Rashmika Mandanna Birthday: 29ನೇ ಹುಟ್ಟುಹಬ್ಬದ ಸಂಭ್ರಮದಲ್ಲಿ ರಶ್ಮಿಕಾ: ಒಮನ್​ನಲ್ಲಿ ಮಜಾ ಮಸ್ತಿ

ನ್ಯಾಷನಲ್ ಕ್ರಶ್ ರಶ್ಮಿಕಾ ಮಂದಣ್ಣ ಅವರಿಗೆ ಇಂದು (ಏಪ್ರಿಲ್ 5) ಹುಟ್ಟುಹಬ್ಬದ ಸಂಭ್ರಮ. ಹೀಗಾಗಿ ನಟಿ ರಶ್ಮಿಕಾಗೆ ಶುಭಾಶಯಗಳ ಮಹಾಪೂರವೇ ಹರಿದು ಬರುತ್ತಿದೆ. ಪ್ರತೀ ಬಾರಿ ಒಂದೊಂದು ದೇಶದಲ್ಲಿ ಜನ್ಮ ದಿನವನ್ನು ಆಚರಿಸಿಕೊಳ್ಳುವ ರಶ್ಮಿಕಾ ಈ ಬಾರಿ ತಮ್ಮ ಜನ್ಮದಿನವನ್ನು ಗಲ್ಫ್‌ ರಾಷ್ಟ್ರವಾದ ಒಮನ್ ಸಲಾಲಾದಲ್ಲಿ ಆಚರಿಸಿಕೊಳ್ಳುತ್ತಿದ್ದಾರೆ.

ಹೌದು ಬಹುಭಾಷಾ ನಟಿ ರಶ್ಮಿಕಾ ಈಗ ಮುಟ್ಟಿದ್ದೆಲ್ಲಾ ಚಿನ್ನವಾಗುತ್ತಿದೆ. ಕನ್ನಡದ 'ಕಿರಿಕ್ ಪಾರ್ಟಿ' ಸಿನಿಮಾ ಮೂಲಕ ಜನಪ್ರಿಯತೆ ಪಡೆದ ರಶ್ಮಿಕಾ ಹಿಂದೆ ಉಳಿದ ಸಿನಿಮಾನೇ ಇಲ್ಲ. ರಶ್ಮಿನಾ ನಟಿಸಿದ ಸಿನಿಮಾಗಳೆಲ್ಲವೂ ಸಿಕ್ಕಾಪಟ್ಟೆ ಆದಾಯ ಗಳಿಸಿವೆ. ಹೀಗಾಗಿ ರಶ್ಮಿಕಾ ಇದೀಗ ಸಿನಿಮಾ ರಂಗದಲ್ಲಿ ಹೆಚ್ಚು ಬೇಡಿಕೆ ಇರುವ ನಟಿಯಾಗಿದ್ದಾರೆ.

actress rashmika mandanna is celebrating her 29th birthday in oman photos viral

ಸಿನಿಮಾ ಶೂಟಿಂಗ್‌ಗಾಗಿ ವಿದೇಶ ಸುತ್ತುವ ರಶ್ಮಿಕಾ ಇದೀಗ ಸಲಾಲಾ ಬೀಚ್‌ ಬಳಿ ಕುಳಿತು ಮನಸ್ಸಿಗೆ ಇಷ್ಟವಾಗುವ ಖಾದ್ಯಗಳನ್ನು ಸವಿಯುತ್ತಾ ಫೋಟೋಗಳನ್ನು ಶೇರ್ ಮಾಡಿದ್ದಾರೆ. ಒಮನ್ ಪ್ರವಾಸ ಮಾಡುತ್ತಾ ತಮ್ಮ ಹುಟ್ಟುಹಬ್ಬವನ್ನು ಆಚರಿಸಿಕೊಳ್ಳುತ್ತಿದ್ದಾರೆ. ಜೊತೆಗೆ ಡಯಟ್ ಮರೆತಿರುವ ರಶ್ಮಿಕಾ ತಮ್ಮ ಜಿಮ್ ಟ್ರೈನರ್ ಕೋಪ ಮಾಡಿಕೊಳ್ಳುತ್ತಾರೆ ಎಂದು ಕ್ಯಾಪ್ಶನ್ ಹೇಳಿದ್ದಾರೆ.

ಇನ್ನೂ ಒಮನ್ ಸಲಾಲಾ ಬೀಚ್‌ ರೂಮ್‌ಗೆ ಅವರು ಆಗಮಿಸುತ್ತಿದ್ದಂತೆ ಅವರನ್ನು ಕೇಕ್ ಮೂಲಕ ಸ್ವಾಗತಿಸಲಾಗಿದೆ. ಇನ್ನೂ ರಶ್ಮಿಕಾ ಜೊತೆ ವಿಜಯ್‌ ದೇವರಕೊಂಡ ಕೂಡ ಇದ್ದಾರೆ ಎಂದು ಹೇಳಲಾಗುತ್ತಿದೆ. ಆದರೆ ಇದರ ಬಗ್ಗೆ ರಶ್ಮಿಕಾ ರಿವೀಲ್ ಮಾಡಿಲ್ಲ. ಆದರೂ ಕೂಡ ಕಾಮೆಂಟ್ ಬಾಕ್ಸ್‌ನಲ್ಲಿ ಜನ ಇದನ್ನು ಪ್ರಶ್ನೆ ಮಾಡುತ್ತಿದ್ದಾರೆ.

