Get Updates
Get notified of breaking news, exclusive insights, and must-see stories!

Rashmika Mandanna: ನಡೆಯಲಾರದ ಸ್ಥಿತಿ ತಲುಪಿದ ರಶ್ಮಿಕಾ, ಕೈಯಲ್ಲಿರೋ ಸಿನಿಮಾಗಳ ಕಥೆಯೇನು?

ನ್ಯಾಷನಲ್‌ ಕ್ರಶ್‌ ಎಂದು ಖ್ಯಾತಿ ಗಳಿಸಿದ್ದ ಕನ್ನಡದ ನಟಿ ರಶ್ಮಿಕಾ ಮಂದಣ್ಣ ಅವರು ಅಭಿಮಾನಿಗಳಿಗೆ ಶಾಕಿಂಗ್‌ ವಿಚಾರ ಹಂಚಿಕೊಂಡಿದ್ದಾರೆ. ರಶ್ಮಿಕಾ ಜಿಮ್‌ನಲ್ಲಿ ವರ್ಕೌಟ್‌ ಮಾಡುವಾಗ ರಶ್ಮಿಕಾ ಪೆಟ್ಟು ಮಾಡಿಕೊಂಡಿರುವ ವಿಚಾರ ನಿನ್ನೆ ಹರಿದಾಡಿತ್ತು. ಆದರೆ, ರಶ್ಮಿಕಾ ಇದನ್ನು ಸ್ಪಷ್ಟಪಡಿಸಿರಲಿಲ್ಲ. ಇಂದು ಫೋಟೋಗಳನ್ನು ಹಂಚಿಕೊಳ್ಳುವ ಮೂಲಕ ರಶ್ಮಿಕಾ ಅವರು ತಾವು ಪೆಟ್ಟು ಮಾಡಿಕೊಂಡಿರುವುದನ್ನು ಖಚಿತಪಡಿಸಿದ್ದಾರೆ.

ಅಲ್ಲದೆ ಅಭಿಮಾನಿಗಳಿಗೆ ನೋವಿನ ವಿಚಾರವನ್ನೂ ಹೇಳಿದ್ದಾರೆ. ಸೋಶಿಯಲ್‌ ಮೀಡಿಯಾದಲ್ಲಿ ರಶ್ಮಿಕಾ ಅವರು ಕೆಲ ಫೋಟೋಗಳನ್ನು ಹಂಚಿಕೊಂಡಿದ್ದು, ಇದರಲ್ಲಿ ರಶ್ಮಿಕಾ ಅವರ ಕಾಲು ಫ್ರಾಕ್ಚರ್‌ ಆಗಿದೆ. ನಾಲ್ಕು ಫೋಟೋಗಳನ್ನು ಹಂಚಿಕೊಂಡಿರುವ ಅವರು ತಮಗೆ ಆಗಿರುವ ಗಂಭೀರ ಗಾಯಗಳನ್ನು ಕನ್ಫರ್ಮ್‌ ಮಾಡಿದ್ದಾರೆ.

Actress Rashmika Mandanna Apologizes To Directors After Injury Shares Photos

ಮೊದಲಿಗೆ ರಶ್ಮಿಕಾ ಸಣ್ಣ ಫ್ರಾಕ್ಚರ್‌ ಆಗಿರಬಹುದು. ಇದೆಲ್ಲ ಕಾಮನ್‌ ಎಂದು ಅಭಿಮಾನಿಗಳನ್ನು ಅಂದಾಜಿಸಿದ್ದರು. ಆದರೆ, ರಶ್ಮಿಕಾ ಅವರು ಸದ್ಯ ಬೆಡ್‌ರೆಸ್ಟ್‌ನಲ್ಲಿರುವ ಫೋಟೋಗಳನ್ನು ಹಂಚಿಕೊಂಡಿದ್ದು, ಗಂಭೀರ ಗಾಯಗೊಂಡಿರುವ ಬಗ್ಗೆ ಆತಂಕ ವ್ಯಕ್ತಪಡಿಸುತ್ತಿದ್ದಾರೆ. ಸದ್ಯಕ್ಕೆ ರಶ್ಮಿಕಾ ಬೆಡ್‌ರೆಸ್ಟ್‌ನಲ್ಲೇ ಇರಲಿದ್ದು, ತಿಂಗಳುಗಳ ಕಾಲ ಅವರು ಎದ್ದು ನಡೆಯುವಂತಿಲ್ಲ ಎಂದು ಹೇಳಲಾಗುತ್ತಿದೆ.

ಇನ್ನು ರಶ್ಮಿಕಾ ಇನ್‌ಸ್ಟಾಗ್ರಾಂನಲ್ಲಿ ಈ ಫೋಟೋಗಳನ್ನು ಹಂಚಿಕೊಂಡಿದ್ದು, ಇದರೊಂದಿಗೆ ಗಾಯಗೊಂಡಿರುವ ವಿಚಾರವನ್ನು ವಿವರಿಸಿದ್ದಾರೆ. ಅಲ್ಲದೆ ಇದು ನನಗೆ ಹೊಸ ವರ್ಷದ ಶುಭಾಶಯಗಳು ಎಂದು ನಾನು ಊಹಿಸುತ್ತೇನೆ. ನೋವಿನಿಂದಲೇ ನನ್ನ ಹೊಸ ವರ್ಷ ಆರಂಭವಾದಂತಿದೆ. ನನ್ನ ಪವಿತ್ರ ಜಿಮ್ ದೇಗುಲದಲ್ಲಿ ನಾನು ಗಾಯಗೊಂಡಿದ್ದೇನೆ ಎಂದು ರಶ್ಮಿಕಾ ತಿಳಿಸಿದ್ದಾರೆ.

