Amruthadhaare: ಅಮೃತಧಾರೆ ಸೀರಿಯಲ್‌ನ ಜಾಮೂನ್ ಸೀನ್ ವೈರಲ್!

Amruthadhaare: ಕನ್ನಡ ಸೀರಿಯಲ್‌ಗಳಲ್ಲಿ ಹೊಸ ತಿರುವುಗಳನ್ನು ಪಡೆದುಕೊಂಡು ಮುನ್ನುಗುತ್ತಿರುವ ಅಮೃತಧಾರೆ ಮತ್ತೊಂದು ಕಾರಣಕ್ಕೆ ಸುದ್ದಿಯಲ್ಲಿದೆ. ಅಮೃತಧಾರೆ ಸೀರಿಯಲ್ ದಿನಕ್ಕೊಂದು ತಿರುವು ಪಡೆದುಕೊಂಡು ಮುನ್ನುಗ್ಗುತ್ತಿದೆ. ಕೆಲವು ದಿನಗಳ ಹಿಂದೆ ಈ ಸೀರಿಯಲ್ ಅಲ್ಲಿ ಬರುತ್ತಿದ್ದ ದೃಶ್ಯಗಳ ಜನರ ಮನಸ್ಸಿಗೆ ಅಷ್ಟೇನು ಇಷ್ಟವಾಗಿರಲಿಲ್ಲ. ಇದೀಗ ಸೀರಿಯಲ್ ಮತ್ತೆ ಹಳಿಗೆ ಬರುತ್ತಿದ್ದು ಪ್ರೇಕ್ಷಕರು ಫಿದಾ ಆಗಿದ್ದಾರೆ. ಈಗ ಬಿಡುಗಡೆಯಾಗಿರುವ ಪ್ರೋಮೋ ನೋಡಿರುವ ವೀಕ್ಷಕರು ಈ ಸೀರಿಯಲ್‌ನ ಬಗ್ಗೆ ಹಾಗೂ ಸೂರ್ಯವಂಶ ಸಿನಿಮಾ ನೆನಪಿಸಿಕೊಂಡು ಮಜವಾದ ಕಮೆಂಟ್ ಮಾಡುತ್ತಿದ್ದಾರೆ.

ಅಮೃತಧಾರೆ ಸೀರಿಯಲ್ ಯಾರೂ ನಿರೀಕ್ಷೆ ಮಾಡದಂತಹ ತಿರುವುಗಳನ್ನು ಪಡೆದುಕೊಂಡು ಮುನ್ನುಗ್ಗುತ್ತಿದೆ. ಡುಮ್ಮ ಸರ್ ಹಾಗೂ ಅವರ ಮಗ ಒಂದಾಗಿರುವ ದೃಶ್ಯಗಳು ಜನರ ಮನಸ್ಸನ್ನು ಸೆಳೆದಿದೆ. ಭೂಮಿಕಾ ಹಾಗೂ ಗೌತಮ್ ಅವರು ಒಂದಾಗಬೇಕು. ಕೂಡುಕುಟುಂಬವಾಗಿ ಎಲ್ಲರೂ ಸೇರಬೇಕು. ಕಾಣೆಯಾಗಿರುವ ಹೆಣ್ಣು ಮಗವೂ ಸೇರಬೇಕು ಅಂತ ಜನ ಇಷ್ಟಪಡುತ್ತಿದ್ದಾರೆ.

Amruthadhare Jamun Scene Goes Viral Fans Recall Suryavansh Magic

ಅಮೃತಧಾರೆ ಸೀರಿಯಲ್ ಈಗ ಪ್ರೇಕ್ಷಕರು ಸಣ್ಣ ಅಸಮಾಧಾನ ಹಾಗೂ ಆಶಾಭಾವನೆಯಿಂದಲೇ ನೋಡುತ್ತಿದ್ದಾರೆ ಎಂದು ಹೇಳಬಹುದು. ಮುಂದಿನ ದಿನಗಳಲ್ಲಿ ಎಲ್ಲರೂ ಒಂದಾಗಬಹುದು ಎನ್ನುವ ನಿರೀಕ್ಷೆ ಪ್ರೇಕ್ಷಕರದ್ದು. ಈಗ ಬಂದಿರುವ ಪ್ರೋಮೋದಲ್ಲಿ ಆಕಾಶ್ ಬರ್ತಡೇ ಸಂಭ್ರಮಾಚರಣೆಯನ್ನು ತೋರಿಸಲಾಗಿದೆ. ಆಕಾಶ್‌ ಬರ್ತಡೇ ಸಂಭ್ರಮಾಚರಣೆಯಲ್ಲಿದ್ದು. ಗೌತಮ್ ಅವರಿಗೆ ಸಹಿ ಸಹಿ ಜಾಮೂನು ತೆಗೆದುಕೊಂಡು ಬಂದಿರುವ ದೃಶ್ಯಗಳು ಮೂಡಿ ಬಂದಿವೆ.