actress rashmika mandanna is celebrating her 29th birthday in oman photos viral

ಒಟ್ಟಿನಲ್ಲಿ ರಶ್ಮಿಕಾ ಮಂದಣ್ಣ ಇಂದು ಸಿಕ್ಕಾಪಟ್ಟೆ ಖುಷಿಯಾಗಿದ್ದಾರೆ. ಅವರು ತಮ್ಮ ಹುಟ್ಟುಹಬ್ಬವನ್ನು ಒಮನ್ ಸಲಾಲಾ ಬೀಚ್‌ನಲ್ಲಿ ಆಚರಿಸಿಕೊಳ್ಳುತ್ತಿದ್ದು ಫೋಟೋಗಳಲ್ಲಿ ತುಂಬಾ ಖುಷಿಯಾಗಿರುವುದು ಕಂಡು ಬಂದಿದೆ. ಇನ್ನೂ ಅವರ ಅಭಿಮಾನಿಗಳು ಸಾಮಾಜಿಕ ಜಾಲತಾಣಗಳಲ್ಲಿ ಶುಭಾಶಯಗಳ ಸುರಿಮಳೆ ಸುರಿಸುತ್ತಿದ್ದಾರೆ.

ಬ್ಯಾಕ್ ಟು ಬ್ಯಾಕ್ ಸಿನಿಮಾಗಳಲ್ಲಿ ಬ್ಯೂಸಿ ಆಗಿರುವ ರಶ್ಮಿಕಾ ಇಂದು ಕೊಂಚ ಬಿಡುವು ಮಾಡಿಕೊಂಡಿದ್ದಾರೆ. ಈ ಹಿಂದೆಯೂ ರಶ್ಮಿಕಾ ಹಾಗೂ ವಿಜಯ್ ದೇವರಕೊಂಡ ವಿದೇಶದಲ್ಲಿ ಒಟ್ಟಾಗಿ, ಗುಟ್ಟಾಗಿ ಪಾರ್ಟಿ ಮಾಡಿದ್ದರು ಎಂದು ಹೇಳಲಾಗಿತ್ತು. ಇದೀಗ ರಶ್ಮಿಕಾ ಹುಟ್ಟುಹಬ್ಬವನ್ನ ಗ್ರ್ಯಾಂಡ್‌ ಆಗಿ ಸೆಲೆಬ್ರೇಟ್‌ ಮಾಡೋದಕ್ಕೆ ದೇವರಕೊಂಡ ಸಹ ವಿದೇಶಕ್ಕೆ ಪ್ರಯಾಣ ಬೆಳೆಸಿದ್ದಾರೆ ಎಂದು ತಿಳಿದುಬಂದಿದೆ. ರಶ್ಮಿಕಾ ಮಂದಣ್ಣ ಹಾಗೂ ವಿಜಯ್ ದೇವರಕೊಂಡ ಸುದ್ದಿಗಳು ಆಗಾಗ್ಗೆ ಸೋಶಿಯಲ್‌ ಮೀಡಿಯಾದಲ್ಲಿ ಹೈಪ್‌ ಕ್ರಿಯೇಟ್‌ ಮಾಡುತ್ತಲೇ ಇರುತ್ತದೆ. ಈ ಹಿಂದೆಯೂ ಇಬ್ಬರು ಪ್ರೀತಿಯಲ್ಲಿದ್ದು ಶೀಘ್ರವೇ ವಿವಾಹವಾಗಲಿದ್ದಾರೆ ಎಂಬ ವದಂತಿಗಳೂ ಹರಿದಾಡಿದ್ದವು.

ಇದೀಗ ಅವರಿಬ್ಬರು ಒಟ್ಟಿಗೆ ಒಮನ್‌ನಲ್ಲಿ ಇದ್ದಾರೆ ಅಂತಲೇ ಹೇಳಲಾಗುತ್ತಿದೆ. ಆದರೆ ಈ ಬಗ್ಗೆ ನಟಿ ಯಾವುದೇ ಗುಟ್ಟು ಬಿಟ್ಟುಕೊಟ್ಟಿಲ್ಲ. ಆದರೂ ಕೂಡ ದೇವರಕೊಂಡ ಕೂಡ ರಶ್ಮಿಕಾ ಜೊತೆ ಇದ್ದಾರೆ ಎಂದು ಅಭಿಮಾನಿಗಳು ರಶ್ಮಿಕಾ ಫೋಟೋಗಳಿಗೆ ಕಾಮೆಂಟ್ ಮಾಡುತ್ತಿದ್ದಾರೆ. ಆದರೆ ಯಾರೇ ಏನೇ ಅಂದರೂ ಕೂಡ ರಶ್ಮಿಕಾ ಒಮನ್‌ನಲ್ಲಿ ಮಸ್ತ್ ಮಜಾ ಮಾಡುತ್ತಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+