Amruthadhaare Serial: ದಿವಾನ್ ಮನೆಗೆ ಕೇಡಿ ಜೈದೇವ್ ರೀ ಎಂಟ್ರಿ; ಭೂಮಿಕಾಳಿಂದಲೇ ಸ್ವಾಗತ, ಮನೆ ಮಂದಿಗೆ ಶಾಕ್!
Amruthadhaare Serial: ಅಮೃತಧಾರೆ ಸೀರಿಯಲ್‌ನಲ್ಲಿ ರೋಚಕ ಹೊಸ ತಿರುವು ಎದುರಾಗಿದೆ. ಆದರೆ, ಈ ಹೊಸ ತಿರುವು ವೀಕ್ಷಕರಿಗೆ ಇಷ್ಟವಾಗಿಲ್ಲ. ಈ ಹೊಸ ತಿರುವು ವೀಕ್ಷಕರ ತಾಳ್ಮೆ ಪರೀಕ್ಷೆಗೆ ಕಾರಣವಾಗಿದೆ ಎನ್ನುವ ಮಾತುಗಳು ಕೇಳಿ ಬಂದಿವೆ. ಅಮೃತಧಾರೆ ಸೀರಿಯಲ್‌ನಲ್ಲಿ ಭೂಮಿಕಾ ಜಾಗಕ್ಕೆ ದೀಪಿಕಾ ಬಂದಿದ್ದಾಳೆ. ಭೂಮಿಕಾ ಅಪಾಯದಲ್ಲಿದ್ದಾಗ ರಕ್ಷಿಸಿದ್ದೇ ಕೇಡಿ ಜೈದೇವ್ ಎನ್ನುವಂತೆ ತೋರಿಸಲಾಗಿದೆ. ಖುದ್ದು ಭೂಮಿಕಾ (ದೀಪಿಕಾ) ಹೋಗಿ ಕೇಡಿ ಜೈದೇವ್‌ಗೆ ಅರತಿ ಮಾಡಿ ಮನೆಗೆ ಮತ್ತೆ ಬರಮಾಡಿಕೊಂಡಿದ್ದಾಳೆ.
ಇದನ್ನು ನೋಡಿ ಮನೆಯಲ್ಲಿರುವ ಪಾರ್ಥ, ಮಲ್ಲಿ ಸೇರಿದಂತೆ ಎಲ್ಲರೂ ಒಂದು ಕ್ಷಣ ದಂಗಾಗಿ ಹೋಗಿದ್ದಾರೆ. ಕೇಡಿ ಜೈದೇವ್ Vs ಭೂಮಿಕಾ ಇಬ್ಬರೂ ಹಾವು - ಮುಂಗುಸಿಯಂತಿದ್ದರು. ಆದರೆ ಇವರಿಬ್ಬರು ಒಂದಾಗುವುದಕ್ಕೆ ಹೇಗೆ ಸಾಧ್ಯ ಎನ್ನುವುದು ಮನೆಯವರ ಗೊಂದಲಕ್ಕೆ ಕಾರಣವಾಗಿದೆ. ದೀಪಿಕಾಳನ್ನು ದಾಳವಾಗಿ ಉಪಯೋಗಿಸಿಕೊಳ್ಳುವಲ್ಲಿ ಶಕುಂತಲಾದೇವಿ ಯಶಸ್ವಿಯಾಗಿದ್ದಾಳೆ.

ಅಪರ್ಣಾ ಅವರನ್ನು ದೀಪಿಕಾ ನಾಟಕೀಯವಾಗಿ ತಬ್ಬಿಕೊಂಡು ಮಾತನಾಡಿಸಿದ್ದಾಳೆ. ಹೇಗಿದ್ದೀರಾ ಅಂತ ಕೇಳಿದ್ದಾಳೆ.. ನಾನು ಚೆನ್ನಾಗಿದ್ದೀನಿ ಆರಾಮಾಗಿದ್ದೀನಿ ಅಂತಲೇ ನಾಟಕೀಯವಾಗಿ ದೀಪಿಕಾ ಮಾತನಾಡಿದ್ದಾಳೆ. ಭೂಮಿಕಾಳಲ್ಲಿ ಆಗಿರುವ ಬದಲಾವಣೆಯನ್ನು ಅಪರ್ಣಾ ಗಮನಿಸಿದ್ದಾಳೆ. ಯಾಕೆ ವಿಚಿತ್ರವಾಗಿ ನೋಡುತ್ತೀಯಾ ಎನ್ನುವ ಪ್ರಶ್ನೆಗೆ ಅದು ಅಪಘಾತವಾಯ್ತಲ್ಲ, ತಲೆಗೆ ತುಂಬಾ ಏಟು ಬಿದ್ಬಿಟ್ಟಿದೆ. ಡಾಕ್ಟರು ತುಂಬಾ ಔಷಧಿ ಕೊಟ್ಬಿಟ್ಟಿದ್ದಾರೆ ಅದಕ್ಕೆ ನನಗೆ ಆವಾಗ ಆವಾಗ ಏನೇನೋ ಬಾಯಿಗೆ ಬಂದು ಬಿಡುತ್ತೆ ಅಂತ ದೀಪಿಕಾ ಮ್ಯಾನೇಜ್ ಮಾಡಿದ್ದಾಳೆ.