ಸೂರ್ಯವಂಶ ಪಿಚ್ಚರ್ ತರ ಇದೆ ಇದು ಎಂದು ಪ್ರೇಕ್ಷಕರು ಅಭಿಪ್ರಾಯಪಟ್ಟಿದ್ದಾರೆ. ಸೂರ್ಯವಂಶ ಗಸಗಸ ಪಾಸಯ ಅಲ್ಲ ಅಮೃತಧಾರೆ ಜಾಮೂನ್ ಅಂತ, ಸೂರ್ಯವಂಶದಲ್ಲಿ ಅಪ್ಪ - ಮೊಮ್ಮಗ, ಅಮೃತಧಾರೆಯಲ್ಲಿ ಅಪ್ಪ - ಮಗ, ಸಿನಿಮಾ ನೋಡಿದಂತೆ ಆಗುತ್ತಿದೆ. ಆದರೆ ದೃಶ್ಯಗಳು ಮನಮೋಹಕವಾಗಿದೆ ಎಂದು ಪ್ರೇಕ್ಷಕರು ಕಮೆಂಟ್ ಮಾಡುತ್ತಿದ್ದಾರೆ.

ಎಲ್ಲರೂ ದೂರ ದೂರ ಆಗಿರುವುದು ಪ್ರೇಕ್ಷಕರಲ್ಲಿ ಸಣ್ಣ ಅಸಮಾಧಾನವನ್ನು ಮೂಡಿಸಿರುವುದಂತೂ ನಿಜ. ಆದರೆ ಇತ್ತೀಚಿಗೆ ಬರುತ್ತಿರುವ ಸೀನ್‌ಗಳನ್ನು ನೋಡಿದರೆ ಗೌತಮ್ ಹಾಗೂ ಭೂಮಿಕಾ ಅವರು ಬೇಗ ಸೇರಲಿದ್ದಾರೆ ಎನ್ನುವಂತೆಯೇ ಇದೆ. ಮುಖ್ಯವಾಗಿ ಗೌತಮ್ ಮತ್ತು ಆಕಾಶ್ ಒಂದಾಗಿರುವುದು ಜನರ ಮನಸ್ಸು ಸೆಳೆದಿದೆ. ಈಗ ಬಂದಿರುವ ಪ್ರೋಮೋ ಸೂರ್ಯವಂಶ ಸಿನಿಮಾ ನೆನಪಿಸುತ್ತಿದೆ ಎಂದು ಪ್ರೇಕ್ಷಕರು ಹೇಳಿದ್ದಾರೆ.

ಬೇಗ ಸೇರಿಸಿ: ಇನ್ನು ಗೌತಮ್, ಭೂಮಿ ಹಾಗೂ ಆಕಾಶ್ ಅವರನ್ನು ಬೇಗ ಒಂದು ಮಾಡಿ. ಅಲ್ಲದೇ ಗೌತಮ್ ಅವರನ್ನು ಮೊದಲಿನಂತಯೇ ಶ್ರೀಮಂತರನ್ನಾಗಿಸಿ, ದುಷ್ಟರಿಗೆ ಶಿಕ್ಷೆ ಆಗುವಂತೆ ನೋಡಿಕೊಳ್ಳಿ. ತುಂಬಾ ಎಳೆಯದೆ ಸೀರಿಯಲ್‌ಗೆ ಒಳ್ಳೆಯ ಅಂತ್ಯ ಕೊಡಿ ಎಂದು ಪ್ರೇಕ್ಷಕರು ಒತ್ತಾಯಿಸಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+