Bharjari Bachelors: ಭರ್ಜರಿ ಬ್ಯಾಚುಲರ್ಸ್‌ ಗ್ರ್ಯಾಂಡ್‌ ಫಿನಾಲೆ ಯಾವಾಗ? ಟ್ರೋಫಿ ಗೆಲ್ಲೋದು ಯಾರು?

ಕನ್ನಡ ಪ್ರೇಕ್ಷಕರ ನೆಚ್ಚಿನ ರಿಯಾಲಿಟಿ ಶೋ ಭರ್ಜರಿ ಬ್ಯಾಚುಲರ್ಸ್‌ ಸೀಸನ್‌-2ಕ್ಕೆ (Bharjari Bachelors) ಉತ್ತಮ ಸ್ಪಂದನೆ ಸಿಕ್ಕಿದೆ. ಈ ಬಾರಿ ಸೀಸನ್‌ನಲ್ಲಿ ಭಾರಿ ಯಶಸ್ಸು ಕಾಣುತ್ತಿದ್ದು, ವಿಭಿನ್ನ ಮನರಂಜನೆಯ ಮೂಲಕ ಎಲ್ಲರಿಗೂ ನೆಚ್ಚಿನ ಕಾರ್ಯಕ್ರಮವಾಗಿ ಹೊರಹೊಮ್ಮಿದ್ದ ಶೋ ಇದೀಗ ಫಿನಾಲೆ ಹಂತಕ್ಕೆ ತಲುಪಿದೆ. ಹಾಗಾದರೆ ಈ ಕಾರ್ಯಕ್ರಮದಲ್ಲಿ ಗೆಲ್ಲುವವರು ಯಾರು? ಭರ್ಜರಿ ಬ್ಯಾಚುಲರ್ಸ್‌ ಸೀಸನ್‌-2 ವಿನ್ನರ್‌ ಎಂಬ ಎಲ್ಲ ಪ್ರಶ್ನೆಗಳಿಗೆ ಇದೇ ಸದ್ಯದಲ್ಲೇ ಉತ್ತರ ಸಿಗಲಿದೆ.

ಹೌದು ಭರ್ಜರಿ ಬ್ಯಾಚುಲರ್ಸ್‌ ಸೀಸನ್‌-2 ಫಿನಾಲೆ ತಲುಪಿದ್ದು, ಯಾರ ಮುಡಿಗೆ ಭರ್ಜರಿ ಬ್ಯಾಚುಲರ್ಸ್‌ ಸೀಸನ್‌-2 ಕಿರೀಟ ದೊರಲಿದೆ ಎಂಬ ಕುತೂಹಲ ಸದ್ಯ ಅಭಿಮಾನಿಗಳಲ್ಲಿ ಮನೆಮಾಡಿದೆ. ಇಷ್ಟು ದಿನಗಳ ಕಾಲ ತಮ್ಮದೇ ಆದ ವಿಭಿನ್ನ ಸ್ಟೈಲ್‌, ಹಾಸ್ಯ ಮನೋಭಾವ ಸೇರಿದಂತೆ ವೇದಿಕೆಗಳ ಮೇಲೆ ಅನೇಕ ಥೀಮ್‌ಗಳಲ್ಲಿ ಪ್ರದರ್ಶನ ನೀಡಿದ್ದ ಎಲ್ಲ ಸ್ಪರ್ಧಿಗಳು ಇದೀಗ ಕೊನೆ ಹಂತದ ಫಿನಾಲೆಗೆ ಸಿದ್ಧತೆ ನಡೆಸಿದ್ದಾರೆ. ಈ ಸೀಸನ್‌ನ ಹಲವು ಮಂದಿ ಗಮನ ಸೆಳೆದಿದ್ದಾರೆ. ಬ್ಯಾಚುಲರ್‌ಗಳ ಪೈಕಿ ಯಾರು ವಿನ್ನರ್‌ ಆಗಿ ಹೊರಹೊಮ್ಮಲಿದ್ದಾರೆ ಎಂಬುದು ಹೊರಬೀಳಲಿದ್ದು, ಗ್ರ್ಯಾಂಡ್‌ ಫಿನಾಲೆಗೆ ದಿನಾಂಕ ಫಿಕ್ಸ್‌ ಆಗಿದೆ.

