Toxic Movie: ಟಾಕ್ಸಿಕ್ ಚಿತ್ರಕ್ಕೆ ರವಿ ಬಸ್ರೂರ್ ಬದಲಿಗೆ ಇವರ ಹೆಸರು.. ಬಿಡುಗಡೆಗೂ ಮುನ್ನ ಹಿಟ್ ಎಂದಿದ್ದೇಕೆ ಫ್ಯಾನ್ಸ್?
Yash Toxic Movie: ರಾಕಿಂಗ್ ಸ್ಟಾರ್ ಯಶ್ ನಟನೆಯ ಕೆಜಿಎಫ್ ಇಂಟರ್‌ನ್ಯಾಷನಲ್ ಲೆವೆಲ್‌ಗೆ ಸದ್ದು ಮಾಡಿತ್ತು. ಇದೀಗ, ಅವರದ್ದೇ ಟಾಕ್ಸಿಕ್ ಚಿತ್ರದ ಸುದ್ದಿಯೊಂದು ಎಲ್ಲೆಡೆ ಭಾರೀ ಸದ್ದು ಮಾಡುತ್ತಿದೆ. ಹಾಗಾದ್ರೆ ಅದೇನು ಎನ್ನುವ ಸಂಪೂರ್ಣ ಮಾಹಿತಿಯನ್ನು ಇಲ್ಲಿ ನೀಡಲಾಗಿದೆ ತಿಳಿಯಿರಿ.
ಕೆಜಿಎಫ್ ಸಿನಿಮಾಗೆ ಖಡಕ್ ಸಂಗೀತ ಕೊಟ್ಟು ಪ್ಯಾನ್ ಇಂಡಿಯಾ ಮಟ್ಟದಲ್ಲಿ ಗಮನ ಸೆಳೆದಿದ್ದ ರವಿ ಬಸ್ರೂರು ಇದೀಗ ಟಾಕ್ಸಿಕ್ ಚಿತ್ರಕ್ಕೆ ಸಂಗೀತ ಮಾಡುತ್ತಿಲ್ಲ, ಬದಲಿಗೆ ಬೇರೆಯವರಿಗೆ ಅವಕಾಶ ಕೊಟ್ಟಿದ್ದಾರೆ ಎನ್ನುವ ಶಾಕಿಂಗ್ ಸುದ್ದಿಯೊಂದು ಹರಿದಾಡುತ್ತಿದೆ.

ಟಾಕ್ಸಿಕ್ ನಿರ್ಮಾಪಕ ರಾಕಿಂಗ್ ಸ್ಟಾರ್ ಯಶ್ ತಮ್ಮ ಈ ಚಿತ್ರಕ್ಕೆ ತಮಿಳು ಸಂಗೀತ ನಿರ್ದೇಶಕ ಅನಿರುದ್ಧ್ ರವಿಚಂದರ್ ಅವರಿಗೆ ಅವಕಾಶ ಕೊಟ್ಟಿದ್ದಾರೆ ಎನ್ನುವ ಸುದ್ದಿ ಇದೀಗ ಎಲ್ಲಡೆ ವೈರಲ್ ಆಗುತ್ತಿದೆ. ಈಗಾಗಲೇ ಕೆಜಿಎಫ್ ವಿಶ್ವಮಟ್ಟದಲ್ಲಿ ಗಮನ ಸೆಳೆದಿದ್ದು, ಇದೀಗ ಟಾಕ್ಸಿಕ್ ಸಿನಿಮಾವನ್ನು ದೊಡ್ಡ ಮಟ್ಟದಲ್ಲಿ ಮಾಡಲು ಭರ್ಜರಿ ತಯಾರಿ ನಡೆಯುತ್ತಿದೆ.
ಇದೇ ವಿಚಾರವನ್ನು ಗಮನದಲ್ಲಿಟ್ಟುಕೊಂಡೇ ಈ ಚಿತ್ರವನ್ನು ಮಾಡುತ್ತಿದ್ದಾರೆ. ಇಂಗ್ಲಿಷ್ ಹಾಗೂ ಕನ್ನಡ ಎರಡೂ ಭಾಷೆಯಲ್ಲಿಯೇ ಈ ಸಿನಿಮಾ ತಯಾರಾಗುತ್ತಿದೆ. ಇಂಗ್ಲಿಷ್ ವರ್ಶನ್ ಬೇರೆ ಇದ್ದು, ಕನ್ನಡ ವರ್ಶನ್ ಬೇರೆ ಇದೆ. ಆದ್ದರಿಂದ ಇದನ್ನು ದೊಡ್ಡ ಮಟ್ಟದಲ್ಲಿ ಕೊಂಡೊಯ್ಯಲು ಈ ನಿರ್ಧಾರ ತೆಗೆದುಕೊಳ್ಳಲಾಗಿದೆ ಎನ್ನುವ ಮಾತುಗಳು ಕೂಡ ನಡೆಯುತ್ತಿವೆ.
ಈಗಾಗಲೇ ನಿರ್ದೇಶಕ ಗೀತು ಮೋಹನದಾಸ್ ನಿರ್ದೇಶನದ ಈ ಸಿನಿಮಾದ ಮೊದಲ ಟೀಸರ್ ಹಿಟ್ ಆಗಿದ್ದು, ಇದಕ್ಕೆ ರವಿ ಬಸ್ರೂರು ಸಂಗೀತ ಇದೆ ಎನ್ನುವ ಮಾಹಿತಿ ಕೂಡ ಇದೆ. ಆದರೆ, ಈ ನಡುವೆಯೇ ಅವರಲ್ಲ, ಅನಿರುದ್ಧ್ ರವಿಚಂದರ್ ಎನ್ನುವ ಹೊಸ ಸುದ್ದಿ ಹರಿದಾಡುತ್ತಿದೆ.
