Amruthadhare Serial: ಅಮೃತಧಾರೆ ಧಾರಾವಾಹಿಯಲ್ಲಿ ಮಲ್ಲಿ ನಿರ್ಧಾರಕ್ಕೆ ವೀಕ್ಷಕರು ಶಾಕ್, ಭೂಮಿಕಾಗೆ ಸಂಕಷ್ಟ!

Amruthadhare Serial: ಅಮೃತಧಾರೆ ಸೀರಿಯಲ್ ರೋಚಕ ತಿರುವು ಪಡೆದುಕೊಂಡಿದೆ. ಕೇಡಿ ಜೈದೇವ್ ಕೊ*ಯ ನಂತರ ಭೂಮಿಕಾ ಹಾಗೂ ಜೀವಾ ಸಂಕಷ್ಟಕ್ಕೆ ಸಿಲುಕಿದ್ದಾರೆ. ಜೈದೇವ್ ಕೊಲೆ ಪ್ರಕರಣದಲ್ಲಿ ಭೂಮಿಕಾ ಮತ್ತು ಜೀವಾ ಇಬ್ಬರೂ ಜೈಲಿಗೆ ಹೋಗುವ ಪರಿಸ್ಥಿತಿ ಎದುರಾಗಿದೆ. ಪೊಲೀಸ್ ಅಧಿಕಾರಿ ಆಗಿರುವ ಮಲ್ಲಿಯೊಂದಿಗೆ ಭೂಮಿಕಾ ಎಲ್ಲ ವಿಷಯಗಳನ್ನೂ ಹೇಳಿದ್ದು, ಮಲ್ಲಿ ರಿಯಾಕ್ಟ್‌ ಮಾಡುತ್ತಿರುವ ವಿಧಾನವು ವೀಕ್ಷಕರಲ್ಲಿ ಆಚ್ಚರಿಯನ್ನುಂಟು ಮಾಡಿದೆ. ಭೂಮಿಕಾ ಆತಂಕದಲ್ಲಿಯೇ ಮಲ್ಲಿಯೊಂದಿಗೆ ಏನೆಲ್ಲ ನಡೆಯಿತು ಎನ್ನುವ ವಿಚಾರಗಳನ್ನು ಹಂಚಿಕೊಂಡಿದ್ದಾಳೆ. ಆದರೆ, ಪೊಲೀಸ್ ಸಹ ಆಗಿರುವ ಮಲ್ಲಿ ಇದಕ್ಕೆ ಹೇಗೆ ರಿಯಾಕ್ಟ್‌ ಮಾಡುತ್ತಾಳೆ ಎನ್ನುವ ಕುತೂಹಲ ಮೂಡಿತ್ತು. ಇದೀಗ ಮಲ್ಲಿ ಈ ಕೇಸ್ ವಿಚಾರದಲ್ಲಿ ಯುರ್ಟನ್ ತೆಗೆದುಕೊಂಡಿದ್ದಾಳೆ.

Amruthadhare Serial: ದಿಟ್ಟ ನಿರ್ಧಾರಕ್ಕೆ ಬಂದೇ ಬಿಟ್ಲು ಭೂಮಿ!

