Samantha Ruth Prabhu: ಗರ್ಭಿಣಿಯಾದ್ರಾ ನಟಿ ಸಮಂತಾ? ಶಾಕ್‌ ಕೊಟ್ಟ ಫೋಟೋಗಳು

ನಟಿ ಸಮಂತಾ ರುತ್‌ ಪ್ರಭು (Samantha Ruth Prabhu) ಅವರು ಒಂದಲ್ಲ ಒಂದು ವಿಚಾರಕ್ಕೆ ಸುದ್ದಿಯಾಗುತ್ತಲೇ ಇದ್ದಾರೆ. ಇತ್ತೀಚೆಗೆ ಅವರು ಹಾಕುವ ಪೋಸ್ಟ್‌ಗಳು ಹಲವು ಚರ್ಚೆಗಳನ್ನು ಹುಟ್ಟುಹಾಕುತ್ತಿವೆ. ನಾಗಚೈತನ್ಯ ಅವರೊಂದಿಗೆ ವಿಚ್ಛೇದನ ಪಡೆದ ನಂತರ ಅವರು ಸದ್ಯ ಸಿಂಗಲ್‌ ಆಗಿಯೇ ಇದ್ದಾರೆ. ಆದರೆ ಸಮಂತಾ ಗರ್ಭಿಣಿಯಾದ್ರಾ ಎನ್ನುವ ಅನುಮಾನ ಎಲ್ಲೆಡೆ ವ್ಯಕ್ತವಾಗುತ್ತಿದೆ.

ಸಮಂತಾ ಅವರು ಗರ್ಭಿಣಿಯಾಗಿದ್ದಾರೆ ಎನ್ನುವ ವದಂತಿಗೆ ಪುಷ್ಟಿ ನೀಡುವ ಫೋಟೋಗಳು ಕೂಡ ಎಲ್ಲೆಡೆ ವೈರಲ್‌ ಆಗಿವೆ. ನಟಿಯ ಬೇಬಿ ಬಂಪ್‌ ಎನ್ನಲಾದ ಫೋಟೋಗಳು ಸೋಶಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗಿದ್ದು, ನಟಿ ಯಾವಾಗ ಗರ್ಭಿಣಿಯಾದರು? ಎಂದು ಎಲ್ಲರೂ ಶಾಕ್‌ಗೆ ಒಳಗಾಗಿದ್ದಾರೆ.

AI-Generated Photos Of Actress Samantha Ruth Prabhu Appearing Pregnant Have Gone Viral

ಆದರೆ, ಅಸಲಿಗೆ ನಟಿ ಸಮಂತಾ ಗರ್ಭಿಣಿಯೇ ಆಗಿಲ್ಲ ಎಂದು ಸ್ಪಷ್ಟವಾಗಿದೆ. ಏಕೆಂದರೆ ವೈರಲ್‌ ಆಗಿರುವ ಫೋಟೋಗಳು ಕೂಡ ನಕಲಿ ಎಂದು ತಿಳಿದುಬಂದಿದೆ. ಇದನ್ನು ಎಐ (ai) ತಂತ್ರಜ್ಞಾನ ಬಳಸಿ ಎಡಿಟ್‌ ಮಾಡಿರುವ ಫೋಟೋಗಳು ಎಂದು ಬಹಿರಂಗವಾಗಿದೆ. ಈ ಮೂಲಕ ಕಿಡಿಗೇಡಿಗಳು ಸಮಂತಾ ಅವರನ್ನು ಗರ್ಭಿಣಿ ಎಂಬಂತೆ ಬಿಂಬಿಸಿದ್ದಾರೆ. ಇದರ ಬೆನ್ನಲ್ಲೇ ಸಮಂತಾ ಅಭಿಮಾನಿಗಳು ಕೋಪಗೊಂಡಿದ್ದಾರೆ.

ಇಂತಹ ನೀಚ ಕೃತ್ಯ ಮಾಡಿದ ಕಿಡಿಗೇಡಿಗಳ ಮೇಲೆ ಕ್ರಮ ತೆಗೆದುಕೊಳ್ಳುವಂತೆ ಅಭಿಮಾನಿಗಳು ಆಗ್ರಹಿಸಿದ್ದಾರೆ. ಸದ್ಯ ವೈರಲ್‌ ಆಗಿರುವ ಈ ಫೋಟೋಗಳಂತೂ ಎಲ್ಲೆಡೆ ಚರ್ಚೆಗೆ ಕಾರಣವಾಗಿದೆ. ಇದು ಥೇಟ್‌ ಸಮಂತಾ ನಿಜವಾಗಿಯೂ ಗರ್ಭಿಣಿಯಾಗಿದ್ದಾರೆ ಎಂದೇ ಖಚಿತಪಡಿಸುವಷ್ಟು ನೈಜವಾಗಿವೆ. ಮೊದಲಿಗೆ ಈ ಫೋಟೋಗಳನ್ನು ನೋಡಿದವರು ಸಮಂತಾ ನಿಜವಾಗಿಯೂ ಗರ್ಭಿಣಿ ಆಗಿದ್ದಾರೆ ಎಂದೇ ಭಾವಿಸಿದ್ದಾರೆ.

