ಸಿನಿಮಾದವರಿಗೆ ಕ್ಯಾಕರಿಸಿ ಉಗಿದ ಪವನ್ ಕಲ್ಯಾಣ್!
ಆಂಧ್ರಪ್ರದೇಶದ ಉಪಮುಖ್ಯಮಂತ್ರಿ ಹಾಗೂ ನಟ ಪವನ್ ಕಲ್ಯಾಣ್ ಅವರು ಸಿನಿಮಾರಂಗದವರ ಬಗ್ಗೆ ಫುಲ್ ಗರಂ ಆಗಿದ್ದಾರೆ. ತಿರುಪತಿ ಲಡ್ಡು ವಿವಾದ ಭುಗಿಲೆದ್ದಿರುವ ನಡುವೆ ಪವನ್ ಕಲ್ಯಾಣ್ ಅವರಿಗೆ ಮತ್ತಷ್ಟು ಕೋಪ ತರಿಸುವ ಬೆಳವಣಿಗೆಯೊಂದು ನಡೆದಿದೆ. ಲಡ್ಡು ವಿವಾದದ ಬಗ್ಗೆ ಕೆಲವರು ಕಾಮಿಡಿ ಮಾಡುತ್ತಿದ್ದು, ಅಂತವರಿಗೆಲ್ಲ ಪವನ್ ಫುಲ್ ಕ್ಲಾಸ್ ತೆಗೆದುಕೊಂಡಿದ್ದಾರೆ.
ಸಿನಿಮಾ ಪ್ರಮೋಷನ್ ವೇಳೆ ಕಾರ್ಯಕ್ರಮದ ನಿರೂಪಕಿ ಹಾಗೂ ಖ್ಯಾತ ನಟ ಲಡ್ಡು ವಿಚಾರದ ಬಗ್ಗೆ ತಮಾಷೆಯಾಗಿ ಮಾತನಾಡಿಕೊಂಡಿರುವುದು ಪವನ್ ಕಲ್ಯಾಣ್ ಅವರ ಕೋಪಕ್ಕೆ ಕಾರಣವಾಗಿದೆ ಎಂದು ವರದಿಯಾಗಿದೆ.

ಇಷ್ಟಕ್ಕೂ ಆಗಿದ್ದೇನು ಅಂದ್ರೆ, ತಮಿಳು ಚಿತ್ರರಂಗದ ಖ್ಯಾತ ನಟ ಕಾರ್ತಿ ಅವರ ಸತ್ಯಂಸುದರಂ ಸಿನಿಮಾ ತೆಲುಗು ಭಾಷೆಯಲ್ಲಿ ತೆರೆ ಕಾಣುತ್ತಿದ್ದು, ಇದರ ಪ್ರೀರಿರೀಸ್ ಈವೆಂಟ್ ನಿನ್ನೆ ಹೈದರಾಬಾದ್‌ನಲ್ಲಿ ಅದ್ಧೂರಿಯಾಗಿ ನಡೆದಿದೆ. ಈ ವೇಳೆ ಕಾರ್ಯಕ್ರಮದ ನಡೆಸಿಕೊಡುತ್ತಿದ್ದ ನಿರೂಪಕಿಯೊಬ್ಬರು, ನಟ ಕಾರ್ತಿ ಅವರಿಗೆ ʼಲಡ್ಡು ಕಾವಾಲಾ ನಾಯ್ನಾ..ʼ ಎಂದು ಜಾಹೀರಾತಿನ ಸಾಲು ಹೇಳಿ ಕಾಮಿಡಿ ಮಾಡಿದ್ದರು.
