BIFFES: ವಾಜ್ದಾ ಸಿನಿಮಾ ನಿರ್ದೇಶಕ ಮಾತ್ರವಲ್ಲ, ಸಂವೇದನಾಶೀಲ ಹೋರಾಟಗಾರಾಗಿದ್ದರು: ಜೋವಾನಾ
ಬೆಂಗಳೂರು: ಪೋಲಿಷ್ ಸಿನಿಮಾರಂಗದ ದಿಗ್ಗಜ ಆಂಡ್ರೆ ವಾಜ್ದಾ (Andrzej Wajda) ಕೇವಲ ಒಬ್ಬ ಶ್ರೇಷ್ಠ ನಿರ್ದೇಶಕರಷ್ಟೇ ಅಲ್ಲ, ಅಗತ್ಯ ಬಂದಾಗ ಧೈರ್ಯವಾಗಿ ಮಾತನಾಡಿದ ಮತ್ತು ಹೋರಾಡಿದ ಹೋರಾಟಗಾರರೂ ಆಗಿದ್ದರು ಎಂದು ಗಡಿನಿಯಾ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವದ ಕಲಾತ್ಮಕ ನಿರ್ದೇಶಕಿ ಜೋವಾನಾ ವಪಿನ್ಸ್ಕಾ ಅಭಿಪ್ರಾಯಪಟ್ಟರು.
17ನೇ ಬೆಂಗಳೂರು ಅಂತಾರಾಷ್ಟ್ರೀಯ ಚಲನಚಿತ್ರೋತ್ಸವದ ಅಂಗವಾಗಿ ಹಮ್ಮಿಕೊಳ್ಳಲಾಗಿದ್ದ "ಪೋಲಿಷ್ ಸಿನಿಮಾ ಮತ್ತು ಆಂಡ್ರೆ ವಾಜ್ದಾ ಅವರ ಪರಂಪರೆ" ಎಂಬ ವಿಶೇಷ ಗೋಷ್ಠಿಯಲ್ಲಿ ಮಾತನಾಡಿದ ಅವರು, ಅಂದಿನ ಕಟ್ಟುನಿಟ್ಟಾದ ಸೆನ್ಸಾರ್ಶಿಪ್ ವಾತಾವರಣದ ನಡುವೆಯೂ ವಾಜ್ದಾ ತಮ್ಮ ಆಲೋಚನೆಗಳನ್ನು ಅತ್ಯಂತ ಚತುರತೆಯಿಂದ ಚಿತ್ರಗಳ ಮೂಲಕ ವ್ಯಕ್ತಪಡಿಸುತ್ತಿದ್ದರು ಎಂದರು. ಬಹಿರಂಗವಾಗಿ ಹೇಳಲಾಗದ ವಿಚಾರಗಳನ್ನು ಸಂಕೇತಗಳ ಮೂಲಕ, ದೃಶ್ಯ ಭಾಷೆಯ ಮೂಲಕ ಪ್ರೇಕ್ಷಕರಿಗೆ ತಲುಪಿಸುವ ಹೊಸ ದಾರಿಯನ್ನು ಅವರು ಕಂಡುಕೊಂಡಿದ್ದರು. ಈ ಕಾರಣದಿಂದಲೇ ವಾಜ್ದಾ ಸಿನಿಮಾ ನಿರ್ಮಾಣ ಮಾತ್ರವಲ್ಲ, ಸಂವೇದನಾಶೀಲ ಹೋರಾಟಗಾರರಾಗಿದ್ದರು ಎಂದು ವಿವರಿಸಿದರು.

ವಾಜ್ದಾ ಪೋಲಿಷ್ ಚಿತ್ರರಂಗದಲ್ಲಿ ಸಂಪೂರ್ಣ ಹೊಸ ಅಧ್ಯಾಯವನ್ನೇ ತೆರೆದವರು ಎಂದು ಹೇಳಿದ ಜೋವಾನಾ, ಅವರು ಪ್ರಾರಂಭಿಸಿದ 'ಪೋಲಿಷ್ ಫಿಲ್ಮ್ ಸ್ಕೂಲ್' ಆಂದೋಲನ ದೇಶದ ಸಿನಿಮಾ ಇತಿಹಾಸದಲ್ಲಿ ಮಹತ್ವದ ತಿರುವು ತಂದಿತು ಎಂದರು. ಕೆನಾಲ್ (Kanal) ಮತ್ತು ಆಶಸ್ ಅಂಡ್ ಡೈಮಂಡ್ಸ್ (Ashes and Diamonds) ಚಿತ್ರದಂತಹ ಕೃತಿಗಳು ಈ ಚಳುವಳಿಗೆ ನಾಂದಿ ಹಾಡಿದವು. ಎರಡನೇ ಮಹಾಯುದ್ಧದ ನಂತರ ಪೋಲೆಂಡ್ನಲ್ಲಿ ಸರ್ಕಾರ ಒತ್ತಾಯಿಸುತ್ತಿದ್ದ 'ಸೋಷಿಯಲಿಸ್ಟ್ ರಿಯಲಿಸಂ' ಧೋರಣೆಯನ್ನು ವಾಜ್ದಾ ಅವರ ಚಿತ್ರಗಳು ನೇರವಾಗಿ ಪ್ರಶ್ನಿಸಿದವು. ಅವರು ಆಡಳಿತದ ನಿರೀಕ್ಷೆಗಳಿಗಿಂತ ಜನರ ಹೃದಯದ ಮಾತುಗಳನ್ನು ಹೇಳಲು ಬಯಸಿದ್ದರು ಎಂದು ಹೇಳಿದರು.
