Sumalatha: "ತಪ್ಪು ಮಾಡಿ ತಾವು ಹೀರೋ ಅಂತ ಬಿಂಬಿಸಿಕೊಳ್ಳುವುದು" ಎಂದಿದ್ದು ಯಾರಿಗೆ ?
ನಟ ದರ್ಶನ್ ಅವರ ಜೀವನದಲ್ಲಿ ಹಲವು ಪ್ರಮುಖ ಬದಲಾವಣೆಗಳು ಆಗುತ್ತಿವೆ. ದರ್ಶನ್ ತೂಗುದೀಪ್ ಅವರು ಮತ್ತೆ ಸಿನಿಮಾದಲ್ಲಿ ಬ್ಯುಸಿಯಾಗಿದ್ದಾರೆ. ಡೆವಿಲ್: ದಿ ಹೀರೋ ಸಿನಿಮಾ ಶೂಟಿಂಗ್ ಮರು ಪ್ರಾರಂಭವಾಗಿದೆ. ಈ ರೀತಿ ಇರುವಾಗಲೇ ಅವರು ಇನ್‌ಸ್ಟಾಗ್ರಾಂ ಖಾತೆಯಿಂದ ಎಲ್ಲರನ್ನೂ ಅನ್‌ಫಾಲೋ ಮಾಡಿದ್ದಾರೆ. ದರ್ಶನ್ ಅವರು ಇನ್ಸ್‌ಟಾದ ಆರು ಜನರನ್ನು ಫಾಲೋ ಮಾಡುತ್ತಿದ್ದರು ಅವರಲ್ಲಿ ಸುಮಲತಾ ಅಂಬರೀಶ್ ಅವರು ಸಹ ಇದ್ದರು. ಇದೀಗ ನಟ ದರ್ಶನ್ ಅವರು ಸುಮಲತಾ ಅಂಬರೀಶ್ ಸೇರಿದಂತೆ ಹಲವರನ್ನು ಅನ್‌ಫಾಲೋ ಮಾಡಿದ್ದಾರೆ. ಇದರ ಬೆನ್ನಲ್ಲೇ ಸುಮಲತಾ ಅವರ ಇನ್ಸ್ಟಾ ಪೋಸ್ಟ್ ವೈರಲ್ ಆಗುತ್ತಿದೆ. ಬೆಸ್ಟ್ ಆಕ್ಟಿಂಗ್ ಅವಾರ್ಡ್ ಇವರಿಗೇ ಹೋಗಬೇಕು ಅಂತ ಅವರು ಪೋಸ್ಟ್ ಮಾಡಿದ್ದಾರೆ.
ಸುಮಲತಾ ಅವರು ಇನ್ಸ್ಟಾದಲ್ಲಿ ಏಕಕಾಲಕ್ಕೆ ಹಲವು ಪೋಸ್ಟ್‌ಗಳನ್ನು ಹಂಚಿಕೊಂಡಿದ್ದು. ಇದೀಗ ಭಾರೀ ಚರ್ಚೆಗೆ ಕಾರಣವಾಗಿದೆ. ನಟಿ ಮತ್ತು ರಾಜಕಾರಣಿ ಸುಮಲತಾ, ಅಭಿಷೇಕ್ ಅಂಬರೀಶ್ ಹಾಗೂ ಅವಿವಾ ಬಿದ್ದಪ್ಪ ಅವರನ್ನು ಇನ್ಸ್ಟಾದಿಂದ ದರ್ಶನ್ ಅವರು ಅನ್‌ಫಾಲೋ ಮಾಡಿದ್ದಾರೆ. ದರ್ಶನ್ ಅವರು ಫಾಲೋ ಮಾಡಿದ್ದ ಆರೂ ಜನರನ್ನೂ ಇನ್ಸ್ಟಾದಿಂದ ಅನ್‌ಫಾಲೋ ಮಾಡಿದ್ದಾರೆ. ಈ ಮೂಲಕ ಅವರ ಇನ್ಸ್ಟಾ ಖಾತೆ 0 ಫಾಲೋಯಿಂಗ್‌ಗೆ ತಲುಪಿದೆ.

ಇನ್ನು ರೇಣುಕಾಸ್ವಾಮಿ ಕೊಲೆ ಕೇಸ್‌ನಲ್ಲಿ ನಟ ದರ್ಶನ್ ಅವರು ಜೈಲು ಸೇರಿದ ಮೇಲೆ ಯಾರೆಲ್ಲ ಅವರ ಪರ ಮಾತನಾಡಿದ್ದರೋ ಅಥವಾ ಬೆಂಬಲ ಸೂಚಿಸಿದ್ದರೋ ಅವರಿಗೆ ಮಾತ್ರ ದರ್ಶನ್ ಅವರು ಇಂಪಾರ್ಟೆನ್ಸ್ ಕೊಡುತ್ತಿದ್ದಾರೆ ಎಂದು ಹೇಳಲಾಗಿದೆ. ಜೈಲಿನಿಂದ ಜಾಮೀನಿನ ಮೇಲೆ ಬಿಡುಗಡೆಯಾದ ಮೇಲೆ ದರ್ಶನ್ ಅವರು ವಿಡಿಯೋವೊಂದನ್ನು ಮಾಡಿದ್ದರು. ಧನ್ವೀರ್, ರಚಿತಾ ರಾಮ್ ಹಾಗೂ ನಟಿ ರಕ್ಷಿತಾ ಅವರಿಗೆ ಮಾತ್ರ ಥ್ಯಾಂಕ್ಸ್ ಹೇಳಿದ್ದರು. ಈ ಸಂದರ್ಭದಲ್ಲಿ ಅವರು ಬೇರೆ ಯಾರನ್ನೂ ನೆನಪಿಸಿಕೊಂಡಿರಲಿಲ್ಲ.. ಇದೀಗ ಸುಮಲತಾ ಅವರನ್ನೂ ಅಲ್‌ಫಾಲೋ ಮಾಡಿರುವುದು ಹಾಗೂ ಇದಾದ ಮೇಲೆ ಸುಮಲತಾ ಅವರು ಪೋಸ್ಟ್ ಮಾಡಿರುವುದು ಹಲವು ಅನುಮಾನಗಳಿಗೆ ಕಾರಣವಾಗಿದೆ.

