ರಿಷಬ್ ಶೆಟ್ಟಿ ನಟನೆ ಅನುಕರಿಸಿ ವಿವಾದ: ನಟ ರಣವೀರ್ ಸಿಂಗ್‌ಗೆ ದೈವದಿಂದಲೇ ಶಿಕ್ಷೆ!...Photos Viral
Ranveer Singh AI Photo Viral: ಕನ್ನಡ ನೆಲದ ಸಂಸ್ಕೃತಿ, ದೈವಾರಾಧನೆ ಕುರಿತ ಕಾಂತಾರ ಸರಣಿ ಸಿನಿಮಾಗಳು ಹಿಟ್ ಆಗಿವೆ. ದೇಶಾದ್ಯಂತ ಭಾರಿ ಮೆಚ್ಚಿಗೆ ಪಡೆದು ದಾಖಲೆ ಮಾಡಿದ್ದು, ಎಲ್ಲರಿಗೂ ಗೊತ್ತೇ ಇದೆ. ಹೀಗಿದ್ದಾಗ ಚಲನಚಿತ್ರೋತ್ಸವ ದಲ್ಲಿ ನಟ ರಣವೀರ್ ಸಿಂಗ್ ನಟ ರಿಷಬ್ ಶೆಟ್ಟಿ ಅವರ ಮುಂದೆಯೇ ದೈವವನ್ನು ದೆವ್ವವೆಂದು ಹೇಳಿದ್ದಾರೆ. ಕೆಟ್ಟದಾಗಿ ಮುಖ ಮಾಡಿ ದೈವದ ಅನುಕರುಸುದ್ದರು. ತುಳುನಾಡ ಜನರ ಆರಾಧನೆಗೆ ಅಪಮಾನಿಸಿದ್ದಕ್ಕೆ ಭಕ್ತರು, 'ಕಾಂತಾರ' ಅಭಿಮಾನಿಗಳಿಂದ ವ್ಯಾಪಕ ಆಕ್ರೋಶ ವ್ಯಕ್ತವಾಗಿತ್ತು. ಹೀಗಿದ್ದಾಗಲೇ ರಣವೀರ್ ಸಿಂಗ್ ಅವರಿಗೆ ದೈವವೇ ಬುದ್ಧಿ ಕಲಿಸಿದೆ. ತಕ್ಕ ಶಾಸ್ತಿ ಮಾಡಿದೆ ಎಂಬ ಪರಿಕಲ್ಪನೆಯಡಿ ರಚಿಸಿದ AI ಫೋಟೋ ಭಾರೀ ವೈರಲ್ ಆಗುತ್ತಿದೆ. ತಪ್ಪು ಮಾಡಿದವರಿಗೆ ಶಿಕ್ಷೆಯಾಗಿದೆ ಎಂದು ನೆಟ್ಟಿಗರು ಖಾರವಾಗಿ ಪ್ರತಿಕ್ರಿಯಿಸಿದ್ದಾರೆ.
ಗೋವಾದಲ್ಲಿ ನಡೆದ 56 ಅಂತಾರಾಷ್ಟ್ರೀಯ ಚಲನಚಿತ್ರೋತ್ಸವ ದಲ್ಲಿ ಕನ್ನಡದ 'ಕಾಂತಾರ' ಸರಣಿ ಸಿನಿಮಾಗಳ ನಟ, ನಿರ್ದೇಶಕ ರಿಷಬ್ ಶೆಟ್ಟಿ ಅವರು ಪಾಲ್ಗೊಂಡಿದ್ದರು. ಅವರ ಮುಂದೆ ವೇದಿಕೆ ಮೇಲಿದ್ದ ರಣವೀರ್ ಸಿಂಗ್ ಹೆಣ್ಣು ದೈವವನ್ನು ದೆವ್ವವೆಂದು ಕರೆದಿದ್ದರು. ಸಿನಿಮಾದಲ್ಲಿ ರಿಷಬ್ ನಟನೆ ಅನುಕರಣೆ ಮಾಡಲು ಹೋಗಿ ಯಡವಟ್ಟು ಮಾಡಿಕೊಂಡರು. ಕೆಟ್ಟದಾಗಿ ಮುಖ ಮಾಡಿ ತೋರಿಸಿದ್ದರು. ಈ ರೀತಿ ಅನುಕರಿಸದಂತೆ ರಿಷಬ್ ಶೆಟ್ಟಿ ಅವರು ತಿಳಿಸಿದ್ದರು. ವೇದಿಕೆ ಮುಂಭಾಗದವರಿಗೂ ರಣವೀರ್ ವರ್ತನೆ ಕಸಿವಿಸಿ ಉಂಟು ಮಾಡಿತ್ತು.