bharjari-bachelors-season-2-grand-finale-date-and-winner-prediction

ಫಿನಾಲೆ ಕಣದಲ್ಲಿ ಉಲ್ಲಾಸ್, ದರ್ಶನ್, ಹುಲಿ ಕಾರ್ತಿಕ್‌, ಪ್ರೇಮ್‌ ಥಾಪ, ಪ್ರವೀಣ, ಭುವನೇಶ್‌, ಡ್ರೋನ್‌ ಪ್ರತಾಪ್, ಸುನೀಲ, ಸೂರ್ಯ, ರಕ್ಷಕ್‌ ಬುಲೆಟ್ ಮಿಂಚುತ್ತಿದ್ದಾರೆ. ಈ ಜೋಡಿಗಳ ಪೈಕಿ ಒಬ್ಬರು ಈ ಸೀಸನ್‌ನ ವಿನ್ನರ್‌ ಆಗಲಿದ್ದಾರೆ. ಈ ಮೂಲಕ ಇಷ್ಟು ದಿನಗಳ ಕಾಲ ವಿಭಿನ್ನವಾಗಿ ಪರ್ಫಾರ್ಮೆನ್ಸ್‌ ನೀಡಿದ ಸ್ಪರ್ಧಿಗಳಿಗೆ ಕೊನೆಗೂ ತಕ್ಕ ಫಲ ಸಿಗಲಿದೆ. ಸದಾ ವಿಭಿನ್ನ ಟಾಸ್‌ಗಳನ್ನು ನೀಡುತ್ತಿದ್ದ ತೀರ್ಪುಗಾರರು, ಇದೀಗ ಸ್ಪರ್ಧಿಗಳನ್ನು ತೂಗಿ ಅಳೆದು ನೆಚ್ಚಿನ ಜೋಡಿಯನ್ನು ಅಂತಿಮವಾಗಿ ಘೋಷಿಸಲಿದ್ದಾರೆ.

ಭಾನುವಾರ ಫಿನಾಲೆ

ಭರ್ಜರಿ ಬ್ಯಾಚುಲರ್ಸ್ ಸೀಸನ್ 2ರ ಗ್ರ್ಯಾಂಡ್ ಫಿನಾಲೆ ದಿನಾಂಕ ಮತ್ತು ಟೈಮಿಂಗ್ ಅನ್ನು ಜೀ ಕನ್ನಡ ಅಧಿಕೃತವಾಗಿ ಘೋಷಿಸಿದೆ. ಈ ಭಾನುವಾರ ಸಂಜೆ 6 ಗಂಟೆಗೆ ಫಿನಾಲೆ ಪ್ರಸಾರಗೊಳ್ಳಲಿದೆ. ಡ್ರೋನ್, ರಕ್ಷಕ್ ಬುಲೆಟ್ ಸೇರಿದಂತೆ 10 ಜೋಡಿಗಳು ಫಿನಾಲೆನಲ್ಲಿ ಮಿಂಚುತ್ತಿದ್ದು, ಇದರಲ್ಲಿ ಒಂದೇ ತಂಡ ಸೀಸನ್ ವಿನ್ನರ್ ಆಗಲಿದೆ. ಯಾರು ವಿಜೇತರಾಗುತ್ತಾರೆ ಎಂಬ ಕುತೂಹಲ ಹಾಗೆಯೇ ಉಳಿದಿದ್ದು, ಭಾನುವಾರ ಫಿನಾಲೆ ಪ್ರಸಾರದ ಬಳಿಕ ವಿಜೇತರ ಹೆಸರು ಅಧಿಕೃತವಾಗಿ ಹೊರಬೀಳಲಿದೆ.

ರಕ್ಷಕ್‌-ರಮೋಲಾ, ಡ್ರೋನ್‌ ಪ್ರತಾಪ್‌-ಗಗನಾ ಜೋಡಿಗೆ ಹೆಚ್ಚು ಕ್ರೇಜ್‌ ಇದ್ದು, ಸೋಷಿಯಲ್‌ ಮೀಡಿಯಾದಲ್ಲಿ ಇವರಿಬ್ಬರಿಗೂ ಹೆಚ್ಚಿನ ಬೆಂಬಲಿಗರಿದ್ದಾರೆ. ಅನೇಕರು ರಕ್ಷಕ್‌ ಗೆಲ್ಲಬೇಕು ಅಂತಿದ್ದಾರೆ. ಡ್ರೋನ್‌ ಪ್ರತಾಪ್‌ ಕೂಡ ಒಳ್ಳೆಯ ಸ್ಪರ್ಧಿ, ಆ ಜೋಡಿ ಗೆಲ್ಲುವುದು ಫಿಕ್ಸ್‌ ಎನ್ನುತ್ತಿದ್ದಾರೆ. ಇವರಿಬ್ಬರ ವಿಡಿಯೋಗಳು ಕೂಡ ಸೋಷಿಯಲ್‌ ಮೀಡಿಯಾದಲ್ಲಿ ಸಖತ್‌ ಗಮನ ಸೆಳೆಯುತ್ತಿದ್ದು. ಬಹುತೇಕ ಈ ಇಬ್ಬರಲ್ಲೇ ಒಂದು ಜೋಡಿ ಕಪ್‌ ಗೆಲ್ಲಲಿದೆ ಎಂದು ಭವಿಷ್ಯ ನುಡಿಯುತ್ತಿದ್ದಾರೆ. ಈ ಎಲ್ಲ ಪ್ರಶ್ನೆಗಳಿಗೂ ಸದ್ಯದಲ್ಲೇ ತೆರೆ ಬೀಳಲಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+