Amruthadhaare Serial: ಅಮೃತಧಾರೆ ಶೀಘ್ರ ಮುಕ್ತಾಯ ನಟಿ ಛಾಯಾಸಿಂಗ್ ಹೇಳಿದ್ದೇನು, ಇಲ್ಲಿದೆ ಹೊಸ ಅಪ್ಡೇಟ್ಸ್‌

ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಪ್ರಮುಖ ಸೀರಿಯಲ್ ಅಮೃತಧಾರೆ ಮುಗಿಯುವ ಬಗ್ಗೆ ನಟಿ ಛಾಯಾಸಿಂಗ್ ಅವರು ಸುಳಿವು ನೀಡಿದ್ದಾರೆ. ದೀಪಾವಳಿ ಸಮಯಕ್ಕೆ ಅಮೃತಧಾರೆ ಸೀರಿಯಲ್ ಮುಕ್ತಾಯವಾಗುವ ಸಾಧ್ಯತೆ ಇದೆ. ಅಮೃತಧಾರೆ ಸೀರಿಯಲ್‌ ಹಲವು ತಿರುವುಗಳನ್ನು ಪಡೆದುಕೊಂಡಿತ್ತು. ಸೀರಿಯಲ್‌ನ ಪ್ರಮುಖ ಸತ್ಯಾಂಶಗಳು ಈಗಾಗಲೇ ರಿವೀಲ್ ಆಗಿತ್ತು. ಕೇಡಿ ಜೈದೇವ್ ಹಾಗೂ ಶಕುಂತಲಾ ದೇವಿ ಮಾಡಿದ ಕುತಂತ್ರಗಳು ಬಯಲಾದ ಸಂದರ್ಭದಲ್ಲಿಯೇ ಸೀರಿಯಲ್ ಮುಕ್ತಾಯವಾಗಲಿದೆ ಎಂದು ವೀಕ್ಷಕರು ನಿರೀಕ್ಷಿಸಿದ್ದರು.

ಜೀ ಕನ್ನಡ ವಾಹಿನಿಯ ಕುಟುಂಬ ಅವಾರ್ಡ್ಸ್‌ ಕಾರ್ಯಕ್ರಮದಲ್ಲಿ ಮಾತನಾಡಿರುವ ಅವರು ಅಮೃತಧಾರೆ ಸೀರಿಯಲ್‌ನ ಮುಕ್ತಾಯದ ಬಗ್ಗೆ ಸದ್ದಿಲ್ಲದೆ ಸುಳಿವು ಕೊಟ್ಟಿದ್ದಾರೆ. ಅಮೃತಧಾರೆ ಸೀರಿಯಲ್‌ನಲ್ಲಿ ಭೂಮಿಕಾ ಹಾಗೂ ದೀಪಿಕಾ ಯಾರು ಎನ್ನುವ ವಿಷಯ ಗೌತಮ್ ದಿವಾನ್ ಅವರ ಮುಂದೆ ರಿವೀಲ್ ಆಗಿದೆ. ಈ ಸಂದರ್ಭದಲ್ಲಿಯೇ ಇನ್ನೇನು ಸೀರಿಯಲ್ ಮುಕ್ತಾಯವಾಗಲಿದೆ ಎನ್ನುವ ಲೆಕ್ಕಾಚಾರವೂ ಇತ್ತು. ಇದೀಗ ಛಾಯಾಸಿಂಗ್ ಅವರು ಅಮೃತಧಾರೆ ಸೀರಿಯಲ್‌ನ ಬಗ್ಗೆ ಮುಕ್ತವಾಗಿ ಮಾತನಾಡಿದ್ದಾರೆ.