ಸುಮಲತಾ ಇನ್‌ಸ್ಟಾಗ್ರಾಂ ಪೋಸ್ಟ್‌ನಲ್ಲಿ ಏನಿದೆ ?
ಬೆಸ್ಟ್ ಆಕ್ಟಿಂಗ್ ಆಸ್ಕರ್ ಅವಾರ್ಡ್ ಯಾರಿಗೆ ಹೋಗುತ್ತೆ ಅಂತಂದರೆ. ಯಾರು ಸತ್ಯವನ್ನ ತಿರುಚುತ್ತಾರೋ. ತಮ್ಮದೇ ತಪ್ಪುಗಳನ್ನ ಇಟ್ಕೊಂಡು ಬೇರೆಯವರ ಮೇಲೆ ಹಾಕಿ ನೋವು ಮಾಡೋದು. ತಮ್ಮ ಮೇಲಿನ ನಿಂದನೆಯನ್ನ ಬೇರೆಯವರ ಮೇಲೆ ಹಾಕಿ, ಗೂಬೆ ಕೂರಿಸೋದು ಮಾಡಿ ತಮ್ಮನ್ನ ತಾವು ಹೀರೋ ಎನ್ನುವಂತೆ ಬಿಂಬಿಸಿಕೊಳ್ಳುವುದು ಅಂತ ಸುಮಲತಾ ಅಂಬರೀಷ್ ಅವರು ಪೋಸ್ಟ್ ಮಾಡಿದ್ದಾರೆ.
ಸರಣಿ ಪೋಸ್ಟ್ ಹಂಚಿಕೊಂಡ ಸುಮಲತಾ: ಇನ್ನು ಸುಮಲತಾ ಅವರು ಇನ್ಸ್ಟಾದಲ್ಲಿ ಸರಣಿ ಪೋಸ್ಟ್‌ಗಳನ್ನು ಹಂಚಿಕೊಂಡಿದ್ದಾರೆ. ನೀವು ಜೀವನದಲ್ಲಿ ಎಷ್ಟು ಬಾರಿ ನೋವನ್ನು ಶಕ್ತಿಯನ್ನಾಗಿ ಬದಲಾಯಿಸಿಕೊಂಡು ಇಂದಿನ ಈ ಸ್ಥಾನವನ್ನು ತಲುಪಿದ್ದೀರಿ ಎನ್ನುವುದು ಯಾರಿಗೂ ಗೊತ್ತಿಲ್ಲ ಎಂದು ಮತ್ತೊಂದು ಪೋಸ್ಟ್ ಮಾಡಿದ್ದಾರೆ.
ನೀವು ನಿಮ್ಮ ಹೃದಯದಷ್ಟೇ ಸುಂದರ... ನಿಮ್ಮ ಮಾತು, ನಿಮ್ಮ ಅನಿಸಿಕೆ ಮತ್ತು ನೀವು ಕೊಡುವ ಶಕ್ತಿ ಎಂದು ಮತ್ತೊಂದು ಸ್ಟೇಟಸ್ ಹಂಚಿಕೊಂಡಿದ್ದಾರೆ. ಫಿಲಾಸಫಿಗೆ ಸಂಬಂಧಿಸಿದ ಹಲವು ಪೋಸ್ಟ್‌ಗಳನ್ನು ಮಾಡಿದ್ದಾರೆ. ಸಾಮಾನ್ಯವಾಗಿ ನೋವಿನ ಸಮಯದಲ್ಲಿ ಹಂಚಿಕೊಳ್ಳುವ ಪೋಸ್ಟ್‌ಗಳಂತೆ ಈ ಪೋಸ್ಟ್‌ಗಳು ಇವೆ.
ದರ್ಶನ್ ಅವರು ಅನ್‌ಫಾಲೋ ಮಾಡುತ್ತಿದ್ದಂತೆಯೇ ಈ ರೀತಿ ಸರಣಿ ಪೋಸ್ಟ್ ಹಂಚಿಕೊಂಡಿರುವುದು ಕುತೂಹಲ ಹಾಗೂ ಅಚ್ಚರಿಯನ್ನು ಮೂಡಿಸಿದೆ. ದರ್ಶನ್ ಅವರ ನಡೆಯಿಂದ ಸುಮಲತಾ ಅವರು ನೊಂದಿದ್ದಾರೆ ಎನ್ನಲಾಗುತ್ತಿದೆ.












Click it and Unblock the Notifications