ಭರ್ಜರಿ ಬ್ಯಾಚುಲರ್ಸ್ - 2 ವಿನ್ನರ್ ಆದ ಸುನೀಲ್‌ಗೆ ಸಿಕ್ಕ ಹಣವೆಷ್ಟು? ಗಿಫ್ಟ್ ಏನೇನು? ರನ್ನರಪ್‌ಗೆ ಸಿಕ್ಕಿದ್ದೇನು?

ಇಷ್ಟು ದಿನಗಳ ಕಾಲ ಕರುನಾಡ ಜನತೆಯನ್ನ ನಕ್ಕು ನಗಿಸಿದ ಭರ್ಜರಿ ಬ್ಯಾಚುಲರ್ಸ್ ಸೀಸನ್-2 ಎಂಡ್ ಆಗಿದೆ. ಭರ್ಜರಿ ಬ್ಯಾಚುಲರ್ಸ್‌ ನಲ್ಲಿ ಯಾರು ಗೆಲುವು ಸಾಧಿಸುತ್ತಾರೆ ಎಂಬ ಕುತೂಹಲ ಹೆಚ್ಚಾಗಿತ್ತು. ಅಲ್ಲದೇ ಫಿನಾಲೆಯಲ್ಲಿ ಮೂರು ಹೆಸರು ಕೇಳಿ ಬರ್ತಾ ಇತ್ತು. ಗಾಯಕ ಸುನಿಲ್ ಗುಜಗೊಂಡ, ರಕ್ಷಕ್ ಬುಲೆಟ್ ಹಾಗೂ ಡ್ರೋನ್ ಪ್ರತಾಪ್ ಹೆಸರು ಹೆಚ್ಚು ಹೈಲೈಟ್ ಆಗಿತ್ತು. ಆದರೆ, ಇವರಲ್ಲಿ ಈ ಒಂದು ಸೀಸನ್‌ ಕಿರೀಟ ಯಾರ ಮುಡಿಗೆ ಏರಿದೆ ಅನ್ನೋದು ಕೊನೆಗೂ ರಿವೀಲ್ ಆಗಿದೆ. ಫಸ್ಟ್ ರನ್ನರ್ ಅಪ್ ಯಾರು? ಸೆಕೆಂಡ್ ರನ್ನರ್ ಅಪ್ ಯಾರು? ಹಾಗೂ ವಿನ್ನರ್ ಯಾರು? ಭರ್ಜರಿ ಬ್ಯಾಚುಲರ್ಸ್‌ ಸೀಸನ್‌ 2 ರ ವಿನ್ನರ್‌ ಗೆ ಸಿಕ್ಕ ಹಣವೆಷ್ಟು ಎಂಬ ಬಗ್ಗೆ ಮಾಹಿತಿ ಇಲ್ಲಿದೆ ನೋಡಿ.

ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾದ 'ಭರ್ಜರಿ ಬ್ಯಾಚುಲರ್ಸ್ ಸೀಸನ್ 2' ರಿಯಾಲಿಟಿ ಶೋಗೆ ಅದ್ಧೂರಿ ತೆರೆಬಿದ್ದಿದೆ. ಜುಲೈ 27 ರಂದು ಭಾನುವಾರ ಸಂಜೆ ಭರ್ಜರಿ ಬ್ಯಾಚುಲರ್ಸ್ ಸೀಸನ್ 2' ಗ್ರ್ಯಾಂಡ್ ಫಿನಾಲೆ ಸಂಚಿಕೆ ಪ್ರಸಾರವಾಗಿದ್ದು, ವಿಜೇತರಾಗಿ ಗಾಯಕ ಸುನಿಲ್ ಗುಜಗೊಂಡ ಹೊರಹೊಮ್ಮಿದ್ದಾರೆ. ಭರ್ಜರಿ ಬ್ಯಾಚುಲರ್ಸ್ ವಿನ್ನರ್ ವೆರಿ ಟ್ಯಾಲೆಂಟೆಡ್ ಗಾಯಕ ಸುನಿಲ್ ಗುಜಗೊಂಡ ಈ ಸಲದ ವಿನ್ನರ್ ಆಗಿದೆ. ಕೇಜಿ ಸ್ಟಾರ್ ರವಿಚಂದ್ರನ್ ಈ ಒಂದು ವಿಷಯವನ್ನ ಅಷ್ಟೆ ಸಿಂಪಲ್ ಆಗಿಯೇ ಹೇಳಿದ್ದಾರೆ.

