Amruthadhare: ಜೈದೇವ್ ವಿರುದ್ಧ ಭೂಮಿಕಾ-ಮಲ್ಲಿಯ ಮಾಸ್ಟರ್ ಪ್ಲ್ಯಾನ್; ಮಧುರಾ ಕಿಡ್ನ್ಯಾಪ್ ಮಾಡಿಸಿದ ಕೇಡಿ
ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಪ್ರಮುಖ ಸೀರಿಯಲ್ ಅಮೃತಧಾರೆಯು ಇದೀಗ ಮತ್ತೊಂದು ರೋಚಕ ತಿರುವು ಪಡೆದುಕೊಂಡಿದೆ. ಆದರೆ ಹೊಸ ತಿರುವಿಗೆ ಪ್ರೇಕ್ಷಕರ ತಮ್ಮ ಅಸಮಾಧಾನ ವ್ಯಕ್ತಪಡಿಸಿದ್ದಾರೆ. "ಜೆಡಿ ಕೈಗೆ ಸಿಕ್ಕಿಬಿದ್ಲು ಬೇಹುಗಾರಿಕೆ ಮಾಡ್ತಿದ್ದ ಮೀನು.. ಸುಳಿವು ಸಿಕ್ಕ ಶಕುಂತಲಾ ಕಾಪಾಡಿಕೊಳ್ತಾಳಾ ಮಗನನ್ನು?' ಎನ್ನುವ ಸಾಲುಗಳೊಂದಿಗೆ ಹೊಸ ಪ್ರೋಮೋ ಬಿಡುಗಡೆ ಮಾಡಲಾಗಿದೆ. ಜೈದೇವ್‌ನನ್ನು ಉಳಿಸಿಕೊಳ್ಳಲು ಶಕುಂತಲಾ ದೇವಿ ಖತರ್ನಾಕ್ ಪ್ಲ್ಯಾನ್ ಮಾಡಿದ್ದಾಳೆ. ಜೈದೇವ್ ಬೇಬಿಯನ್ನು ಕೊಲೆ ಮಾಡಿದ್ದಾನೆಯೇ ಎನ್ನುವ ಅನುಮಾನ ಮಲ್ಲಿಗೆ ಬಂದಿತ್ತು. ಭೂಮಿಕಾ ಮತ್ತು ಮಲ್ಲಿ ಇಬ್ಬರೂ ಸೇರಿಕೊಂಡು ಸಿಕ್ರೆಟ್ ಇನ್ವೆಸ್ಟಿಗೇಷನ್ ಮಾಡಿದ್ದರು.
ಭೂಮಿಕಾ ಮತ್ತು ಮಲ್ಲಿ ಏನೋ ಮಾಡುತ್ತಿದ್ದರು ಎನ್ನುವ ಅನುಮಾನ ಶಕುಂತಲಾ ದೇವಿಗೆ ಬಂದಿತ್ತು. ಇದರ ಬೆನ್ನಲ್ಲೇ ಭೂಮಿಕಾ ಹಾಗೂ ಮಲ್ಲಿ ಮನೆಯಲ್ಲಿ ಇಲ್ಲದೆ ಇರುವ ಸಂದರ್ಭವನ್ನು ನೋಡಿಕೊಂಡು ಶಕುಂತಲಾ, ಭೂಮಿಕಾ ರೂಮ್‌ನಲ್ಲಿ ಹುಡುಕುವುದಕ್ಕೆ ಶುರು ಮಾಡಿದ್ದಾಳೆ. ಈ ಸಂದರ್ಭದಲ್ಲಿ ಶಕುಂತಲಾಗೆ ಫೋನ್ ಟ್ರ್ಯಾಪ್ ಹಾಗೂ ಜೈದೇವ್ ಮಾತುಗಳನ್ನು ರೆಕಾರ್ಡ್ ಮಾಡಲು ಬಳಸುತ್ತಿದ್ದ ಸಾಧನಗಳು ಸಿಕ್ಕಿವೆ! ರೆಕಾರ್ಡರ್‌ನಲ್ಲಿ ಜೈದೇವ್ ಮಾತನಾಡಿರುವ ಮಾತುಗಳು ರೆಕಾರ್ಡ್ ಆಗಿರುವುದು ಶಕುಂತಲಾಗೆ ಗೊತ್ತಾಗಿದೆ.

