Amruthadhare Serial: ದೀಪಿಕಾಗೆ ಭೂಮಿಕಾ ಬದುಕಿರುವ ಸತ್ಯ ರಿವೀಲ್; ಫೋಟೋ ನೋಡಿ ಶಾಕುಂತಲಾದೇವಿಗೆ ಶಾಕ್!
ಅಮೃತಧಾರೆ ಸೀರಿಯಲ್‌ನಲ್ಲಿ ಮತ್ತೊಂದು ರೋಚಕ ತಿರುವು ಪಡೆದುಕೊಂಡಿದೆ. ದೀಪಿಕಾ ಮತ್ತು ಭೂಮಿಕಾ ಇಬ್ಬರೂ ಮುಖಾಮುಖಿಯಾಗಿದ್ದಾರೆ. ಆದರೆ, ಭೂಮಿಕಾ ಇನ್ನೂ ದೀಪಿಕಾಳನ್ನು ನೋಡಿಲ್ಲ. ಆದರೆ, ಆಸ್ಪತ್ರೆಯಲ್ಲಿ ದೀಪಿಕಾ, ಭೂಮಿಕಾಳನ್ನು ನೋಡಿದ್ದಾಳೆ. ಭೂಮಿಕಾ ಇನ್ನೂ ಸಾವನ್ನಪ್ಪಿಲ್ಲ ಎನ್ನುವ ಸತ್ಯ ಬಹಿರಂಗವಾಗಿದೆ.
ಭೂಮಿಕಾ ಸತ್ತಿದ್ದಾಳೆ ಎಂದು ದೀಪಿಕಾ ಭಾವಿಸಿದ್ದಳು. ಆದರೆ, ಆಸ್ಪತ್ರೆಯಲ್ಲಿ ಭೂಮಿಕಾ ಮಲಗಿರುವುದನ್ನು ನೋಡಿ ಶಾಕ್ ಆಗಿದ್ದಾಳೆ. ಬಾಡಿ ಇಲ್ಲೇ ಇದೆ... ಎಷ್ಟು ದಿನ ಆಯ್ತು ಅಂತ ಲೆಕ್ಕ ಹಾಕುವುದಕ್ಕೆ ಶುರು ಮಾಡಿದ್ದಾಳೆ. ಇನ್ನೂ ಮಣ್ಣು ಮಾಡಿಲ್ಲವೇ.... ಅವರಿಗೂ ಗೊತ್ತಿಲ್ಲ ಅನಿಸುತ್ತೆ ಅಂತ ಶಕುಂತಲಾದೇವಿಗೆ ಫೋನ್ ಮಾಡಿದ್ದಾಳೆ. ಅವರಿಗೇ ಗೊತ್ತಿರಲ್ಲ ಬಾಡಿ ಇಲ್ಲಿದೆ ಅಂತ ಅಪಘಾತದಲ್ಲಿ ಹೋಗಿ ಬಿಟ್ಟಿದ್ದಾಳೆ ಎಂದುಕೊಂಡಿರಬೇಕು ಎಂದುಕೊಂಡು ಫೋನ್ ಮಾಡಿದ್ದಾಳೆ. ಆದರೆ ಆಗಲೇ ಭೂಮಿಕಾ ಇನ್ನೂ ಜೀವಂತವಾಗಿದ್ದಾಳೆ ಎನ್ನುವ ವಿಷಯ ದೀಪಿಕಾಗೆ ಗೊತ್ತಾಗಿದೆ.

"ಇವಳು ಇನ್ನೂ ಬದ್ಕಿದ್ದಾಳೆ, ಸತ್ತೋಗಿದ್ದಾಳೆ ಅಂತ ಹೇಳಿದ್ರು... ನಾನೂ ಕೂಡ ಇವಳ ಆತ್ಮಕ್ಕೆ ಶಾಂತಿ ಸಿಗಲಿ ಅಂತೆಲ್ಲ ಬೇಡಿಕೊಂಡಿದ್ದೆ' ಅಂತ ದೀಪಿಕಾ ಪಶ್ಚಾತಾಪದಿಂದ ಕೊರಗಿದ್ದಾಳೆ. ನೂರು ಕಾಲ ಚಂದಾಗಿರಲಿ.. ಚಂದಾಗಿರವ ಅಂತ ಭಯದಿಂದಲೇ ಹೇಳಿದ್ದಾಳೆ. ಹಾಗಾದರೆ ಇವರು ನನ್ನ ಬಳಿ ಸುಳ್ಳು ಹೇಳಿದ್ರಾ ಕೇಳಿಯೇ ಬಿಡುತ್ತೇನೆ ಅಂತ ದೀಪಿಕಾ ಕೂಡಲೇ ಶಾಕುಂತಲಾದೇವಿಗೆ ಫೋನ್ ಮಾಡಿದ್ದಾಳೆ. ಮತ್ತೆ ಏನು ನಿಂದು ಏನಾದರೂ ಸಮಸ್ಯೆಯಿದ್ದರೆ ನೀನೇ ಹೇಗಾದರೂ ನಿಭಾಯಿಸು ಅಂತ ಫೋನ್ ತೆಗೆದ ಕೂಡಲೇ ಶಾಕುಂತಲಾದೇವಿ ಹೇಳಿದ್ದಾಳೆ.