ದಿಟ್ಟ ನಿರ್ಧಾರಕ್ಕೆ ಬಂದೇ ಬಿಟ್ಲು ಭೂಮಿ ಎನ್ನುವ ಸಾಲುಗಳೊಂದಿಗೆ ಜೀ ಕನ್ನಡ ವಾಹಿನಿಯಿಂದ ಹೊಸ ಪ್ರೋಮೋ ಬಿಡುಗಡೆ ಮಾಡಲಾಗಿದೆ. ಅದರಲ್ಲಿ ಭೂಮಿಕಾಳೊಂದಿಗೆ ಮಾತನಾಡಿರುವ ಮಲ್ಲಿ, ಅಕ್ಕೋರೆ ನಾವು ಈಗ ಮಾಡಬೇಕಿರುವ ಕೆಲಸ ಆಗಿರುವುದನ್ನ ಸರಿ ಮಾಡುವುದಲ್ಲ, ಅದನ್ನ ಮ್ಯಾನೇಜ್ ಮಾಡೋದು. ಅದರ ಬಗ್ಗೆ ನಾವು ಗಮನ ಕೊಡೋಣ್ವಾ ಅಂತ ಮಲ್ಲಿ ಕೇಳಿದ್ದಾಳೆ. ಮಲ್ಲಿಯ ಪ್ರಶ್ನೆಗೆ ಭೂಮಿಕಾ ಸಹಮತ ಸೂಚಿಸಿಲ್ಲ. ಯಾವುದೂ ಸರಿ ಅಂತ ನನಗೆ ಅನಿಸ್ತಿಲ್ಲ. ನಾವು ಮಾಡಿರುವ ಅಪರಾಧವನ್ನ ಒಪ್ಪಿಕೊಳ್ಳದೆ, ಏನೂ ಮಾಡೇ ಇಲ್ಲ ಅಂತ ಸಾಬೀತು ಮಾಡುವುದಕ್ಕೆ ಹೊರಟ್ಟಿದ್ದೇವಲ್ಲ, ನಮ್ಮ ತುಂಬಾ ದೊಡ್ಡ ತಪ್ಪು. ಜೈದೇವ್ ಅವರು ಮಾಡಿರುವುದು ಪ್ರಪಂಚಕ್ಕೆ ಗೊತ್ತಾಗಬೇಕು, ನಾವು ಮಾಡಿರುವುದು ಸಹ ಪ್ರಪಂಚಕ್ಕೆ ಗೊತ್ತಾಗಬೇಕು ಅಂತ ಭೂಮಿಕಾ ಹೇಳಿದ್ದಾಳೆ.

Amruthadhare Serial Malli s Shocking Decision Leaves Bhumika in Trouble Viewers Stunned

ಇದಕ್ಕೆ ಉತ್ತರಿಸಿರುವ ಮಲ್ಲಿ, ಅವನು ಮಾಡಿರುವುದೆಲ್ಲ ಪ್ರಪಂಚಕ್ಕೆ ಗೊತ್ತಾಗಬೇಕು ಅಂತ ಹೇಳೋದು ಸರಿ. ಅದನ್ನ ಹೇಳೋಕೆ ಹೋಗಿ ನಮ್ಮ ಕೈಯಲ್ಲಿ ಇರುವುದನ್ನು ಕಳೆದುಕೊಂಡರೆ ಸರಿನಾ ಅಂತ ಮಲ್ಲಿ ಪ್ರಶ್ನೆ ಮಾಡಿದ್ದಾಳೆ. ಇದಕ್ಕೆ ಭೂಮಿಕ ಒಪ್ಪಿಕೊಂಡಿಲ್ಲ. ಮಲ್ಲಿ ನಾನು ಇದನ್ನ ಹೇಗೆ ಅರ್ಥ ಮಾಡಿಸಲಿ. ಪ್ರತಿ ಕ್ಷಣವೂ ನನಗೆ ಇದೇ ಚಿಂತೆ ಆಗಿದೆ. ಕೂತಾಗ, ನಿಂತಾಗ ನಾನು ಮಾಡಿದ ತಪ್ಪು ನನ್ನ ಕಣ್ಣ ಮುಂದೆಯೇ ಬರ್ತಿದೆ.

