ಡಿ-ಬಾಸ್ ದರ್ಶನ್ ನಂತರ, ಡಾಲಿ ಧನುಗೆ ಸಿಎಂ ಸಿದ್ದರಾಮಯ್ಯ ಸಾಥ್!

ನಟ ರಾಕ್ಷಸ ಡಾಲಿ ಧನಂಜಯ್ ಬರೀ ನಟನೆ ಮಾತ್ರವಲ್ಲ, ನಿರ್ಮಾಣ ಕಾರ್ಯದಲ್ಲೂ ತಮ್ಮ ಶಕ್ತಿ ಮತ್ತು ಯುಕ್ತಿ ತೋರಿಸಿದ್ದಾರೆ. ಹೀಗಾಗಿಯೇ ಅಭಿಮಾನಿಗಳ ಪಾಲಿನ ಪ್ರೀತಿಯ ನಟ, ಚಾಲೆಂಜಿಂಗ್ ಸ್ಟಾರ್ ದರ್ಶನ್ ಕೂಡ ಡಾಲಿ ಧನಂಜಯ್‌ಗೆ ಸಾಥ್ ನೀಡಿದ್ದರು. ಡಾಲಿಯ ಸಿನಿಮಾ 'ಟಗರು ಪಲ್ಯ' ಟ್ರೇಲರ್ ರಿಲೀಸ್ ಕಾರ್ಯಕ್ರಮಕ್ಕೆ ಬಂದಿದ್ದರು ಡಿ-ಬಾಸ್. ಈಗ ಸಿಎಂ ಸಿದ್ದರಾಮಯ್ಯ ಕೂಡ ಡಾಲಿ ಧನಂಜಯ್ ಬೆನ್ನು ತಟ್ಟಿದ್ದಾರೆ!

ಡಾಲಿ ಧನಂಜಯ್ ಡಾಲಿ ಪಿಕ್ಚರ್ಸ್ ಅಡಿಯಲ್ಲಿ ನಿರ್ಮಿಸುತ್ತಿರುವ 3ನೇ ಸಿನಿಮಾ ಟಗರು ಪಲ್ಯ. ಹೀಗೆ ಫಸ್ಟ್ ಲುಕ್‌ನಿಂದಲೇ ಹವಾ ಎಬ್ಬಿಸಿರುವ 'ಟಗರು ಪಲ್ಯ' ಸಿನಿಮಾ ಈಗಾಗಲೇ ಕನ್ನಡಿಗರ ಕುತೂಹಲ ಕೆರಳಿಸಿದೆ. ತನ್ನ ಹಾಡುಗಳು ಮತ್ತು ಟೀಸರ್ ಮೂಲಕ ಹವಾ ಎಬ್ಬಿಸಿ ಗಮನ ಸೆಳೆದ 'ಟಗರು ಪಲ್ಯ' ಸಿನಿಮಾದ ಟ್ರೇಲರ್ ಮೊನ್ನೆ ಮೊನ್ನೆ ರಿಲೀಸ್ ಆಗಿದೆ. ಇಷ್ಟೆಲ್ಲದರ ನಡುವೆ ಸಿಎಂ ಸಿದ್ದರಾಮಯ್ಯ ಅವರು ಟಗರು ಪಲ್ಯ ಟ್ರೇಲರ್ ನೋಡಿದ್ದು ಏನ್ ಹೇಳಿದ್ರು ಗೊತ್ತಾ?

After Challenging Star Darshan now Karnataka CM supports actor Daali Dhananjay

ಡಾಲಿ ಧನಂಜಯ್‌ಗೆ ಸಿಎಂ ಶುಭಾಶಯ!

ಹೌದು, ಇಂದು ಕರ್ನಾಟದ ಸಿಎಂ ಸಿದ್ದರಾಮಯ್ಯ ಅವರನ್ನು ಡಾಲಿ ಧನಂಜಯ್ ಭೇಟಿ ಮಾಡಿದರು. ಈ ವೇಳೆ 'ಟಗರು ಪಲ್ಯ' ಸಿನಿಮಾ ಟ್ರೇಲರ್ ತೋರಿಸಿ, ಸಿನಿಮಾ ನೋಡಲು ಬರುವಂತೆ ಸಿಎಂಗೆ ಮನವಿ ಮಾಡಿ ಆಹ್ವಾನ ನೀಡಿದ್ರು. ಈ ಬಗ್ಗೆ ಸಿಎಂ ಸಿದ್ದರಾಮಯ್ಯ, ತಮ್ಮ ಟ್ವಿಟ್ಟರ್ ಅಂದ್ರೆ 'ಎಕ್ಸ್' ಅಕೌಂಟ್‌ನಲ್ಲಿ ಮಾಹಿತಿ ಹಂಚಿಕೊಂಡಿದ್ದಾರೆ. 'ಕನ್ನಡ ಚಿತ್ರರಂಗದ ಖ್ಯಾತ ನಟ ಡಾಲಿ ಧನಂಜಯ ಅವರು ಇಂದು ನನ್ನ ಭೇಟಿಮಾಡಿ "ಟಗರು ಪಲ್ಯ" ಸಿನೆಮಾ ವೀಕ್ಷಣೆಗೆ ಆಗಮಿಸುವಂತೆ ಆಹ್ವಾನಿಸಿದರು. ನಟಿ ತಾರಾ ಅವರು ಈ ವೇಳೆ ಜೊತೆಗಿದ್ದರು ಎಂದು ತಿಳಿಸಿದ್ದಾರೆ.'

