Viral: ಯಶ್ 2026ಕ್ಕೆ ಉತ್ತುಂಗಕ್ಕೇರ್ತಾರೆ, ಟಾಕ್ಸಿಕ್ ಲಾಸ್, 2036 ರಿಂದ ಸಂಕಷ್ಟ?: ಜ್ಯೋತಿಷಿ ಭವಿಷ್ಯವಾಣಿ...Yash
ಕನ್ನಡವನ್ನು ಬೇರೆ ಲೆವೆಲ್‌ಗೆ ಕೊಂಡೊಯ್ದ ರಾಕಿಂಗ್ ಸ್ಟಾರ್ ಯಶ್ ಅವರು ಇಂದು ಪ್ಯಾನ್ ಇಂಡಿಯಾ ಸ್ಟಾರ್ ಆಗಿ ಬೆಳದವರು. ಅವರನ್ನು ಗೌರವಿಸುವವರ ಸಂಖ್ಯೆ, ಫ್ಯಾನ್ ಫಾಲೋಯಿಂಗ್ ಸಹ ದಿನೇ ದಿನೇ ಹೆಚ್ಚಾಗುತ್ತಲೇ ಇದೆ. ಇದೀಗ ಅವರ ಅಭಿಮಾನಿಗಳಿಗೆ ಯಶ್ ಭವಿಷ್ಯ ಕುರಿತು ಜ್ಯೋತಿಷಿಯೊಬ್ಬರು ನೀಡಿದ ಮುನ್ಸೂಚನೆ ಶಾಕ್ ನೀಡಿದೆ. ಕರಾರುವಕ್ಕಾಗಿ ವರ್ಷಗಳನ್ನು ಉಲ್ಲೇಖಿಸಿ ಯಶ್ ಜೀವನ ಮುಂದೆ ಹೇಗಿರುತ್ತದೆ. ವೃತ್ತಿಜೀವನದ ತಿರುವು, ಸಂಕಷ್ಟ, ಸಿನಿಮಾ ನಷ್ಟ ಸೇರಿದಂತೆ ಅನೇಕ ವಿಷಯಗಳನ್ನು ಇವರು ಊಹಿಸಿದ್ದಾರೆ.
ಇಂತಹ ಜ್ಯೋತಿಷ್ಯ, ಅದೃಷ್ಟ ನಂಬದೇ ಕೇವಲ ಕೆಲಸ, ಪರಿಶ್ರಮ, ಗುರಿ ನಂಬಿಕೊಂಡು ಬಂದಿದ್ದರಿಂದಲೇ ನಟ ಯಶ್ ಅವರು ಈ ಮಟ್ಟಿಗೆ ಬೆಳೆದಿದ್ದಾರೆ ಎಂಬುದು ಗೊತ್ತಿದೆ. ಪ್ರತಿಯೊಂದು ಸಂದರ್ಭವನ್ನು ತುಂಬಾ ಮೆಚುರ್ ಆಗಿ ನಿರ್ವಹಿಸುವ ಯಶ್ ಅವರ ದೂರದೃಷ್ಟಿ, ಭಾರತೀಯ ಚಿತ್ರರಂಗಕ್ಕೆ, ಅದರಲ್ಲೂ ಕನ್ನಡಕ್ಕೆ ಕೊಡುಗೆ ನೀಡಬೇಕು, ಅಭಿಮಾನಿಗಳಿಗೆ ಹೊಸತನವನ್ನು ಉಣಬಡಿಸಬೇಕು ಎಂಬೆಲ್ಲ ಮಹತ್ತರ ಆಸೆ ಹೊಂದಿರುವ ನಟ ಯಶ್ ಕೆಜಿಎಫ್ ಸಿನಿಮಾಗಳ ಬಳಿಕ ಯೂಥ್ ಐಕಾನ್ ಆಗಿದ್ದಾರೆ.

