ಅಣ್ಣಯ್ಯ ಸೀರಿಯಲ್‌ನ ಪಿಂಕಿ ಜೀಮ್ ಸೀನ ಪ್ರೀತಿ ಇಡೀ ಊರ ತುಂಬಾ : ಶಿವಣ್ಣನಿಗೆ ವಿಷ್ಯ ಗೊತ್ತಾದ್ರೆ ರಶ್ಮಿ ಗಂಡನನ್ನು ಕಾಪಾಡೋರಾರು?
'ಅಣ್ಣಯ್ಯ' ಧಾರಾವಾಹಿಯಲ್ಲಿ ಪಿಂಕಿ ಮತ್ತು ಸೀನ ನಡುವೆ ನಡೆಯುವ ಪ್ರೇಮದ ಗುಟ್ಟು ಇಡೀ ಊರಿಗೇ ತಿಳಿಯುವಷ್ಟು ಬಹಿರಂಗವಾಗಿದೆ. ಇವರಿಬ್ಬರ ನಡುವೆ ನಡಿದ ಪ್ರೀತಿಯ ವಿಚಾರ ಈಗಾಗಲೇ ಎಲ್ಲರ ಗಮನ ಸೆಳೆದಿದ್ದು, ಇತರ ಪಾತ್ರಗಳ ನಡುವೆ ಗೊಂದಲ ಮತ್ತು ಕುತೂಹಲಕ್ಕೆ ಕಾರಣವಾಗಿದೆ. ಪಿಂಕಿ ಮತ್ತು ಸೀನ್Romeo-Juliet ಶೈಲಿಯ ಪ್ರೇಮ ಕಥೆ ಈಗ ಊರಿನ ಕುತೂಹಲದ ಕೇಂದ್ರಬಿಂದುವಾಗಿದೆ.
ಅಣ್ಣಯ್ಯ ಧಾರಾವಾಹಿಯ ಕಥೆಯ ನಾಯಕ ಶಿವಣ್ಣ, ತನ್ನ ನಾಲ್ಕು ತಂಗಿಯರಿಗೂ ಸುಖ ಸುಮಧುರ ಜೀವನ ಕಾಣಬೇಕೆಂಬ ಆಕಾಂಕ್ಷೆಯೊಂದಿಗೆ ಬದುಕುತ್ತಾನೆ. ಆರಂಭದಲ್ಲಿ ಅವನು ತಮ್ಮಮಕ್ಕಳನ್ನು ಸರಿಯಾದ ಮನೆಗಳಿಗೆ ವಿವಾಹ ಮಾಡಬೇಕು ಎಂಬ ಕನಸು ಹೊಂದಿದ್ದಾನೆ. ರಶ್ಮಿ ಮದುವೆಯಾದ ಜೀಮ್ ಸೀನ ಬಗ್ಗೆ ಶಿವಣ್ಣ ಹಾಗೂ ಪಾರು ಬಹಳ ಗೌರವ ಇದೆ. ಆದರೆ, ಜೀಮ್ ಸೀನಗೆ ಹಳೆಯ ಪ್ರೀತಿ ವಿಚಾರ ಮಾತ್ರ ಇನ್ನೂ ಯಾರಿಗೂ ಗೊತ್ತಿಲ್ಲ. ಒಂದು ವೇಳೆ ಶಿವಣ್ಣನಿಗೆ ಗೊತ್ತಾದ್ರೆ ಜೀಮ್ ಸೀನ ಕಥೆ ಏನು ಎನ್ನುವ ಪ್ರಶ್ನೆಗೆ ವೀಕ್ಷಕರ ಆತಂಕಕ್ಕೆ ಕಾರಣವಾಗಿದೆ.