bharjari bachelors 2 winner is sunil gujgonda and amrutha raj money price

ವಿನ್ನರ್ ಸುನೀಲ್‌ಗೆ ಸಿಕ್ಕ ಬಹುಮಾನ ಎಷ್ಟು?

'ಭರ್ಜರಿ ಬ್ಯಾಚುಲರ್ಸ್ ಸೀಸನ್‌ 2'ನಲ್ಲಿ ಗೆಲುವಿನ ನಗೆ ಬೀರಿರೋದು ವೆರಿ ಟ್ಯಾಲೆಂಟೆಡ್ ಗಾಯಕ ಸುನಿಲ್ ಗುಜಗೊಂಡ. ಭರ್ಜರಿ ಬ್ಯಾಚುಲರ್ಸ್‌ ಸೀಸನ್‌ 2 ರ ತೀರ್ಪುಗಾರರಾದ ರವಿಚಂದ್ರನ್ ಅವರು ಸುನೀಲ್ ಗುಜಗೊಂಡ ವಿನ್ನರ್‌ ಎಂದು ಘೋಷಿಸಿದರು. ಆ ಮೂಲಕ ಸುನೀಲ್ ಹಾಗೂ ಅಮ್ರಿಟಾ ಜೋಡಿ ವಿನ್ನರ್ ಪಟ್ಟಕ್ಕೇರಿದರು. ವಿಜೇತರಿಗೆ ವಿನ್ನರ್ ಕಪ್‌ ಹಾಗೂ 15 ಲಕ್ಷ ರೂಪಾಯಿ ಕ್ಯಾಶ್ ಪ್ರೈಝ್‌ ಸಿಕ್ಕಿದೆ. ಹಲವು ಗಿಫ್ಟ್‌ ಗಳು ಈ ಜೋಡಿಗೆ ಸಿಕ್ಕಿವೆ.

ಇನ್ನೂ ಹೇಳಿ ಕೇಳಿ ಭರ್ಜರಿ ಬ್ಯಾಚುಲರ್ಸ್‌ ವಿನ್ನರ್‌ ಸುನೀಲ್‌ಗೆ ಮೊದಲೇ ಸಂಕೋಚ ಜಾಸ್ತಿ. ಹೀಗಾಗಿ, ವಿನ್ನರ್ ಅಂತ ಅನೌನ್ಸ್ ಆದ್ಮೇಲೆ ಸುನೀಲ್ ಅವರ ಕೈ ನಡುಗುತ್ತಿತ್ತು. ಈ ಭರ್ಜರಿ ಬ್ಯಾಚುಲರ್ಸ್‌ ಶೋಗೆ ಬರಬೇಕೋ ಅಥವಾ ಬೇಡವೋ ಅಂತ ಆಲೋಚಿಸುತ್ತಿದ್ದೆ. ಈಗ ಶೋಗೆ ಬಂದು ವಿನ್ನರ್ ಟ್ರೋಫಿ ಹಿಡಿದುಕೊಂಡಿದ್ದೇನೆ. ತುಂಬಾ ಖುಷಿಯಾಗುತ್ತಿದೆ. 20 ಜನರ ಟ್ರೋಫಿ ಇದು ಎಂದು ವಿನ್ನರ್‌ ಸುನೀಲ್‌ ಮನತುಂಬಿ ಮಾತನಾಡಿದ್ದಾರೆ.

