ಅವಿನಾಶ್ ಹೆಂಡ್ತಿನಾ ಮರೆತರೂ ಈ ಕೆಲಸ ಮಾತ್ರ ಮರೆಯಲ್ಲ- ಮಾಳವಿಕಾ ಅವಿನಾಶ್
ನಟ ಅವಿನಾಶ್ ಹಾಗೂ ನಟಿ ಮಾಳವಿಕಾ ಅವಿನಾಶ್ ಕನ್ನಡ ಚಿತ್ರರಂಗದ ಮಾದರಿ ಜೋಡಿ. ಇಬ್ಬರೂ ಒಂದೇ ಕ್ಷೇತ್ರದಲ್ಲಿ ಇದ್ದರೂ ಕೂಡ ಒಬ್ಬರನ್ನು ಒಬ್ಬರು ಬೆಂಬಲಿಸಿಕೊಂಡು ವೈಯಕ್ತಿಕ ಹಾಗೂ ವೃತ್ತಿ ಜೀವನವನ್ನು ಸರಿದೂರಿಸಿಕೊಂಡು ಹೋಗುವಲ್ಲಿ ಯಶಸ್ವಿಯಾಗಿರುವ ದಂಪತಿ. ಮಗನ ವಿಚಾರದಲ್ಲಿಯೂ ಕೂಡ ಮಾದರಿ ಪೋಷಕರೇ. ತಮ್ಮ ವೃತ್ತಿ ಜೀವನದಲ್ಲಿ ಎಷ್ಟೇ ಬ್ಯೂಸಿಯಾಗಿದ್ದರೂ ಕೂಡ ಮಗನೊಂದಿಗೆ ಇಬ್ಬರಲ್ಲಿ ಒಬ್ಬರು ಪ್ರತಿ ದಿನ ಸಮಯ ಕಳೆಯುವುದನ್ನೂ ಎಂದೂ ಕೂಡ ತಪ್ಪಿಸುವುದಿಲ್ಲ. ಇಬ್ಬರ ನಡುವೆ ಅಷ್ಟರಮಟ್ಟಿಗೆ ಹೊಂದಾಣಿಕೆಯಿದೆ.
ನಟ ಅವಿನಾಶ್ ಅವರಿಗೆ 65 ವರ್ಷವಾದರೂ ಕೂಡ ಅವರು ಇಂದಿಗೂ ಫಿಟ್ ಆ್ಯಂಡ್ ಫೈನ್ ಆಗಿ ಕಾಣಿಸಿಕೊಳ್ಳುತ್ತಾರೆ. ಇಂದಿಗೂ ಯುವ ನಟರಿಗೆ ಸ್ಪರ್ಧೆ ಕೊಡುವಂತೆ ತಮ್ಮ ದೇಹವನ್ನು ಕಾಪಾಡಿಕೊಂಡಿದ್ದಾರೆ. ಅವಿನಾಶ್ ಅವರ ಈ ಯಂಗ್ ಲುಕ್‌ನ ಹಿಂದಿನ ಸಿಕ್ರೇಟ್ ಏನು ಎನ್ನುವುದನ್ನು ಮಾಳವಿಕಾ ಅವಿನಾಶ್ ರಿವೀಲ್ ಮಾಡಿದ್ದು, ಅವಿನಾಶ್ ಅವರ ವಿಶೇಷ ಗುಣದ ಬಗ್ಗೆ ಕೂಡ ಹೇಳಿಕೊಂಡಿದ್ದಾರೆ.