ಭೂಮಿಕಾ - ಮಲ್ಲಿ ಸೇರಿಕೊಂಡು ಜೈದೇವ್‌ನ ಟ್ರಾಫ್ ಮಾಡಿದ್ದಾರೆಯೇ ಎನ್ನುವ ಪ್ರಶ್ನೆ ಶಕುಂತಲಾಗೆ ಮೂಡಿದೆ. ಈ ವಿಷಯವನ್ನು ಫೋನ್ ಮಾಡಿ ಶಕುಂತಲಾ ಜೈದೇವ್‌ಗೆ ತಿಳಿಸಿದ್ದಾಳೆ. ಮಹಿಳಾ ಪೊಲೀಸ್ ಕಾನ್ಸ್ಟೇಬಲ್ ಮಧುರಾ ಮೂಲಕ ಕೇಡಿ ಜೈದೇವ್ ಕ್ರೈಮ್ ವಿಷಯಗಳನ್ನು ಕೆದುಕಲಾಗಿತ್ತು. ಇದೀಗ ಎಲ್ಲ ದಾಖಲೆಗಳು ಸಿಕ್ಕಿವೆಯಾದರೂ ಜೈದೇವ್ ಮುಂದೆ ಮಧುರಾನ ಕಿಡ್ನ್ಯಾಪ್ ಮಾಡಿರುವಂತೆ ತೋರಿಸಲಾಗಿದೆ. ಜೀವ ಬಳಿ ಡಾಕ್ಯೂಮೆಂಟ್ಸ್‌ನ ಒಂದು ಕಾಪಿ ಕೊಟ್ಟಿರುವುದಾಗಿ ಮಧುರಾ ಹೇಳಿದ್ದಾಳೆ. ಇದೆಲ್ಲವನ್ನೂ ದೂರದಿಂದಲೇ ಕೇಡಿ ಜೈದೇವ್ ನೋಡುತ್ತಿರುವಂತೆ ತೋರಿಸಲಾಗಿದೆ. ಡಾಕ್ಯುಮೆಂಟ್ಸ್ ತೆಗೆದುಕೊಂಡಿರುವ ಜೀವ ನೀವೇನು ಇದರ ಬಗ್ಗೆ ಯೋಚನೆ ಮಾಡಬೇಡಿ, ಇದು ನನ್ನ ಹತ್ರ ಭದ್ರವಾಗಿರುತ್ತೆ ಎಂದಿದ್ದಾನೆ.
ಚಕ್ರವ್ಯೂಹದಲ್ಲಿರೋ ಜೇಡಿಗೀಗ ಉಸಿರು ಕಟ್ಟೋ ಹೊತ್ತು; ಭೂಮಿಕಾ ಮಾಸ್ಟರ್ ಪ್ಲಾನ್ ಗೆಲ್ಲಲೇ ಬೇಕು!
ಚಕ್ರವ್ಯೂಹದಲ್ಲಿರೋ ಜೇಡಿಗೀಗ ಉಸಿರು ಕಟ್ಟೋ ಹೊತ್ತು; ಭೂಮಿಕಾ ಮಾಸ್ಟರ್ ಪ್ಲ್ಯಾನ್ ಗೆಲ್ಲಲೇ ಬೇಕು ಎನ್ನುವ ಮತ್ತೊಂದು ಪ್ರೋಮೋದಲ್ಲಿ ಕೇಡಿ ಜೈದೇವ್ ಈ ತಂತ್ರಕ್ಕೆ ಪ್ರತಿ ತಂತ್ರ ರೂಪಿಸುತ್ತಿರುವಂತೆ ತೋರಿಸಲಾಗಿದೆ. ನಾನು ಹಿರಿಯ ಅಧಿಕಾರಿಗಳ ಬಳಿ ಮಾತನಾಡಿದ್ದೇನೆ ಅಂತ ಮಲ್ಲಿ ಹೇಳಿದ್ದಾಳೆ. ಅದಕ್ಕೆ ಭೂಮಿಕಾ ಜೈದೇವ್ ಅವರನ್ನು ಅರೆಸ್ಟ್ ಮಾಡಿಸುವುದು ಮಾತ್ರವಲ್ಲ, ಕೇಸ್ ಎಷ್ಟು ಸ್ಟ್ರಾಂಗ್ ಆಗಿರಬೇಕೆಂದರೆ ನಾಳೆ ದಿನ ಯಾವ ಲೂಪ್‌ಹೋಲ್ ಆಗದಂತೆ ಇರಬೇಕು. ಅದರ ಮೂಲಕ ಅವರು ತಪ್ಪಿಸಿಕೊಳ್ಳಬಾರದು ಅಂತಲೂ ಭೂಮಿಕಾ ಹೇಳಿದ್ದಾಳೆ. ಮಲ್ಲಿ ಹಿರಿಯ ಅಧಿಕಾರಿಗಳ ಬಳಿ ಈ ವಿಷಯವನ್ನು ತಿಳಿಸುವುದಕ್ಕೆ ಹೋಗುವಾಗಲೇ ಈ ಕಡೆ ಜೈದೇವ್ ಮಧುರಾನ ಕಿಡ್ನ್ಯಾಪ್ ಮಾಡಿರುವಂತೆ ತೋರಿಸಲಾಗಿದೆ.


Click it and Unblock the Notifications