ಜೈಲರ್ ಸಿನಿಮಾದ ಮೂಲಕ ಉತ್ತಮ ಸಂಗೀತ ಕೊಟ್ಟಿರುವ ಕೀರ್ತಿ ಅನಿರುದ್ಧ್ ರವಿಚಂದರ್ ಅವರದ್ದಾಹಗಿದೆ. ಕಾಲಿವುಡ್ ಸೇರಿದಂತೆ ಟಾಲಿವುಡ್‌ನಲ್ಲೂ ತಮ್ಮ ಸಂಗೀತದ ಮೂಲಕವೇ ಒಳ್ಳೆ ಹೆಸರು ಗಿಟ್ಟಿಸಿಕೊಂಡಿದ್ದಾರೆ. ಇದೀಹ ಯಶ್ ಅಭಿನಯದ ಕನ್ನಡದ ಟಾಕ್ಸಿಕ್ ಸಿನಿಮಾಕ್ಕೂ ಸಂಗೀತ ನೀಡಲಿದ್ದಾರೆ ಎಂಬ ಸುದ್ದಿ ಸಾಮಾಜಿಕ ಜಾಲತಾಣದಲ್ಲಿ ಸಖತ್ ಸೌಂಡ್ ಮಾಡುತ್ತಿದೆ.
ಆದರೆ, ಈ ಬಗ್ಗೆ ಅಧಿಕೃತವಾಗಿ ಯಾವುದೇ ಮಾಹಿತಿ ಹೊರಬಿದ್ದಿಲ್ಲ. ಇನ್ನೂ ಈ ಚಿತ್ರ ನಿರ್ಮಿಸುತ್ತಿರುವ ಕೆವಿಎನ್ ಸಂಸ್ಥೆ ಸಹ ಏನೂ ಹೇಳಿಕೊಂಡಿಲ್ಲ. ಈ ಚಿತ್ರದ ಮತ್ತೊಬ್ಬ ನಿರ್ಮಾಪಕರಾದ ರಾಕಿಂಗ್ ಸ್ಟಾರ್ ಯಶ್ ಸಹ ಈ ಬಗ್ಗೆ ಎಲ್ಲಿಯೂ ಏನು ಹೇಳಿಕೊಂಡಿಲ್ಲ.
ಒಟ್ಟಿನಲ್ಲಿ ಗೀತು ಮೋಹನ್ ದಾಸ್ ನಿರ್ದೇಶನದಲ್ಲಿ ಮೂಡಿಬರುತ್ತಿರುವ ಈ ಟಾಕ್ಸಿಕ್ ಸಿನಿಮಾ 2026ರ ಮಾರ್ಚ್ 19ರಂದು ತೆರೆಗೆ ಅಪ್ಪಳಿಸಲಿದೆ. ಇನ್ನು ಟಾಕ್ಸಿಕ್ ಕೇವಲ ಪಂಚ ಭಾಷೆಯಲ್ಲಿ ಮಾತ್ರ ಬಿಡುಗಡೆ ಆಗುತ್ತಿಲ್ಲ. ಬದಲಿಗೆ ಇಂಗ್ಲೀಷ್‌ನಲ್ಲಯೂ ಬಿಡುಗಡೆ ಆಗಲಿದೆ. ಒಂದೇ ಬಾರಿ ಕನ್ನಡದ ಜೊತೆ ಇಂಗ್ಲೀಷ್‌ನಲ್ಲಿಯೂ ಚಿತ್ರೀಕರಣ ಆಗುತ್ತಿದೆ. ಈಗಾಗಲೇ ಕೆಜಿಎಫ್ ವಿಶ್ವಾದ್ಯಂತ ಸದ್ದು ಮಾಡಿದ್ದು, ಈ ಸಿನಿಮಾವನ್ನು ಅದಕ್ಕೂ ದೊಡ್ಡ ಮಟ್ಟದಲ್ಲಿ ಮಾಡಲು ಈ ನಿರ್ಧಾರ ತೆಗೆದುಕೊಂಡಿದ್ದರೂ ಆಶ್ಚರ್ಯವಿಲ್ಲ ಎನ್ನುವ ಮಾತುಗಳು ಕೇಳಿಬರುತ್ತಿವೆ. ಒಂದು ವೇಳೆ ಅವರನ್ನೇ ಆಯ್ಕೆ ಮಾಡಿದ್ದರೆ, ಈ ಸಿನಿಮಾ ಮಾಸ್ ಹಿಟ್ ಆಗಲಿದೆ ಅಂತಲೂ ಅಭಿಮಾನಿಗಳು ಹೇಳುತ್ತಿದ್ದಾರೆ. ಮತ್ತೊಂದೆಡೆ ಇದಕ್ಕೆ ಅವರೇ ನಿರ್ಮಾಪಕರಾಗಿರುವ ಕಾರಣ ಆಯ್ಕೆ ಕೂಡ ಅವರದ್ದೇ ಆಗಿದೆ ಎಂದು ಹೇಳಲಾಗುತ್ತಿದೆ.












Click it and Unblock the Notifications