Anchor Anushree: ಅನುಶ್ರೀಗೆ ಮದುವೆ ಫಿಕ್ಸ್ ಆಯ್ತು ಎಂದ ರವಿಚಂದ್ರನ್
ಕರಾವಳಿ ಚೆಲುವೆ. ಕನ್ನಡದ ಖ್ಯಾತ ನಿರೂಪಕಿ ಅನುಶ್ರೀ ಅವರು ಮಾತಿನಲ್ಲೇ ಪ್ರೇಕ್ಷಕರನ್ನು ಸೆಳೆಯುವ ಮಾತಿನ ಮಲ್ಲಿ. ಸದ್ಯ ಕನ್ನಡದ ಖ್ಯಾತ ನಿರೂಪಕಿ ಅನುಶ್ರೀ ಅವರ ಮದುವೆ ಸುದ್ದಿ ವೈರಲ್ ಆಗುತ್ತಿದ್ದು, ಹಲವು ವರ್ಷಗಳಿಂದ ಅನುಶ್ರೀ ಮದುವೆ ಯಾವಾಗ ಎಂದು ಕೇಳುತ್ತಿದ್ದ ಅಭಿಮಾನಿಗಳಿಗೆ ಕೊನೆಗೂ ನಟ ರವಿಚಂದ್ರನ್ ಅವರು ಅನುಶ್ರೀ ಮದುವೆ ಬಗ್ಗೆ ಗುಡ್ ನ್ಯೂಸ್ ನೀಡಿದ್ದಾರೆ. ಆದರೆ, ಈ ಮಾತಿನ ಮಲ್ಲಿಯನ್ನ ಕೈ ಹಿಡಿಯುವ ಹುಡುಗ ಯಾರು ಎನ್ನುವ ಕುತೂಹಲ ಹೆಚ್ಚಾಗಿದೆ.
ಕನ್ನಡದ ನಟಿ, ಆ್ಯಂಕರ್ ಅನುಶ್ರೀ ಅವರು ಆ್ಯಂಕರಿಂಗ್ ಲೋಕದಲ್ಲಿ ಸಾಕಷ್ಟು ಹೆಸರು ಮಾಡಿರುವ ಅನುಶ್ರೀ ಅವರು ಈ ಹಿಂದೆ ಕೆಲವು ಸಿನಿಮಾ ಕೂಡ ಮಾಡಿದ್ದಾರೆ. ಪದೇ ಪದೇ ಅನುಶ್ರೀ ಅವರ ಮದುವೆ ಯಾವಾಗ ಎನ್ನುವ ಪ್ರಶ್ನೆ ಆಗಾಗ ಕೇಳಿ ಬರುತ್ತಲೇ ಇರುತ್ತದೆ. ಅವರ ಮದುವೆ ಫಿಕ್ಸ್ ಆಗಿದೆ ಎಂದು ಕೆಲವು ಯೂಟ್ಯೂಬರ್ಗಳು ಆಗಾಗ ವಿಡಿಯೋ ಮಾಡಿದ್ದೂ ಇದೆ. ಕೆಲ ದಿನಗಳ ಹಿಂದೆಯಷ್ಟೇ ಜೀ ಕನ್ನಡದ 'ಕುಟುಂಬ ಅವಾರ್ಡ್ಸ್' ಕಾರ್ಯಕ್ರಮದಲ್ಲಿ ಈ ಬಗ್ಗೆ ಚರ್ಚೆ ಕೂಡ ನಡೆದಿತ್ತು.

ಜೀ ಕನ್ನಡ ಕುಟುಂಬ ಅವಾರ್ಡ್ಸ್ ಕಾರ್ಯಕ್ರಮದಲ್ಲಿ ಆ್ಯಂಕರ್ ಅಕುಲ್ ಅವರು ಆಂಕರ್ ಅನುಶ್ರೀ ಬಾಯ್ಫ್ರೆಂಡ್ನ ಸ್ಟೇಜ್ ಮೇಲೆ ಕರೆಸುತ್ತಿದ್ದೇವೆ ಎಂದ ತಕ್ಷಣ ಮ್ಯೂಸಿಕ್ ಕೂಡ ಬಂತು. ಆದರೆ, ಯಾರೂ ಬರಲೇ ಇಲ್ಲ. ಈ ರೀತಿ ಮಾಡಬೇಕು ಎಂದುಕೊಂಡಿದ್ದೆವು. ಆ ವ್ಯಕ್ತಿಗೆ ಬರಬೇಡ ಎಂದು ಅನು ಹೇಳಿದ್ದಾರೆ. ಹೀಗಾಗಿ ನಿಮ್ಮ ಖಾಸಗಿತನಕ್ಕೆ ಒತ್ತುಕೊಟ್ಟು ಅವರನ್ನು ಕರೆಸಿಲ್ಲ ಎಂದು ಅಕುಲ್ ಹೇಳಿದ್ದರು. ಈ ವೇಳೆ ಅನುಶ್ರೀ ಅವರು ನನ್ನ ಮದುವೆ ಚಿಂತೆ ನನ್ನ ಮನೆಯವರಿಗಿಂತ ಯೂಟ್ಯೂಬರ್ಗಳಿಗೆ ಇದೆ. ಪ್ರತಿ ವಾರ ಯಾರು ಸಿಂಗಲ್ ಇದ್ದಾರೆ ಅವರ ಜೊತೆ ನನ್ನ ಮದುವೆ ಮಾಡಿಸಿದ್ದಾರೆ ಎಂದರು.
