ಆಂಕರ್ ಅನುಶ್ರೀ ಮದುವೆಗೆ ನವೆಂಬರ್ 2, 2025ಕ್ಕೆ ಮುಹೂರ್ತ... Anchor Anushree

ಆಂಕರ್ ಅನುಶ್ರೀ ಅಭಿಮಾನಿಗಳು ಕಾಯುತ್ತಿದ್ದ ಆ ಸಮಯ ಬಂದೇ ಬಿಟ್ಟಿದೆ, ಹಿಂದೂಗಳ ಪವಿತ್ರ ಸ್ನಾನ 'ಮಹಾ ಕುಂಭಮೇಳ'ಕ್ಕೆ ಹೋಗಿ ಬಂದಿದ್ದ ಆಂಕರ್ ಅನುಶ್ರೀ ಅವರಿಗೆ ಈಗ ಮದುವೆ ಭಾಗ್ಯ ಒಲಿದು ಬಂದಿದೆ. ಇಷ್ಟು ದಿನ ಆಂಕರ್ ಅನುಶ್ರೀ ಮದುವೆ ಯಾವಾಗ? ಆಂಕರ್ ಅನುಶ್ರೀ ಮದುವೆ ಯಾವಗ? ಅಂತಾ ಕಾಯುತ್ತಿದ್ದ ಕೋಟ್ಯಂತರ ಅಭಿಮಾನಿ ಬಳಗಕ್ಕೆ ಭರ್ಜರಿ ಸುದ್ದಿ ಸಿಕ್ಕಿದೆ!

ಹೌದು, ಆಂಕರ್ ಅನುಶ್ರೀ ಅವರು ಅತ್ಯಂತ ಕಡುಬಡ ಕುಟುಂಬದಿಂದ ಬಂದಿದ್ದು ಎಲ್ಲಾ ಕಷ್ಟಗಳನ್ನು ಎದುರಿಸಿ ನಿಂತು ಇದೀಗ ದೊಡ್ಡ ಸಾಧನೆ ಮಾಡಿ ಬದುಕುತ್ತಿದ್ದಾರೆ. ಹೀಗಿದ್ದಾಗ ಆಂಕರ್ ಅನುಶ್ರೀ ಅವರ ಮದುವೆ ಯಾವಾಗ ದೇವರೇ? ಅಂತಾ ಅವರ ಅಭಿಮಾನಿಗಳು ಈ ಸಮಯದಲ್ಲಿ ದೇವರ ಬಳಿ ಕೇಳುತ್ತಿದ್ದರು. ಇಷ್ಟೆಲ್ಲದರ ನಡುವೆ ಇದೀಗ ಆಂಕರ್ ಅನುಶ್ರೀ ಅವರ ಮದುವೆ ಬಗ್ಗೆ ಭಾರಿ ಭರ್ಜರಿ ಬಿಗ್ ನ್ಯೂಸ್ ಸಿಕ್ಕಿದ್ದು, ಆಂಕರ್ ಅನುಶ್ರೀ ಮದುವೆಗೆ ನವೆಂಬರ್ 2, 2025ಕ್ಕೆ ಮುಹೂರ್ತ...

Anchor Anushree Marriage Update Is Viral On Social Media

ಆಂಕರ್ ಅನುಶ್ರೀ ಮದುವೆಗೆ ನವೆಂಬರ್ 2...

ಆಂಕರ್ ಅನುಶ್ರೀ ಅವರ ಮದುವೆಗೆ ಕೋಟಿ ಕೋಟಿ ಕನ್ನಡಿಗರು ಕಾಯುತ್ತಿದ್ದರು. ಅನುಶ್ರೀ ಅವರ ಸ್ನೇಹಿತರು ಹಾಗೂ ಸಿನಿಮಾ ಬಳಗ ಕೂಡ ಈ ಕಾರಣಕ್ಕೆ ಕಾಯುತ್ತಿತ್ತು. ಕನ್ನಡ ಸಿನಿಮಾ ಇಂಡಸ್ಟ್ರಿಯಲ್ಲಿ ನೂರಾರು ಸ್ಟಾರ್ ನಟರು ಕೂಡ ಆಂಕರ್ ಅನುಶ್ರೀ ಅವರ ನಿರೂಪಣೆ ಶೈಲಿಗೆ ಅಭಿಮಾನಿಗಳೇ ಆಗಿ ಹೋಗಿದ್ದಾರೆ. ಹೀಗಿದ್ದಾಗಲೇ, ಆಂಕರ್ ಅನುಶ್ರೀ ಮದುವೆಗೆ ನವೆಂಬರ್ 2, 2025ಕ್ಕೆ ಮುಹೂರ್ತ...

