ಬಿಗ್ ಬಾಸ್ ಗೆದ್ದ ಗಿಲ್ಲಿ ನಟ ಹಾಗೂ ಮೊದಲ, ಎರಡನೇ ರನ್ನರ್ ಅಪ್‌ಗೆ ಏನೆಲ್ಲಾ ಸಿಕ್ಕಿತು? ಇಲ್ಲಿದೆ ಮಾಹಿತಿ
BBK 12 Finale: ಬಿಗ್‌ಬಾಸ್ ಕನ್ನಡ 12 ಸೀಸನ್‌ಗೆ ಕೊನೆಗೂ ತೆರೆ ಬಿದ್ದಿದೆ. ಈ ಬಾರಿ ಜನರು ನುಡಿದ ಭವಿಷ್ಯದಂತೆ ಗಿಲ್ಲಿ ನಟ ಟ್ರೋಫಿ ವಿನ್ನರ್ ಆಗಿದ್ದಾರೆ. ರನ್ನರ್ ಅಪ್ ರಕ್ಷಿತಾ ಶೆಟ್ಟಿ ಹಾಗೂ ಎರಡನೇ ರನ್ನರ್ ಅಪ್ ಅಶ್ವಿನಿ ಗೌಡ ಆಗಿದ್ದಾರೆ. ಹಾಗಾದ್ರೆ ಗೆದ್ದರಿಗೆ ಏನೆಲ್ಲಾ ಸಿಕ್ಕಿತು ಎನ್ನುವ ಕುತೂಹಲ ಬಹುತೇಕರಲ್ಲಿ ಇರುತ್ತದೆ ಅದೆಲ್ಲದಕ್ಕೂ ಉತ್ತರವನ್ನು ಇಲ್ಲಿ ನೀಡಲಾಗಿದೆ ತಿಳಿಯಿರಿ.
ಅತ್ಯಂತ ದೊಡ್ಡ ರಿಯಾಲಿಟಿ ಶೋಗಳಲ್ಲಿ ಒಂದಾಗಿದೆ. ಇದೀಗ ಜನವರಿ 18ರ ಭಾನುವಾರ 12ನೇ ಸೀಸನ್ ಮುಕ್ತಾಯ ಆಗಿದ್ದು, ಗಿಲ್ಲಿ ನಟ ಟ್ರೋಫಿ ವಿನ್ನರ್ ಆಗಿದ್ದಾರೆ. ಕೋಟ್ಯಂತರ ಅಭಿಮಾನಿಗಳ ನಿರೀಕ್ಷೆಯಂತೆ ಗೆದ್ದ ಗಿಲ್ಲಿ ನಟನಿಗೆ ಟ್ರೋಫಿ ಜೊತೆಗೆ ಲಕ್ಷ ಲಕ್ಷ ರೂಪಾಯಿ ಬಹುಮಾನ ಸಹ ಸಿಕ್ಕಿದೆ.

ಬಿಗ್‌ಬಾಸ್ ವಿನ್ನರ್ ಗಿಲ್ಲಿ ನಟನಿಗೆ ಪ್ರಾಯೋಜಕರಿಂದ 50,00,000 ರೂಪಾಯಿ ನಗದು ಬಹುಮಾನ ಹಾಗೂ ಮಾರುತಿ ಸುಜುಕಿ ಪ್ರಾಯೋಜಕರಿಂದ ಒಂದು ಕಾರನ್ನು ನೀಡಲಾಗಿದೆ. ಅಲ್ಲದೇ ವಿಶೇಷವಾಗಿ ನಟ, ನಿರೂಪಕ ಕಿಚ್ಚ ಸುದೀಪ್ ವೈಯಕ್ತಿಕವಾಗಿ 10,00,000 ರೂಪಾಯಿ ನಗದು ಬಹುಮಾನವನ್ನು ಕೂಡ ವೇದಿಕೆಯಲ್ಲೇ ಘೋಷಣೆ ಮಾಡಿದ್ದಾರೆ.
ಗಿಲ್ಲಿ ನಟನಿಗೆ ಏನೆಲ್ಲಾ ಸಿಕ್ಕಿತು?