ಇದಕ್ಕೆ ಪ್ರತಿಕ್ರಿಯಿಸಿದ್ದ ನಟ ಕಾರ್ತಿ, ಲಡ್ಡು ಸದ್ಯ ಸೂಕ್ಷ್ಮ ವಿಚಾರ. ಈಗ ನಾವು ಅದರ ಬಗ್ಗೆ ಮಾತನಾಡಬಾರದು. ಆ ವಿಚಾರವೇ ಬೇಡ ಎಂದು ಹೇಳಿದ್ದರು. ಆದರೂ ಆಂಕರ್ ಮತ್ತೆ ಮತ್ತೆ ಲಡ್ಡು ವಿಚಾರವನ್ನೇ ಪ್ರಸ್ತಾಪಿಸಿ, ಅಲ್ಲಿದ್ದವರನ್ನು ನಗಿಸುತ್ತಿದ್ದರು. ಈ ವೇಳೆ ಮತ್ತೆ ಮಾಡತನಾಡಿದ ನಟ ಕಾರ್ತಿ...ಲಡ್ಡು ವಿಷಯ ಈಗ ಬೇಡವೇ ಬೇಡ! ಎಂದು ನಗುತ್ತಲೇ ಹೇಳಿದ್ದರು.

ಈ ವಿಚಾರವನ್ನು ಪ್ರಸ್ತಾಪಿಸಿರುವ ಡಿಸಿಎಂ ಪವನ್ ಕಲ್ಯಾಣ್ ಕೆಂಡಾಮಂಡಲವಾಗಿದ್ದಾರೆ. 'ನಿನ್ನೆ ಒಂದು ಸಿನಿಮಾ ಕಾರ್ಯಕ್ರಮದಲ್ಲಿ ನೋಡಿದೆ. ಅಲ್ಲಿ ಲಡ್ಡು ಮೇಲೆಯೂ ಜೋಕ್ ಮಾಡಲಾರಂಭಿಸಿದ್ದಾರೆ. ಅಲ್ಲಿ ಲಡ್ಡು ಸೂಕ್ಷ್ಮ ವಿಚಾರ ಎಂದೆಲ್ಲ ಹೇಳಿದ್ದಾರೆ. ಯಾರಾದರೂ ಆಗಲಿ ಆ ರೀತಿ ಹೇಳುವ ಧೈರ್ಯ ಮಾಡಬೇಡಿ' ಎಂದು ಪವನ್ ಆಕ್ರೋಶದಿಂದ ಮಾತನಾಡಿದ್ದಾರೆ.
'ನಾನು ನಿಮ್ಮನ್ನು ನಟನಾಗಿ ಗೌರವಿಸುತ್ತೇನೆ. ಆದರೆ, ಸನಾತನ ಧರ್ಮದ ವಿಚಾರಕ್ಕೆ ಬಂದರೆ ನಾನು ಸಹಿಸುವುದಿಲ್ಲ. ಹಾಗಾಗಿ ಈ ರೀತಿ ಮಾತನಾಡುವ ಮುನ್ನ ನೂರು ಬಾರಿ ಯೋಚನೆ ಮಾಡಬೇಕು' ಎಂದು ವಾರ್ನಿಂಗ್ ಕೂಡ ಕೊಟ್ಟಿದ್ದಾರೆ.

'ಹಿಂದೂ ಧರ್ಮದ ವಿಚಾರಗಳ ಕುರಿತು ಮನಬಂದಂತೆ ಮಾತನಾಡುತ್ತಾರೆ. ಆದರೆ ಇಸ್ಲಾಂ ಧರ್ಮದವರ ಬಗ್ಗೆ ಯಾರಾದರೂ ಧ್ವನಿ ಎತ್ತುವವರಿದ್ದೀರಾ? ಏಕೆಂದರೆ ಅವರು ರಸ್ತೆಗೆ ಬಂದು ಒಡೆಯುತ್ತಾರೆ ಎನ್ನುವ ಭಯ. ಆದರೆ ಹಿಂದೂಗಳೆಂದೆ ಸೌಮ್ಯ ಸ್ವಭಾವದವರಲ್ಲವೇ? ಹಾಗಾಗಿ ಏನನ್ನಾದರೂ ಮಾತನಾಡುತ್ತೀರ' ಎಂದು ಕ್ಲಾಸ್ ತೆಗೆದುಕೊಂಡಿದ್ದಾರೆ.