36 ವರ್ಷ ವಯಸ್ಸು ಕಳೆದರೂ....

ಆಂಕರ್ ಅನುಶ್ರೀ ಅವರಿಗೆ 36 ವರ್ಷ ವಯಸ್ಸು ಕಳೆದರೂ ಯಾಕೆ ಮದುವೆ ಆಗಿಲ್ಲ? ಎನ್ನುವ ಪ್ರಶ್ನೆ ಅಭಿಮಾನಿಗಳು ಕೇಳ್ತಾನೆ ಇದ್ದರು. ಯಾಕಂದ್ರೆ ಕನ್ನಡ ನಾಡಿನ ಜನರು ಆಂಕರ್ ಅನುಶ್ರೀ ಅವರ ಬಗ್ಗೆ ಸಿಕ್ಕಾಪಟ್ಟೆ ಪ್ರೀತಿ & ಗೌರವ ಇಟ್ಟುಕೊಂಡಿದ್ದಾರೆ. ಇದೇ ಕಾರಣಕ್ಕಾಗಿ, ಪದೇ ಪದೇ ಆಂಕರ್ ಅನುಶ್ರೀ ಅವರ ಮದುವೆಗೆ ಕಾಯುತ್ತಿದ್ದಾರೆ ಜನ. 1988 ಜನವರಿ 25 ರಂದು ಜನಿಸಿದ್ದ ಆಂಕರ್ ಅನುಶ್ರೀ ಅವರು ಈಗ ಕನ್ನಡಿಗರ ಮನೆ ಮಾತಾಗಿದ್ದಾರೆ. ಇಂತಹ ಸೂಪರ್ ಡೂಪರ್ ಆಂಕರ್‌ಗೆ ಮದುವೆ ಮುಹೂರ್ತ ಕೂಡಿ ಬಂದಿದೆ!

ಆಂಕರ್ ಅನುಶ್ರೀ ಅವರಿಗೆ ಇದೇ ವರ್ಷ ಮದುವೆ ಆಗಲಿದೆ ಎಂದು ಖ್ಯಾತ ಜೋತಿಷಿ ಒಬ್ಬರು ಭವಿಷ್ಯ ನುಡಿದಿದ್ದಾರೆ. ಆಂಕರ್ ಅನುಶ್ರೀ ಮದುವೆಗೆ ನವೆಂಬರ್ 2, 2025ಕ್ಕೆ ಮುಹೂರ್ತ ಕೂಡಿ ಬಂದಿದೆ ಎಂದು ಖ್ಯಾತ ಜೋತಿಷಿ ಒಬ್ಬರು ಭವಿಷ್ಯ ನುಡಿದಿರುವುದು ಇದೀಗ ವೈರಲ್ ಆಗುತ್ತಿದೆ. ಸೋಷಿಯಲ್ ಮೀಡಿಯಾದಲ್ಲೂ ಈ ವಿಡಿಯೋ ಹಲ್‌ಚಲ್ ಎಬ್ಬಿಸಿದ್ದು, ಭಾರಿ ಸೌಂಡ್ ಕೂಡ ಮಾಡುತ್ತಿದೆ.

ಟಿಆರ್‌ಪಿ ಕಿಂಗ್ ಆಂಕರ್ ಅನುಶ್ರೀ!

