ರಚಿತಾ ರಾಮ್‌ನ ಕನ್ನಡದಲ್ಲಿ ಸರಿಯಾಗಿ ಬಳಸಿಕೊಳ್ಳುತ್ತಿಲ್ಲ: ರಚ್ಚು ಬಗ್ಗೆ ಹೀಗಂದಿದ್ದು ಯಾರು?
ಸ್ಯಾಂಡಲ್‌ವುಡ್‌ನ ಡಿಂಪಲ್ ಕ್ವೀನ್ ನಟಿ ರಚಿತಾ ರಾಮ್ ಈಗ ಪರಭಾಷೆಗಳಲ್ಲೂ ಮಿಂಚುತ್ತಿದ್ದಾರೆ. ತೆಲುಗು ಸಿನಿಮಾದಲ್ಲಿ ನಟಿಸಿದ್ದ ರಚ್ಚು, ಇತ್ತೀಚೆಗೆ ತೆರೆಕಂಡ ರಜನಿಕಾಂತ್ ನಟನೆಯ ಕೂಲಿ ಸಿನಿಮಾದಲ್ಲೂ ನಟಿಸಿದ್ದಾರೆ. ಈ ಸಿನಿಮಾದ ಪಾತ್ರಗಳ ಪೈಕಿ ಇದೀಗ ರಚಿತಾ ರಾಮ್ ಕೂಡ ಪ್ರೇಕ್ಷಕರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ. ಕೂಲಿ ಸಿನಿಮಾದಲ್ಲಿನ ರಚ್ಚು ಫೋಟೊ, ವಿಡಿಯೋಗಳು ಸೋಷಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿವೆ. ಇದೇ ವೇಳೆ ರಚಿತಾ ರಾಮ್ ಅವರನ್ನು ಕನ್ನಡ ಚಿತ್ರರಂಗ ಸರಿಯಾಗಿ ಬಳಸಿಕೊಳ್ಳುತ್ತಿಲ್ಲ ಎಂಬ ಮಾತು ಕೂಡ ಕೇಳಿಬಂದಿದೆ.
ಸೂಪರ್ ಸ್ಟಾರ್ ರಜನಿಕಾಂತ್ ನಟನೆಯ ಕೂಲಿ ಸಿನಿಮಾದಲ್ಲಿ ನಟ ಉಪೇಂದ್ರ ಕೂಡ ನಟಿಸಿದ್ದಾರೆ. ಆರಂಭದಲ್ಲಿ ಟ್ರೇಲರ್‌ನಲ್ಲಿ ರಚಿತಾ ರಾಮ್ ಕೂಡ ಕಾಣಿಸಿಕೊಂಡಿದ್ದರು. ಅದನ್ನು ನೋಡಿ ಜನ ಯಾವುದೋ ಸಣ್ಣ ಪಾತ್ರದಲ್ಲಿ ನಟಿಸಿರಬೇಕು ಎಂದು ಭಾವಿಸಿದ್ದರು. ಆದರೆ ಕೂಲಿ ಸಿನಿಮಾದಲ್ಲಿ ರಚಿತಾ ರಾಮ್ ಅವರ ಅಭಿನಯ ನೋಡಿ ಪ್ರೇಕ್ಷಕರು ಕೂಡ ಫಿದಾ ಆಗಿದ್ದಾರೆ. ಅಂತಹ ಪಾತ್ರ ನಿರ್ವಹಿಸಿದ್ದಾರೆ ರಚ್ಚು.

