗ್ಗೆ ಅಧಿಕೃತವಾಗಿ ಯಾವುದೇ ಹೇಳಿಕೆ ಹೊರಬಿದ್ದಿಲ್ಲ. ಹೀಗಾಗಿ ಕಾದು ನೋಡಬೇಕಾಗಿದೆ.

ಒಟ್ನಲ್ಲಿ ಈ ಸುದ್ದಿ ನಿಜವಾಗದೇ ಇರಲಿ ಅಂತಾ ಫ್ಯಾನ್ಸ್ ಅಂದುಕೊಳ್ಳುತ್ತಿದ್ದಾರೆ. ಅಕಸ್ಮಾತ್ ಈ ಸುದ್ದಿ ನಿಜವಾಗಿದ್ದೇ ಆದರೆ, ರಕ್ಷಿತ್‌ ಶೆಟ್ಟಿ ತಮ್ಮ ಪರಂವಃ ಬ್ಯಾನರ್‌ ಅಡಿಯಲ್ಲಿ ʼರಿಚರ್ಡ್‌ ಆಂಟನಿʼ ಸಿನಿಮಾ ನಿರ್ಮಾಣ ಮಾಡುವ ಸಾಧ್ಯತೆಯಿದೆ ಎಂಬ ಮಾತು ಓಡಾಡುತ್ತಿದೆ. ಹೀಗೆ ರಕ್ಷಿತ್ ಶೆಟ್ಟಿ ಅವರ ಬಹು ನಿರೀಕ್ಷಿತ ಸಿನ್ಮಾ ಮತ್ತೊಮ್ಮೆ ದೊಡ್ಡ ಮಟ್ಟದಲ್ಲಿ ಸದ್ದು ಮಾಡ್ತಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+