ಮೊದಲ ರನ್ನರ್ ಅಪ್‌ ಯಾರು? ಸಿಕ್ಕ ಹಣವೆಷ್ಟು?

ಸಿಕ್ಕಪಟ್ಟೆ ಸೋಶಿಯಲ್‌ ಮೀಡಿಯಾದಲ್ಲಿ ಆಕ್ಟಿವ್‌ ಆಗಿರುವ ಕನ್ನಡತಿ ಸೀರಿಯಲ್ ಖ್ಯಾತಿಯ ರಮೋಲಾ ಹಾಗೂ ರಕ್ಷಕ್ ಬುಲೆಟ್‌ ಜೋಡಿ 'ಭರ್ಜರಿ ಬ್ಯಾಚುಲರ್ಸ್ ಸೀಸನ್‌ 2' ಶೋನಲ್ಲಿ ಸಿಕ್ಕಾಪಟ್ಟೆ ಸದ್ದು ಹಾಗೂ ಸುದ್ದಿ ಮಾಡಿರುವ ಜೋಡಿಯಾಗಿದೆ. ಈ ಜೋಡಿ ಮೊದಲ ರನ್ನರ್‌ ಅಪ್‌ ಸ್ಥಾನ ಪಡೆದುಕೊಂಡಿದೆ. ರನ್ನರ್ ಅಪ್‌ ರಕ್ಷಕ್‌ ಬುಲೆಟ್‌ಗೆ 10 ಲಕ್ಷ ರೂಪಾಯಿ ಬಹುಮಾನ ಹಣ ಲಭಿಸಿದೆ.

ಎರಡನೇ ರನ್ನರ್‌ ಅಪ್‌ ಯಾರು? ಸಿಕ್ಕ ಬಹುಮಾನ ಎಷ್ಟು?

ಇನ್ನೂ ಭರ್ಜರಿ ಬ್ಯಾಚುಲರ್ಸ್ ಸೀಸನ್ 2 ರ ಕಾರ್ಯಕ್ರಮದಲ್ಲಿ ಹೆಚ್ಚು ಸೌಂಡ್ ಮಾಡಿದ ಜೋಡಿ ಅಂದ್ರೆ ಅದು, ಡ್ರೋನ್ ಪ್ರತಾಪ್ ಹಾಗೂ ಗಗನಾ. ಮೊದಲಿನಿಂದಲೂ ಈ ಜೋಡಿ ಸಿಕ್ಕಪಟ್ಟೆ ಕ್ರಿಯೆಟಿವ್‌ ಜೋಡಿ ಎನಿಸಿಕೊಂಡಿದೆ. ಈ ಜೋಡಿ ಎರಡನೇ ರನ್ನರ್ ಅಪ್‌ ಸ್ಥಾನ ಪಡೆದುಕೊಂಡಿದೆ. ಮೂರನೇ ಸ್ಥಾನ ಪಡೆದ ಡ್ರೋನ್ ಪ್ರತಾಪ್ - ಗಗನಾ ಜೋಡಿಗೆ 3 ಲಕ್ಷ ರೂಪಾಯಿ ಬಹುಮಾನ ಹಣ ಲಭಿಸಿದೆ. ಇದರಲ್ಲಿ ಅರ್ಧದಷ್ಟು ಹಣವನ್ನ ಗಗನಾಗೆ ನೀಡುವುದಾಗಿ ಡ್ರೋನ್ ಪ್ರತಾಪ್ ಹೇಳಿದ್ದಾರೆ. ಇನ್ನೂ 'ಸ್ಪೆಷಲ್ ಬ್ಯಾಚುಲರ್' ಪಟ್ಟ ಸೂರ್ಯ ಪಾಲಾಗಿದ್ದು, ಸೂರ್ಯ - ಅಭಿ‍ಜ್ಞಾ ಭಟ್ ಜೋಡಿಗೆ 1 ಲಕ್ಷ ರೂಪಾಯಿ ಕ್ಯಾಶ್ ಪ್ರೈಝ್ ಲಭಿಸಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+