ದರ್ಶನ್ ಜೈಲಿಗೆ ಹೋದ್ಮೇಲೆ ಸುದೀಪ್ ಜಾಸ್ತಿ ನಿಗರಾಡ್ತಾವ್ರೆ: ಆರ್ಯವರ್ಧನ್ ಗುರೂಜಿ
ಬಿಗ್‌ಬಾಸ್ ಮಾಜಿ ಸ್ಪರ್ಧಿ, ಸಂಖ್ಯಾಶಾಸ್ತ್ರಜ್ಞ-ಜ್ಯೋತಿಷಿ ಆರ್ಯವರ್ಧನ್ ಗುರೂಜಿ ಅವರು ನಟ ಕಿಚ್ಚ ಸುದೀಪ್ ಅವರ ಆಡಿರುವ ಮಾತುಗಳು ವಿವಾದಕ್ಕೆ ಕಾರಣವಾಗಿದೆ. ನಾನು ಅಂದರೆ ನಂಬರ್, ನಂಬರ್ ಅಂದರೆ ನಾನು ಎಂದು ತಮ್ಮ ಮಾತಿನ ಶೈಲಿಯಿಂದಲೇ ಜನಪ್ರಿಯತೆ ಪಡೆದಿರುವ ಆರ್ಯವರ್ಧನ್ ಅವರು ಇತ್ತೀಚೆಗೆ ಖಾಸಗಿ ವಾಹಿನಿಯ ಸಂದರ್ಶನದಲ್ಲಿ ಮಾತನಾಡುವಾಗ ಎಡವಟ್ಟು ಮಾಡಿಕೊಂಡಿದ್ದಾರೆ. "ದರ್ಶನ್ ಜೈಲಿಗೆ ಹೋದ್ಮೇಲೆ ಸುದೀಪ್ ನಿಗರಾಡ್ತಾವ್ರೆ" ಎಂದು ಆರ್ಯವರ್ಧನ್ ಹೇಳಿರುವುದು ಅಭಿಮಾನಿಗಳನ್ನು ಕೆರಳಿಸಿದೆ. ಈ ವಿಡಿಯೋ ವೈರಲ್ ಆಗಿದೆ.
"ಅಶ್ವವೇಗ" ಸುದ್ದಿವಾಹಿನಿ ಸಂದರ್ಶನದಲ್ಲಿ ಆರ್ಯವರ್ಧನ್ ಆಡಿರುವ ಮಾತು ಸುದೀಪ್ ಅಭಿಮಾನಿಗಳ ಆಕ್ರೋಶಕ್ಕೆ ಕಾರಣವಾಗಿದೆ. "ದರ್ಶನ್ ಜೈಲಿಗೆ ಹೋದ್ಮೇಲೆ ಸುದೀಪ್ ನಿಗರಾಡ್ತಾವ್ರೆ, ಮೊನ್ನೆ ಪ್ಯಾಂಟ್ ಬಿಚ್ಚಿ ತೋರಿಸಾ ಅಂತಾವ್ರೆ" ಎಂದಿರುವ ವಿಡಿಯೋ ಸೋಷಿಯಲ್ ಮೀಡಿಯಾ ವೈರಲ್ ಆಗಿದೆ.

ಮಕರ ರಾಶಿ ಕುರಿತು ಮಾತನಾಡುವ ಸಂದರ್ಭದಲ್ಲಿ ಆರ್ಯವರ್ಧನ್ ಗುರೂಜಿ ಅವರು ಸುದೀಪ್ ಹಾಗೂ ದರ್ಶನ್ ಅವರ ವಿಷಯ ಉಲ್ಲೇಖಿಸಿದ್ದಾರೆ. ಈಗ ನೋಡಿದ್ರೆ ದರ್ಶನ್ ಜೈಲಿಗೆ ಹೋದ್ಮೇಲೆ ಸುದೀಪ್ ನಿಗರಾಡ್ತಾವ್ರೆ, ಇತ್ತೀಚೆಗೆ ಪ್ಯಾಂಟ್ ಬಿಚ್ಚಿ ತೋರಿಸ್ಲಾ ಅಂತಾರೆ, ಇದನ್ನ ಮಾಧ್ಯಮಗಳಲ್ಲಿ ನಾನೇ ನೋಡಿದ್ದೀನಿ ಎಂದು ಆರ್ಯವರ್ಧನ್ ನಗುತ್ತಾ ಹೇಳಿದ್ದಾರೆ. ಇದು ಸುದೀಪ್ ಅಭಿಮಾನಿಗಳ ಕೆಂಗಣ್ಣಿಗೆ ಗುರಿಯಾಗಿದೆ. ಆರ್ಯವರ್ಧನ್ ವಿಡಿಯೋ ಹಂಚಿಕೊಂಡು ಎಚ್ಚರಿಕೆಯೂ ನೀಡಿದ್ದಾರೆ.