Amruthadhare Serial: ಶಕುಂತಲಾದೇವಿಗೆ ಭಾರೀ ಶಾಕ್!
ಯೋ ಆಂಟಿ ನಾನು ಆ ಮೇಲೆ ಮ್ಯಾನೇಜ್ ಮಾಡ್ಕೋತಿನಿ ಮೊದಲು ನೀನು ಹೇಳು, ನೀನು ನಿನ್ನ ಸೊಸೆ ಸತ್ತೋಗವಳೆ.. ಅಂತ ಜಪ್ತಿ / ಕನ್ಫರ್ಮ್ ಮಾಡಿಕೊಂಡ್ಯ ಅಂತ ಕೇಳಿದ್ದಾಳೆ. ಏನ್ ಕನ್ಫರ್ಮ್ ಮಾಡ್ಕೋಬೇಕು ಎನ್ ಕೇಳ್ತಾ ಇದ್ದೀಯಾ ಅಂತ ಶಕುಂತಲಾದೇವಿ ಕೇಳಿದ್ದಾಳೆ. ಇದಕ್ಕೆ ನೀವು ನಿಮ್ಮ ಸೊಸೆ ಸತ್ತಿದ್ದಾಳೆ ಅಂತ ನನ್ನನ್ನ ಕರೆದುಕೊಂಡು ಬಂದ್ರಲ್ಲ ಆದರೆ ನಿಮ್ಮ ಸೊಸೆ ಇನ್ನೂ ಸತ್ತಿಲ್ಲ ಅಂತ ಹೇಳಿದ್ದಾಳೆ ದೀಪಿಕಾ. ಇದನ್ನು ಕೇಳಿದ ಕೂಡಲೇ ಶಾಕುಂತಲಾದೇವಿ ಭಾರೀ ಶಾಕ್‌ಗೆ ಒಳಗಾಗಿದ್ದಾಳೆ.
ಏನ್ ಹೇಳ್ತಾ ಇದ್ದೀಯಾ ಎಲ್ಲಿದ್ದಾಳೆ ಅಂತ ಕೇಳಿದ್ದಾಳೆ. ಇದಕ್ಕೆ ನಿಜಾನೇ ಹೇಳ್ತಾ ಇದ್ದೀನಿ ಅವಳು ನನ್ನ ಕಣ್ಣ ಮುಂದೆಯೇ ಇದ್ದಾಳೆ. ನಾನು ಅವಳನ್ನ ನೋಡ್ತಾ ಇದ್ದೀನಿ ಆದರೆ ಅವಳು ನನ್ನನ್ನು ನೋಡ್ತಾ ಇಲ್ಲ ಅಂತ ದೀಪಿಕಾ ಹೇಳಿದ್ದಾಳೆ. ನಾನೊಂದು ಫೋಟೋ ಕಳ್ಸತೀನಿ ನೀವು ನೋಡಿಕೊಳ್ಳಿ ಅಂತ ಕೂಡಲೇ ಫೋನ್‌ನಿಂದ ಭೂಮಿಕಾ ಬದುಕಿರುವ ಫೋಟೋ ಕಳ್ಸಿದ್ದಾಳೆ. ಫೋಟೋ ನೋಡಿದ ಕೂಡಲೇ ಶಾಕುಂತಲಾದೇವಿ ಫುಲ್ ಶಾಕ್ ಆಗಿರುವಂತೆ ತೋರಿಸಲಾಗಿದೆ.


Click it and Unblock the Notifications
