Amritdhare Serial: ಭೂಮಿಕಾ ವೇಷದಲ್ಲಿರುವ ದೀಪಿಕಾ ಬಂಡವಾಳ ಬಯಲು ಮಾಡಲು ಖತರ್ನಾಕ್ ಪ್ಲ್ಯಾನ್ ಮಾಡಿದ ಗೌತಮ್ ದಿವಾನ್!
ಅಮೃತಧಾರೆ ಸೀರಿಯಲ್‌ನಲ್ಲಿ ಮತ್ತೊಂದು ಹಾಗೂ ಹೊಸ ರೋಚಕ ತಿರುವು ಪಡೆದುಕೊಂಡಿದೆ. ಅಮೃತಧಾರೆ ಸೀರಿಯಲ್‌ನ ಮುಖ್ಯ ಪಾತ್ರಧಾರಿ ಭೂಮಿಕಾ (ಚಾಯಾಸಿಂಗ್) ಪಾತ್ರದಲ್ಲಿ ಆಗಿರುವ ಮಹತ್ವದ ಬದಲಾವಣೆಗೆ ಇದೀಗ ಮತ್ತೊಂದು ತಿರುವು ಪಡೆದುಕೊಂಡಿದೆ. ಭೂಮಿಕಾ ಯಾಕೆ ವಿಚಿತ್ರವಾಗಿ ಆಡುತ್ತಿದ್ದಾರೆ ಎನ್ನುವ ಸತ್ಯಾಂಶವನ್ನು ತಿಳಿದುಕೊಳ್ಳುವ ಉದ್ದೇಶದಿಂದ ಗೌತಮ್ ದಿವಾನ್ ಖತರ್ನಾಕ್ ಪ್ಲ್ಯಾನ್ ಮಾಡಿದ್ದಾರೆ. ಇದು ಬಹುತೇಕ ಸಕ್ಸಸ್ ಸಹ ಆಗಿದೆ.
ಅಮೃತಧಾರೆ ಸೀರಿಯಲ್‌ನಲ್ಲಿ ಭೂಮಿಕಾ ಹಾಗೂ ದೀಪಿಕಾ ಅವಳಿ - ಜವಳಿ ಎನ್ನುವಂತೆ ತೋರಿಸಲಾಗಿದ್ದು, ಈ ಪಾತ್ರಗಳನ್ನು ಒಳಗೊಂಡ ಹಲವು ಎಪಿಸೋಡ್‌ಗಳಿ ಪ್ರಸಾರವಾಗಿದೆ. ಅಮೆರಿಕಾದಿಂದ ಗೌತಮ್ ದಿವಾನ್ ಹಿಂದಿರುಗಿದ ಮೇಲೆ ಭೂಮಿಕಾಳಲ್ಲಿ ಆಗಿರುವ ಬದಲಾವಣೆಗಳನ್ನು ಸೂಕ್ಷ್ಮವಾಗಿ ಗಮನಿಸಿಕೊಂಡೇ ಬಂದಿದ್ದಾನೆ. ಇದೀಗ ಭೂಮಿಕಾ ಬಾಯಿ ಬಿಡಿಸುವುದಕ್ಕೆ ಗೌತಮ್ ದಿವಾನ್ ಭರ್ಜರಿ ಪ್ಲ್ಯಾನ್ ಮಾಡಿದ್ದಾನೆ. ಇದು ಬಹುತೇಕ ಯಶಸ್ವಿಯೂ ಆಗಿದೆ.

ಭೂಮಿಕಾ ಹಾಗೂ ದೀಪಿಕಾ ಇಬ್ಬರೂ ಅವಳಿ ಜವಳಿ ಮಕ್ಕಳು ಎನ್ನುವಂತೆ ಅಮೃತಧಾರೆ ಸೀರಿಯಲ್‌ನಲ್ಲಿ ತೋರಿಸಲಾಗಿದೆ. ಭೂಮಿಕಾ ಹಾಗೂ ದೀಪಿಕಾ ಇಬ್ಬರೂ ಮುಖಾಮುಖಿಯಾಗಿದ್ದಾರೆ. ಇಬ್ಬರೂ ಒಬ್ಬರನ್ನೊಬ್ಬರು ಅರ್ಥ ಮಾಡಿಕೊಂಡು ಚೆನ್ನಾಗಿದ್ದಾರೆ. ಆದರೆ, ಒಂದೇ ರೀತಿ ಕಾಣುವ ಭೂಮಿಕಾ ಮತ್ತು ದೀಪಿಕಾ ಇಬ್ಬರೂ ಬೇರೆ ಬೇರೆ... ಮನೆಯಲ್ಲಿ ಇರುವುದು ಭೂಮಿಕಾ ಅಲ್ಲ ದೀಪಿಕಾ ಎನ್ನುವ ವಿಚಾರ ಕೊನೆಗೂ ದಿವಾನ್ ಮನೆಯವರಿಗೆ ತಿಳಿಯುವ ಸಮಯ ಬಂದಾಗಿದೆ. ಗೌತಮ್ ದಿವಾನ್ ಮನೆಗೆ ದೀಪಿಕಾ ಬಂದಾಗಿನಿಂದಲೂ ಏನೋ ಬದಲಾವಣೆ ಆಗಿದೆ ಎಂದು ಮನೆಯವರೆಲ್ಲರೂ ಅನುಮಾನ ವ್ಯಕ್ತಪಡಿಸಿದ್ದರು. ಅದರಲ್ಲೂ ಜೈದೇವ್‌ನ ಮತ್ತೆ ಮನೆಗೆ ಕರೆದುಕೊಂಡು ಬಂದ ಮೇಲಂತೂ ಎಲ್ಲರಿಗೂ ಕಸಿವಿಸಿಯುಂಟಾಗಿತ್ತು.