'ನಿಮಗೆ ಧರ್ಮದ ಮೇಲೆ ನಂಬಿಕೆ ಇಲ್ಲದಿದ್ದರೆ ದಯವಿಟ್ಟು ನಿಮ್ಮ ಮನೆಗಳಲ್ಲೇ ಇರಿ. ಮುಖ್ಯವಾಗಿ ಚಿತ್ರರಂಗದವರಿಗೆ ನಾನು ಒಂದು ಮಾತನ್ನು ಹೇಳಲು ಬಯಸುತ್ತೇನೆ. ಇಂತಹ ವಿಚಾರಗಳ ಬಗ್ಗೆ ಸಾಧ್ಯವಾದರೆ ಗೌರವದಿಂದ ಮಾತನಾಡಿ. ಆಗದಿದ್ರೆ ಮೌನವಾಗಿ ಇದ್ದುಬಿಡಿ. ಅದನ್ನು ಬಿಟ್ಟು ಈ ರೀತಿ ಅಪಹಾಸ್ಯ ಮಾಡಿದರೆ ಜನ ನಿಮ್ಮನ್ನು ಎಂದಿಗೂ ಕ್ಷಮಿಸುವುದಿಲ್ಲ. ಲಡ್ಡು ನಮಗೆಲ್ಲರಿಗೂ ಆಳವಾಗಿ ನೋವು ತಂದಿಟ್ಟಿರುವ ವಿಚಾರ' ಎಂದು ಎಚ್ಚರಿಕೆ ನೀಡಿದ್ದಾರೆ.
ಕ್ಷಮೆ ಕೇಳಿದ ನಟ: ಪವನ್ ಕಲ್ಯಾಣ್ ಅವರ ಮಾತಿಗೆ ನಟ ಕಾರ್ತಿ ಟ್ವೀಟ್ ಮೂಲಕ ಕ್ಷಮೆ ಕೇಳಿದ್ದಾರೆ. 'ಪವನ್ ಅವರೇ.. ಲಡ್ಡು ವಿಚಾರವಾಗಿ ಉಂಟಾಗಿರುವ ತಪ್ಪುಗ್ರಹಿಕೆಗೆ ನಾನು ಕ್ಷಮೆಯಾಚಿಸುತ್ತೇನೆ. ವೆಂಕಟೇಶ್ವರನ ವಿನಮ್ರ ಭಕ್ತನಾಗಿ, ನಾನು ಯಾವಾಗಲೂ ನಮ್ಮ ಸಂಪ್ರದಾಯಗಳನ್ನು ಆತ್ಮೀಯವಾಗಿ ಪಾಲಿಸುತ್ತೇನೆ' ಎಂದು ಹೇಳಿದ್ದಾರೆ.
ಕಾರ್ತಿ ಅವರ ಅಣ್ಣ ನಟ ಸೂರ್ಯ ಅವರನ್ನು ಸಹ ಕೆಲವರು ಈ ವಿವಾದಕ್ಕೆ ಎಳೆದುತಂದಿದ್ದಾರೆ. ಥೇಟ್ ಸೂರ್ಯ ಅವರ ನಕಲಿ ಟ್ವಿಟರ್ ಖಾತೆಯಿಂದ ಕಾರ್ತಿ ಅವರ ಟ್ವೀಟ್ ಹಂಚಿಕೊಂಡು ಅವರೂ ಪವನ್ ಕಲ್ಯಾಣ್ ಅವರಿಗೆ ಕ್ಷಮೆ ಕೇಳುವಂತೆ ನಕಲಿ ಟ್ವೀಟ್ ಮಾಡಿದ್ದಾರೆ. ಆದರೆ ನಿಜವಾಗಿ ಸೂರ್ಯ ಅವರ ಅಫೀಶಿಯಲ್ ಅಕೌಂಟ್‌ನಿಂದ ಯಾವುದೇ ಟ್ವೀಟ್ ಆಗಿಲ್ಲ. ಇದು ಕೂಡ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.