* ಬಿಗ್ ಬಾಸ್ ವಿಶೇಷ ಟ್ರೋಫಿ
* 50,00,000 ರೂಪಾಯಿ ನಗದು ಬಹುಮಾನ
* ಮಾರುತಿ ಸುಜುಕಿ ಕಾರು
* ಕಿಚ್ಚ ಸುದೀಪ್ ಅವರಿಂದ ವೈಯಕ್ತಿಕ 10,00,000 ರೂಪಾಯಿ ನಗದು ಬಹುಮಾನ
ಟ್ರೋಫಿ ವಿಶೇಷತೆ: ಈ ಬಾರಿಯ ಬಿಗ್ ಬಾಸ್ ಟ್ರೋಫಿಯನ್ನು ತುಂಬಾ ವಿಶಿಷ್ಟ ರೀತಿಯಲ್ಲಿ ಸಿದ್ದಪಡಿಸಲಾಗಿದೆ. ಬಿಗ್ ಬಾಸ್ ಮನೆಯಲ್ಲಿ ಕನ್ನಡದ ಕಂಪು ಹಾಗೂ ಕರ್ನಾಟಕದ ಶ್ರೀಮಂತ ಇತಿಹಾಸ ಇದೆ. ಅದೇ ರೀತಿಯಲ್ಲಿ ಅದನ್ನೇ ಟ್ರೋಫಿಯಲ್ಲೂ ಅಳವಡಿಸಲಾಗಿದೆ. ಬಿಗ್ ಬಾಸ್ ಮನೆಯಲ್ಲಿ ಆನೆ, ದರ್ಪಣ ಸುಂದರಿ, ಅರಮನೆ ಇರುವಂತೆ ಟ್ರೋಫಿಯಲ್ಲೂ ಅವನ್ನು ಕಾಣಬಹುದು.
ಮೇಲ್ಭಾಗದಲ್ಲಿ ಬಿಗ್ ಬಾಸ್‌ನ ಕಣ್ಣು ಇಡಲಾಗಿದೆ. ಆ ಕಣ್ಣಿನ ಒಳಗಡೆ ಕನ್ನಡದ ಸಂಖ್ಯೆಗಳನ್ನು ಕ್ಲಾಕ್ ರೀತಿಯಲ್ಲಿ ಜೋಡಿಸಲಾಗಿದೆ. ಇದೇ ಮೊದಲ ಬಾರಿಗೆ ಕನ್ನಡದ ಡಿಂಡಿಮ ಬಿಗ್ ಬಾಸ್ ಟ್ರೋಫಿ ಮೇಲೆ ಮೇಳೈಸಿದೆ. ಹೀಗೆ ಈ ಬಾರಿಯ ಟ್ರೋಫಿ ವಿಶೇಷತೆಗಳನ್ನು ಒಳಗೊಂಡಿದೆ.
ತೀವ್ರ ಕುತೂಹಲ ಕೆರಳಿಸಿದ್ದ ಬಿಗ್ ಬಾಸ್ ಸೀಸನ್ 12ಕ್ಕೆ ಕೊನೆಗೂ ತೆರೆ ಬಿದ್ದಿದೆ. ಬಿಗ್ ಬಾಸ್ ಇತಿಹಾಸದಲ್ಲೇ ಇದೇ ಮೊದಲ ಬಾರಿ ಅತೀ ಹೆಚ್ಚು ಮತಗಳನ್ನು ಪಡೆಯುವ ಮೂಲಕ ಗಿಲ್ಲಿ ನಟ ಬಿಗ್ ಬಾಸ್ ಟ್ರೋಫಿ ಗೆದ್ದುಕೊಂಡಿದ್ದಾರೆ. ಬರೀ ಕರ್ನಾಟಕ ಅಷ್ಟೇ ಅಲ್ಲದೆ ದೇಶ, ವಿದೇಶದಾದ್ಯಂತ ಸೇರಿ ಕೋಟ್ಯಂತರ ಅಭಿಮಾನಿಗಳ ಹಾರೈಕೆ ನಿಜ ಆದಂತಾಗಿದೆ.
ರನ್ನರ್ ಅಪ್ ರಕ್ಷಿತಾಗೆ ಸಿಕ್ಕಿದ್ದೇನು?: ಮೊದಲ ರನ್ನರ್ ಅಪ್ ಆಗ ರಕ್ಷಿತಾ ಶೆಟ್ಟಿಗೆ ಇಬ್ಬರು ಪ್ರಾಯೋಜಕರಿಂದ ಕ್ರಮವಾಗಿ 20 ಲಕ್ಷ ಹಾಗೂ 5 ಲಕ್ಷ ರೂಪಾಯಿ ನಗದು ಬಹುಮಾನ ಕೊಡಲಾಯಿತು.
ಎರಡನೇ ರನ್ನರ್ ಅಪ್ ಅಶ್ವಿನಿಗೆ ಸಿಕ್ಕಿದ್ದೇನು?: ಬಿಗ್ ಬಾಸ್‌ನಲ್ಲಿ 3ನೇ ಸ್ಥಾನ ಪಡೆದ ಅಂದರೆ ಎರಡನೇ ರನ್ನರ್ ಅಪ್ ಆದ ಅಶ್ವಿನಿ ಗೌಡಗೆ ಮೂವರು ಪ್ರಾಯೋಜಕರಿಂದ 7,00,000 ರೂಪಾಯಿ, 2,00,000 ರೂಪಾಯಿ, 5,00,000 ಸೇರಿ ಒಟ್ಟು 14,00,000 ರೂಪಾಯಿ ನಗದು ಬಹುಮಾನ ಸಿಕ್ಕಿತು. ಹಲವರು ಅಶ್ವಿನಿ ಗೌಡ ಅವರೇ ಬಿಗ್ ಬಾಸ್ ವಿನ್ನರ್ ಆಗಲಿದ್ದಾರೆ ಅಂದುಕೊಂಡಿದ್ದರು. ಆದರೆ, ಅದು ಕೊನೇ ಗಳಿಗೆಯಲ್ಲಿ ಉಲ್ಟಾ ಹೊಡೆದು ಅವರು ಎರಡನೇ ರನ್ನರ್ ಅಪ್ ಆಗಿ ಹೊರಹೊಮ್ಮಿದರು. ಮೊದಲನೇ ರನ್ನರ್ ಅಪ್ ರಕ್ಷಿತಾ ಶೆಟ್ಟಿ ಆದ್ರೆ, ಟ್ರೋಫಿ ಗಿಲ್ಲಿ ನಟನ ಕೈಸೇರಿತು.