AI-Generated Photos Of Actress Samantha Ruth Prabhu Appearing Pregnant Have Gone Viral

ಇತ್ತೀಚೆಗೆ ಇನ್‌ಸ್ಟಾಗ್ರಾಂನಲ್ಲಿ ಕುತೂಹಲಕಾರಿ ಪೋಸ್ಟ್‌ ಒಂದನ್ನ ಹಂಚಿಕೊಂಡಿದ್ದ ಸಮಂತಾ ಇದರಲ್ಲಿ ಮುಂದಿನ ವರ್ಷದ ಭವಿಷ್ಯದ ಪ್ರಕಾರ ಇವುಗಳನ್ನು ನಿರೀಕ್ಷಿಸಬಹುದು ಎಂದು ಸಮಂತಾ ಹೇಳಿಕೊಂಡಿದ್ದರು. ಈ ಪೋಸ್ಟ್‌ನಲ್ಲಿ ಅವರು ಅತ್ಯಂತ ನಿಷ್ಠಾವಂತ ಮತ್ತು ಪ್ರೀತಿಯ ಸಂಗಾತಿ (a very loyal and loving partner) ಎಂದು ಉಲ್ಲೇಖಿಸಿದ್ದರು. ಅಲ್ಲದೆ ಸಮಂತಾ ಅವರು ಮುಂದಿನ ವರ್ಷ ತಮ್ಮ ಹೊಸ ಸಂಗಾತಿ ಹಾಗೂ ಗರ್ಭಿಣಿಯಾಗುವ ಬಗ್ಗೆಯೂ ಹೇಳಿಕೊಂಡಿದ್ದರು.

ಈ ಪೋಸ್ಟ್‌ನ ಪ್ರಕಾರ ಸಮಂತಾ 2025ರಲ್ಲಿ ಅತ್ಯಂತ ನಿಷ್ಠಾವಂತ ಮತ್ತು ಪ್ರೀತಿಯ ಸಂಗಾತಿಯನ್ನು ಹುಡುಕುತ್ತಿದ್ದಾರೆ ಎಂದು ಅಭಿಮಾನಿಗಳು ನಿರೀಕ್ಷಿಸಿದ್ದರು. ಸಮಂತಾ ಅವರು ಹಾಕಿದ್ದ ಈ ಒಂದು ಪೋಸ್ಟ್‌ ಹಲವು ಪ್ರಶ್ನೆಗಳನ್ನು ಮುಂದಿಟ್ಟಿತ್ತು. 2025ರಲ್ಲಿ ಅತ್ಯಂತ ಬಿಡುವಿಲ್ಲದ ವರ್ಷವಾಗಿರುವುದು, ಹೆಚ್ಚು ಪ್ರಗತಿ ಕಾಣಬೇಕು, ಹೆಚ್ಚಿನ ಹಣ ಗಳಿಸುವುದು, ನಿಮಗೆ ಮತ್ತು ನಿಮಗೆ ಆರ್ಥಿಕ ಸ್ಥಿರತೆ ಇರುವುದು, ನೀವು ಹೊಂದಿದ್ದ ದೊಡ್ಡ ಗುರಿಗಳನ್ನು ಪೂರ್ಣಗೊಳಿಸುವುದು ನಿರೀಕ್ಷಿಸಬಹುದು ಎಂದು ಸಮಂತಾ ಪೋಸ್ಟ್‌ ಹಂಚಿಕೊಂಡಿದ್ರು.

ಆದಾಯಕ್ಕೆ ಹಲವು ಮಾರ್ಗಗಳು, ಸ್ಥಳಾಂತರಗೊಳ್ಳಲು ಒಂದು ಅವಕಾಶ, ಉತ್ತಮ ಮಾನಸಿಕ ಮತ್ತು ದೈಹಿಕ ಆರೋಗ್ಯ, ಫಲವತ್ತತೆ, ನೀವು ಗರ್ಭಿಣಿಯಾಗಲು ಪ್ರಯತ್ನಿಸುತ್ತಿದ್ದರೆ, ಅದು ಅದ್ಭುತವಾಗಿದೆ. ಇಲ್ಲದಿದ್ದರೆ, ಜಾಗರೂಕರಾಗಿರಿ..ಎಂದು ಸಮಂತಾ ಹಲವು ವಿಚಾರಗಳನ್ನು ಹೇಳಿಕೊಂಡಿದ್ದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+