ಹಿಂದೆ ನನ್ನ ಬೈದವರೆಲ್ಲಾ ಚನ್ನಾಗಿರಲಿ... ಆಂಕರ್ ಅನುಶ್ರೀ ದಿಢೀರ್ ಪಂಚ್! Anchor Anushree
ಕನ್ನಡಿಗರ ಪಾಲಿಗೆ ಆಂಕರ್ ಅನುಶ್ರೀ ಅವರು ತುಂಬಾನೇ ವಿಶೇಷ, ಅದರಲ್ಲೂ ಆಂಕರ್ ಅನುಶ್ರೀ ಅವರನ್ನ ಕನ್ನಡಿಗರ ಮನೆಮಗಳು ಅಂತಾ ಕೂಡ ಕರೆಯುವುದುಂಟು. ಕಿರುತೆರೆ ಲೋಕದ ಸೂಪರ್ ಸ್ಟಾರ್ ಅಂತಾನೇ ಫೇಮಸ್ ಆಗಿರುವ ಆಂಕರ್ ಅನುಶ್ರೀ, ಕೋಟಿ ಕೋಟಿ ಅಭಿಮಾನಿ ಸಾಗರವನ್ನೇ ಸಂಪಾದನೆ ಮಾಡಿದ್ದಾರೆ. ಕನ್ನಡ ರಿಯಾಲಿಟಿ ಶೋಗಳ ಪಾಲಿನ ರಾಣಿ ಕೂಡ ಆಂಕರ್ ಅನುಶ್ರೀ ಅಂತಾರೆ ಅವರ ಫ್ಯಾನ್ಸ್. ಹೀಗಿದ್ದರೂ ಆಂಕರ್ ಅನುಶ್ರೀ ಅವರಿಗೆ ಪದೇ ಪದೇ ಶತ್ರುಗಳ ಕಾಟ & ವಿರೋಧಿಗಳ ಕಾಟ ಇದ್ದೇ ಇದೆ.
ಆಂಕರ್ ಅನುಶ್ರೀ ಅವರ ಬೆಳವಣಿಗೆ ಸಹಿಸದ ಕೆಲವರು ಸೋಷಿಯಲ್ ಮೀಡಿಯಾ ಮೂಲಕ & ತಮ್ಮ ಕೈಲಾಗುವ ಎಲ್ಲಾ ಪ್ರಯತ್ನಗಳನ್ನು ಮಾಡಿ ವದಂತಿ ಹಬ್ಬಿಸುವ ಕೆಲಸ ಮಾಡುತ್ತಾರೆ. ಈ ಕೆಲಸದ ಜೊತೆಗೆ ಆಂಕರ್ ಅನುಶ್ರೀ ಅವರ ಬಗ್ಗೆ ಸೋಷಿಯಲ್ ಮೀಡಿಯಾದಲ್ಲಿ ಕಮೆಂಟ್ ಹಾಕಿ ಸರಿಯಾಗಿ ಉತ್ತರ ಪಡೆದ ವಿರೋಧಿಗಳು ಕೂಡ ಇದ್ದಾರೆ. ಹೀಗೆ ಎಲ್ಲವನ್ನೂ ನೋಡುತ್ತಾ ಇದ್ದ ಆಂಕರ್ ಅನುಶ್ರೀ ಅವರು ಈಗ ಸರಿಯಾಗಿ ಉತ್ತರ ಕೊಡುತ್ತಿದ್ದಾರೆ. ಹಾಗಾದರೆ ಆಂಕರ್ ಅನುಶ್ರೀ ಈಗ ದಿಢೀರ್, ಹಿಂದೆ ನನ್ನ ಬೈದವರೆಲ್ಲಾ ಚನ್ನಾಗಿರಲಿ... ಎಂದು ಹೇಳಿದ್ದು ಯಾರಿಗೆ? ಮುಂದೆ ಓದಿ.

