Amruthadhare serial: ಮಗುವಿಗೆ ಜನ್ಮ ನೀಡಿದ ಭೂಮಿಕಾ; ಕುತಂತ್ರಿ ಆಟಕ್ಕೆ ಬಿತ್ತು ಬ್ರೇಕ್‌!

ದಿನದಿಂದ ದಿನಕ್ಕೆ ಅಮೃತಾಧಾರೆ ಸೀರಿಯಲ್ನಲ್ಲಿ ಗೌತಮ್ ಭೂಮಿ ಜೀವನಕ್ಕೆ ಪುಟ್ಟ ಕಂದಮ್ಮನ ಆಗಮನವಾಗಬೇಕಿದೆ. ಪ್ರೆಗ್ನೆಂಟ್ ಆಗಿರೋ ಪತ್ನಿ ಕನಸನ್ನ ಒಂದೊಂದಾಗಿಯೇ ಡುಮ್ಮ ಸರ್‌ ಗೌತಮ್‌ ಅವರು ಈಡೇರಿಸುತ್ತಿದ್ದಾರೆ. ಗೌತಮ್‌ ಹಾಗೂ ಭೂಮಿಕಾ ಅವರ ಬದುಕಿನಲ್ಲಿ ಅಶಾಂತಿ ಉಂಟು ಮಾಡಲ್ಲ ಕುತಂತ್ರಿಗಳು ಹಲವು ತಂತ್ರಗಾರಿಕೆಯನ್ನ ನಡೆಸಿದರೂ ಸಹ ಅದು ವರ್ಕೌಟ್‌ ಆಗುತ್ತಿಲ್ಲ.

ದಿನದಿಂದ ದಿನಕ್ಕೆ ಅಮೃತಧಾರೆ ಸೀರಿಯಲ್‌ ಟಿಆರ್‌ಪಿಯಲ್ಲಿ ಉಕ್ಕೇರಿ ಹರಿಯೋ ಎಲ್ಲ ಸೂಚನೆ ಸಿಕ್ಕಿದೆ. ಒಳ್ಳೆಯ ಕಥೆಯನ್ನ ರಾಜ್ಯದ ಜನತೆಗೆ ಮೆಚ್ಚಿದ್ದಾರೆ. ಈ ಸೀರಿಯಲ್‌ ನಲ್ಲಿ ಜನಪ್ರಿಯ ನಾಯಕ, ನಾಯಕಿಯರು ಅಭಿನಯಿಸಿದ್ದಾರೆ. ಜೊತೆಗೆ ದೊಡ್ಡ ದೊಡ್ಡ ಇನ್ಸಿಡೆಂಟ್‌ಗಳು ಬೇರೆ ಕುತೂಹಲ ಜಾಸ್ತಿ ಮಾಡಿವೆ. ಈ ನಡುವೆ ಪ್ರಮುಖ ಪಾತ್ರದಲ್ಲಿರುವ ಭೂಮಿಕಾ ಮತ್ತು ಗೌತಮ್‌ ಅವರಿಗೆ ಯಾವ ಮಗು ಹುಟ್ಟುತ್ತೆ ಅನ್ನೋದು ಈ ಸೀರಿಯಲ್‌ ನೋಡೋ ಅಭಿಮಾನಿಗಳ ಮಿಲಿಯನ್‌ ಡಾಲರ್‌ ಪ್ರಶ್ನೆಯಾಗಿದೆ.

Amruthadhare serial Bhumika gives birth to a baby

ಭೂಮಿಕಾಗೆ ಇದೀಗ 9 ತಿಂಗಳು ತುಂಬಿವೆ. ಈ ನಡುವೆ ಕೇಡಿ ಪಾತ್ರದಾರಿಯಾಗಿರುವ ಶಕುಂತಳಾ ಸೇಡಿನಿಂದಾಗಿ ಗೌತಮ್‌ ಹಾಗೂ ಭೂಮಿಕಾಗೆ ಒಂದಲ್ಲ ಒಂದು ಕೇಡನ್ನ ಬಯಸುತ್ತಿರುತ್ತಾರೆ. ಇದೀಗ ಜಗತ್ತನೇ ನೋಡದ ಕಂದಮ್ಮನ್ನ ಕೊಲ್ಲಲು ಶಕುಂತಲಾಳ ಕುತಂತ್ರ ನಡೆಸಿದ್ದಾರೆ. ಶಂಕುತಲಾ ಅಣ್ಣ ಸದ್ಯ ಜೈಲು ಸೇರಿದ್ದು, ಜೈದೇವ್‌ ಇನ್ನೊಂದು ಮದುವೆಯಾಗಿದ್ದೇನೆ. ಇದರ ನಡುವೆ ಶಕುಂತಳಾಳ ಹೊಸ ಆಟ ಶುರುವಾಗಿದೆ. ಭೂಮಿಕಾ ಹಾಗೂ ಮಗುವನ್ನು ಕೊಲ್ಲಲು ಭೂಮಿಕಾಗೆ ಹಾಲಿನಲ್ಲಿ ಜಾಂಡೀಸ್‌ ಔಷಧ ಹಾಕಿ ಕೊಟ್ಟಿದ್ದಾಳೆ. ಈ ಸ್ಲೋ ಪಾಯಿಸನ್‌ ನಿಂದಾಗಿ ಮಗು ಹಾಗೂ ಭೂಮಿಕಾ ಇಬ್ಬರನ್ನೂ ದೇವರ ಪಾದ ಸೇರಿಸಲಿದೆ ಎನ್ನುವುದು ಕುತಂತ್ರಿಗಳ ಲೆಕ್ಕಾಚಾರವಾಗಿದೆ.