ಅತ್ತಿಗೆ ಜೈದೇವ್ ಬಂದಿದ್ದಾನೆ ಎಂದು ಪಾರ್ಥ ಹೇಳಿದ್ದಾನೆ. ಇದಕ್ಕೆ ಕೂಡಲೇ ಭೂಮಿಕಾ ರೂಪದಲ್ಲಿರುವ ದೀಪಿಕಾ ಓ ಬಂದ್ನಾ ಅಂತ ಆಶ್ಚರ್ಯ ಹಾಗೂ ಸಂತೋಷದಿಂದ ಕೇಳಿರುವುದು ಒಂದು ಕ್ಷಣ ಎಲ್ಲರನ್ನೂ ಶಾಕ್‌ಗೆ ದೂಡಿದೆ. ಇದನ್ನು ನೋಡಿ ಪಾರ್ಥ, ಇದೇನು ಅತ್ತಿಗೆ ನೀವ್ಯಾಕೆ ಇಷ್ಟೊಂದು ಉತ್ಸುಕರಾಗ್ತಿದ್ದೀರಾ ಅಂತ ಕೇಳಿದ್ದಾನೆ. ಏ ಯೋಳ್ತೀನಿ ಬನ್ನಿ .. ಬನ್ನಿ ಅಂತ ಕರೆದುಕೊಂಡು ಹೋಗಿದ್ದಾಳೆ.
Amruthadhaare Serial: ದಿವಾನ್ ಮನೆಗೆ ಕೇಡಿ ಜೈದೇವ್ ರೀ ಎಂಟ್ರಿ!
ದಿವಾನ್ ಮನೆಗೆ ಕೇಡಿ ಜೈದೇವ್ ರೀ ಎಂಟ್ರಿ ಕೊಟ್ಟಿದ್ದಾನೆ. ಜೈದೇವ್ ಅನ್ನು ಭೂಮಿಕಾ ರೂಪದಲ್ಲಿರುವ ದೀಪಾಕ ಅದ್ಧೂರಿಯಾಗಿ ಸ್ವಾಗತ ಮಾಡಿಕೊಂಡಿದ್ದಾಳೆ. ಭೂಮಿಕಾ ಮತ್ತು ಶಕುಂತಲಾ ದೇವಿ ಇಬ್ಬರೂ ಸೇರಿ ಜೈದೇವ್‌ನ ಅರತಿ ಮಾಡಿ ಮನೆಯೊಳಗೆ ಕರೆದುಕೊಂಡಿದ್ದಾರೆ. ನೋಡಿ ಎಲ್ಲರೂ ಕೇಳಿ, ಈ ಮನೆಯಲ್ಲಿ ಈ ಹಿಂದೆ ಎಷ್ಟೇ ಗಲಾಟೆ, ಮನಸ್ತಾಪ ಆಗಿರಲಿ. ಅದೆಲ್ಲ ಇನ್ಮುಂದೆ ಬೇಡ ಅಂತ ಹೇಳಿದ್ದಾಳೆ.
ಇನ್ಮುಂದೆ ಅವರು ಈ ಮನೆಯಲ್ಲಿ ನಮ್ಮ ಜೊತೆಯಲ್ಲೇ ಇರಬೇಕು ಅಂತಲೂ ಭೂಮಿಕಾ ಹೇಳಿದ್ದಾಳೆ. ಇದು ಮಲ್ಲಿಗೆ ಕಣ್ಣೀರು ತರಿಸಿದೆ. ಒಂದೊಂದು ಸಲ ಮನುಷ್ಯನಿಗೆ ಹೊಸ ಅವಕಾಶ ಕೊಟ್ಟರೆ ಬದಲಾಗುತ್ತಾನೆ. ನಾವೆಲ್ಲರೂ ಅದನ್ನು ಹಾಗೆಯೇ ನೋಡಬೇಕು ಅಂತಲೂ ಹೇಳಿದ್ದಾಳೆ. ಕ್ಷಮೆಯನ್ನೋದು ದೊಡ್ಡದು ಅಂತಲೂ ಹೇಳಿದ್ದಾಳೆ. ಇವರಿಗೆ ನಮ್ಮಲ್ಲಿ ಒಬ್ಬರಾಗೋಕೆ ಅವಕಾಶ ಕೊಡಿ ಅಂತ ಭೂಮಿಕಾ ರೂಪದಲ್ಲಿರುವ ದೀಪಿಕಾ ಹೇಳಿದ್ದಾಳೆ.


Click it and Unblock the Notifications