ಇದೀಗ ಕೊನೆಗೂ ಭೂಮಿಕಾ ವೇಷದಲ್ಲಿ ಇರುವುದು ದೀಪಿಕಾ ಎನ್ನುವುದನ್ನು ಪತ್ತೆ ಮಾಡುವಲ್ಲಿ ಗೌತಮ್ ದಿವಾನ್ ಯಶಸ್ವಿಯಾಗಿದ್ದಾನೆ. ಆನಂದ್ ಅವರ ಮನೆಯಲ್ಲಿ ಸಣ್ಣ ಪಾರ್ಟಿಯೊಂದನ್ನು ಆಯೋಜಿಸುವ ಮೂಲಕ ಸತ್ಯವನ್ನು ಹೊರಗೆಳೆಯುವಲ್ಲಿ ಗೌತಮ್ ದಿವಾನ್ ಮಾಡಿದ ಪ್ಲ್ಯಾನ್ ಸಕ್ಸಸ್ ಆಗಿದೆ. ಕೂಲ್ ಡ್ರಿಂಕ್ಸ್‌ನಲ್ಲಿ ಮದ್ಯ / ಅಲ್ಕೋಹಾಲ್ ಮಿಕ್ಸ್ ಮಾಡಿ ಕೊಡುವ ಮೂಲಕ ದೀಪಿಕಾಳ ಬಾಯಿ ಬಿಡಿಸಲಾಗಿದೆ. ನೀವು, ಆಕ್ಸಿಡೆಂಟ್ ಆದಾಗಿನಿಂದ ಸ್ವಲ್ಪ ರಾಂಗ್ ಆಗಿದ್ದೀರಲ್ಲ ಅಂತ ಗೌತಮ್ ದಿವಾನ್ ಕೇಳಿದ್ದಾನೆ. ಇದಕ್ಕೆ ರಿಯಾಕ್ಟ್ ಮಾಡಿರುವ ದೀಪಿಕಾ ನನಗಾ, ನನಗೆ ಯಾವಾಗ ಆಕ್ಸಿಡೆಂಟ್ ಆಗಿತ್ತು ಅಂತ ಪ್ರಶ್ನೆ ಮಾಡಿದ್ದಾಳೆ. ಈ ಪ್ರಶ್ನೆಗೆ ಮನೆಯವರೆಲ್ಲರೂ ಶಾಕ್ ಆಗಿದ್ದಾರೆ.
ಮುಂದುವರಿದು ಜೈದೇವ್ ಒಳ್ಳೆಯವನಲ್ಲ ಅಂತಲೂ ಹೇಳಿದ್ದಾಳೆ. ಇದಕ್ಕೆ ಗೌತಮ್ ದಿವಾನ್ ನೀವೇ ಅಲ್ವಾ ಅವನು ಒಳ್ಳೆಯವನು ಅಂತ ಮತ್ತೆ ವಾಪಸ್ ಮನೆಗೆ ಕರೆದುಕೊಂಡು ಬಂದಿದ್ದು ಅಂತ ಗೌತಮ್ ಕೇಳಿದ್ದಾನೆ. ಇದಕ್ಕೆ ದೀಪಿಕಾ ನಾನಾ.. ನನ್ನನ್ನ ಕರೆದುಕೊಂಡು ಬಂದಿದ್ದೇ ಅವರು ಅಂತ ಸತ್ಯ ಹೇಳಿದ್ದಾಳೆ. ಹೀಗಾಗಿ, ಮುಂದಿನ ಎಪಿಸೋಡ್ ಎನಾಗಿರಲಿದೆ ಹಾಗೂ ಗೌತಮ್ ದಿವಾನ್, ಕೇಡಿ ಜೈದೇವ್‌ಗೆ ಹೇಗೆ ಕ್ಲಾಸ್ ತೆಗೆದುಕೊಳ್ಳಲಿದ್ದಾನೆ ಎನ್ನುವ ಕುತೂಹಲ ಹೆಚ್ಚಾಗಿದೆ.


Click it and Unblock the Notifications