Amruthadhaare Serial to End Soon Chaya Singh Shares Given Major Update

ಇದು ಅಮೃತಧಾರೆಯ ಕೊನೆಯ ವರ್ಷ. ನಿಜಕ್ಕೂ ಜೀ ಕುಟುಂಬ ಅವರ್ಡ್ಸ್‌ 2026 ತುಂಬಾ ವಿಶೇಷವಾಗಿದೆ ಅಂತ ಅಮೃತಧಾರೆಯ ಮುಖ್ಯ ಪಾತ್ರಧಾರಿ ಭೂಮಿಕಾ ರೋಲ್‌ ಮಾಡುತ್ತಿರುವ ನಟಿ ಛಾಯಾಸಿಂಗ್ ಅವರು ಹೇಳಿದ್ದಾರೆ. ಇದೊಂದು ಭಾವನಾತ್ಮಕ ಪಯಣವಾಗಿತ್ತು. ಈ ಪಯಣದ ಬಗ್ಗೆ ನನಗೆ ತುಂಬಾನೇ ಖುಷಿ ಇದೆ. ನಾನು ಈ ತಂಡದ ಪ್ರತಿಯೊಬ್ಬರನ್ನೂ ಮುಂದಿನ ವರ್ಷದಿಂದ ಮಿಸ್ ಮಾಡಿಕೊಳ್ಳಲಿದ್ದೇನೆ ಎಂದಿದ್ದಾರೆ. ಇದು ಎಲ್ಲವೂ ಸಾಧ್ಯವಾಗಿದ್ದು ವೀಕ್ಷಕರಿಂದ ಎಲ್ಲರಿಗೂ ಧನ್ಯವಾದ ಎಂದಿದ್ದಾರೆ.

ದೀಪಾವಳಿಗೆ ಅಮೃತಧಾರೆ ಸೀರಿಯಲ್ ಮುಕ್ತಾಯ ?

ಇದೇ ದೀಪಾವಳಿಗೆ ಅಮೃತಧಾರೆ ಸೀರಿಯಲ್ ಮುಕ್ತಾಯವಾಗಲಿದೆ ಎಂದು ನಿರೀಕ್ಷಿಸಲಾಗಿದೆ. ಅಮೃತಧಾರೆ ಸೀರಿಯಲ್‌ನ ಪ್ರಮುಖ ವಿಷಯಗಳು ಈಗಾಗಲೇ ರಿವೀಲ್ ಆಗಿದೆ. ಆದರೆ, ಕೇಡಿ ಜೈದೇವ್ ಹಾಗೂ ಶಕುಂತಲಾದೇವಿಗೆ ಇನ್ನೂ ಶಿಕ್ಷೆ ಆಗಿಲ್ಲ. ಜೈದೇವ್‌ಗೆ ಶಿಕ್ಷೆ ಕೊಡಿಸಬೇಕು ಎನ್ನುವ ಮಲ್ಲಿ ಪ್ರಯತ್ನಗಳು ಕೈಗೂಡಿಲ್ಲ. ಇದರ ನಡುವೆ ದೀಪಿಕಾ ಪಾತ್ರವನ್ನು ಪರಿಚಯಿಸಲಾಗಿದೆ. ಇದರೊಂದಿಗೆ ದೀಪಿಕಾ ಇನ್ನೂ ಬದುಕಿದ್ದಾಳೆ ಎನ್ನುವ ವಿಷಯ ಭೂಮಿಕಾ ಅವರ ಮನೆಯವರಿಗೆ ಸಂಪೂರ್ಣವಾಗಿ ಇನ್ನಷ್ಟೇ ತಿಳಿಯಬೇಕಾಗಿದೆ. ಮುಂದಿನ ದಿನಗಳಲ್ಲಿ ಇದೆಲ್ಲವೂ ತಿಳಿದು ಸೀರಿಯಲ್ ಮುಕ್ತಾಯವಾಗಲಿದೆ ಎಂದು ನಿರೀಕ್ಷಿಸಲಾಗಿದೆ.

ಅಮೃತಧಾರೆ -2 ಬರಲಿದೆಯೇ

ಇನ್ನು ಅಮೃತಧಾರೆ ಸೀರಿಯಲ್ ಮುಕ್ತಾಯವಾಗುತ್ತಿರುವ ಸಂದರ್ಭದಲ್ಲಿಯೇ ಅಮೃತಧಾರೆ - 2 ಬರಲಿದೆಯೇ ಎನ್ನುವ ಕುತೂಹಲವೂ ಹೆಚ್ಚಾಗಿದೆ. ಈ ಪ್ರಶ್ನೆಗೆ ನಟಿ ಛಾಯಾಸಿಂಗ್ ಅವರು, ಈ ಪ್ರಶ್ನೆಯನ್ನ ಕ್ರಿಯೇಟಿವ್ ಟೀಮ್ ಅವರ ಬಳಿಯೇ ಕೇಳಿ ಎಂದಿದ್ದಾರೆ. ಈ ಮೂಲಕ ಅಮೃತಧಾರೆ ಸೀರಿಯಲ್‌ ಮುಕ್ತಾಯದ ನಂತರ ಅಮೃತಧಾರೆ - 2 ಬರಲಿದೆಯೇ ಎನ್ನುವ ಚರ್ಚೆಯೂ ನಡೆದಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+