Get Updates
Get notified of breaking news, exclusive insights, and must-see stories!

Kagney Linn Karter: 36 ನೇ ವರ್ಷಕ್ಕೆ ಆತ್ಮಹತ್ಯೆಗೆ ಶರಣಾದ ನೀಲಿ ಸಿನಿಮಾಗಳ ತಾರೆ ಕೆನಿ ಲಿನ್ ಕಾರ್ಟರ್

ಪ್ರಸಿದ್ಧ ನೀಲಿ ಸಿನಿಮಾಗಳ ನಟಿ ಕೆನಿ ಲಿನ್ ಕಾರ್ಟರ್ ತನ್ನ 36 ನೇ ವಯಸ್ಸಿನಲ್ಲಿ ಆತ್ಮಹತ್ಯೆಗೆ ಶರಣಾಗಿ ದುರಂತ ಅಂತ್ಯ ಕಂಡಿದ್ದಾರೆ. ಈ ಹೃದಯವಿದ್ರಾವಕ ಸುದ್ದಿಯನ್ನು ಆಕೆಯ ಸ್ನೇಹಿತರು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದಾರೆ. ಅಂತರಾಷ್ಟ್ರೀಯ ಮಾಧ್ಯಮಗಳು ಈ ವರದಿಯನ್ನು ದೃಢಪಡಿಸಿವೆ.

ಯುನೈಟೆಡ್ ಸ್ಟೇಟ್ಸ್‌ನ ಓಹಿಯೋದ ಪಾರ್ಮಾದಲ್ಲಿರುವ ತಮ್ಮ ನಿವಾಸದಲ್ಲೇ ಕೆನಿ ಲಿನ್ ಕಾರ್ಟರ್ ಆತ್ಮಹತ್ಯೆಗೆ ಶರಣಾಗಿದ್ದಾರೆ. ಕ್ಯುಯಾಹೋಗಾ ಕೌಂಟಿ ವೈದ್ಯಕೀಯ ಪರೀಕ್ಷಕರ ದಾಖಲೆಗಳು ಕೆನಿ ಲಿನ್ ಕಾರ್ಟರ್ ಅವರ ಮೃತದೇಹವನ್ನು ಓಹಿಯೋದ ಪರ್ಮಾದಿಂದ ಸ್ವೀಕರಿಸಲಾಗಿದೆ ಎಂದು ಹೇಳಿದೆ. ಕೆನಿ ಲಿನ್ ಕಾರ್ಟರ್ ಅವರ ತಾಯಿ ಟೀನಾ ಪರವಾಗಿ, ನಟಿಯ ಸ್ನೇಹಿತರು GoFundMe ಅಭಿಯಾನದಲ್ಲಿ ದೇಣಿಗೆ ಸಂಗ್ರಹ ಪ್ರಾರಂಭಿಸಿದ್ದಾರೆ.

Adult film actress Kagney Linn Karter dies by suicide at 36

ನಟಿಯ ತಾಯಿ ಟೀನಾ ಅವರಿಗೆ ಸಹಾಯ ಮಾಡಲು ಬೆಂಬಲ ನೀಡಬೇಕು ಎಂದು ಮನವಿ ಮಾಡಲಾಗಿದೆ. GoFundMe ಪುಟದ ವಿವರಣೆಯಲ್ಲಿ ಕೆನಿ ಲಿನ್ ಕಾರ್ಟರ್ ಅವರ ಕಾರ್ಯಕ್ಷಮತೆ ಮತ್ತು ಫಿಟ್‌ನೆಸ್‌ನಲ್ಲಿ ಸಾಧನೆಗಳ ಹೊರತಾಗಿಯೂ, ಅವರು ಹಲವು ವರ್ಷಗಳು ಮಾನಸಿಕ ಆರೋಗ್ಯ ಸಮಸ್ಯೆಗಳೊಂದಿಗೆ ಹೋರಾಡಿದರು ಎಂದು ಬರೆದಿದ್ದಾರೆ.

ಜೊತೆಗೆ ಕೆನಿ ಲಿನ್ ಕಾರ್ಟರ್ ಅವರ ಸ್ನೇಹಿತರು ಮಾನಸಿಕ ಆರೋಗ್ಯದಬಗ್ಗೆ ಜಾಗೃತಿ ಮೂಡಿಸಲು ಸಾಮಾಜಿಕ ಮಾಧ್ಯಮದಲ್ಲಿ ಪ್ರಚಾರ ಆರಂಭಿಸಿದ್ದಾರೆ. ಈ GoFundMe ಅಭಿಯಾನದ ಮೂಲಕ ಸಂಗ್ರಹಿಸಿದ ಯಾವುದೇ ಹೆಚ್ಚುವರಿ ಹಣವನ್ನು ಪ್ರಾಣಿಗಳ ರಕ್ಷಣೆಗೆ ಬೆಂಬಲಿಸಲು ಬಳಸಲಾಗುತ್ತದೆ ಎಂದು ಉಲ್ಲೇಖಿಸಿದ್ದಾರೆ.