ಯಶ್ ಅವರ 'ಟಾಕ್ಸಿಕ್' ಸಿನಿಮಾ ಮುಂದಿನ ವರ್ಷ ಬಿಡುಗಡೆ ಆಗಲಿದೆ. ಅವರ 'ರಾಮಾಯಣ' ಸಿನಿಮಾದ ಮೇಲೂ ಸಾಕಷ್ಟು ನಿರೀಕ್ಷೆಗಳು ಸೃಷ್ಟಿಯಾಗಿವೆ. ಹೀಗಿರುವ ನಟ ಯಶ್ ಅವರ ಸಿನಿಮಾ ಬಾಕ್ಸ್ ಆಫೀಸ್ ನಷ್ಟ ಅನುಭವಿಸುತ್ತದೆ. ಅವರು ಇನ್ನಷ್ಟು ಉತ್ತುಂಗಕ್ಕೆ ಏರಿದ ನಂತರ ಮತ್ತೆ ಕೆಳಗೆ ಇಳಿಯುತ್ತಾರೆ. ತೊಂದರೆ ಎದುರಿಸಬೇಕಾಗುತ್ತದೆ ಎಂದು 'ಪ್ರಶಾಂತ್ ಕಿನಿ' ಜ್ಯೋತಿಷ್ಯರೊಬ್ಬರು ಹೇಳಿದ್ದಾರೆ. ಈ ಕುರಿತು ಜ್ಯೋತಿಷಿ ಪೋಸ್ಟ್ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ. ಬಹುತೇಕರು ನೀನೊಬ್ಬ ನಕಲಿ ಬಾಬಾ ಎಂದು ತಿರುಗೇಟು ಕೊಟ್ಟಿದ್ದಾರೆ. ಜ್ಯೋತಿಷ್ಯ ಭವಿಷ್ಯ ನಂಬದವರು ತರಾಟೆಗೆ ತೆಗೆದುಕೊಂಡಿದ್ದಾರೆ. ಅದರಲ್ಲಿ ಒಬ್ಬ ಅಭಿಮಾನಿಯೊಬ್ಬರು ಯಶ್ ಬಗ್ಗೆ ಈ ಮೊದಲು ನುಡಿದಿದ್ದ ಭವಿಷ್ಯದ ಸ್ಕ್ರೀನ್ ಶಾಟ್ ಹಂಚಿಕೊಂಡು ಜ್ಯೋತಿಷಿಗೆ ಟಾಂಗ್ ಕೊಟ್ಟಿದ್ದಾರೆ. ಈ ಭವಿಷ್ಯವಾಣಿ ನಂಬುವುದು, ಬಿಡುವುದು ನಿಮಗೆ ಬಿಟ್ಟದ್ದು.
ಸದ್ಯ ಜ್ಯೂತಿಷಿ ಪ್ರಕಾರ ಯಶ್ ಅವರ ಭವಿಷ್ಯವಾಣಿ ನೋಡಿವುದಾದರೆ, '' ಕನ್ನಡ ಚಲನಚಿತ್ರ ನಟ ಯಶ್ 2026 ರಲ್ಲಿ ತಮ್ಮ ವೃತ್ತಿಜೀವನದ ಉತ್ತುಂಗವನ್ನು ತಲುಪುತ್ತಾರೆ....2027 ರ ನಂತರ ಅವರು 2016 ರಿಂದ 2026 ರ ನಡುವೆ ಪಡೆದ ಯಶಸ್ಸಿನ ಮಟ್ಟವನ್ನು ಮರಳಿ ಪಡೆಯುವುದಿಲ್ಲ....'' ಎಂದು ಊಹಿಸಿದ್ದಾರೆ. ಅಷ್ಟೇ ಅಲ್ಲದೇ 2036 ರಿಂದ 2043 ರ ನಂತರ ಅವರು ತೊಂದರೆಗೀಡಾದ ವ್ಯಕ್ತಿಯಾಗುತ್ತಾರೆ....''ಎಂದಿದ್ದಾರೆ. ಇದು ಯಶ್ ಕೆಲ ಅಭಿಮಾನಿಗಳನ್ನು ಚಿಂತಿಗೀಡು ಮಾಡಿದೆ.

''ಯಶ್ ಅವರ ಮುಂಬರುವ ಚಿತ್ರ ಟಾಕ್ಸಿಕ್ ಅಧಿಕ ಬಜೆಟ್ ಚಿತ್ರವಾಗಿದೆ. ಬಾಕ್ಸ್ ಆಫೀಸ್ ಯಶಸ್ಸಿನ ಹೊರತಾಗಿಯೂ ವಿತರಕರಿಗೆ ನಷ್ಟವನ್ನುಂಟು ಮಾಡುತ್ತದೆ....!!!!'' ಎಂದು ಜ್ಯೋತಿಷಿ ತಮ್ಮ ಪೋಸ್ಟ್‌ನಲ್ಲಿ ಬರೆದುಕೊಂಡಿದ್ದಾರೆ.
ಮೊದಲು ಎಕ್ಸ್‌ಲೆಂಟ್ ಅಂದು ಈಗ ಉಲ್ಟಾ..!