ವಾಜ್ದಾ ತಮ್ಮ ಸಿನಿಮಾಗಳಲ್ಲಿ 'ಕಳೆದುಹೋದ ತಲೆಮಾರಿನ' ನೋವು ಮತ್ತು ವ್ಯಥೆಯನ್ನು ಅತ್ಯಂತ ತೀವ್ರವಾಗಿ ಚಿತ್ರಿಸಿದ್ದಾರೆ ಎಂದು ಜೋವಾನಾ ಹೇಳಿದರು. ಯುದ್ಧವನ್ನು ಗೆದ್ದರೂ ತಮ್ಮ ದೇಶದ ಸ್ವಾತಂತ್ರ್ಯವನ್ನು ಕಳೆದುಕೊಂಡ ಯುವ ತಲೆಮಾರಿನ ಆಂತರಿಕ ಸಂಘರ್ಷ ಮತ್ತು ಕಹಿ ಅನುಭವಗಳು ಅವರ ಸಿನಿಮಾಗಳಲ್ಲಿ ಸ್ಪಷ್ಟವಾಗಿ ಕಾಣುತ್ತವೆ. ಮ್ಯಾನ್ ಆಫ್ ಮಾರ್ಬಲ್ (Man of Marble) ಚಿತ್ರವು ಪೋಲೆಂಡ್ನಲ್ಲಿ ಜನಜಾಗೃತಿ ಚಳುವಳಿಗೆ ದಾರಿ ಮಾಡಿಕೊಟ್ಟ ಅತ್ಯಂತ ಪ್ರಮುಖ ಸಿನಿಮಾ ಎಂದು ಅವರು ಹೇಳಿದರು.
ಪೋಲೆಂಡ್ನ ಸಾಂಸ್ಕೃತಿಕ ಧ್ವನಿ
ಇದೇ ಗೋಷ್ಠಿಯಲ್ಲಿ ಮಾತನಾಡಿದ ವಿದ್ಯಾಶಂಕರ್, "ವಾಜ್ದಾ ಕೇವಲ ಒಬ್ಬ ನಿರ್ದೇಶಕರಲ್ಲ, ಅವರು ಪೋಲೆಂಡ್ನ ಸಾಂಸ್ಕೃತಿಕ ಧ್ವನಿಯಾಗಿದ್ದರು. ದೃಶ್ಯ ವೈಭವದ ಮೂಲಕವೇ ಅವರು ಪ್ರತಿಭಟನೆಯ ಧ್ವನಿಯನ್ನು ತಮ್ಮ ಸಿನಿಮಾಗಳಲ್ಲಿ ಅಡಗಿಸಿಟ್ಟರು. 1980ರ ದಶಕದ 'ಸಾಲಿಡಾರಿಟಿ' ಚಳುವಳಿಯ ಸಂದರ್ಭದಲ್ಲಿ ಅವರು ನಾಗರಿಕ ಪ್ರತಿರೋಧದ ಪ್ರಮುಖ ಸಾಂಸ್ಕೃತಿಕ ಪ್ರತಿನಿಧಿಯಾಗಿ ಹೊರಹೊಮ್ಮಿದರು" ಎಂದು ಅಭಿಪ್ರಾಯಪಟ್ಟರು.
ನವದೆಹಲಿಯ ಪೋಲಿಷ್ ಇನ್ಸ್ಟಿಟ್ಯೂಟ್ ನಿರ್ದೇಶಕಿ ಮಾಲ್ಗೊರ್ಝಾಟಾ ವೀಜಿಸ್-ಗೋಲೆಬಿಯಾಕ್ ಅವರು ಮಾತನಾಡಿ, ಬೆಂಗಳೂರಿನಲ್ಲಿ ಪ್ರದರ್ಶಿಸಲಾಗುತ್ತಿರುವ ಪೋಲಿಷ್ ಚಿತ್ರಗಳು ಸಾಂಸ್ಕೃತಿಕ ರಾಯಭಾರತ್ವದ ಮಹತ್ವದ ಭಾಗವಾಗಿವೆ ಎಂದರು. "ಸಂಸ್ಕೃತಿ ಎಂಬುದು ಸಂವಹನದ ಅತ್ಯಂತ ಶಕ್ತಿಶಾಲಿ ಮಾಧ್ಯಮ. ಇದು ಗಡಿಗಳನ್ನು ಮೀರಿ ಸಹಕಾರ ಮತ್ತು ಭಾವನೆಗಳ ವಿನಿಮಯಕ್ಕೆ ಅವಕಾಶ ಕಲ್ಪಿಸುತ್ತದೆ" ಎಂದು ಹೇಳಿದರು. ಗೋಷ್ಠಿಯ ನಿರ್ವಹಣೆಯನ್ನು ಚಲನಚಿತ್ರ ಸಂಯೋಜಕ ಮೃತುಂಜಯ ಅಲಿ ಖಾನ್ ವಹಿಸಿದ್ದರು. ಕಾರ್ಯಕ್ರಮದಲ್ಲಿ ಬೆಂಗಳೂರಿನ ಪೋಲೆಂಡ್ ಗೌರವ ರಾಯಭಾರಿ ಚನ್ನರಾಯಪಟ್ಟಣ ರಾಜಪ್ಪ ರಘು ಉಪಸ್ಥಿತರಿದ್ದರು.
