Breaking: ಕನ್ನಡದ ಖ್ಯಾತ ನಿರ್ದೇಶಕನ ಮೇಲೆ ಮಸಿ ಬಳಿದು ಹಲ್ಲೆ: ಯಾಕೆ?
ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯ ಕೆಲವು ಸದಸ್ಯರ ನಡುವಿನ ಜಟಾಪಟಿ ಜೋರಾಗಿದೆ. ಕನ್ನಡದ ಖ್ಯಾತ ನಿರ್ಮಾಪಕ ಹಾಗೂ ನಿರ್ದೇಶಕ ನರಸಿಂಹ ರಾಜು ಮೇಲೆ ಚಲನಚಿತ್ರ ವಾಣಿಜ್ಯ ಮಂಡಳಿಯ ಸಮೀಪ ಕೆಲವರು ಹಲ್ಲೆ ಮಾಡಿದ್ದಾರೆ. ಅಲ್ಲದೇ ಕೆಲ ಕಿಡಿಗೇಡಿಗಳು ಅವರ ಮುಖಕ್ಕೆ ಮಸಿ ಬಳಿದು ಬಟ್ಟೆ ಹರಿದು ಎಳೆದಾಡಿದ್ದಾರೆ.
ಇದೀಗ ಈ ಹಲ್ಲೆ ನಾನಾ ರೂಪ ಪಡೆದುಕೊಳ್ಳುತ್ತಿದ್ದು, ಸಾ.ರಾ ಗೋವಿಂದು ಹಾಗೂ ವಾಟಾಳ್ ನಾಗರಾಜ್ ಬೆಂಬಲಿಗರು ಈ ರೀತಿ ಮಾಡಿದ್ದಾರೆ ಎನ್ನುವ ಆರೋಪ ಕೇಳಿಬಂದಿದೆ. ಈ ಬಗ್ಗೆ ನರಸಿಂಹ ರಾಜು ಅವರು ಬೆಂಗಳೂರು ಹೈಗ್ರೌಂಡ್ಸ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

ಈ ಬಗ್ಗೆ ಸ್ವತಃ ಹಲ್ಲೆಗೊಳಗಾದ ಕನ್ನಡದ ಖ್ಯಾತ ನಿರ್ಮಾಪಕ ಹಾಗೂ ನಿರ್ದೇಶಕ ನರಸಿಂಹ ರಾಜು ಮಾತನಾಡಿದ್ದು, ಹಲ್ಲೆ ಯಾವ ವಿಚಾರಕ್ಕೆ ಎನ್ನುವುದಿಲ್ಲ. ಇವತ್ತು ನನಗೆ ಅಧ್ಯಕ್ಷರು ಆಫೀಶಿಯಲ್ ಆಗಿ ಬರಲು ಹೇಳಿದ್ದರು. ಹೋಗಿದ್ದೆ. ಆ ಸಾರಾ ಗೋವಿಂದು ಮೇಲೆ ಡಿಆರ್ ಹತ್ತಿರ ದೂರುಗಳಿದೆ. ಅವರು ಅಧ್ಯಕ್ಷ ಆಗಿದ್ದಾಗ ಹಣ ಅಕ್ರಮದ ಬಗ್ಗೆ, ಕಲ್ಯಾಣ ನಿಧಿಯಲ್ಲಿ ಮಧ್ಯವರ್ತಿಯಾಗಿ ಮಾಡುತ್ತಿರುವುದು ಇದರ ವಿರುದ್ಧ ಎಲ್ಲಾ ದೂರು ನೀಡಿದ್ದೇನೆ. ನನ್ನ ಗೆಳೆಯ ಸತೀಶ್ ನಾವೆಲ್ಲಾ ದೂರು ನೀಡಿದ್ದೇವೆ. ಅದರ ಬಗ್ಗೆ ಈಗ ತನಿಖೆ ನಡೆಯುತ್ತಿದೆ ಎಂದರು.
ಆ ಒಂದು ದ್ವೇಶದಿಂದ ನಾನು ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಗೆ ಬಂದಾಗ ಗಲಾಟೆ ಮಾಡುತ್ತಿರುತ್ತಾನೆ. ಇವತ್ತು ನನ್ನ ಮೇಲೆ ದಾಳಿ ಮಾಡಿದ. ನಮ್ಮ ಸದಸ್ಯರೇ ಅವರೆಲ್ಲಾ ಅವನ ಕಡೆಯವರು. ಹೊರಗಡೆ ಒಂದಿಬ್ಬರು ಕೂಡ ಬಂದಿದ್ದರು. ಕನ್ನಡದ ಪರ ಅವನ ಗ್ಯಾಂಗ್. ಅದರಲ್ಲಿ ಒಬ್ಬ ನನಗೆ ಈ ರೀತಿ ಕಪ್ಪು ಬಣ್ಣದ ಸ್ಪ್ರೇ ಹಾಕಿದ್ದಾನೆ. ನಾನು ಬಲವಾಗಿ ಹಿಡಿದಕ್ಕೆ ಸ್ವಲ್ಪ ಕಮ್ಮಿ ಆಯಿತು. ಆದರೂ ಕಣ್ಣಿಗೆ ಹಾಗೂ ಮುಖಕ್ಕೆ ಹಾಕಿದ್ದಾನೆ. ಈ ರೀತಿ ದೊಡ್ಡ ಗೂಂಡಾಗಿರಿ ಮಾಡಿಕೊಂಡು ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯನ್ನು ತನ್ನ ಸ್ವಂತ ಆಸ್ತಿ ತರ ಮಾಡಿಕೊಳ್ಳುತ್ತಿದ್ದಾರೆ ಅವರು ಎಂದು ಆರೋಪಿಸಿದರು.












Click it and Unblock the Notifications