ರಚಿತಾ ಅವರ ಅಭಿನಯಕ್ಕೆ ತಮಿಳು, ತೆಲುಗು, ಕನ್ನಡ ಪ್ರೇಕ್ಷಕರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಅಂತಹ ಟ್ವಿಸ್ಟ್ ನೀಡಿದೆ ಅವರ ಪಾತ್ರ. ಇನ್ನು ರಚಿತಾ ಅವರ ಪ್ರತಿಭೆ ಬಗ್ಗೆಯೂ ಅಭಿಮಾನಿಗಳು ವಿಶೇಷ ಅಭಿಪ್ರಾಯ ತಿಳಿಸುತ್ತಿದ್ದಾರೆ. ಕೂಲಿ ಸಿನಿಮಾ ನೋಡಿ ನಮಗೆ ಅನಿಸಿದ್ದು ಒಂದೇ, ಸ್ಯಾಂಡಲ್‌ವುಡ್‌ನಲ್ಲಿ ರಚಿತಾ ರಾಮ್ ಸೇರಿದಂತೆ ನಟಿಯರ ಪ್ರತಿಭೆಯನ್ನ ಸರಿಯಾಗಿ ಬಳಸಿಕೊಳ್ಳುತ್ತಿಲ್ಲ ಎಂದೂ ಅಸಮಾಧಾನ ಹೊರಹಾಕುತ್ತಿದ್ದಾರೆ. ಕೂಲಿಯಲ್ಲಿ ರಚಿತಾ ಅವರ ಪಾತ್ರ ಬೆಂಕಿ ಎಂದು ಪೋಸ್ಟ್‌ಗಳನ್ನು ಹಂಚಿಕೊಳ್ಳುತ್ತಿದ್ದಾರೆ.
ಕಲ್ಯಾಣಿ ಪಾತ್ರದಲ್ಲಿ ಮೋಡಿ
ಕೂಲಿ ಸಿನಿಮಾದಲ್ಲಿ ಕಲ್ಯಾಣಿ ಎಂಬ ಪಾತ್ರದಲ್ಲಿ ರಚಿತಾ ರಾಮ್ ನಟಿಸಿದ್ದಾರೆ. ಮೊದಲಿಗೆ ರಚಿತಾ ಅವರು ಮುಗ್ಧ ಹುಡುಗಿಯಂತೆ ಕಾಣಿಸಿಕೊಂಡು ಸಾಮಾನ್ಯ ಪಾತ್ರ ಎನ್ನುವಂತ ಭಾವನೆ ಮೂಡಿಸಿದ್ದರು. ಆದರೆ ರಚ್ಚು ದಿಢೀರ್ ರೆಬೆಲ್ ಆಗಿ ಬದಲಾಗುತ್ತಾರೆ. ಇದನ್ನು ನೋಡಿ ಏನ್ ಆಕ್ಟಿಂಗ್ ಗುರೂ ಎನ್ನುತ್ತಿದ್ದಾರೆ ಕೂಲಿ ಪ್ರೇಕ್ಷಕರು. ಮುಗ್ಧ ಹುಡುಗಿ ಸಡನ್ನಾಗಿ ವಿಲರ್ ರೀತಿ ಉಗ್ರರೂಪ ತಾಳಿದರೆ ಹೇಗಿರುತ್ತೆ ಎಂದು ರಚಿತಾ ತಮ್ಮ ಪಾತ್ರವನ್ನ ಅಚ್ಚುಕಟ್ಟಾಗಿ ನಿಭಾಯಿಸಿದ್ದಾರೆ ಎನ್ನುತ್ತಿದ್ದಾರೆ.

ಕೂಲಿ ಸಿನಿಮಾಗೆ ಭಾರೀ ಮೆಚ್ಚುಗೆ ವ್ಯಕ್ತವಾದ ಹಿನ್ನೆಲೆ ರಚಿತಾ ರಾಮ್ ಅವರು ರಜನಿಕಾಂತ್ ಅವರೊಂದಿಗೆ ತೆಗೆದುಕೊಂಡಿದ್ದ ವಿಶೇಷ ಫೋಟೋ ಹಂಚಿಕೊಂಡಿದ್ದಾರೆ. ರಜನಿ ಅವರು ಸಿನಿರಂಗದಲ್ಲಿ 50 ವರ್ಷಗಳನ್ನು ಪೂರೈಸಿರುವ ಹಿನ್ನೆಲೆ ರಜನಿ ಅವರನ್ನು ಹಗ್ ಮಾಡಿಕೊಂಡಿರುವ ಫೋಟೋ ಶೇರ್ ಮಾಡಿದ್ದು, "ಈ ಫೋಟೋ ನನ್ನ ಗ್ಯಾಲರಿಯಲ್ಲೇ ಉಳಿದಿತ್ತು. ಇದನ್ನು ಹಂಚಿಕೊಳ್ಳಲು ಸೂಕ್ತ ಸಮಯಕ್ಕಾಗಿ ಕಾಯುತ್ತಿದ್ದೆ ರಜಿನಿ ಸರ್, ಲವ್ ಯೂ" ಎಂದು ರಚ್ಚು ಬರೆದುಕೊಂಡಿದ್ದಾರೆ.












Click it and Unblock the Notifications