ಆಂಕರ್ ಅನುಶ್ರೀ ಪಂಚ್!
ಹೌದು, ಆಂಕರ್ ಅನುಶ್ರೀ ಇಷ್ಟು ದೊಡ್ಡ ಮಟ್ಟಕ್ಕೆ ಬೆಳವಣಿಗೆ ಹೊಂದುತ್ತಿರುವ ಕಾರಣ ಕೆಲವರು ವಿವಾದ ಹುಟ್ಟು ಹಾಕುತ್ತಿರುವ ಆರೋಪ ಕೇಳಿಬಂದಿದೆ. ಅದರಲ್ಲೂ ಆಂಕರ್ ಅನುಶ್ರೀ ಮದುವೆ ಆದ ನಂತರ, ಸೋಷಿಯಲ್ ಮೀಡಿಯಾ ಮೂಲಕ ಕಿಡಿಗೇಡಿಗಳು ಕಿರಿಕ್ ಮಾಡುತ್ತಿದ್ದಾರೆ. ಇಷ್ಟು ದಿನಗಳ ಕಾಲ ಖುದ್ದು ಆಂಕರ್ ಅನುಶ್ರೀ ಅವರ ಅಭಿಮಾನಿಗಳೇ ಇದಕ್ಕೆಲ್ಲಾ ತಕ್ಕ ಉತ್ತರವನ್ನು ನೀಡುತ್ತಿದ್ದರು. ಆದರೆ ಈಗ ನೇರವಾಗಿ ಅನುಶ್ರೀ ಅವರೇ ಅಖಾಡ ಪ್ರವೇಶ ಮಾಡಿ, ಶತ್ರುಗಳಿಗೆ & ಅನಗತ್ಯ ಕಮೆಂಟ್ ಹಾಕುವವರ ಹೆಡೆಮುರಿ ಕಟ್ಟುತ್ತಿದ್ದಾರೆ.
'ಹಿಂದೆ ನನ್ನ ಬೈದವರೆಲ್ಲಾ ಚೆನ್ನಾಗಿರಲಿ...'
ಹೊಸ ವರ್ಷ ಶುರುವಾಗಿರುವ ಸಮಯದಲ್ಲೇ, 'ಹಿಂದೆ ನನ್ನ ಬೈದವರೆಲ್ಲಾ ಚೆನ್ನಾಗಿರಲಿ, ಮುಂದೆ ನನ್ನ ಬೈಯ್ಯುವರೆಲ್ಲ ಅಂದಣವಿರಲಿ, ಕುಂದು ಇಟ್ಟವರೆಲ್ಲಾ ಕುದುರೆಯ ಕಟ್ಟಿ ಬಾಳಲಿ, ಬಂದು ಒದ್ದವರಿಗೆ ಬತ್ತದ ಗದ್ದೆ ಬೆಳೆಯಲಿ...' ಹೀಗೆ ದಾಸ ಶ್ರೇಷ್ಠರಾದ ಕನಕದಾಸರ ಸಾಲುಗಳನ್ನು ಹೇಳಿ ತಮ್ಮ ಅಭಿಮಾನಿಗಳಿಗೆ ಶುಭಾಶಯ ಕೋರುವ ಜೊತೆಯಲ್ಲೇ ಶತ್ರುಗಳು ಹಾಗೂ ವಿರೋಧಿಗಳಿಗೆ ಉತ್ತರವನ್ನೂ ನೀಡಿದ್ದಾರೆ ಅಂತಾ ಇದೀಗ ಚರ್ಚೆ ಶುರುವಾಗಿದೆ. ಅಭಿಮಾನಿಗಳು ಆಂಕರ್ ಅನುಶ್ರೀ ಅವರ ಈ ಸಾಲುಗಳನ್ನು ಕೇಳಿ ಫುಲ್ ಖುಷಿಯಾಗಿದ್ದಾರೆ.












Click it and Unblock the Notifications