Chaitra Vasudevan: ಎರಡನೇ ಮದುವೆಗೆ ಸಜ್ಜಾದ ಖ್ಯಾತ ನಿರೂಪಕಿ ಚೈತ್ರಾ ವಾಸುದೇವನ್
ಮೊದಲ ಮದುವೆಯಿಂದ ಜೀವನದಲ್ಲಿ ಸಂಕಷ್ಟ ಅನುಭವಿಸಿ ಕೊನೆಗೆ ವಿಚ್ಛೇದನ ಪಡೆದಿದ್ದ ಖ್ಯಾತ ಆಂಕರ್ ಚೈತ್ರಾ ವಾಸುದೇವನ್ ಇದೀಗ ಅಭಿಮಾನಿಗಳಿಗೆ ಖುಷಿ ಸುದ್ದಿ ಕೊಟ್ಟಿದ್ದಾರೆ. ವಿಚ್ಛೇದನದ ಬಳಿಕ ಹಲವು ದಿನಗಳು ನೋವಿನಲ್ಲೇ ಕಳೆದಿದ್ದ ಅವರು, ಬಳಿಕ ಆಂಕರಿಂಗ್ ಕೆಲಸಕ್ಕೆ ಮರಳಿದ್ದರು, ಅದರ ಜೊತೆ ತಮ್ಮದೇ ಇವೆಂಟ್ ಮ್ಯಾನೇಜ್‌ಮೆಂಟ್ ಕಂಪನಿಯನ್ನು ಕಟ್ಟಿದ್ದು ಸದ್ಯ ಸಖತ್ ಬ್ಯುಸಿಯಾಗಿದ್ದಾರೆ.
ಬಿಗ್ ಬಾಸ್ 7ನೇ ಆವೃತ್ತಿಯ ಸ್ಪರ್ಧಿ ಕೂಡ ಆಗಿದ್ದ ಚೈತ್ರಾ ವಾಸುದೇವನ್, ಮೊದಲನೇ ಮದುವೆಯಿಂದ ಮಾನಸಿಕವಾಗಿ ಸಾಕಷ್ಟು ಹಿಂಸೆ ಅನುಭವಿಸಿದ್ದರು. ಕೊನೆಗೆ ಅವರು ಮೊದಲ ಮದುವೆಯನ್ನು ಮುರಿದುಕೊಂಡು ಗಂಡನಿಂದ ದೂರವಾಗಿದ್ದರು.

ಕನ್ನಡ ಚಿತ್ರರಂಗದ ಅನೇಕರು ಚೈತ್ರಾ ವಾಸುದೇವನ್‌ಗೆ ಧೈರ್ಯ ತುಂಬಿದ್ದರು. ಹೆಂಸತಿ ಸತ್ತರೆ ಗಂಡ ಸನ್ಯಾಸಿಯಾಗಿರಲ್ಲ, ಬೇರೆ ಆಯ್ಕೆ ಮಾಡಿಕೊಳ್ಳುತ್ತಾರೆ. ಹೆಣ್ಣು ಮಕ್ಕಳು ಕೂಡ ಅದೇ ರೀತಿ ಯೋಚಿಸಬೇಕು ಎಂದು ನಟ ಜಗ್ಗೇಶ್ ಚೈತ್ರಾ ವಾಸುದೇವನ್‌ಗೆ ಸಲಹೆ ಕೊಟ್ಟಿದ್ದರು. ಚೈತ್ರಾ ತಮ್ಮ ಆಂಕರಿಂಗ್ ಮತ್ತು ಇವೆಂಟ್ ಮ್ಯಾನೇಜ್‌ಮೆಂಟ್ ಕಡೆ ಹೆಚ್ಚು ಗಮನ ಹರಿಸಿದ್ದರು.