-
April 2 Horoscope: ಆರೋಗ್ಯ ಮತ್ತು ಆರ್ಥಿಕ ಸ್ಥಿತಿಯ ಸಂಪೂರ್ಣ ಮಾಹಿತಿ -
April 1 Horoscope: ಈ ರಾಶಿಯವರಿಗೆ ಹೊಸ ಕೆಲಸಗಳು ಸುಗಮ, ವೃತ್ತಿಯಲ್ಲಿ ಮೆಚ್ಚುಗೆ; ದಿನ ಭವಿಷ್ಯ -
Cricket: ವಿಶ್ವದಾಖಲೆ ಬರೆದ ಕಿವೀಸ್ ವನಿತೆಯರು: ಭಾರತದ ದಾಖಲೆ ಅಳಿಸಿ ಹಾಕಿದ ನ್ಯೂಜಿಲೆಂಡ್ ಅಬ್ಬರ -
Karnataka Weather: ರಾಜ್ಯದಲ್ಲಿಂದು ಭಾರಿ ಮಳೆ ಮುನ್ಸೂಚನೆ; ಬೆಂಗಳೂರು ಹವಾಮಾನ ಹೇಗಿದೆ? -
ಲಕ್ಷ ಲಕ್ಷ ಸಂಬಳದ ಗೂಗಲ್ ಕೆಲಸಕ್ಕೆ ರಾಜೀನಾಮೆ ನೀಡಿದ ಬೆಂಗಳೂರು ಟೆಕ್ಕಿ; ಕಾರಣ ಇಲ್ಲಿದೆ ನೋಡಿ -
Gold Rate: ಮಾರುಕಟ್ಟೆಯಲ್ಲಿ ಇಂದಿನ ನಿಖರ ಚಿನ್ನ, ಬೆಳ್ಳಿ ಬೆಲೆ ಎಷ್ಟು? ಇಲ್ಲಿದೆ ದರ ಪಟ್ಟಿ -
Good News: ಏಪ್ರಿಲ್ 2ನೇ ವಾರದಿಂದ ಹುಬ್ಬಳ್ಳಿ-ಹೈದರಾಬಾದ್ ಮತ್ತು ಬೆಂಗಳೂರಿಗೆ ವಿಮಾನ ಸೇವೆ: ಪ್ರಹ್ಲಾದ್ ಜೋಶಿ -
SSLC ಸಮಾಜ ವಿಜ್ಞಾನ ಪರೀಕ್ಷೆ ವಿಶ್ಲೇಷಣೆ: ಪ್ರಶ್ನೆಪತ್ರಿಕೆ ಹೇಗಿತ್ತು? ವಿದ್ಯಾರ್ಥಿಗಳ ಪ್ರತಿಕ್ರಿಯೆ ಏನು? -
Karnataka weather : ರಾಜ್ಯದಲ್ಲಿಂದು ಹವಾಮಾನ ಹೇಗಿರಲಿದೆ? ಬೆಂಗಳೂರು ಸೇರಿ ಈ ಜಿಲ್ಲೆಗಳಲ್ಲಿ ಗುಡುಗು ಸಹಿತ ಮಳೆ ಎಚ್ಚರಿಕೆ -
ಬೇಸಿಗೆ ರಜೆ -ವಾರಾಂತ್ಯದ ರಶ್: ಹುಬ್ಬಳ್ಳಿ-ರಾಮೇಶ್ವರಂ ಮತ್ತು ಬೆಂಗಳೂರು-ಕಣ್ಣೂರು ವಿಶೇಷ ರೈಲು ಸಂಚಾರ -
ಉಬರ್ ಕ್ಯಾಬ್ ಬುಕ್ ಮಾಡಿದಷ್ಟೇ ಸುಲಭವಾಗಿ ತೆಂಗಿನಕಾಯಿ ಕೀಳುವವರನ್ನು ಕರೆಯಿರಿ: ಆನಂದ್ ಮಹೀಂದ್ರಾ ಹಂಚಿಕೊಂಡ Video Viral -
SSLC ಪರೀಕ್ಷೆ-1ರಲ್ಲಿ ಅಂಕ ಕಡಿಮೆಯಾಗಿದೆಯೇ? ಚಿಂತೆ ಬಿಡಿ, ಮೇ 18ರಿಂದ ನಡೆಯುವ ಪರೀಕ್ಷೆ-2ಕ್ಕೆ ಸಜ್ಜಾಗಿ












Click it and Unblock the Notifications