ಡಾಲಿ ಬೆನ್ನುತಟ್ಟಿದ್ದ ಚಾಲೆಂಜಿಂಗ್ ಸ್ಟಾರ್

ಇನ್ನು, ಡಾಲಿ ಧನಂಜಯ್ ನಿರ್ಮಿಸಿರುವ ಟಗರು ಪಲ್ಯ ಟ್ರೇಲರ್ ರಿಲೀಸ್ ಕಾರ್ಯಕ್ರಮದಲ್ಲಿ ನಟ ದರ್ಶನ್ ಕೂಡ ಸಾಥ್ ನೀಡಿದ್ದರು. ಸಮಾರಂಭದಲ್ಲಿ ಟ್ರೇಲರ್ ರಿಲೀಸ್ ಮಾಡಿ ಸಿನಿಮಾ ತಂಡಕ್ಕೆ ಶುಭ ಕೋರಿದ್ದರು. ಹಾಗೇ ಹೀರೋಗಳು ಏನು ಮಾಡುತ್ತಿದ್ದಾರಯ್ಯ ಅಂತಾ ತುಂಬಾ ಜನ ಕೇಳುತ್ತಾರೆ. ನಾವು ಪ್ರೊಡ್ಯೂಸ್ ಮಾಡ್ತಿದ್ದೀವಿ. ಈ ಸಾಲಿನಲ್ಲಿ ಡಾಲಿ ಮೊದಲು ನಿಲ್ತಾರೆ ಎಂದು ಹೇಳಿದ್ದ ಡಿ-ಬಾಸ್ ದರ್ಶನ್, ನಟ ರಾಕ್ಷಸ ಧನಂಜಯ್ ಅವರನ್ನ ಹೊಗಳಿದ್ದರು.

ಅಲ್ಲದೆ, ಇದು ಧನಂಜಯ್ ಅವರು ನಿರ್ಮಿಸಿರುವ 3ನೇ ಚಿತ್ರ. ಆತ ಕಷ್ಟಪಟ್ಟು, ಈಗ ಮೇಲೆ ಬಂದಿದ್ದು ಬಡವರ ಮಕ್ಕಳು ದೊಡ್ಡವರು ಆಗ್ಬೇಕು. ಡಾಲಿ ಪಿಕ್ಚರ್ಸ್ ದೊಡ್ಡ ಪ್ರೊಡಕ್ಷನ್ ಆಗಿ ಬೆಳೆಯಲಿ. ನಾಗಭೂಷಣ್ ಫ್ಯಾನ್ ನಾನು ಎಂದಿದ್ದರು. ಈ ಮೂಲಕ ಡಾಲಿ ಧನಂಜಯ್‌ಗೆ ಶುಭ ಕೋರಿದ್ದರು ನಟ ಡಿ-ಬಾಸ್ ದರ್ಶನ್. ಈಗ ಸಿಎಂ ಸಿದ್ದರಾಮಯ್ಯ ಅವರು ಕೂಡ, ಡಾಲಿ ಧನಂಜಯ್ ಅವರಿಗೆ ಬೆನ್ನುತಟ್ಟಿ ಪ್ರೋತ್ಸಾಹಿಸಿದ್ದಾರೆ. ಈ ಮೂಲಕ ಬಿಡುಗಡೆಗೂ ಮೊದಲೇ 'ಟಗರು ಪಲ್ಯ' ಸಿನಿಮಾ ಮತ್ತಷ್ಟು ಸದ್ದು ಮಾಡಲು ಸಜ್ಜಾಗಿದೆ.

After Challenging Star Darshan now Karnataka CM supports actor Daali Dhananjay

ಯಾವಾಗ ರಿಲೀಸ್ ಆಗುತ್ತೆ ಡಾಲಿ ಸಿನಿಮಾ?

'ಟಗರು ಪಲ್ಯ' ಸಿನಿಮಾಗೆ ಯುವ ನಿರ್ದೇಶಕ ಉಮೇಶ್ ಕೃಪಾ ಡೈರೆಕ್ಷನ್ ಇದೆ. ಉಮೇಶ್‌ಗೆ ಇದು ಮೊದಲನೇ ಚಿತ್ರ. ಹಾಗೇ ಟಗರು ಪಲ್ಯ ಚಿತ್ರದ ಮೂಲಕ ನಟ ನೆನಪಿರಲಿ ಪ್ರೇಮ್ ಪುತ್ರಿ ಅಮೃತಾ ನಟಿಯಾಗಿ ಕನ್ನಡ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟಿದ್ದು, ಈ ಚಿತ್ರದಲ್ಲಿ ನಾಗಭೂಷಣ್ ನಾಯಕನಾಗಿ ನಟಿಸಿದ್ದಾರೆ. ಸಕ್ಕರೆ ನಾಡು ಮಂಡ್ಯ ಜಿಲ್ಲೆ ಸುತ್ತಮುತ್ತ ಗ್ರಾಮೀಣ ಭಾಗದಲ್ಲಿ ನಡೆಯುವ ಆಚರಣೆ ಸುತ್ತಾ ಈ ಸಿನಿಮಾ ಕಥೆ ಕೆತ್ತಿದ್ದಾರೆ ನಿರ್ದೇಶಕ ಉಮೇಶ್ ಕೃಪಾ. ಹೀಗಾಗಿ 'ಟಗರು ಪಲ್ಯ' ಸಿನಿಮಾ ತನ್ನ ಫಸ್ಟ್ ಲುಕ್‌ನಿಂದ ಕನ್ನಡಿಗರ ಗಮನ ಸೆಳೆದಿತ್ತು. ಅಕ್ಟೋಬರ್ 27ಕ್ಕೆ ಸಿನಿಮಾ ರಿಲೀಸ್ ಆಗಲಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+