Amritdhare Serial: ಅಮೃತಧಾರೆಯಲ್ಲಿ ಮಲ್ಲಿ ಕೈಯಲ್ಲಿ ಸಿಕ್ಕಿಬೀಳ್ತಾಳಾ ದೀಪಿಕಾ? ಕೇಡಿ ಜೈದೇವ್‌ಗೆ ಮತ್ತೆ ಸಂಕಷ್ಟ!
Amritdhare Serial: ಅಮೃತಧಾರೆ ಸೀರಿಯಲ್ ರೋಚಕ ತಿರುವು ಎದುರಾಗಿದೆ. ಭೂಮಿಕಾ ಜಾಗದಲ್ಲಿ ದೀಪಿಕಾ ಎಂಟ್ರಿ ಕೊಟ್ಟಿದ್ದಾಳೆ. ಆದರೆ, ಕೇಡಿ ಜೈದೇವ್ ಎಲ್ಲ ಸಂಕಷ್ಟಗಳಿಂದಲೂ ತಪ್ಪಿಸಿಕೊಳ್ಳುವ ಮುನ್ಸೂಚನೆ ಸಿಕ್ಕಿದೆ. ಅಮೃತಧಾರೆ ಸೀರಿಯಲ್‌ಗೆ ಸಂಬಂಧಿಸಿದಂತೆ "ಮಲ್ಲಿ ಕೈಯಲ್ಲಿ ಸಿಕ್ಕಿಬಿದ್ಲಾ ಭೂಮಿಯಂತೆ ನಾಟಕ ಆಡ್ತಿರೋ ಪಟಾಕಿ ದೀಪಿಕಾ?' ಎನ್ನುವ ಹೊಸ ಪ್ರೋಮೋ ಹಂಚಿಕೊಳ್ಳಲಾಗಿದೆ. ಕೇಡಿ ಜೈದೇವ್‌ಗೆ ಶಿಕ್ಷೆ ಕೊಡಿಸುವುದಕ್ಕೆ ಮಲ್ಲಿ ಮುಂದಾಗಿದ್ದಾಳೆ. ಕೊಲೆ ಪ್ರಕರಣದಲ್ಲಿ ಜೈದೇವ್‌ಗೆ ಇನ್ನೇನು ಶಿಕ್ಷೆ ಆಗಲಿದೆ ಎನ್ನುವಾಗಲೇ ಈ ಶಿಕ್ಷೆಯಿಂದ ತಪ್ಪಿಸಿಕೊಳ್ಳುವುದಕ್ಕೆ ಜೈದೇವ್ ಹಾಗೂ ಶಕುಂತಲಾದೇವಿ ಮಾಸ್ಟರ್ ಪ್ಲ್ಯಾನ್ ಮಾಡಿದ್ದಾರೆ. ಇಬ್ಬರೂ ಸೇರಿ ಸಾಕ್ಷಿ ನಾಶ ಮಾಡಿದ್ದಾರೆ.