'ಅಣ್ಣಯ್ಯ' ಧಾರಾವಾಹಿಯಲ್ಲಿ ರಶ್ಮಿ ಮದುವೆಯಾದ ಮೇಲೆ ಜೀಮ್ ಸೀನ, ಪಿಂಕಿಯಿಂದ ತಪ್ಪಿಸಿಕೊಂಡು ಓಡಾಡುತ್ತಿದ್ದಾನೆ. ಈಗಾಗಲೇ ನನ್ನ ಮದುವೆ ಆಗು ರಶ್ಮಿಯನ್ನ ಬಿಟ್ಟು ಬಿಡು ಎಂದು ಜಿಮ್ ಸೀನನಿಗೆ ಪಿಂಕಿ ವಾರ್ನಿಂಗ್ ಕೊಟ್ಟಿದ್ದಾಳೆ. ಪಿಂಕಿ ವಾರ್ನಿಂಗ್ ನಿಂದಾಗಿ ಜೀಮ್ ಸೀನ ಈಗ ಧರ್ಮ ಸಂಕಟಕ್ಕೆ ಸಿಲುಕಿದ್ದಾನೆ. ಜಿಮ್ ಸೀನನನ್ನು ಮದುವೆ ಆಗಲೇಬೇಕು ಅಂತ ಪಿಂಕಿ ಪಣ ತೊಟ್ಟಿದ್ದಾಳೆ. ಜಿಮ್ ಸೀನನನ್ನು ಕಂಡರೆ ಪಿಂಕಿಗೆ ನಿಜಕ್ಕೂ ಪ್ರೀತಿಯೇ ಇಲ್ಲ. ಆದರೂ ಅವಳು ಹಠಕ್ಕೆ ಬಿದ್ದು, ಅವನನ್ನು ಮದುವೆ ಆಗೋ ಪ್ಲ್ಯಾನ್ ಮಾಡುತ್ತಿದ್ದಾಳೆ.
ಈ ಹಿಂದೆ ಅನಿರೀಕ್ಷಿತವಾಗಿ ಜಿಮ್ ಸೀನ ಹಾಗೂ ಶಿವಣ್ಣ ತಂಗಿ ರಶ್ಮಿಗೂ ಮದುವೆ ನಡೆದೋಯ್ತು. ಸೀನ ಎಷ್ಟೇ ಬೇಡ ಎಂದರೂ ತಂದೆ ಮಾದಪ್ಪಣ್ಣನ ಒತ್ತಾಯದ ಮೇಲೆ ರಶ್ಮಿ ಜೊತೆಗೆ ಮದುವೆ ಮಾಡಿಸಿದ್ದಾರೆ. ತನ್ನ ಮನೆಯ ಮರ್ಯಾದೆ ಉಳಿಸಿಕೊಳ್ಳಲು ರಶ್ಮಿ ಕೂಡ ಈ ಮದುವೆ ನನಗೆ ಇಷ್ಟ ಎಂದು ಸುಳ್ಳು ಹೇಳಿದ್ದಳು. ಹಸೆಮಣೆ ಮೇಲೆ ಕೂತ ನನ್ನ ತಂಗಿ ಮದುವೆ ಆಗದೆ ಹಾಗೆ ಎದ್ದರೆ ಅವಳನ್ನು ಯಾರೂ ಮದುವೆ ಆಗೋದಿಲ್ಲ ಎಂದು ಶಿವು ಭಯಪಟ್ಟಿದ್ದನು. ಈ ವೇಳೆ ಮಾದಪ್ಪಣ್ಣ ಜೀಮ್ ಸೀನ ಜೊತೆಗೆ ಮದುವೆ ಮಾಡಿಸಿದ್ದಾನೆ. ಮದುವೆ ಏನೋ ಆಯ್ತು, ಆದ್ರೆ ಜೀಮ್ ಸೀನ ಗೆ ಪಿಂಕಿ ಕಾಟ ತಪ್ಪಿಲ್ಲ ನನ್ನ ಮದುವೆ ಆಗು ಎಂದು ಹಠಕ್ಕೆ ಬಿದ್ದಿದ್ದಾಳೆ.