ಇದಕ್ಕೆ ಪ್ರತಿಯಾಗಿ ಫ್ಯಾನ್ ಒಬ್ಬರು ಈ ಮೊದಲು 'ಯಶ್ ಸೂಪರ್ ಸ್ಟಾರ್ ಆಗುತ್ತಾರೆ' ಎಂದೆಲ್ಲ ಹೇಳಿದ್ದ ಇದೇ ಪ್ರಶಾಂತ್ ಜ್ಯೀತಿಷಿಯ ಭವಿಷ್ಯವಾಣಿಯ ಪೋಸ್ಟ್ ನ ಪೋಟೋ ಕಾಮೆಂಟ್ ಮಾಡಿದ್ದಾರೆ. ಅದರಲ್ಲಿ ''ಸ್ಯಾಂಡಲ್‌ವುಡ್ ಬಗ್ಗೆ ನನ್ನ ಭವಿಷ್ಯ, ಸೂಪರ್‌ಸ್ಟಾರ್ ಯಶ್ ಅವರು ಮುಂಬರುವ ಸಮಯದಲ್ಲಿ ಅಂದರೆ 12/2024 ರಿಂದ 12/2025 ಮತ್ತು 5/2027 ರಿಂದ 11/2028 ಅವರಿಗೆ ಉತ್ತಮ ಸಮಯ ವಾಗಿದೆ. 2030 ರಿಂದ 2033 ರತನಕ ಯಶ್ ಅವರಿಗೆ ಅತ್ಯುತ್ತಮ ಅವಧಿಯಾಗಿದೆ. ಅವರು ಸೂಪರ್ ಸ್ಟಾರ್ ಆಗಿ ಬೆಳೆಯುತ್ತಾರೆ. 2033 ರಿಂದ 2035 ವರೆಗೆ ಯಶ್ ಸಮಯ ಎಕ್ಸ್‌ಲೆಂಟ್ ಆಗಿರಲಿದೆ'' ಎಂದು ಇದೇ ಜ್ಯೋತಿಷಿ ಭವಿಷ್ಯ ನುಡಿದಿದ್ದರು.
ಮೊದಲು ಹೀಗೆ ಹೇಳಿದ್ದ ವ್ಯಕ್ತಿ ಇದೀಗ ಸಂಕಷ್ಟ, ಯಶ್ ಸಿನಿಮಾ ನಷ್ಟವೆಂದು ಹೇಳಿದ್ದಕ್ಕೆ ನೆಟ್ಟಿಗರು ಆಕ್ರೋಶ ಹೊರ ಹಾಕಿದ್ದಾರೆ. ನಕಲಿ ಬಾಬಾ, ಇದೆಲ್ಲ ಸುಳ್ಳು ಅಂತಲೂ ಭವಿಷ್ಯ ತಿರಸ್ಕರಿಸಿದ್ದಾರೆ.
ಹೆಸರು ದುರ್ಬಳಕೆ ಟ್ರೆಂಡ್: ಯಶ್ ಫ್ಯಾನ್ಸ್ ಮನವಿ ಏನು?
ಭವಿಷ್ಯವಾಣಿ ನಂಬುವುದು, ಬಿಡುವುದು ಅವರವರ ವೈಯಕ್ತಿಗೆ ಬಿಟ್ಟ ವಿಚಾರ. ಯಶ್ ಅವರು ಈ ಮೊದಲು ಕೆಲವು ಕೆಲಸಗಳನ್ನು ಹೇಳಿ ಮಾಡುತ್ತಿದ್ದರು. ಇದೀಗ ಅವರು ಮಾಡಿ ತೋರಿಸಿ ಆಮೇಲೆ ಮಾತನಾಡುತ್ತಾರೆ. ಅದಕ್ಕೆ ಅವರ ನಡೆದು ಬಂದ ಯಶಸ್ಸಿನ ಹಾದಿಯೇ ಸಾಕ್ಷಿ. ಮನುಷ್ಯ ಯಶಸ್ಸು ಕಂಡ ಮೇಲೆ ಅವರನ್ನು ನಾನು ಬೆಳೆಸಿದ್ದು, ನಾನು ಮೊದಲೇ ಹೇಳಿದ್ದೆ, ನನ್ನ ಜ್ಯೋತಿಷ್ಯ ನಿಜವಾದೆ ಎಂದು ಆಮೇಲೆ ಬಂದು ಹೇಳುವುದು. ಹೆಸರು ಮಾಡಿದವರ ಹೆಸರನ್ನು ಪ್ರಚಾರಕ್ಕೆ ಬಳಸಿಕೊಂಡು ಬೇಳೆ ಬೇಸಿಕೊಳ್ಳುವುದು ಸದ್ಯ ಟ್ರೆಂಡ್ ಆಗಿಬಿಟ್ಟಿದೆ. ಅದೇನೆ ಇರಲಿ. ಕನ್ನಡಕ್ಕೆ, ಕನ್ನಡ ಚಿತ್ರರಂಗಕ್ಕೆ, ಭಾರತೀಯ ಸಿನಿಮಾ ರಂಗವನ್ನು ಉನ್ನತ ಸ್ಥಾನಕ್ಕೆ ಕೊಂಡೊಯ್ಯಲು ನಿರಂತರ ಶ್ರಮಿಸುತ್ತಿರುವ ನಟ ಯಶ್ ಅವರನ್ನು ಬೆಂಬಲಿಸಬೇಕು. ಇಂಥವುಗಳಿಗೆಲ್ಲ ಕಿವಿ ಕೊಡಬೇಡಿ ಎಂದು ಫ್ಯಾನ್ಸ್ ಮನವಿ ಮಾಡಿದ್ದಾರೆ.












Click it and Unblock the Notifications