ಮಲ್ಲಿ ಫೋನ್‌ನಲ್ಲಿ ಸಾಕ್ಷಿ ಇತ್ತು. ಆದರೆ ಇದೀಗ ಮಲ್ಲಿ ಫೋನ್‌ನಿಂದ ಸಾಕ್ಷಿ ನಾಶವಾಗಿದೆ. ಯಾಕೆ ತುಂಬಾ ಟೆನ್ಶನ್‌ನಲ್ಲಿದ್ದಿಯಾ ಅಂತ ಶಕುಂತಲಾದೇವಿ ಕೇಳಿದ್ದಾಳೆ ಇದಕ್ಕೆ ಗಡಿಬಿಡಿಯಲ್ಲೇ ಮಲ್ಲಿ ರಿಪ್ಲೈ ಕೊಟ್ಟಿದ್ದಾಳೆ. ಅಷ್ಟೊಂದು ಮುಖ್ಯವಾಗಿರುವುದು ಫೋನ್‌ನಲ್ಲಿ ಏನಿದೆ ಅಂತ ಶಕುಂತಲಾದೇವಿ ಕೇಳಿದ್ದಾಳೆ. ಇದಕ್ಕೆ ರಿಪ್ಲೈ ಕೊಟ್ಟಿರುವ ಮಲ್ಲಿ ಕೆಲಸಕ್ಕೆ / ಡಿಪಾರ್ಟ್‌ಮೆಂಟ್‌ಗೆ ಸಂಬಂಧಿಸಿದ ವಿಷಯ ಅಂತ ಹೇಳಿದ್ದಾಳೆ. ಇದಕ್ಕೆ ಮನಸ್ಸಿನಲ್ಲಿಯೇ ಶಕುಂತಲಾ ದೇವಿ, ನೀನು ಎಷ್ಟೇ ಟೆನ್ಶನ್ ಮಾಡಿಕೊಂಡರೂ, ನಿನ್ನ ಮೊಬೈಲ್ ಈಗ ನಿನ್ನ ಮಾತು ಕೇಳಲ್ಲ ಅಂತ ಶಕುಂತಲಾದೇವಿ ಹೇಳಿದ್ದಾಳೆ.

ಅಕ್ಕೋರೆ ಈ ಫೋನ್ ಹಾಳಾಗಿ ಹೋಗಿದೆ ನಿಮ್ಮ ಫೋನ್ ಕೊಡಿ ಅಂತ ಭೂಮಿಕಾ ಜಾಗದಲ್ಲಿರುವ ದೀಪಿಕಾಳ ಬಳಿ ಕೇಳಿದ್ದಾಳೆ. ಇದರಲ್ಲಿ ವಿಡಿಯೋನೇ ಇಲ್ವಲ್ಲ. ಈ ಸಾಕ್ಷಿ ಮೂಲಕವೇ ನಾವು ಮ್ಯಾಜಿಸ್ಟ್ರೇಟರ್ ಬಳಿ ಹೋಗಬೇಕಾಗಿತ್ತು ಅಂತ ಮಲ್ಲಿ ಹೇಳಿದ್ದಾಳೆ. ಆದರೆ ಭೂಮಿಕಾಳಂತೆ ನಟಿಸುತ್ತಿರುವ ದೀಪಿಕಾಗೆ ಇದ್ಯಾವ ವಿಷಯವೂ ತಿಳಿಯದೆ ಕಣ್ಣು ಕಣ್ಣು ಮಿಟುಕಿಸಿದ್ದಾಳೆ. ಅಲ್ಲಿಗ್ಯಾಕೆ ಅಂತ ದೀಪಿಕಾ ಕೇಳಿದ್ದಾಳೆ. ಇದಕ್ಕೆ ಮಲ್ಲಿ ನಿಮಗೆ ಏನೂ ನೆನಪೇ ಇಲ್ವಾ ಅಂತ ಕೇಳಿದ್ದಾಳೆ.
Amritdhare Serial: ಭೂಮಿಕಾ ಇನ್ನೂ ಸತ್ತಿಲ್ಲ!
ಮತ್ತೊಂದು ಕಡೆ ಭೂಮಿಕಾ ಇನ್ನೂ ಸತ್ತಿಲ್ಲ. ಸಂಕಷ್ಟದಿಂದ ಪಾರಾಗಿದ್ದಾಳೆ ಎನ್ನುವಂತೆ ತೋರಿಸಲಾಗಿದೆ. ಮತ್ತೊಂದು ಕಡೆ ಕಥೆ ಹೇಳಿ ಅಮ್ಮ ಅಂತ ದೀಪಿಕಾಗೆ ಮಿಂಚು ಗಂಟು ಬಿದ್ದಿದ್ದಾಳೆ. ಮಿಂಚುನಿಂದ ತಪ್ಪಿಸಿಕೊಳ್ಳುವಲ್ಲಿ ದೀಪಿಕಾ ಇನ್ನೂ ತಿಣುಕಾಡುತ್ತಿರುವಂತೆ ತೋರಿಸಲಾಗಿದೆ.