ಜಿಮ್ ಸೀನ ಹಾಗೂ ರಶ್ಮಿ ಮದುವೆ ಆಯ್ತು ಅಂತ ಪಿಂಕಿ ಸಿಟ್ಟಿಗೆದ್ದಿದ್ದಾಳೆ.ಇತ್ತ ಶಿವಣ್ಣ ನನ್ನ ಬಾಮೈದ ಸೀನನಿಂದ ದೂರ ಇರು ಅಂತ ವಾರ್ನ್ ಮಾಡಿದರೂ ಕೂಡ ಲೀಲಾ ಮಾತ್ರ ನೀನೆ ನಮ್ಮ ಮನೆ ಸೊಸೆ ಆಗಬೇಕು ಅಂತ ಚಾಡಿ ಹೇಳಿಕೊಟ್ಟಿದ್ದಾಳೆ. ಜೀಮ್ ಸೀನ ಭೇಟಿ ಮಾಡಿದಾಗ ಬಾಯಿಗೆ ಬಂದಹಾಗೆ ಬೈದಿರೋ ಪಿಂಕಿ ಸಿಕ್ಕಾಪಟ್ಟೆ ಅವಮಾನ ಮಾಡಿದ್ದಾಳೆ. ನಿನ್ನ ಮುಖ ನೋಡಿದ್ಯಾ? ನಿನ್ನ ಮುಖಕ್ಕೆ ನಾನು ಸಿಕ್ಕಿರೋದು ಹೆಚ್ಚು. ನಿನ್ನ ಯೋಗ್ಯತೆ ಏನು ಅಂತ ಗೊತ್ತಾ? ಅಂತೆಲ್ಲ ಸೀನನಿಗೆ ಪಿಂಕಿ ಬಾಯಿಗೆ ಬಂದಹಾಗೆ ಬೈದಿದ್ದಳು. ಒಂದು ಕಡೆ ರಶ್ಮಿ ನನ್ನನ್ನು ಆರಾಧಿಸುತ್ತಾಳೆ, ಗೌರವಿಸ್ತಾಳೆ, ಇನ್ನೊಂದು ಕಡೆ ಪಿಂಕಿ ಅವಮಾನ ಮಾಡ್ತಾಳೆ ಎನ್ನೋದು ಸೀನನಿಗೆ ಅರ್ಥ ಆಗಿದೆ.
ಇತ್ತ ಜಿಮ್ ಸೀನ ಹಾಗೂ ಪಿಂಕಿ ಲವ್ ಸ್ಟೋರಿ ಏನಾದರೂ ರಶ್ಮಿಗೋ ಅಥವಾ ಶಿವು, ಪಾರುಗೆ ಗೊತ್ತಾದರೆ ಮಾತ್ರ ದೊಡ್ಡ ಯುದ್ಧವೇ ನಡೆಯುತ್ತದೆ. ಈಗಾಗಲೇ ಊರ ತುಂಬಾ ಯಾರಿಗೂ ಗೊತ್ತಾಗದ ಕೋಡ್ ಬಳಸಿ ಸೀನಾ ಪಿಂಕಿ ಎಂದು ಬರೆದಿರುವುದು ಜೀಮ್ ಸೀನಗೆ ಇನ್ನಷ್ಟು ಭಯಕ್ಕೆ ಕಾರಣವಾಗಿದೆ. ಈಗಾಗಲೇ ರಶ್ಮಿಯನ್ನು ಮದುವೆ ಆಗಿರೋ ಸೀನನಿಗೆ ಪಿಂಕಿಯನ್ನು ಮದುವೆ ಆಗೋದು ಇಷ್ಟ ಇಲ್ಲ. ಪಿಂಕಿಯನ್ನು ತಿರಸ್ಕರಿಸಲಾಗದೆ, ರಶ್ಮಿಯನ್ನು ಬಿಡಲಾಗದೆ ಅವನು ಒದ್ದಾಡುತ್ತಿದ್ದಾನೆ. ಒಂದು ವೇಳೆ ಈ ಎಲ್ಲಾ ಆಟಗಳು ಶಿವಣ್ಣನಿಗೆ ಗೊತ್ತಾದ್ರೆ ಜೀಮ್ ಸೀನ ಕಥೆ ಏನು? ಜೀಮ್ ಸೀನ ನ ಆ ರಶ್ಮಿಯೇ ಕಾಪಾಡಬೇಕು ಎನ್ನುವಂತಾಗಿದೆ.












Click it and Unblock the Notifications