ಪ್ಯಾರಿಸ್‌ನಲ್ಲಿ ಭರ್ಜರಿ ಫೋಟೊಶೂಟ್
ಚೈತ್ರಾ ವಾಸುದೇವನ್ ಸದ್ಯ ಪ್ಯಾರಿಸ್‌ನಲ್ಲಿ ಮದುವೆಗಾಗಿ ಭರ್ಜರಿ ಶಾಪಿಂಗ್ ಮಾಡುತ್ತಿದ್ದಾರೆ. ಅಲ್ಲಿಯೇ ತಮ್ಮ ಪ್ರೀ ವೆಡ್ಡಿಂಗ್ ಫೋಟೊಶೂಟ್ ಕೂಡ ನಡೆಸುತ್ತಿದ್ದಾರೆ. ತಮ್ಮ ಇನ್‌ಸ್ಟಾಗ್ರಾಂ ಖಾತೆಯಲ್ಲಿ ಅವರು ಪ್ರಿವೆಡ್ಡಿಂಗ್ ಫೋಟೊ ಶೂಟ್‌ನ ವಿಡಿಯೋ ಹಂಚಿಕೊಂಡಿದ್ದು ಮದುವೆ ಸುದ್ದಿಯನ್ನು ಅಭಿಮಾನಿಗಳ ಜೊತೆ ಹಂಚಿಕೊಂಡಿದ್ದಾರೆ.
"ನಾನು ನಿಮ್ಮೊಂದಿಗೆ ಹೃದಯಪೂರ್ವಕವಾದ ಒಂದು ಸಂತೋಷದ ಸುದ್ದಿ ಹಂಚಲು ಉತ್ಸುಕನಾಗಿದ್ದೇನೆ. ನಾನು ಈ ವರ್ಷ 2025ರ ಮಾರ್ಚ್‌ನಲ್ಲಿ ಜೀವನದ ಹೊಸ ಹೆಜ್ಜೆ ಇಡುತ್ತಿದ್ದೇನೆ. ನನ್ನ ವಿವಾಹದ ಸುಂದರ ಪ್ರಯಾಣ ಆರಂಭವಾಗಲಿದೆ. ಈ ಮುಂದಿನ ಹೆಜ್ಜೆ ಹಾಕುವಾಗ, ನಾನು ಈ ಹೊಸ ಅಧ್ಯಾಯಕ್ಕಾಗಿ ನಿಮ್ಮ ಪ್ರೀತಿ, ಆಶೀರ್ವಾದಗಳು ಮತ್ತು ಬೆಂಬಲವನ್ನು ಕೋರುತ್ತೇನೆ" ಎಂದು ಬರೆದುಕೊಂಡಿದ್ದಾರೆ.
ಭಾವಿ ಪತಿಯ ಜೊತೆ ಫೋಟೊಶೂಟ್ ಮಾಡಿಸಿದ್ದರು ಹುಡುಗ ಯಾರು ಎನ್ನುವುದನ್ನು ಅವರು ಗುಟ್ಟಾಗೇ ಇಟ್ಟಿದ್ದಾರೆ. ಮಾರ್ಚ್ ತಿಂಗಳಿನಲ್ಲಿ ಮದುವೆಯಾಗುತ್ತಿದ್ದರೂ ಮದುವೆ ದಿನಾಂಕವನ್ನು ಅವರು ಇನ್ನೂ ಬಹಿರಂಗಪಡಿಸಿಲ್ಲ.
ಮೊದಲನೇ ಮದುವೆ ನೋವು
ಚೈತ್ರಾ ತಮ್ಮ ಡಿಗ್ರಿ ಮುಗಿಯುತ್ತಿದ್ದಂತೆ ಸತ್ಯ ನಾಯ್ಡು ಎನ್ನುವ ಉದ್ಯಮಿ ಜೊತೆ ಮದುವೆಯಾಗಿದ್ದರು. ಐದು ವರ್ಷಗಳ ಬಳಿಕ ಅದು ವಿಚ್ಛೇದನದಲ್ಲಿ ಕೊನೆಯಾಗಿತ್ತು. ಹಲವು ಸಂದರ್ಶನಗಳಲ್ಲಿ ಅವರು ತಮ್ಮ ನೋವುಗಳನ್ನು ಹಂಚಿಕೊಂಡಿದ್ದರು. ಆದರೆ ಅದೆಲ್ಲದರಿಂದ ಹೊರಬಂದು ಅವರು ತಮ್ಮ ಬದುಕನ್ನು ಕಟ್ಟಿಕೊಂಡಿದ್ದಾರೆ.












Click it and Unblock the Notifications