ಭೂಮಿಕಾಗೆ ಹಾಲಿನಲ್ಲಿ ಜಾಂಡೀಸ್‌ ಔಷದಿ ಕೊಟ್ಟ ಹಿನ್ನಲೆ ಕಾಡಿನಲ್ಲಿ ನಾಟಿ ಔಷದಿ ಪಡೆಯಲು ಭೂಮಿಕಾ ಹಾಗೂ ಗೌತಮ ತೆರಳಿದ್ದಾರೆ. ಅಲ್ಲಿಯೂ ಸಹ ಶಂಕುತಲಾ ರೌಡಿಗಳನ್ನ ಬಿಟ್ಟು ಕೊಲ್ಲಲು ಸಂಚು ರೂಪಿಸಿದ್ದಾಳೆ. ಇತ್ತ ಭೂಮಿಕಾಳನ್ನ ಕಾಡಿನ ಮಧ್ಯೆ ಇರುವ ದೇವಸ್ಥಾನಕ್ಕೆ ಕರೆ ತರಲಾಗ್ತಿದೆ. ನಡುವೆಯೇ ಕಾರು ಕೆಟ್ಟೋಗಿದೆ. ಇತ್ತ ಭೂಮಿಕಾ ಹಾಗೂ ಗೌತಮ್‌ ರೌಡಿಗಳ ಕೈಗೆ ಸಿಕ್ಕಿಬಿದಿದ್ದು, ಗಲಾಟೆ ನಡೆಯುವ ಹೊತ್ತಲ್ಲೇ ಅಣ್ಣಯ್ಯ ಸೀರಿಯಲ್‌ ನಾಯಕ ಶಿವು ಎಂಟ್ರಿ ಕೊಟ್ಟಿದ್ದಾರೆ. ಇತ್ತ ಭೂಮಿಕಾಗೆ ಹೆರಿಗೆ ನೋವು ಕಾಣಿಸಿಕೊಂಡಿದ್ದು, ಕರ್ಣ ಸೀರಿಯಲ್‌ನ ಹೀರೋ ಕರ್ಣ ಮತ್ತು ಅಣ್ಣಯ್ಯ ಸೀರಿಯಲ್‌ ನಾಯಕಿ ಪಾರು ಭೂಮಿಕಾಳನ್ನು ಕಾಪಾಡೋದಕ್ಕೆ ಎಂಟ್ರಿ ಕೊಡಲಿದ್ದಾರೆ.

ಭೂಮಿಕಾಗೆ ಹೆರಿಗೆ ನೋವು ಕಾಣಿಸಿಕೊಂಡಿದ್ದು, ಇಬ್ಬರು ಡಾಕ್ಟರ್‌ ಎಂಟ್ರಿಯಾಗಿದ್ದಾರೆ. ಇತ್ತ ಭೂಮಿಕಾ ಹಾಗೂ ಮಗುವಿಗೆ ಏನೂ ಆಗಿಲ್ಲ ಎಂಬುದೇ ವೀಕ್ಷಕರಿಗೆ ಖುಷಿ ತಂದಿದೆ. ಇತ್ತ ವೀಕ್ಷಕರಲ್ಲಿ ಹುಟ್ಟಿರುವ ಇನ್ನೊಂದು ಪ್ರಶ್ನೆ ಎಂದರೇ ಅದು ಮಗು ಯಾವುದಿರಬಹುದು ಅಂತ. ಇದಕ್ಕೆ ಸೀರಿಯಲ್‌ನಲ್ಲೇ ಒಂದು ಹಿಂಟ್‌ ಸಿಕ್ಕಿದೆ. ಭೂಮಿಕಾ ಗೌತಮ್‌ ಮನೆಯಿಂದ ಕಾಡಿನಲ್ಲಿರುವ ದೇವಸ್ಥಾನಕ್ಕೆ ಹೊರಡುವಾಗ ಅತ್ತೆ ಭಾಗ್ಯಮ್ಮ ಅಂದರೆ ಗೌತಮ್‌ ಅವರ ತಾಯಿ ಭೂಮಿಕಾ ಕೈಗೆ ಗಣೇಶನ ವಿಗ್ರಹ ಇಡುತ್ತಾರೆ. ಇದನ್ನು ನೋಡಿಯೇ ವೀಕ್ಷಕರು ಹುಟ್ಟೋ ಮಗು ಗಂಡೇ ಎಂದು ಖುಷಿಯಲ್ಲಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+