-
SSLC ಸಮಾಜ ವಿಜ್ಞಾನ ಪರೀಕ್ಷೆ ವಿಶ್ಲೇಷಣೆ: ಪ್ರಶ್ನೆಪತ್ರಿಕೆ ಹೇಗಿತ್ತು? ವಿದ್ಯಾರ್ಥಿಗಳ ಪ್ರತಿಕ್ರಿಯೆ ಏನು? -
ಉಬರ್ ಕ್ಯಾಬ್ ಬುಕ್ ಮಾಡಿದಷ್ಟೇ ಸುಲಭವಾಗಿ ತೆಂಗಿನಕಾಯಿ ಕೀಳುವವರನ್ನು ಕರೆಯಿರಿ: ಆನಂದ್ ಮಹೀಂದ್ರಾ ಹಂಚಿಕೊಂಡ Video Viral -
SSLC ಪರೀಕ್ಷೆ-1ರಲ್ಲಿ ಅಂಕ ಕಡಿಮೆಯಾಗಿದೆಯೇ? ಚಿಂತೆ ಬಿಡಿ, ಮೇ 18ರಿಂದ ನಡೆಯುವ ಪರೀಕ್ಷೆ-2ಕ್ಕೆ ಸಜ್ಜಾಗಿ -
Bengaluru: ಪಬ್ನಲ್ಲಿ 150 ರೂ. ಕೊಟ್ಟು ಆರ್ಡರ್ ಮಾಡಿದ್ರೆ ಬಂದಿದ್ದು ಬರೀ ಹಪ್ಪಳ-ಸಂಡಿಗೆ: ದಂಗಾದ ಗ್ರಾಹಕ -
ಇಂಡೋನೇಷ್ಯಾದಲ್ಲಿ 7.4 ತೀವ್ರತೆಯ ಪ್ರಬಲ ಭೂಕಂಪ: ಏಷ್ಯಾ ರಾಷ್ಟ್ರಗಳಲ್ಲಿ ಸುನಾಮಿ ಆತಂಕ, ಭಾರತದ ಮೇಲಾಗುವ ಪರಿಣಾಮವೇನು? -
Bengaluru House Rent: ಬೆಂಗಳೂರಿನ ಪ್ರೈಮ್ ಏರಿಯಾದಲ್ಲೂ ನಾನ್ವೆಜ್ ಪ್ರಿಯರಿಗೆ ಮನೆ ಸಿಗ್ತಿಲ್ಲ, ಸೋಷಿಯಲ್ ಮೀಡಿಯಾ ಚರ್ಚೆ -
Prakash Raj: ನಾಸ್ತಿಕನಾದರೂ ತಾಯಿಯ ನಂಬಿಕೆಗೆ ಗೌರವ ಕೊಟ್ಟು; ಕ್ರೈಸ್ತ ಧರ್ಮದ ಸಂಪ್ರದಾಯ ಪಾಲನೆ: ನಟ ಪ್ರಕಾಶ್ ರಾಜ್ -
Education: CBSE 9 ಮತ್ತು 10ನೇ ತರಗತಿಯ ಹೊಸ ಪಠ್ಯಕ್ರಮ ಇಂದು ಬಿಡುಗಡೆ -
ಮುಂದಿನ 2 ರಿಂದ 3 ವಾರಗಳಲ್ಲಿ ಇರಾನ್ ಮೇಲೆ ಅತ್ಯಂತ ಭೀಕರ ದಾಳಿ: ಟ್ರಂಪ್ ಎಚ್ಚರಿಕೆ -
ವಿದ್ಯಾರ್ಥಿಗಳ ಮೊಬೈಲ್ ಗೀಳಿಗೆ ಬ್ರೇಕ್: ಹೊಸ 'ಡಿಜಿಟಲ್ ನೀತಿ' ಪ್ರಕಟಿಸಿದ ಆರೋಗ್ಯ ಇಲಾಖೆ -
Raghav Chadha: ಸಂಸದ ರಾಘವ್ ಚಡ್ಡಾಗೆ ಶಾಕ್ ಕೊಟ್ಟ ಎಎಪಿ, ಬಿಜೆಪಿ ಸೇರಲಿದ್ದಾರೆಯೇ ಸ್ಟಾರ್ ರಾಜಕಾರಣಿ -
Nuwan Thushara: ಆರ್ಸಿಬಿಗಾಗಿ ಶ್ರೀಲಂಕಾ ಕ್ರಿಕೆಟ್ ಮಂಡಳಿಯ ವಿರುದ್ಧವೇ ತಿರುಗಿ ಬಿದ್ದ ಸ್ಟಾರ್ ಆಟಗಾರ ನುವಾನ್ ತುಷಾರ












Click it and Unblock the Notifications