ಕ್ಷಮೆ ಕೇಳಿದ ಆರ್ಯವರ್ಧನ್
ವಿಡಿಯೋ ವೈರಲ್ ಆಗಿ ವಿವಾದ ಭುಗಿಲೆದ್ದ ಹಿನ್ನೆಲೆ ಆರ್ಯವರ್ಧನ್ ಗುರೂಜಿ ಮತ್ತೊಂದು ವಿಡಿಯೋ ಹಂಚಿಕೊಂಡು ಕ್ಷಮೆಯಾಚಿಸಿದ್ದಾರೆ. 'ಸುದೀಪ್ ಅವರಿಗೆ ನಮಸ್ಕಾರ, ನಾನು ಅವರ ಜೊತೆ ಕೆಲಸ ಮಾಡಿದ್ದೇನೆ. ಹೊಸ ವರ್ಷ ಅವರಿಗೆ ಹಾಗೂ ಅಭಿಮಾನಿಗಳಿಗೆ ಒಳ್ಳೆದು ಮಾಡಲಿ ಎಂದಿದ್ದಾರೆ. ನಾನು ಮಾತನಾಡುವ ಭರದಲ್ಲಿ ಏನೋ ಹೇಳಿದ್ದೇನೆ. ನನ್ನ ಮಾತಿಂದ ನೋವಾಗಿದ್ರೆ ಅವರಿಗೆ ಹಾಗೂ ಅಭಿಮಾನಿಗಳಿಗೆ ಕ್ಷಮೆಯಾಚಿಸುತ್ತೇನೆ. ಸುದೀಪ್ ಅವರ ಮೇಲೆ ಅಪಾರ ನಂಬಿಕೆ ಇದೆ. ದೇವರು ನಿಮ್ಮನ್ನು ಹಾಗೂ ನಿಮ್ಮ ಕುಟುಂಬವನ್ನು ಚೆನ್ನಾಗಿ ಇಡಲಿ, ಅವರ ಅಭಿಮಾನಿಗಳಿಗೂ ಒಳ್ಳೆಯದಾಗಲಿ, ಸಾರಿ..ಸಾರಿ..ಸಾರಿ' ಎಂದು ವಿಡಿಯೋದಲ್ಲಿ ಕ್ಷಮೆ ಕೇಳಿದ್ದಾರೆ.
Viji ಅತ್ತಿಗೆ ಇದೆ ಹೇಳಿದ್ದು but Decent Language ali
— Sandy💙 (@_DB0SS) January 2, 2026
But This 👇👇🤣😂😂🙏
ಗುರೂಜಿ Brutal for @KicchaSudeep 🤣😂#DBoss #TheDevil #DBossForever #MarkTheFilm #MARK #BBK12 #BBKSeason12 #bigbosskannada #devilthehero pic.twitter.com/EEh6WmYl3r
ಬಿಗ್‌ಬಾಸ್‌ನಲ್ಲೂ ಆರ್ಯವರ್ಧನ್ ಕಿರಿಕ್
ಕಿಚ್ಚ ಸುದೀಪ್ ನಡೆಸಿಕೊಡುವ ಬಿಗ್‌ಬಾಸ್ ಕಾರ್ಯಕ್ರಮದಲ್ಲಿ ಈ ಹಿಂದೆ ಆರ್ಯವರ್ಧನ್ ಅವರು ಸ್ಪರ್ಧಿಯಾಗಿದ್ದರು. ಬಿಗ್‌ಬಾಸ್‌ನಲ್ಲಿ ಮ್ಯಾಚ್ ಫಿಕ್ಸಿಂಗ್ ಅಂತೆಲ್ಲ ಆರೋಪ ಮಾಡಿದ್ದರು. ಇದರಿಂದ ಕೋಪಗೊಂಡಿದ್ದ ಕಿಚ್ಚ ಸುದೀಪ್ ಖಾರವಾಗಿ ಎಚ್ಚರಿಕೆ ನೀಡಿದ್ದರು. ಆಗಲೂ ನನ್ನನ್ನ ಕ್ಷಮಿಸಿ, ಜ್ಯೋತಿಷ್ಯ ಬಿಟ್ಟು ನಾನು ಬೇರೇನೂ ಮಾತನಾಡುವುದಿಲ್ಲ. ಟಾಸ್ಕ್ ಬಗ್ಗೆ ಅಷ್ಟು ಮಾತನಾಡಬಾರದಿತ್ತು. ನಾನು ಯಾವಾಗಲೂ ಯಾಮಾರುತ್ತೇನೆ. ನಾನು ಮಾತನಾಡುವಾಗ ತುಂಬಾ ಹೆದರುವೆ, ಹೀಗಾಗಿ ರಪ್ ಅಂತ ಬಾಯಿಗೆ ಬರುತ್ತೆ. ನನ್ನಿಂದ ನಿಮಗೆ ನೋವಾಗಿದ್ದರೆ ಕ್ಷಮಿಸಿ ಎಂದಿದ್ದರು.












Click it and Unblock the Notifications