ಒಂದು ಸುಳ್ಳನ್ನ ಮರೆ ಮಾಚೋಕೆ ನಾವು ಸುಳ್ಳುಗಳ ಮೇಲೆ ಸುಳ್ಳುಗಳನ್ನು ಹೇಳುತ್ತಿದ್ದೇವೆ. ಕೊನೆಗೊಂದು ದಿನ ನಿಜ ಯಾವುದು ಅಂತ ನಮಗೇ ಮರ್ತು ಹೋಗುತ್ತೆ ಅಂತ ಭೂಮಿಕಾ ಹೇಳಿದ್ದಾಳೆ. ಇದಕ್ಕೆ ಮಲ್ಲಿ ಅಕ್ಕೋರೆ ನೀವು ಯಾಕೆ ಹಿಂಗೆಲ್ಲ ಯೋಚನೆ ಮಾಡ್ತಿದ್ದೀರಾ. ಸುಳ್ಳನ್ನು ಹೇಳೋದಕ್ಕೆ ಸುಳ್ಳು ಸೃಷ್ಟಿ ಮಾಡೋದು ಬೇರೆ. ಆದರೆ ಅದನ್ನು ಮುಚ್ಚಿಡೋದು ಬೇರೆ ಎರಡಕ್ಕೂ ವ್ಯತ್ಯಾಸ ಇದೆ.

Amruthadhare Serial: ಶಕುಂತಲಾ ದೇವಿ ಕೈ ಸೇರಿದ ಸಾಕ್ಷಿ!

ಸರಿ ನಾವು ತಪ್ಪು ಮಾಡಿದ್ದೇವೆ. ಆದರೆ ನಮ್ಮ ಉದ್ದೇಶ ತಪ್ಪಲ್ಲವಲ್ಲ. ನೀವ್ಯಾಕೆ ಇದೆಲ್ಲ ಯೋಚನೆ ಮಾಡ್ತೀರಾ ಆರಾಮಾಗಿ ಇರಿ, ಪ್ಲೀಸ್ ಅಂದಿದ್ದಾಳೆ. ಇದನ್ನು ಭೂಮಿಕಾ ಒಪ್ಪಿಕೊಳ್ಳಲು ಸಿದ್ಧವಿಲ್ಲ. ಇದನ್ನು ಮುಚ್ಚಿಟ್ಟು ನನ್ನಿಂದ ಆರಾಮಾಗಿ ಇರೋಕೆ ಆಗ್ತಿಲ್ಲ. ಸತ್ತು ಅವರು ನೆಮ್ಮದಿಯಾಗಿದ್ದಾರೆ. ಆದರೆ ಬದುಕಿ ಪ್ರತಿ ದಿನ ನಾನು ನರಕ ಅನುಭವಿಸುತ್ತಿದ್ದೇನೆ ಅಂತ ಭೂಮಿಕಾ ಹೇಳಿದ್ದಾಳೆ. ಆದರೆ ಈ ತರ ಭಯಪಟ್ಟು, ತಪ್ಪು ನಿರ್ಧಾರ ತಗೋಬೇಡಿ ಅಂತ ಮಲ್ಲಿ ಹೇಳಿದ್ದಾಳೆ.

ನೀವು ಮಾಡಿರುವುದು ಸರಿ ಅಲ್ಲ ಅವನು ಮಾಡಿರುವ ಅನ್ಯಾಯದ ಮುಂದೆ ನಾವ್ಯಾಕೆ ಕುಗ್ಗಬೇಕು ಅಂತ ಪ್ರಶ್ನಿಸಿದ್ದಾಳೆ. ಮತ್ತೊಂದು ಕಡೆ ಶಕುಂತಲಾ ದೇವಿ ಸಹ ಇನ್ವೆಸ್ಟಿಗೇಷನ್ ಪ್ರಾರಂಭಿಸಿದ್ದಾಳೆ. ಶಕುಂತಲಾ ದೇವಿಗೂ ಸಹ ಮಲ್ಲಿ ಹಾಗೂ ಭೂಮಿಕಾ ವಿಚಾರದಲ್ಲಿ ಅನುಮಾನ ಶುರುವಾಗಿದೆ. ರೆಕಾರ್ಡಿಂಗ್ ಸಿಸ್ಟಂ ಶಕುಂತಲಾ ದೇವಿ ಕೈ ಸೇರಿರೋದನ್ನ ಶಕುನಿ ಮಾವನ ಬಳಿ ಹೇಳಿದ್ದಾಳೆ!

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+