ಅಪಾರ ಜನರಿಂದ ರಣವೀರ್ ಸಿಂಗ್ ಟೀಕೆ ಎದುರಿಸಬೇಕಾಯಿತು. ಇದಕ್ಕೆ ಪ್ರತ್ಯುತ್ತರ ಎಂಬಂತೆ ರಣವೀರ್ ಸಿಂಗ್ ನಟನೆಯ 'ಧುರಂಧರ್' ಸಿನಿಮಾಗೆ ಅನೇಕ ಕಡೆಗಳಲ್ಲಿ ನಕಾರಾತ್ಮಕ ಪ್ರತಿಕ್ರಿಯೆ ಸಿಕ್ಕಿದೆ. ಥಿಯೇಟರ್‌ಗಳಲ್ಲಿ ಜನರೇ ಇಲ್ಲ. ಇದು ಇತರ ಸಂಸ್ಕೃತಿ, ದೈವದ ಬಗ್ಗೆ ಮಾಡಿದ ಅಪಮಾನಕ್ಕೆ ಸಿಕ್ಕ ಪ್ರತಿಫಲ ಅಂತಲೂ ಕೆಲವರು ವಿಡಿಯೋ ಮಾಡಿ ಹರಿಬಿಟ್ಟಿದ್ದಾರೆ. ಈ ಮಧ್ಯೆ ರಣವೀರ್ ಸಿಂಗ್‌ಗೆ ದೈವವೇ ಶಿಕ್ಷೆ ನೀಡಿದೆ ಎಂಬಂತೆ AI ಫೋಟೋ ರಚಿಸಲಾಗಿದೆ. ವಿಡಿಯೋ ಮೆಚ್ಚುಗೆ ವ್ಯಕ್ತವಾಗಿದ್ದು, ಭಾರೀ ವೈರಲ್ ಆಗುತ್ತಿದೆ.
ದೈವ-ರಣವೀರ್ ಸಿಂಗ್ ವಿಡಿಯೋದಲ್ಲಿ ಏನಿದೆ?
ನಾವು ಎಐ ಜಮಾನದಲ್ಲಿದ್ದೇವೆ. ತಮ್ಮ ನೆಚ್ಚಿನ ಸೆಲೆಬ್ರೆಟಿ, ರಾಜಕಾರಣ, ಇಷ್ಟದ ಸಂಗತಿಗಳ ಬಗ್ಗೆ ಫ್ಯಾನ್ಸ್ ಎಐ ವಿಡಿಯೋ ಮಾಡಿ ಖಷಿಪಡುತ್ತಿದ್ದಾರೆ. ಮನರಂಜನೆ ಉದ್ದೇಶದಿಂದ ರೀತಿ ಮಾಡುತ್ತಿದ್ದು, ಸಾಕಷ್ಟು ವಿಡಿಯೋಗಳು, ಫೋಟೋಗಳು ವೈರಲ್ ಆಗುತ್ತಿವೆ. ನೋಡಲು ನಿಜವೇನೋ ಎಂಬಂತೆ ಭಾಸವಾಗುಷ್ಟು ನೈಜ ಸಂಗತಿಗೆ ಹತ್ತಿರವಾದ ವಿಡಿಯೋ, ಫೋಟೋ ಇವಾಗಿವೆ.