ಇನ್ನೂ ಎಲ್ಲ ಹುಡಿಗಿಯರಂತೆ ನನಗೂ ಮದುವೆ ಆಗಬೇಕು ಎಂದಿದೆ. ನನಗೂ ಬಾಳ ಸಂಗಾತಿ ಬೇಕು ಎಂದಿದೆ. ಎಲ್ಲದಕ್ಕೂ ಸಮಯ ಬರಬೇಕು. ಸರಿಯಾದ ಟೈಮ್ ಅಲ್ಲಿ ಸರಿಯಾದ ವ್ಯಕ್ತಿ ಬರಬೇಕು. ನಾನು ಮದುವೆ ಆಗಬೇಕು ಎಂದು ಮನಸ್ಸು ಮಾಡಬೇಕಿತ್ತು. ಈವರೆಗೆ ಮಾಡಿರಲಿಲ್ಲ. ಈಗ ಮಾಡಿದ್ದೇನೆ. ಮುಂದಿನ ವರ್ಷ ಒಳ್ಳೆಯ ಹುಡುಗ ಸಿಕ್ಕರೆ ಮದುವೆ ಆಗುತ್ತೇನೆ. ಆ ವ್ಯಕ್ತಿ ಬರಲಿ ಎಂದು ಕಾಯುತ್ತೇನೆ. ಬಂದರೆ ನಾನು ಅವರನ್ನು ನಿಮ್ಮ ಮುಂದೆ ತಂದು ನಿಲ್ಲಿಸುತ್ತೇನೆ ಎಂದು ಅನುಶ್ರೀ ಅವರು ಹೇಳಿದ್ದರು.
ಇದೀಗ ಭರ್ಜರಿ ಬ್ಯಾಚುಲರ್ಸ್ ಕಾರ್ಯಕ್ರಮದಲ್ಲಿ ಗಾಯಕ ಸುನೀಲ್ ಹಾಗೂ ಅಮೃತಾ ಕ್ರೇಜಿ ಸ್ಟಾರ್ ರವಿಚಂದ್ರನ್ ಅಭಿನಯದ ಬಣ್ಣದ ಗೆಜ್ಜೆ ಸಿನಿಮಾದ ಸೂಪರ್ ಹಿಟ್ ಸಾಂಗ್ ಸ್ವಾತಿ ಮುತ್ತಿನ ಮಳೆ ಹನಿಯೇ ಹಾಡಿಗೆ ಡ್ಯಾನ್ಸ್ ಮಾಡಿದ್ದಾರೆ. ವೇದಿಕೆ ಮೇಲೆ ಮಳೆಯನ್ನು ತರಿಸಿ ಅಚ್ಚರಿ ಮೂಡಿಸಿದೆ. ಅದರಲ್ಲೂ ಕ್ರೇಜಿ ಸ್ಟಾರ್ ರವಿಚಂದ್ರನ್ ಮುಂದೆಯೇ ರೊಮ್ಯಾಂಟಿಕ್ ಆಗಿ ಡ್ಯಾನ್ಸ್ ಮಾಡಿದ್ದಾರೆ. ಸುನೀಲ್ ಹಾಗೂ ಅಮೃತಾ ರೊಮ್ಯಾಂಟಿಕ್ ಡ್ಯಾನ್ಸ್ ನೋಡಿ ಎಲ್ಲರೂ ಶಾಕ್ ಆಗಿದ್ದಾರೆ.
ಸುನೀಲ್ ಹಾಗೂ ಅಮೃತಾ ರೊಮ್ಯಾಂಟಿಕ್ ಡ್ಯಾನ್ಸ್ ನೋಡಿ ಅರ್ಜುನ್ ಜನ್ಯ, ರಚಿತಾ ರಾಮ್, ಅನುಶ್ರೀ ಎಲ್ಲರೂ ಶಾಕ್ ಆಗಿ ಬಿದ್ದು ಬಿದ್ದು ನಕ್ಕಿದ್ದಾರೆ. ಡ್ಯಾನ್ಸ್ ಮುಗಿಯುತ್ತಿದ್ದಂತೆ ವೇದಿಕೆಗೆ ಬಂದ ಅನುಶ್ರೀ ಸುನೀಲಾ ಏನೋ ಮಾಡ್ಬಿಟ್ಟೆ ನೀನು ಎಂದಿದ್ದಾರೆ. ಈ ವೇಳೆ ಅಮೃತಾ ಚಳಿಯಾಗುತ್ತಿದೆ ಎಂದು ಹೇಳಿದ್ದಾರೆ. ಅನುಶ್ರೀ ನಿನಗೆ ಚಳಿಯಾಗುತ್ತಿದೆ. ಆದರೆ, ನೋಡಿದವರಿಗೆ ಬಿಸಿಯಾಗುತ್ತಿದೆ ಎಂದು ಹೇಳಿದ್ದಾರೆ. ಈ ವೇಳೆ ರವಿಚಂದ್ರನ್ ಅವರು ಮಧ್ಯ ಪ್ರವೇಶಿಸಿ ಅನುಗೆ ಬಿಸಿ ಆಯ್ತು ಅಂದ್ರೆ ಮದುವೆ ಫಿಕ್ಸ್ ಆಯ್ತು ಅಂತ ಎಂದು ಈ ಸಂದರ್ಭದಲ್ಲಿ ಹೇಳಿದ್ದಾರೆ.












Click it and Unblock the Notifications