ಆಂಕರ್ ಅನುಶ್ರೀ ಅಂದ್ರೆ ಮಾಸ್, ಆಂಕರ್ ಅನುಶ್ರೀ ಅಂದ್ರೆ ಕ್ಲಾಸ್.. ಆಂಕರ್ ಅನುಶ್ರೀ ಅಂದ್ರೆ ಕನ್ನಡ ಕಿರುತೆರೆ ಸೂಪರ್ ಸ್ಟಾರ್ ಅಂತಾ ಕಣ್ಣುಮುಚ್ಕೊಂಡು ಹೇಳಬಹುದು ಆಂಕರ್ ಅನುಶ್ರೀ ಹೆಸರು ಕೇಳಿದ್ರೆ ಸಾಕು ಟಿಆರ್‌ಪಿ ತಾನಾಗಿ ತಾನೇ ಓಡೋಡಿ ಬಂದು ಬಿಡುತ್ತೆ ಅನ್ನೋ ಜೋಕ್‌ನ ಟಿವಿ ಚಾನೆಲ್‌ಗಳ ಆಫಿಸ್‌ನಲ್ಲಿ ಮಾಡೋದು ಕಾಮನ್. ಯಾಕಂದ್ರೆ ಆಂಕರ್ ಅನುಶ್ರೀ ಅವರು ಒಂದು ಬಾರಿ ಸ್ಟೇಜ್ ಹತ್ತಿ ಆಂಕರಿಂಗ್ ಮಾಡಲು ನಿಂತರೆ ಆಡ್ ಬಂದ್ರೂ ಜನ ಚಾನಲ್ ಚೇಂಜ್ ಮಾಡದೇ ಆಂಕರ್ ಅನುಶ್ರೀ ಅವರ ಮಾತಿಗಾಗಿ ಕಾಯುತ್ತಾರೆ. ಹೀಗಿದ್ದಾಗ ಶೀಘ್ರದಲ್ಲೇ ಆಂಕರ್ ಅನುಶ್ರೀ ಅವರ ಮದುವೆ ನಡೆಯಲಿದೆ ಅಂತ ಜೋತಿಷಿ ಒಬ್ಬರು ಭವಿಷ್ಯವನ್ನು ನುಡಿದಿದ್ದಾರೆ.

ಮದುವೆ ಬಗ್ಗೆ ಹೆಚ್ಚಾಯ್ತು ಕುತೂಹಲ!

ಆಂಕರ್ ಅನುಶ್ರೀ ಅವರು ತುಂಬಾನೇ ಕಷ್ಟಪಟ್ಟು ಈ ಹಂತಕ್ಕೆ ಬಂದವರು. ಒಂದು ಕಾಲದಲ್ಲಿ ಪಿಜಿ ಹಣ ಕಟ್ಟುವುದಕ್ಕೂ ಕಷ್ಟಪಟ್ಟಿದ್ದ ಇದೇ ಆಂಕರ್ ಅನುಶ್ರೀ ಅವರು ಇಂದು ಒಂದೊಂದು ಕಾರ್ಯಕ್ರಮ ನಡೆಸಿಕೊಡಲು ಲಕ್ಷ ಲಕ್ಷ ರೂಪಾಯಿ ಸಂಭಾವನೆ ಪಡೆಯುತ್ತಾರೆ ಎಂಬ ಮಾತು ಇದೆ. ಆದರೆ ಈ ಬಗ್ಗೆ ಅಧಿಕೃತ ಮಾಹಿತಿ ಇಲ್ಲದಿದ್ದರೂ, ಹಣಕ್ಕಿಂತ ಹೆಚ್ಚಾಗಿ ಆಂಕರ್ ಅನುಶ್ರೀ ಅವರ ಮುಗ್ಧತೆ ಕನ್ನಡಿಗರಿಗೆ ಭಾರಿ ಇಷ್ಟವಾಗುತ್ತಿದೆ. ಇಷ್ಟೆಲ್ಲದರ ನಡುವೆ ಇದೀಗ ಆಂಕರ್ ಅನುಶ್ರೀ ಅವರ ಮದುವೆ ಬಗ್ಗೆ ಭವಿಷ್ಯ ನುಡಿದಿರುವುದು ಅಭಿಮಾನಿಗಳ ಕುತೂಹಲ ಮತ್ತೆ ಹೆಚ್ಚಾಗುವಂತೆ ಮಾಡಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+