ಜೀ ಕನ್ನಡ ನ್ಯೂಸ್ ಜೊತೆ ಮಾತನಾಡಿದ ಅವರು, 'ನನ್ನ ಹೆಸರಿನ ಮುಂದೆ ಅವಿನಾಶ್ ಹೆಸರನ್ನು ನಾನೇ ಸುಮ್ಮನೆ ಸೇರಿಸಿಕೊಂಡಿದ್ದಷ್ಟೇ. ಒತ್ತಾಯ ಪೂರ್ವಕವಾಗಿ ಅವರು ಸೇರಿಸಿದಲ್ಲ. ಅವರು ಆ ರೀತಿಯ ವ್ಯಕ್ತಿಯಲ್ಲ. ಅವರು ಯಾವುದನ್ನೂ ಯಾರಿಗೂ ಒತ್ತಾಯ ಮಾಡಲ್ಲ. ಒಂದು ಬದುಕು ಅಂತಾ ಬಂದಾಗ, ಮದುವೆ ಅಂತಾ ಬಂದಾಗ ಇಬ್ಬರೂ ಅವರಿಷ್ಟದಂತೆ ಬದುಕಬೇಕು. ಒಬ್ಬರಿಂದ ಇನ್ನೊಬ್ಬರಲ್ಲ, ಎಲ್ಲರೂ ಒಟ್ಟಿಗೆ ಎನ್ನುವುದೇ ವಿಷಯ. ಅವರು ಮದುವೆಯಾದ ಮೇಲೆ ಯಾಕೆ ಕೆಲಸ ನಿಲ್ಲಿಸಬೇಕು. ನಾಳೆಯಿಂದ ನಾನು ಕೆಲಸಕ್ಕೆ ಹೋಗುತ್ತೇನೆ. ನೀನು ಹೋಗು ಅಂತಾ ಕಳುಹಿಸಿದರು' ಎಂದು ಅವಿನಾಶ್ ತಮಗೆ ವೃತ್ತಿ ಜೀವನ ಮುಂದುವರಿಸಲು ನೀಡಿದ ಬೆಂಬಲದ ಬಗ್ಗೆ ಹೇಳಿಕೊಂಡಿದ್ದಾರೆ.

ಇನ್ನು ನಟ ಅವಿನಾಶ್ ಅವರ ಬಗ್ಗೆ ಯಾರಿಗೂ ಗೊತ್ತಿರದ ಒಂದು ವಿಚಾರದ ಬಗ್ಗೆ ಹೇಳಿದ ಮಾಳವಿಕಾ ಅವಿನಾಶ್, 'ಅವರು ಹೆಂಡತಿಯನ್ನು ಮರೆತರೂ ಜಿಮ್ ಮರೆಯುವುದಿಲ್ಲ. ಈ ಆರೋಗ್ಯದ ಬಗ್ಗೆ, ಫಿಟ್‌ನೆಸ್ ಬಗ್ಗೆ, ಸಿಕ್ಸ್ ಪ್ಯಾಕ್ ಬಗ್ಗೆ ಕಾಳಜಿ ಮಾಡುವವರಿಗೆ ಅವಿನಾಶ್ ಆದರ್ಶ ವ್ಯಕ್ತಿ. ಅವರು ಬೇಕಿದ್ದರೆ ಊಟ ಬಿಡುತ್ತಾರೆ. ಜಿಮ್ ಬಿಡುವುದಿಲ್ಲ. ಕೊರೊನಾ ಸಮಯದಲ್ಲಿ ಜಿಮ್ ಇಲ್ಲದೇ ಅವರು ಪಟ್ಟ ಕಷ್ಟ ನೋಡಲು ಆಗುತ್ತಿರಲಿಲ್ಲ. ನಾನು ನೋಡಿದ ಮಟ್ಟಿಗೆ ನೆಲವತ್ತು ವರ್ಷದಿಂದ ಒಂದು ದಿನವೂ ಬಿಡದೇ ಸತತವಾಗಿ ಜಿಮ್ ಮಾಡುವ ವ್ಯಕ್ತಿಯೆಂದರೆ ಅವಿನಾಶ್. ಜಿಮ್ ವಿಷಯದಲ್ಲಿ ಅವರಿಗೆ ಭಾನುವಾರ ಎನ್ನುವುದೂ ಇಲ್ಲ' ಎಂದರು.












Click it and Unblock the Notifications