ಕೆನಿ ಲಿನ್ ಕಾರ್ಟರ್ ಯಾರು..?

36 ವರ್ಷ ವಯಸ್ಸಿನ ಕೆನಿ ಲಿನ್ ಕಾರ್ಟರ್ ಒಬ್ಬ ಗಾಯಕಿ, ನಟಿ, ನೃತ್ಯಗಾರ್ತಿ. 2019 ರ ನವೆಂಬರ್‌ನಲ್ಲಿ ಕ್ಲೀವ್‌ಲ್ಯಾಂಡ್ ಸ್ಟುಡಿಯೊಗೆ ಬಮದ ಅವರು ತಮ್ಮ ವೃತ್ತಿ ಜೀವನವನ್ನು ಸಿನಿಮಾ ರಂಗದಲ್ಲಿ ಕಂಡುಕೊಳ್ಳಲು ಆರಂಭಿಸಿದ್ದರು. 2000 ರ ದಶಕದ ಮಧ್ಯಭಾಗದಲ್ಲಿ ಕೆನಿ ಲಿನ್ ಕಾರ್ಟರ್ ವಯಸ್ಕ ಚಲನಚಿತ್ರೋದ್ಯಮಕ್ಕೆ ಪಾದಾರ್ಪಣೆ ಮಾಡಿದರು.

Adult film actress Kagney Linn Karter dies by suicide at 36

ಈ ಇಂಡಸ್ಟ್ರೀಯಲ್ಲಿ ಪ್ರಖ್ಯಾತಿ ಪಡೆದ ಅವರಿಗೆ ಹಲವಾರು AVN ಪ್ರಶಸ್ತಿಗಳು ಮುಡಿಗೇರಿವೆ. 2019 ರಲ್ಲಿ, ಅವರು ಲಾಸ್ ಏಂಜಲೀಸ್‌ನಿಂದ ಬೇರೆಡೆಗೆ ಸ್ಥಳಾಂತರಗೊಳ್ಳುವ ನಿರ್ಧಾರವನ್ನು ಮಾಡಿದರು. ನೀಲಿ ಸಿನಿಮಾಗಳ ಜೊತೆಗೆ ಪೋಲ್ ಡ್ಯಾನ್ಸ್‌ ಬಗ್ಗೆ ಪ್ರೀತಿ ಬೆಳೆಸಿಕೊಂಡರು. ಕೊನೆಗೆ ಓಹಿಯೋ ಸ್ಟುಡಿಯೊದಲ್ಲಿ ಕೆಲಸ ಕಂಡುಕೊಂಡರು. ವಯಸ್ಕ ಚಿತ್ರಗಳ ಬದಲಿಗೆ ಪೋಲ್ ಡ್ಯಾನ್ಸ್‌ನ ಸೌಂದರ್ಯ ಮತ್ತು ಅಥ್ಲೆಟಿಸಿಸಂನ ಮೇಲೆ ಕೇಂದ್ರೀಕರಿಸಿದ ಅವರು ಕೊನೆಗೆ ತನ್ನದೇ ಆದ ಸ್ಟುಡಿಯೊವನ್ನು ತೆರೆಯಲು ನಿರ್ಧರಿಸಿದ್ದರು. ಮಾನಸಿಕ ಸಮಸ್ಯೆಗಳಿಂದ ಬಳಲುತ್ತಿದ್ದ ಅವರು ಆತ್ಮಹತ್ಯೆಗೆ ಶರಣಾಗಿದ್ದಾರೆ.

(ಆತ್ಮಹತ್ಯೆ ಎಲ್ಲಾ ಸಮಸ್ಯೆಗಳಿಗೆ ಪರಿಹಾರವಲ್ಲ. ನಿಮಗೆ ಬೆಂಬಲ ಬೇಕಾದರೆ ಅಥವಾ ಯಾರೊಂದಿಗಾದರೂ ನಿಮ್ಮ ಸಮಸ್ಯೆಗಳನ್ನು ಹಂಚಿಕೊಳ್ಳಬೇಕಿದ್ದರೇ ದಯವಿಟ್ಟು ನಿಮ್ಮ ಹತ್ತಿರದ ಮಾನಸಿಕ ಆರೋಗ್ಯ ತಜ್ಞರನ್ನು ಸಂಪರ್ಕಿಸಿ. ಸಹಾಯವಾಣಿಗಳು: ಆಸ್ರ: 022 2754 6669; ಸ್ನೇಹ ಇಂಡಿಯಾ ಫೌಂಡೇಶನ್: +914424640050 ಮತ್ತು ಸಂಜೀವಿನಿ: 011-24311918, ರೋಶ್ನಿ ಫೌಂಡೇಶನ್: ಸಂಪರ್ಕ: 040-66202001, 040-66202000, ಒಂದು ಜೀವನ: ಸಂಪರ್ಕ ಸಂಖ್ಯೆ: 78930 78930, SEVA: ಸಂಪರ್ಕ ಸಂಖ್ಯೆ: 09441778290 )

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+