-
ಕೇವಲ 2 ನಿಮಿಷದಲ್ಲಿ ಉದ್ಯೋಗ ಅರ್ಜಿ ರಿಜೆಕ್ಟ್: 'ಎಐ' ನೇಮಕಾತಿ ಬಗ್ಗೆ ಭಾರತೀಯ ಮೂಲದ ವಿದ್ಯಾರ್ಥಿನಿ ಬೇಸರ -
Rishab Shetty: ಹೊಂಬಾಳೆ ಫಿಲ್ಮ್ಸ್ ಅನ್ಫಾಲೋ ಮಾಡಿದ ರಿಷಬ್ ಶೆಟ್ಟಿ: ಕಾಂತಾರ ಕುಟುಂಬದಲ್ಲಿ ಬಿರುಕು ವದಂತಿ -
Ration: ಪಡಿತರ ಚೀಟಿದಾರರಿಗೆ ಭರ್ಜರಿ ಗುಡ್ ನ್ಯೂಸ್ ಕೊಟ್ಟ ಕೇಂದ್ರ ಸರ್ಕಾರ -
ಆರ್ಸಿಬಿ ಮತ್ತೆ ಚಾಂಪಿಯನ್ ಆಗೋದು ಫಿಕ್ಸ್, ಹ್ಯಾಜಲ್ವುಡ್ ಅಲಭ್ಯತೆ ತಂಡಕ್ಕೆ ವರದಾನ ಎಂದ ಆರ್.ಅಶ್ವಿನ್ -
ಮಳೆ.. ಮಳೆ.. ಮುಂದಿನ 48 ಗಂಟೆಯಲ್ಲಿ ಮಳೆ ಬಗ್ಗೆ ಹವಾಮಾನ ಇಲಾಖೆ ಮಹತ್ವದ ಮಾಹಿತಿ... Karnataka Rain -
March 21 Horoscope: 12 ರಾಶಿಗಳ ಇಂದುದಿನ ಭವಿಷ್ಯ – ಹಣ, ಆರೋಗ್ಯ, ಕೆಲಸದ ಫಲಿತಾಂಶ -
Summer Camp: ಶೃಂಗೇರಿ ಶಾರದಾ ಪೀಠದಿಂದ ವಟುಗಳಿಗಾಗಿ 15 ದಿನಗಳ ಉಚಿತ 'ಸಂಸ್ಕಾರ' ಬೇಸಿಗೆ ಶಿಬಿರ -
40,000 ಹೋಟೆಲ್ ಮಾಲೀಕರಿಗೆ ಭರ್ಜರಿ ಸುದ್ದಿ, ಎಲ್ಪಿಜಿ ಸಿಲಿಂಡರ್ ನಿಯಮ ಬದಲಾವಣೆ... LPG Cylinder Supply -
SWR: ವಿಜಯಪುರ-ಮಂಗಳೂರು ಎಕ್ಸ್ಪ್ರೆಸ್ ರೈಲು ಸಂಚಾರದಲ್ಲಿ ಭಾಗಶಃ ರದ್ದು, ವೇಳಾಪಟ್ಟಿ ಗಮನಿಸಿ -
ಜಿಯೋ, ಏರ್ಟೆಲ್ಗೆ ಸೆಡ್ಡು ಹೊಡೆಯಲು BSNL ಮಾಸ್ಟರ್ ಪ್ಲಾನ್: ವೊಡಾಫೋನ್ ಐಡಿಯಾ ಜತೆ ಮಹತ್ವದ ಹೆಜ್ಜೆ -
ಬೆಂಗಳೂರಿನಲ್ಲಿ ನಡೆಯುವ ಆರ್ಸಿಬಿ-ಎಸ್ಆರ್ಎಚ್ ಉದ್ಘಾಟನಾ ಪಂದ್ಯದ ಟಿಕೆಟ್ ಬುಕ್ ಮಾಡುವುದ್ಹೇಗೆ? ಇಲ್ಲಿದೆ ಮಾಹಿತಿ -
Summer Drinks: ಎಳನೀರು ಅಥವಾ ಕಬ್ಬಿನ ರಸ – ಬೇಸಿಗೆಯಲ್ಲಿ ಯಾವುದು ಉತ್ತಮ?












Click it and Unblock the Notifications