ಈಗ ನಾನು ಮುಂದಿನ ಕೆಲವು ವಾರಗಳು ಅಥವಾ ತಿಂಗಳುಗಳ ಕಾಲ ಬೆಡ್‌ರೆಸ್ಟ್‌ನಲ್ಲಿದ್ದೇನೆ. ಇದು ದೇವರಿಗೆ ಮಾತ್ರ ತಿಳಿದಿದೆ. ಹಾಗಾಗಿ ನಾನು ಥಾಮ, ಸಿಕಂದರ್ ಮತ್ತು ಕುಬೇರನ ಸೆಟ್‌ಗಳಿಗೆ ಶೀಘ್ರದಲ್ಲೇ ಹಿಂತಿರುಗುತ್ತಿದ್ದೇನೆ ಎಂದು ಭಾವಿಸಿದ್ದೇನೆ ಎಂದು ರಶ್ಮಿಕಾ ಹೇಳಿದ್ದಾರೆ.

ಗಾಯದಿಂದಾಗಿ ರಶ್ಮಿಕಾ ಅವರು ಶೂಟಿಂಗ್‌ನಲ್ಲಿ ಭಾಗಿಯಾಗಲು ಸಾಧ್ಯವಾಗದ ಕಾರಣ ತಮ್ಮ ಮುಂಬರುವ ಸಿನಿಮಾಗಳಾದ ಥಾಮ, ಸಿಕಂದರ್ ಮತ್ತು ಕುಬೇರ ಚಿತ್ರದ ನಿರ್ದೇಶಕರಿಗೆ ಕ್ಷಮೆಯೂ ಕೇಳಿದ್ದಾರೆ. ನನ್ನ ನಿರ್ದೇಶಕರಿಗೆ ವಿಳಂಬಕ್ಕೆ ಕ್ಷಮೆಯಿರಲಿ, ನನ್ನ ಕಾಲುಗಳು ಆಕ್ಷನ್‌ ಸಜ್ಜಾದ ಕೂಡಲೇ ನಾನು ಶೀಘ್ರದಲ್ಲೇ ಹಿಂತಿರುಗುತ್ತೇನೆ ಎಂದೂ ಅವರು ಭರವಸೆಯ ಮಾತುಗಳನ್ನಾಡಿದ್ದಾರೆ.

ನಟಿ ರಶ್ಮಿಕಾ ಮಂದಣ್ಣ ಅವರು ಗಾಯಗೊಂಡಿದ್ದು, ಜಿಮ್‌ನಲ್ಲಿ ವರ್ಕೌಟ್ ಮಾಡುವಾಗ ಪೆಟ್ಟು ಮಾಡಿಕೊಂಡಿದ್ದಾರೆ. ರಶ್ಮಿಕಾ ಅವರು ಸಲ್ಮಾನ್‌ ಖಾನ್‌ ನಟನೆಯ ಸಿಖಂದರ್‌ ಸಿನಿಮಾದ ಶೂಟಿಂಗ್‌ಗೆ ಹೋಗಬೇಕಿತ್ತು. ಇದರ ನಡುವೆಯೇ ರಶ್ಮಿಕಾ ಜಿಮ್‌ನಲ್ಲಿ ಪೆಟ್ಟು ಮಾಡಿಕೊಂಡ ಕಾರಣ ಶೂಟಿಂಗ್‌ ತಾತ್ಕಾಲಿಕವಾಗಿ ನಿಲ್ಲಿಸಲಾಗಿದೆ.

ಅದೃಷ್ಟವಶಾತ್‌ ರಶ್ಮಿಕಾ ಅವರಿಗೆ ಯಾವುದೇ ಅನಾಹುತವಾಗಿಲ್ಲ, ಆದರೆ, ಕಾಲಿಗೆ ಗಂಭೀರ ಗಾಯವಾಗಿರುವ ಕಾರಣ ಅವರು ನಡೆದಾಡಲು ಕೂಡ ಸಾಧ್ಯವಾಗುತ್ತಿಲ್ಲ. ಆದರೆ, ಯಾವುದೇ ಆತಂಕ ಪಡುವ ಅಗತ್ಯವಿಲ್ಲ ಎಂದು ವೈದ್ಯರು ತಿಳಿಸಿದ್ದು, ವಿಶ್ರಾಂತಿ ಪಡೆಯಲು ಸೂಚಿಸಿದ್ದಾರೆ. ಹಾಗಾಗಿ ರಶ್ಮಿಕಾ ಅವರು ಕೆಲ ದಿನಗಳವರೆಗೆ ರೆಸ್ಟ್‌ ಮಾಡಲಿದ್ದಾರೆ. ಕೈಯಲ್ಲಿ ಸಾಲು ಸಾಲು ಸಿನಿಮಾಗಳಿರುವಾಗಲೇ ರಶ್ಮಿಕಾ ಅವರಿಗೆ ಈ ರೀತಿ ಪೆಟ್ಟಾಗಿದೆ. ಅವರು ವಾಪಸ್‌ ಆಗುವವರೆಗೂ ಶೂಟಿಂಗ್‌ ನಿಲ್ಲಿಸಲು ಚಿತ್ರತಂಡಗಳು ನಿರ್ಧರಿಸಿವೆ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+