ಕೇಡಿಗೆ ಚಳ್ಳೆಹಣ್ಣು ತಿನ್ನಿಸಿಬಿಟ್ಲು ಕಿಲಾಡಿ ಲೇಡಿ ದೀಪಿಕಾ!
ಇನ್ನು ಇತ್ತೀಚಿನ ಎಪಿಸೋಡ್‌ನಲ್ಲಿ ಕೇಡಿಗೆ ಚಳ್ಳೆಹಣ್ಣು ತಿನ್ನಿಸಿಬಿಟ್ಲು ಕಿಲಾಡಿ ಲೇಡಿ ದೀಪಿಕಾ ಅನ್ನುವಂತೆ ತೋರಿಸಲಾಗಿತ್ತು. ಭೂಮಿಕಾಳಂತೆ ಅಭಿನಯಿಸುವಂತೆ ಕರೆದುಕೊಂಡು ಬಂದಿದ್ದೇ ಕೇಡಿ ಜೈದೇವ್ ಆದರೆ, ಕೇಡಿಗಳಿಗೇ ದೀಪಿಕಾ ಚಳ್ಳೆಹಣ್ಣು ತಿನ್ನಿಸಿದ್ಳು. ಭೂಮಿಕಾಳಂತೆಯೇ ನಟಿಸಿದ್ದ ದೀಪಿಕಾ, ಶಕುಂತಲಾ ಹಾಗೂ ಕೇಡಿ ಜೈದೇವ್ ಆತಂಕಕ್ಕೆ ಒಳಗಾಗುವಂತೆ ಮಾಡಿದ್ದಳು. ಆದರೆ "ಪ್ಲ್ಯಾನ್' ಅಂತ ಹೇಳುವುದಕ್ಕೆ ಆಗದೆ ಸಿಕ್ಕಿ ಬಿದ್ದಿದ್ದಳು. ಇದೀಗ ಮಲ್ಲಿ ಮುಂದೆಯೂ ಭೂಮಿಕಾಳಂತೆ ದೀಪಿಕಾ ನಟಿಸುತ್ತಿದ್ದಾಳಾದರೂ ಸಿಕ್ಕಿ ಬೀಳುವ ಸಾಧ್ಯತೆ ದಟ್ಟವಾಗಿದೆ.
Amritdhare Serial: ನೆಟ್ಟಿಗರಿಂದ ಆಕ್ಷೇಪ
ಇನ್ನು ಸೋಶಿಯಲ್ ಮೀಡಿಯಾದಲ್ಲಿ ಅಮೃತಧಾರೆ ಸೀರಿಯಲ್‌ಗೆ ಸಂಬಂಧಿಸಿದಂತೆ ವೀಕ್ಷಕರಿಗೆ ನಕಾರಾತ್ಮಕ ಅಭಿಪ್ರಾಯ ವ್ಯಕ್ತವಾಗುತ್ತಿದೆ. ಈ ಸೀರಿಯಲ್‌ನಲ್ಲಿ ವಿಲನ್‌ಗಳೇ ಮೇಲುಗೈ ಸಾಧಿಸುತ್ತಿದ್ದಾರೆ. ವಿಲನ್‌ಗಳು ತಪ್ಪಿಸಿಕೊಳ್ಳುವುದಕ್ಕೆ ಸಾವಿರ ಅವಕಾಶಗಳು ಸಿಗುತ್ತಿವೆ ಎನ್ನುವ ಅಭಿಪ್ರಾಯ ಜನರಿಂದ ವ್ಯಕ್ತವಾಗುತ್ತಿದೆ.


Click it and Unblock the Notifications