ಇದೀಗ ದೈವದ ಬಗ್ಗೆ ರಣವೀರ್ ಸಿಂಗ್ ಅಪಮಾನ ಮಾಡಿದ್ದಕ್ಕೆ ದೈವಗಳೇ ಶಿಕ್ಷ ಕೊಟ್ಟರೆ ಹೇಗಿರುತ್ತದೆ ಎಂಬ ಪರಿಕಲ್ಪನೇಯಡಿ ಎಐ ಮೂಲಕ ಚಿತ್ರೀಕರಿಸಲಾಗಿದೆ. ಇನ್ಸ್‌ಟಾದಲ್ಲಿ vijaycreationn ಎಂಬುವವರು ಫೋಟೋ ಹಂಚಿಕೊಂಡಿದ್ದಾರೆ. ಪ್ರಾಂಪ್ಟ್ ಸಹ ನೀಡಿದ್ದಾರೆ. ಅದರಲ್ಲಿ 'ರಣವೀರ್ ಸಿಂಗ್ ಜೊತೆಗೆ ವರಾಹಸ್ವಾಮಿ, ಚಾವುಂಡಿ ದೈವ, ಪಂಜುರ್ಲಿ ಹೀಗೆ ವಿವಿಧ ಅವತಾರಗಳ ದೈವಗಳು ಇವೆ. ರಣವೀರ್ ಕೊರಳಪಟ್ಟಿ ಹಿಡಿದು ಎಚ್ಚರಿಕೆ ನೀಡಿದಂತೆ, ಎತ್ತಿ ಬಿಸಾಡಿದಂತೆ. ಸಿನಿಮಾದಲ್ಲಿ ಕೆಟ್ಟ ಶಕ್ತಿಗಳಿಗೆ ದೇವರು ಶಿಕ್ಷಿಸುವಂತೆ ದೈವ ಬುದ್ಧಿ ಕಲಿಸಿದ ಫೋಟೋಗಳು ವೈರಲ್ ಆಗುತ್ತಿವೆ. ಕಾಡ ಮಧ್ಯ ರಣವೀರ್ ಸಿಂಗ್, ದೈವ ಹಾಗೂ ಬೆಂಕಿ ಇರುವುದು ಫೋಟೋದಲ್ಲಿ ಕಾಣಿಸುತ್ತದೆ.'
ರಣವೀರ್ ಸಿಂಗ್ ಹೇಳಿದ್ದೇನು?
ಚಾವುಂಡಿ ದೈವವನ್ನು ದೆವ್ವವೆಂದು ರಣವೀರ್ ಸಿಂಗ್ ಅಪಮಾನಿಸಿದ್ದಾರೆ ಎಂದು ಹಿಂದೂ ಜನಜಾಗೃತಿ ಸಮಿತಿಯು ದೂರು ದಾಖಲಿಸಿದೆ. ದೇಶಾದ್ಯಂತ ಟೀಕೆ ವ್ಯಕ್ತವಾಗುತ್ತಿದ್ದಂತೆ ಎಚ್ಚೆತ್ತ ರಣವೀರ್ ಸಿಂಗ್ ಕ್ಷಮಾಪಣೆ ಕೇಳಿದ್ದಾರೆ. 'ಕಾಂತಾರ ಚಾಪ್ಟರ್ 1'ರಲ್ಲಿ ರಿಷಬ್ ಅವರ ಅದ್ಭುತ ನಟನೆಯನ್ನು ಹೊಗಳುವುದು ನನ್ನ ಉದ್ದೇಶವಾಗಿತ್ತು. ನಾನು ಒಬ್ಬ ನಟನಾಗಿ ನಿರ್ದಿಷ್ಟ ದೃಶ್ಯದಲ್ಲಿ ನಟಿಸುವುದು ಎಷ್ಟು ಸವಾಲಾಗಿತ್ತು ಎನ್ನುವುದು ನನಗೂ ಗೊತ್ತಿದೆ. ದೇಶದ ಪ್ರತಿ ಸಂಸ್ಕೃತಿ, ಸಂಪ್ರದಾಯ, ನಂಬಿಕೆ ಮೇಲೆ ನನಗೆ ಗೌರವವಿದೆ. ರಿಷಬ್ ಅವರ ನಟನೆ ಮೇಲೆ ಗೌರವವಿದೆ. ನನ್ನಿಂದ ನಿಮ್ಮ ಭಾವನೆಗಳಿಗೆ ನೋವಾಗಿದ್ದರೆ ಕ್ಷಮಿಸಿ' ಎಂದು ಅವರು ಇನ್ಸ್‌ಟಾಗ್ರಾಮ್‌ನಲ್ಲಿ ಕೇಳಿಕೊಂಡಿದ್ದಾರೆ.












Click it and Unblock the Notifications